For Quick Alerts
ALLOW NOTIFICATIONS  
For Daily Alerts

ಮಧ್ಯಾಹ್ನದ ಊಟವಾದ ತಕ್ಷಣವೇ ಸರ್ವಥಾ ಮಾಡಬಾರದ 7 ಕಾರ್ಯಗಳು

|

ಒಂದು ವೇಳೆ ನೀವು "ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಗಾದೆಮಾತಿನಂತೆ ಮಾತ್ರವೇ ನಡೆದುಕೊಂಡು ಅತ್ಯುತ್ತಮವಾದ ಆಹಾರಕ್ರಮವನ್ನು ಮಾತ್ರನುಸರಿಸುತ್ತಿದ್ದರೆ ಇದರಿಂದ ನಿಮ್ಮ ದೇಹದಾರ್ಢ್ಯತೆ ಮತ್ತು ಆರೋಗ್ಯ ಅತ್ಯುತ್ತಮವಾಗಿರುತ್ತದೆ ಎಂದು ಅಂದುಕೊಂಡಿದ್ದರೆ..... ನೀವು ನಡುವಿನಲ್ಲಿ ತಪ್ಪಿದ್ದೀರಿ ಎಂದೇ ಅರ್ಥ. ಏಕೆಂದರೆ ಊಟಕ್ಕೂ ಮೊದಲು ಮತ್ತು ಊಟದ ನಂತರ ನಮ್ಮ ಚಟುವಟಿಕೆಗಳೂ ನಮ್ಮ ಆರೋಗ್ಯದ ಮೇಲೆ ಹಾಗೂ ನಮ್ಮ ದೇಹ ಹೇಗೆ ಕಾರ್ಯನಿರ್ವಹಿಸುತ್ತದೆ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ನಾವು ಅರಿಯದೇ ನಿರ್ವಹಿಸುವ ಕೆಲವು ಅಭ್ಯಾಸಗಳು ನಮ್ಮ ಆರೋಗ್ಯಕ್ಕೆ ಮಾರಕ!

ಉದಾಹರಣೆಗೆ, ಊಟವಾದ ತಕ್ಷಣವೇ ಕೆಲವರಿಗೆ ನಡೆಯುವ ಅಭ್ಯಾಸವಿದ್ದು ಇದರಿಂದ ಇವರ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದು ಅಪ್ಪಟ ಸುಳ್ಳು! ನೀವು ಊಟದ ಬಳಿಕ ನಡೆದಾಡಬಹುದು, ಆದರೆ ಊಟದ ಅರ್ಧ ಘಂಟೆಯ ಬಳಿಕ. ಈ ಅವಧಿಯಲ್ಲಿ ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ಬೇಕಾಗಿದ್ದು ಇತರ ಅಂಗಗಳಿಗೆ ಕಡಿಮೆ ರಕ್ತಪರಿಚಲನೆ ದೊರಕುವ ಕಾರಣ ವಿಶ್ರಾಂತಿ ಪಡೆಯುವುದೇ ಮೇಲು.

ಅದರೆ ಊಟವಾದ ತಕ್ಷಣ ಅರ್ಧ ಗಂಟೆ ಮಲಗಿ ಬಿಡುವುದೆಂದು ಅರ್ಥವಲ್ಲ. ಎಚ್ಚರಾಗಿದ್ದು ದೈಹಿಕ ಚಲನೆ ಕಡಿಮೆ ಇರುವ, ಮಾನಸಿಕ ಚಟುವಟಿಕೆಗಳಾದ ಸ್ನೇಹಿತರೊಂದಿಗೆ ಸಮಾಲೋಚನೆ, ವಿಚಾರ ವಿಮರ್ಶೆ, ಟೀವಿ ವೀಕ್ಷಣೆ, ಕುಟುಂಬದವರೊಡನೆ ಸಮಯ ಕಳೆಯುವುದು ಇತ್ಯಾದಿಗಳಲ್ಲಿ ಮಗ್ನರಾಗಬೇಕು. ಊಟದ ತಕ್ಷಣ ಮಲಗಿದರೆ ಇದರಿಂದ ಜೀರ್ಣಗೊಂಡ ಆಹಾರ ಮತ್ತು ಜೀರ್ಣರಸಗಳು ಗುರುತ್ವಬಲ ಉಪಯೋಗಿಸಿ ದೇಹದ ಸಹಜ ದಿಕ್ಕಿನತ್ತ ಸಾಗಲು ಸಾಧ್ಯವಾಗದೇ ಹಿಮ್ಮುಖ ಹೊರಳಬಹುದು! ಬನ್ನಿ, ಊಟ ಮಾಡಿದ ತಕ್ಷಣ ಸರ್ವಥಾ ಮಾಡಬಾರದ ಇಂತಹ ಏಳು ಪ್ರಮುಖ ಸಂಗತಿಗಳನ್ನು ನೋಡೋಣ..

ಎಂದಿಗೂ ಧೂಮಪಾನ ಮಾಡಬೇಡಿ

ಎಂದಿಗೂ ಧೂಮಪಾನ ಮಾಡಬೇಡಿ

ಊಟವಾದ ತಕ್ಷಣ ಧೂಮಪಾನ ಮಾಡುವ ಬಗ್ಗೆ ಯೋಚಿಸಲೂ ಬಾರದು! ನಿಜ ಹೇಳಬೇಕೆಂದರೆ ಯಾವುದೇ ಹೊತ್ತಿನಲ್ಲಿ ಧೂಮಪಾನ ಮಾಡುವುದು ಆರೋಗ್ಯಕ್ಕೆ ಕೆಟ್ಟದ್ದು. ಆದರೆ ಊಟದ ತಕ್ಷಣ, ಇದು ಪ್ರತ್ಯಕ್ಷ ಕೊಲೆಗಾರನೇ ಹೌದು. ಸಿಗರೇಟಿನ ಧೂಮದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ವಿಷಕಾರಿ ರಾಸಾಯನಿಕಗಳಿವೆ. ಊಟದ ಸಮಯದಲ್ಲಿ ಇವು ಇತರ ಯಾವುದೇ ಹೊತ್ತಿನಲ್ಲಿ ಸೇದುವ ಹೊಗೆಗಿಂತ ಹೆಚ್ಚು ಕ್ಷಿಪ್ರವಾಗಿ ರಕ್ತವನ್ನು ಗರಿಷ್ಟ ಪ್ರಮಾಣದಲ್ಲಿ ಸೇರಿ ಈಗಾಗಲೇ ಎಸಗುತ್ತಿರುವ ಹಾನಿಯ ಜೊತೆಗೇ ಜೀರ್ಣಕ್ರಿಯೆಯ ಮುಖ್ಯ ಉದ್ದೇಶವನ್ನೇ ಹಾಳು ಮಾಡಬಹುದು.

 ಸ್ನಾನ ಮಾಡಬಾರದು!

ಸ್ನಾನ ಮಾಡಬಾರದು!

ದಿನದ ಯಾವುದೇ ಹೊತ್ತಿನ ಊಟವಿರಲಿ, ಉಪಾಹಾರವಿರಲಿ, ಆಹಾರ ಸೇವಿಸಿದ ಕನಿಷ್ಟ ಮೂವತ್ತು ನಿಮಿಷವಾದರೂ ಸ್ನಾನ ಮಾಡಬಾರದು. ಏಕೆಂದರೆ ಊಟದ ತಕ್ಷಣ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಅಪಾರ ಪ್ರಮಾಣದ ಶಕ್ತಿಯ ಅಗತ್ಯವಿರುತ್ತದೆ ಹಾಗೂ ಇದನ್ನು ಪೂರೈಸಲು ಗರಿಷ್ಟ ಪ್ರಮಾಣದ ರಕ್ತ ಇತ್ತ ಹರಿಯುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಚರ್ಮದ ಮೇಲೆ ಬೀಳುವ ನೀರಿನ ತಾಪಮಾನದಿಂದಾಗಿ ಬದಲಾಗುವ ಚರ್ಮದ ತಾಪಮಾನವನ್ನು ಸರಿಪಡಿಸಲು ದೇಹಕ್ಕೆ ಅನಿವಾರ್ಯವಾಗಿ ಇತ್ತಲೂ ರಕ್ತವನ್ನು ಹರಿಸಬೇಕಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ ಅಗತ್ಯವಿದ್ದಷ್ಟು ರಕ್ತ ಸಿಗದೇ ಹೋಗುತ್ತದೆ. ಪರಿಣಾಮವಾಗಿ ಸರಾಗವಾಗಿ ಆಗಬೇಕಾಗಿದ್ದ ಜೀರ್ಣಕ್ರಿಯೆ ಅರ್ದಂಬರ್ಧ ನಡೆದು ಹಲವು ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ವಾಸ್ತವವಾಗಿ ಸ್ನಾನವಾದ ಕೊಂಚ ಹೊತ್ತಿನ ಬಳಿಕವೇ ಊಟ ಮಾಡಿ ಬಳಿಕ ಅರ್ಧ ಘಂಟೆ ವಿಶ್ರಾಂತಿ ಪಡೆಯುವುದು ಅತ್ಯುತ್ತಮ ಮತ್ತು ಆರೋಗ್ಯಕರ ಅಭ್ಯಾಸವಾಗಿದೆ.

Most Read: ಕೆಲಸದ ಸ್ಥಳದಲ್ಲಿ ಮಹಿಳೆಯರು ಸೇವಿಸಬಾರದ ಏಳು ಆಹಾರಗಳು

ಟೀ ಅಥವಾ ಕಾಫಿ ಕುಡಿಯಬಾರದು

ಟೀ ಅಥವಾ ಕಾಫಿ ಕುಡಿಯಬಾರದು

ಊಟವಾದ ತಕ್ಷಣವೇ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಕೆಲವರಿಗಿರುತ್ತದೆ. ಇದರಿಂದ ಕೆಲವಾರು ಪ್ರಯೋಜನಗಳಿರಬಹುದು, ಆದರೆ ಈ ಪಾನೀಯಗಳ ಕ್ಷಾರೀಯತೆ ಈಗತಾನೇ ಪ್ರಾರಂಭವಾಗಿರುವ ಜೀರ್ಣಕ್ರಿಯೆಗೆ ಅಗತ್ಯವಿರುವ ಜೀರ್ಣರಸಗಳ ಪ್ರಾಬಲ್ಯವನ್ನು ಕುಂದಿಸಬಹುದು ಹಾಗೂ ಇದರಿಂದ ಜೀರ್ಣಕ್ರಿಯೆ ಬಾಧೆಗೊಳಗಾಗುತ್ತದೆ. ಆಹಾರತಜ್ಞರ ಪ್ರಕಾರ ಊಟದ ಒಂದು ಘಂಟೆಯ ಬಳಿಕವೇ ಟೀ ಅಥವಾ ಕಾಫಿ ಸೇವಿಸಿದರೆ ಸೂಕ್ತ.

ಊಟದ ಬಳಿಕ ಹಣ್ಣು ತಿನ್ನುವುದೂ ಬೇಡ

ಊಟದ ಬಳಿಕ ಹಣ್ಣು ತಿನ್ನುವುದೂ ಬೇಡ

ಇದುವರೆಗೆ ಊಟದ ಬಳಿಕ ಹಣ್ಣು ತಿನ್ನುವುದು, ವಿಶೇಷವಾಗಿ ಬಾಳೆಹಣ್ಣನ್ನು ತಿನ್ನುವುದು ಆರೋಗ್ಯಕರ ಎಂದೇ ನಾವೆಲ್ಲಾ ತಿಳಿದಿದ್ದೆವು. ಆದರೆ ಆಹಾರತಜ್ಞರ ಪ್ರಕಾರ ಹೀಗೆ ಮಾಡುವುದರಿಂದ ಹಣ್ಣಿನ ತಿರುಳು ಈಗತಾನೇ ತಿಂದ ಆಹಾರದೊಡನೆ ಮಿಶ್ರಣಗೊಂಡು ಜಠರದಲ್ಲಿ ಜೀರ್ಣಗೊಳ್ಳದೇ ನೇರವಾಗಿ ಸಣ್ಣಕರುಳಿಗೆ ತಲುಪುತ್ತದೆ ಹಾಗೂ ಇಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಈ ಹಣ್ಣಿನ ತಿರುಳನ್ನು ಕೊಳೆಸುತ್ತವೆ. ಪರಿಣಾಮವಾಗಿ ಇದರೊಡನೆ ಇದ್ದ ಇತರ ಆಹಾರವನ್ನೂ ಕೆಡಿಸಿ ಕೋತಿ ತಾನು ಕೆಡುವುದಲ್ಲದೇ ವನವನ್ನೂ ಕೆಡಿಸಿತು ಎಂಬ ಗಾದೆಮಾತನ್ನು ಸಮರ್ಥಿಸುತ್ತದೆ.

Most Read: ಶನಿ ದೇವರಿಗೆ ತನ್ನ ಪತ್ನಿಯೇ ಶಾಪ ನೀಡಿದಳು! ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ

ನಡೆದಾಡುವದನ್ನು ಆದಷ್ಟೂ ತಪ್ಪಿಸಿ

ನಡೆದಾಡುವದನ್ನು ಆದಷ್ಟೂ ತಪ್ಪಿಸಿ

ಸಾಮಾನ್ಯವಾಗಿ ಊಟದ ಬಳಿಕ ವಿಶೇಷವಾಗಿ ರಾತ್ರಿಯ ಊಟದ ಬಳಿಕ ಹಲವರಿಗೆ ಕೊಂಚ ನಡೆದಾಡುವ ಅಭ್ಯಾಸವಿರುತ್ತದೆ. ಇದರಿಂದ ಆಹಾರದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದು ಅಪ್ಪಟ ಸುಳ್ಳು! ನೀವು ಊಟದ ಬಳಿಕ ನಡೆದಾಡಬಹುದು, ಆದರೆ ಊಟದ ಅರ್ಧ ಘಂಟೆಯ ಬಳಿಕ. ಈ ಅವಧಿಯಲ್ಲಿ ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ಬೇಕಾಗಿದ್ದು ಇತರ ಅಂಗಗಳಿಗೆ ಕಡಿಮೆ ರಕ್ತಪರಿಚಲನೆ ದೊರಕುವ ಕಾರಣ ವಿಶ್ರಾಂತಿ ಪಡೆಯುವುದೇ ಮೇಲು.

ಮಲಗದಿರಿ

ಮಲಗದಿರಿ

ಊಟವಾದ ತಕ್ಷಣ ಜೊಂಪು ಹತ್ತುವುದು ಸಾಮಾನ್ಯವಾಗಿ ಎಲ್ಲರಿಗೂ ಆಗುವ ಅನುಭವ. ಆದರೆ ಇದಕ್ಕೆ ಮನಸೋತು ಮಲಗಿಬಿಡಬಾರದು! ಬದಲಿಗೆ ಮನಸ್ಸನ್ನು ಎಚ್ಚರಾಗಿರಿಸುವ ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕೊಂಚ ಓದು, ವಿಚಾರ ವಿಮರ್ಶೆ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚಾಟ್ ಇತ್ಯಾದಿ. ಏಕೆಂದರೆ ಊಟದ ಬಳಿಕ ನಿದ್ರಿಸದಿದ್ದರೂ ಸರಿ, ಸುಮ್ಮನೇ ಅಡ್ಡಬಿದ್ದರೂ ನಮ್ಮ ದೇಹದ ಜೀರ್ಣರಸಗಳು ವಿರುದ್ದ ದಿಕ್ಕಿನಲ್ಲಿ ಚಲಿಸುವಂತಾಗುತ್ತದೆ ಹಾಗೂ ಇದರಿಂದ ಜೀರ್ಣಕ್ರಿಯೆ ಬಾಧೆಗೊಳಗಾಗುತ್ತದೆ.

ಧರಿಸಿದ್ದ ಸೊಂಟಪಟ್ಟಿಯನ್ನು ಸಡಿಲಿಸದಿರಿ

ಧರಿಸಿದ್ದ ಸೊಂಟಪಟ್ಟಿಯನ್ನು ಸಡಿಲಿಸದಿರಿ

ಊಟಕ್ಕೂ ಮುನ್ನ ಸೊಂಟದ ಪಟ್ಟಿ ಅಥವಾ ಬೆಲ್ಟ್ ಇದ್ದ ಬಿಗಿ ಊಟದ ಬಳಿಕ ಕೊಂಚ ಹೆಚ್ಚುವ ಕಾರಣ ಹಲವರು ಈ ಬಿಗಿಯನ್ನು ಊಟದ ಬಳಿಕ ಕೊಂಚ ಸಡಿಲಿಸಿ ಆರಾಮ ಪಡೆಯುತ್ತಾರೆ. ವಾಸ್ತವವಾಗಿ ಊಟದ ಬಳಿಕ ಬೆಲ್ಟ್ ಬಿಗಿಯಾಯಿತು ಎಂದರೆ ನೀವು ಅಗತ್ಯಕ್ಕೂ ಹೆಚ್ಚು ಊಟ ಮಾಡಿದ್ದೀರಿ ಎಂದೇ ಅರ್ಥವಾಗಿದೆ ಹಾಗೂ ಈ ಬಿಗಿಗೆ ಅನುಗುಣವಾಗಿ ನಮ್ಮ ಜಠರ ಮತ್ತು ಕರುಳುಗಳು ಒಗ್ಗಿಕೊಂಡಿರುತ್ತವೆ. ಆದರೆ ಸಡಿಲಿಸುವ ಮೂಲಕ ಇವುಗಳಿಗೆ ವಿಸ್ತಾರಗೊಳ್ಳಲು ಇನ್ನಷ್ಟು ಸ್ಥಳಾವಕಾಶ ಸಿಕ್ಕಂತಾಗುತ್ತದೆ ಹಾಗೂ ಇದೇ ಅಭ್ಯಾಸದಿಂದ ಸೊಂಟದ ಸುತ್ತಳತೆ ಹೆಚ್ಚುತ್ತದೆ.

English summary

Things You Shouldn't Do After a Full Meal afternoon

If you think eating healthy is the only thing that can keep you fit and energetic, then you are highly mistaken. Our pre-meal and post-meal activities can majorly affect the way our body behaves. You need to understand that there are certain things that need your attention. We often commit certain mistakes after having our meal which is not good for the body. For instance, generally, people go for a walk immediately after the meal with a thought that it will help them digest the food easily. But, it is a myth.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more