For Quick Alerts
ALLOW NOTIFICATIONS  
For Daily Alerts

ನೆನಪಿಡಿ, ಆಸ್ಪತ್ರೆಗೆ ಹೋದಲ್ಲಿ, ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮುಟ್ಟಲೇಬೇಡಿ!

|

ಹುಷಾರಿಲ್ಲದಾಗ ಚಿಕಿತ್ಸೆಗಾಗಿ ಅಥವಾ ಇನ್ನಾರನ್ನೋ ನೋಡಲು ಆಸ್ಪತ್ರೆಗಳಿಗೆ ಭೇಟಿ ನೀಡಲೇಬೇಕಾಗುತ್ತದೆ. ಬಹುತೇಕ ಆಸ್ಪತ್ರೆಗಳು ನೋಡಲು ಅತ್ಯಂತ ಸ್ವಚ್ಛವಾಗಿದ್ದು, ಕ್ಲೀನಿಂಗ್ ದ್ರಾವಣಗಳ ಪರಿಮಳ ಹರಡಿರುತ್ತದೆ. ಆದರೆ ನೋಡಲು ಸ್ವಚ್ಛವಾಗಿದೆ ಎಂದ ಮಾತ್ರಕ್ಕೆ ಎಲ್ಲವೂ ನಿಜವಾಗಿಯೂ ಸ್ವಚ್ಛವಾಗಿಲ್ಲದಿರಬಹುದು.

ಪ್ರತಿದಿನ ಚಿಕಿತ್ಸೆಗಾಗಿ ನೂರಾರು ರೋಗಿಗಳು ಆಸ್ಪತ್ರೆಗೆ ಬರುವುದರಿಂದ ಆಸ್ಪತ್ರೆಗೆ ಹೋದಾಗ ಕೆಲ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸಲೇಬೇಕು. ಆಸ್ಪತ್ರೆಗೆ ಹೋಗುವ ಮುನ್ನ ಹಾಗೂ ಅಲ್ಲಿಂದ ಹೊರ ಬಂದ ನಂತರ ಸ್ವಚ್ಛವಾಗಿ ಕೈಗಳನ್ನು ತೊಳೆದುಕೊಳ್ಳುವುದು ಪ್ರಥಮ ಮುಂಜಾಗರೂಕತಾ ಕ್ರಮವಾಗಿದೆ. ಇದಿಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿನ ಪ್ರಮುಖ ವಸ್ತುಗಳನ್ನು ಮುಟ್ಟದಿರುವಂತೆ ಜಾಗೃತಿ ವಹಿಸಬೇಕು. ಆಸ್ಪತ್ರೆಯಲ್ಲಿನ ಯಾವ ವಸ್ತುಗಳನ್ನು ಮುಟ್ಟಬಾರದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಆಸ್ಪತ್ರೆಯಲ್ಲಿನ ಈ ವಸ್ತುಗಳನ್ನು ಯಾವತ್ತೂ ಮುಟ್ಟಬೇಡಿ, ಮುಂದೆ ಓದಿ..

ಲಿಫ್ಟ್ ಗುಂಡಿಗಳು

ಲಿಫ್ಟ್ ಗುಂಡಿಗಳು

ಆಸ್ಪತ್ರೆಗಳಲ್ಲಿನ ಲಿಫ್ಟ್‌ಗಳು ರೋಗಿಗಳನ್ನು ಮಂಚದ ಸಮೇತ ಸಾಗಿಸುವಷ್ಟು ದೊಡ್ಡದಿರುತ್ತವೆ. ಹೀಗೆ ರೋಗಿಗಳನ್ನು ಸಾಗಿಸುವಾಗ ರೋಗಿ, ವೈದ್ಯರು ಹಾಗೂ ನರ್ಸ್‌ಗಳ ಮೈಮೇಲಿನ ಬ್ಯಾಕ್ಟೀರಿಯಾಗಳು ಸಹಜವಾಗಿಯೇ ಲಿಫ್ಟ್‌ನೊಳಗೆ ಹರಡಿರುತ್ತವೆ. ಅದರಲ್ಲೂ ಲಿಫ್ಟ್ ಬಟನ್‌ಗಳು ಬ್ಯಾಕ್ಟೀರಿಯಾಗಳಿಂದ ಆವೃತವಾಗಿರುತ್ತವೆ. ಆಸ್ಪತ್ರೆಯ ಎಲ್ಲ ಭಾಗಗಳನ್ನು ತೊಳೆದು ನಿಯಮಿತವಾಗಿ ಸ್ವಚ್ಛಗೊಳಿಸಿದರೂ ಲಿಫ್ಟ ಒಳಗಿನ ಗುಂಡಿಗಳನ್ನು ಸ್ವಚ್ಛಗೊಳಿಸಿದ್ದನ್ನು ಯಾವತ್ತೂ ನೀವು ನೋಡಿರಲಿಕ್ಕಿಲ್ಲ. ಹೀಗಾಗಿ ಮುಂದಿನ ಬಾರಿ ಆಸ್ಪತ್ರೆಯ ಲಿಫ್ಟನೊಳಗೆ ಹೋಗುವ ಪ್ರಸಂಗ ಬಂದರೆ ಪೇಪರ್ ನ್ಯಾಪಕಿನ್ ಬಳಸಿ ಬಟನ್ ಒತ್ತಿ ಹಾಗೂ ಈ ಪೇಪರ್ ಅನ್ನು ಡಸ್ಟಬಿನ್‌ಗೆ ಬಿಸಾಕಿ ಬಿಡಿ. ಜೊತೆಗೆ ಬೇಗನೆ ಕೈಗಳನ್ನು ಶುದ್ಧವಾಗಿ ತೊಳೆದು ಕೊಳ್ಳುವುದು ಕ್ಷೇಮಕರ.

ಬಾಗಿಲ ಹಿಡಿಕೆಗಳು

ಬಾಗಿಲ ಹಿಡಿಕೆಗಳು

ಯಾರನ್ನಾದರೂ ನೋಡಲು ಆಸ್ಪತ್ರೆಗೆ ಹೋದಾಗ ಮೊದಲು ನೀವು ಮುಟ್ಟುವ ವಸ್ತು ಯಾವುದು ಎಂಬುದನ್ನು ಜ್ಞಾಪಿಸಿಕೊಳ್ಳಿ. ಮೊಟ್ಟ ಮೊದಲು ನೀವು ಬಾಗಿಲು ತೆರೆಯಲು ಬಾಗಿಲ ಹಿಡಿಕೆಯನ್ನೇ ಮುಟ್ಟುವಿರಿ. ಇತ್ತೀಚೆಗಿನ ಸಂಶೋಧನೆಯೊಂದರ ಪ್ರಕಾರ ಬಾಗಿಲ ಹಿಡಿಕೆಗಳು ಭಾರಿ ಪ್ರಮಾಣದ ಬ್ಯಾಕ್ಟೀರಿಯಾಗಳಿರುವ ಜಾಗವಾಗಿದೆ ಎಂಬುದು ದೃಢಪಟ್ಟಿದೆ. ನರ್ಸ್‌ಗಳು, ಆರೋಗ್ಯ ಸಹಾಯಕರು, ರೋಗಿಗಳು ಹಾಗೂ ವೈದ್ಯರು ಆಗಾಗ ಹೋಗಿ ಬಂದು ಮಾಡುತ್ತಿರುತ್ತಾರೆ. ಹೀಗಾಗಿ ಬಾಗಿಲ ಮೇಲೆ ಬ್ಯಾಕ್ಟೀರಿಯಾಗಳ ಸಂಗ್ರಹಣೆಯಾಗುತ್ತದೆ. ಆದ್ದರಿಂದ ಮುಂದಿನ ಬಾರಿ ಆಸ್ಪತ್ರೆಯ ಕೋಣೆಯ ಒಳಗೆ ಹೋಗಿ ಬಂದ ತಕ್ಷಣ ಕೈ ತೊಳೆದುಕೊಳ್ಳಿ.

ಕುರ್ಚಿಯ ಕೈ ಊರುವ ಹಿಡಿಕೆಗಳು

ಕುರ್ಚಿಯ ಕೈ ಊರುವ ಹಿಡಿಕೆಗಳು

ಆಸ್ಪತ್ರೆಯ ಕುರ್ಚಿಗಳ ಕೈ ಊರುವ ಹಿಡಿಕೆಗಳ ಮೇಲೆ ಬಹಳಷ್ಟು ಬ್ಯಾಕ್ಟೀರಿಯಾಗಳಿರುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹೀಗಾಗಿ ಮುಂದಿನ ಬಾರಿ ಆಸ್ಪತ್ರೆಗೆ ಹೋದರೆ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಮುನ್ನ ಜಾಗ್ರತೆ ವಹಿಸಿ. ಸಾಧ್ಯವಾದರೆ ಆಂಟಿ ಬಯಾಟಿಕ್ ದ್ರಾವಣದಿಂದ ಕುರ್ಚಿಯ ಹಿಡಿಕೆಯನ್ನು ಸ್ವಚ್ಛಗೊಳಿಸಿ ಕುಳಿತುಕೊಳ್ಳಿ.

Most Read:ನೆನಪಿಡಿ, ಈ ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ನಿಮ್ಮ ಫೋನ್ ಇಟ್ಟುಕೊಳ್ಳಬೇಡಿ

ಪರದೆಗಳು

ಪರದೆಗಳು

ಆಸ್ಪತ್ರೆಗಳಲ್ಲಿ ರೋಗಿಗಳ ಖಾಸಗಿತನಕ್ಕಾಗಿ ಹಾಕಲಾಗಿರುವ ಬಿಳಿ ಬಣ್ಣದ ಪರದೆಗಳ ಮೇಲೆ ಆಂಟಿ ಬಯಾಟಿಕ್‌ಗಳಿಗೂ ಸಾಯದ ಬ್ಯಾಕ್ಟೀರಿಯಾಗಳು ಜಮೆಯಾಗಿರುತ್ತವೆ ಎಂಬುದು ಸತ್ಯ ಸಂಗತಿ. ಅತ್ತಿಂದಿತ್ತ ಸುಳಿದಾಡುವ ರೋಗಿಗಳು, ವೈದ್ಯರು ಹಾಗೂ ದಾದಿಯರ ಕಾರಣದಿಂದ ಈ ಕರ್ಟನ್‌ಗಳ ಮೇಲೆ ಭಾರಿ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಜಮೆಯಾಗಿರುತ್ತವೆ. ಹೀಗಾಗಿ ಈ ಕರ್ಟನ್‌ಗಳಿಂದ ಯಾವಾಗಲೂ ದೂರವಿರಿ.

ಐವಿ ಬ್ಯಾಗ್ ನೇತಾಡಿಸುವ ವಂಕಿಗಳು

ಐವಿ ಬ್ಯಾಗ್ ನೇತಾಡಿಸುವ ವಂಕಿಗಳು

ಗ್ಲುಕೋಸ್ ಅಥವಾ ಐವಿ ಬ್ಯಾಗ್‌ಗಳನ್ನು ನೇತಾಡಿಸುವ ಸ್ಟ್ಯಾಂಡ್ ವಂಕಿಗಳು ಸೂಕ್ಷ್ಮಾಣು ರೋಗಕಾರಕ ಜೀವಿಗಳ ಆಶ್ರಯತಾಣವಾಗಿವೆ. ಇದನ್ನು ವೈದ್ಯರು ಹಾಗೂ ರೋಗಿಗಳು ಇಬ್ಬರೂ ಮುಟ್ಟುವುದರಿಂದ ಈ ಸ್ಥಳದಲ್ಲಿ ಬ್ಯಾಕ್ಟೀರಿಯಾಗಳು ಹರಡಿಕೊಂಡಿರುತ್ತವೆ. ಅಕಸ್ಮಾತ್ ಈ ಸ್ಟ್ಯಾಂಡ್ ಅಥವಾ ವಂಕಿಗಳನ್ನು ಮುಟ್ಟಿದಲ್ಲಿ ತಕ್ಷಣ ಕೈಗಳನ್ನು ಸ್ಯಾನಿಟೈಸರನಿಂದ ಶುದ್ಧೀಕರಿಸಿಕೊಳ್ಳಿ.

ನಲ್ಲಿ (ನಳ)

ನಲ್ಲಿ (ನಳ)

ಆಸ್ಪತ್ರೆಯ ಶೌಚಾಲಯ ಅಥವಾ ಒಳಗಿನ ಯಾವುದೇ ನಲ್ಲಿಗಳನ್ನು ಮುಟ್ಟಲೇಬೇಡಿ. ಎಲ್ಲರೂ ಕೈ ಸ್ವಚ್ಛಗೊಳಿಸುವ ಮುನ್ನವೇ ಇವನ್ನು ಮುಟ್ಟಿರುತ್ತಾರೆ. ಹೀಗಾಗಿ ಈ ಜಾಗದಲ್ಲಿ ಬ್ಯಾಕ್ಟೀರಿಯಾಗಳು ಹರಡುವುದು ಸಾಮಾನ್ಯವಾಗಿದೆ. ಮುಂದಿನ ಬಾರಿ ಆಸ್ಪತ್ರೆಯಲ್ಲಿನ ನಲ್ಲಿಯನ್ನು ಬಳಸಿ ಬಂದ್ ಮಾಡುವಾಗ ನ್ಯಾಪಕಿನ್ ಉಪಯೋಗಿಸಿ.

Most Read:ನೋಡಿ, ಇದೇ ಕಾರಣಕ್ಕೆ ದೇಹದಲ್ಲಿ ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು!

ಮಂಚದ ಹಿಡಿಕೆಗಳು

ಮಂಚದ ಹಿಡಿಕೆಗಳು

ಆಸ್ಪತ್ರೆಯ ಮಂಚ ಅಥವಾ ಪಲ್ಲಂಗದ ಹಿಡಿಕೆಗಳನ್ನು ವೈದ್ಯರು, ರೋಗಿಗಳು ಹಾಗೂ ದಾದಿಯರು ಮುಟ್ಟುತ್ತಲೇ ಇರುತ್ತಾರೆ. ಇದರಿಂದ ಇವುಗಳ ಮೇಲೆ ಯಾವಾಗಲೂ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತಿರುತ್ತವೆ. ಸಾಮಾನ್ಯವಾಗಿ ಮಂಚದ ಮೇಲಿನ ಹಾಸಿಗೆ, ಹೊದಿಕೆಗಳನ್ನು ತೆಗೆದರೂ ಮಂಚದ ಹಿಡಿಕೆಗಳನ್ನು ಮಾತ್ರ ಸ್ವಚ್ಛಗೊಳಿಸಲಾಗುವುದಿಲ್ಲ. ಹೀಗಾಗಿ ಆಸ್ಪತ್ರೆಯ ಮಂಚದ ಹಿಡಿಕೆಗಳನ್ನು ಮುಟ್ಟಲೇಬೇಡಿ. ಒಂದೊಮ್ಮೆ ಮುಟ್ಟಿದರೂ ತಕ್ಷಣ ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಳ್ಳಿ.

English summary

things you should NEVER touch while you are in the hospital

Even though hospitals look squeaky clean with the smell of cleaning agents, you can never be too sure. With all the patients harbouring different diseases and the flood of visitors, there is a reason we are strictly advised to wash our hands before and after going inside a hospital.
Story first published: Wednesday, December 19, 2018, 18:03 [IST]
X
Desktop Bottom Promotion