For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಳಿಕ, ಇಬ್ಬರೂ ಈ ಕೆಲಸಗಳನ್ನು ಮಾತ್ರ ಕಡ್ಡಾಯವಾಗಿ ಮಾಡಲೇಬೇಕು!

By Hemanth
|

ಪ್ರೀತಿ ಹಾಗೂ ಮಿಲನ ಇದೆರಡು ಒಂದಾಗುವುದೇ ಲೈಂಗಿಕ ಕ್ರಿಯೆ ವೇಳೆ. ಪ್ರೀತಿಯಿಲ್ಲದೆ ಯಾವುದೇ ಲೈಂಗಿಕ ಕ್ರಿಯೆಯು ನಿರರ್ಥಕವೆಂದು ಹೇಳಲಾಗುತ್ತದೆ. ಲೈಂಗಿಕ ಕ್ರಿಯೆ ಎನ್ನುವುದು ಎರಡು ಮನಸ್ಸುಗಳು ಹಾಗೂ ದೇಹಗಳು ಬೆಸೆದುಕೊಳ್ಳುವುದು. ಈ ಕ್ರಿಯೆಗೆ ಮೊದಲು ಮೋಡಿಯ ಮಾತುಗಳು, ಆಟ ಇದೆಲ್ಲವೂ ನಡೆಯಬೇಕು.

ಅಂತಿಮವಾಗಿ ಲೈಂಗಿಕ ಕ್ರಿಯೆ. ಆದರೆ ಇದೆಲ್ಲವೂ ಮೊದಲ ಮಾಡಲಾಗುವ ವಿಷಯಗಳು. ಲೈಂಗಿಕ ಕ್ರಿಯೆ ಬಳಿಕ ಏನು ಮಾಡಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಇದರ ಅಗತ್ಯವೂ ಅವರಿಗಿಲ್ಲ. ಯಾಕೆಂದರೆ ಕ್ರಿಯೆಯ ಬಳಿಕ ನೇರವಾಗಿ ಕಂಬಳಿ ಹೊದ್ದುಕೊಂಡು ಮಲಗುವುದು.

ಇನ್ನು ಕೆಲವರು ತಮಾಷೆಯಲ್ಲಿ, ಮತ್ತೆ ಕೆಲವರು ನಗು ಅಥವಾ ಮಾತುಕತೆಯಲ್ಲಿ ತೊಡಗುವರು. ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ಆನಂದಿಸಿದ ಬಳಿಕ ನೀವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಲೈಂಗಿಕ ಕ್ರಿಯೆ ಬಳಿಕ ನಿಮ್ಮ ಆರೋಗ್ಯಕ್ಕಾಗಿ ಮಾಡಬಹುದಾದ ಕೆಲವೊಂದು ವಿಚಾರಗಳನ್ನು ತಜ್ಞರು ಹೇಳಿದ್ದಾರೆ. ಇದನ್ನು ನೀವು ಪಾಲಿಸಿಕೊಂಡು ಹೋಗಿ....

ಶೌಚಾಲಯಕ್ಕೆ ಹೋಗಿ…

ಶೌಚಾಲಯಕ್ಕೆ ಹೋಗಿ…

ಅಮೆರಿಕಾದ ಸೆಕ್ಸುವಲ್ ಹೆಲ್ತ್ ಅಸೋಸಿಯೇಶನ್‌ನ ಪ್ರಮಾಣಿತ ಸೆಕ್ಸ್ ಕೋಚ್ ಮತ್ತು ರಾಯಭಾರಿಯಾಗಿರುವ ಸನ್ನಿ ರಾಡ್ಜರ್ಸ್ ಪ್ರಕಾರ ಪ್ರತಿಯೊಬ್ಬರು ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಲು ಬಯಸುವರು. ಇದು ಅಗತ್ಯ ಕೂಡ. ಲೈಂಗಿಕ ಕ್ರಿಯೆ ಬಳಿಕ ಮಾಡಬೇಕಾದ ಮೊದಲು ಕ್ರಿಯೆಯಿದು ಎಂದು ರಾಡ್ಜರ್ಸ್ ವಿವರಿಸಿದ್ದಾರೆ. ಇದು ಮೂತ್ರನಾಳವನ್ನು ಶುದ್ಧಗೊಳಿಸುವುದು ಮತ್ತು ಯಾವುದೇ ರೀತಿಯ ಬ್ಯಾಕ್ಟೀರಿಯಾ ಅಥವಾ ವಿಷವನ್ನು ಹೊರ ಹಾಕುವುದು. ಇದರ ಬಳಿಕ ನೀವು ಒಂದು ಟವೆಲ್ ಮತ್ತು ಸೋಪ್ ಮತ್ತು ಬಿಸಿ ನೀರಿನಿಂದ ತೊಳೆಯಬೇಕು ಎನ್ನುವುದು ರಾಡ್ಜರ್ಸ್ ಅವರು ತಿಳಿಸುತ್ತಾರೆ. ಸ್ವಚ್ಛತೆಯ ಈ ಹೆಜ್ಜೆಯು ನಿಮಗೆ

ಆರಾಮ ನೀಡುವುದು ಮತ್ತು ಸೋಂಕಿನಿಂದ ನಿಮ್ಮನ್ನು ರಕ್ಷಿಸುವುದು ಎನ್ನುತ್ತಾರೆ ಅವರು. ಮುಂದಿನಿಂದ ಹಿಂದಿನ ತನಕ ತೊಳೆಯಲು ಪ್ರಯತ್ನಿಸಿ.

ಗಾಳಿಯಾಡಬಲ್ಲ ಒಳ ಉಡುಪು

ಗಾಳಿಯಾಡಬಲ್ಲ ಒಳ ಉಡುಪು

ಗಾಳಿಯಾಡಬಲ್ಲಂತಹ ಒಳ ಉಡುಪು ಧರಿಸಬೇಕು ಎಂದು ರಾಡ್ಜರ್ಸ್ ಹೇಳಿದ್ದಾರೆ. ಹತ್ತಿಯ ಬಟ್ಟೆಯು ಜನನಾಂಗಗಳು ಸರಿಯಾಗಿ ಉಸಿರಾಡಲು ನೆರವಾಗುವುದು ಎಂದು ವಿವರಿಸಿರುವ ಅವರು, ಹತ್ತಿ ಬಟ್ಟೆಯು ನೈಸರ್ಗಿಕ ನಾರನ್ನು ಹೊಂದಿದ್ದು, ಇದು ಹೀರಿಕೊಳ್ಳುವುದು ಮತ್ತು ಸೂಕ್ಷ್ಮ ಭಾಗಗಳಿಗೆ ಯಾವುದೇ ರೀತಿಯ ಕಿರಿಕಿರಿ ಉಂಟು ಮಾಡುವುದಿಲ್ಲ. ಲೈಂಗಿಕ ಕ್ರಿಯೆ ಬಳಿಕ ಸೂಕ್ಷ್ಮ ಭಾಗಗಳಲ್ಲಿ ತೇವಾಂಶ ಉಳಿದು ಕಿರಿಕಿರಿಯಾಗುವುದು.

ಮುದ್ದಾಡಿಕೊಳ್ಳಿ

ಮುದ್ದಾಡಿಕೊಳ್ಳಿ

ಹಾಸಿಗೆಯಲ್ಲಿನ ಮಾತುಗಳು ನಿಮ್ಮಿಬ್ಬರ ಭಾಂದವ್ಯವನ್ನು ಹೇಳುತ್ತದೆ. ಪ್ರತೀ ಸಲ ನೀವು ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಪ್ರೀತಿಯ ಹಾರ್ಮೋನು ಆಕ್ಸಿಟೋಸಿನ್ ಬಿಡುಗಡೆಯಾಗುವುದು. ಇದು ಪ್ರೀತಿಯ ಭಾವನೆ ಉಂಟು ಮಾಡುವುದು ಎಂದು ನ್ಯೂಯಾರ್ಕ್ ಮೂಲದ ಮನಶಾಸ್ತ್ರಜ್ಞ ಹಾಗೂ ಲೈಂಗಿಕ ಚಿಕಿತ್ಸಕ ಚಾಮಿನ್ ಅಜ್ಜನ್ ಹೇಳಿದ್ದಾರೆ. ಲೈಂಗಿಕ ಕ್ರಿಯೆ ಬಳಿಕ ನಿಮ್ಮ ಸಂಗಾತಿ ಜತೆಗೆ ಮಾತನಾಡುವುದರಿಂದ ನಿಮ್ಮಿಬ್ಬರನ್ನು ಇದು ಮತ್ತಷ್ಟು ಹತ್ತಿರವಾಗಿಸುವುದು ಮತ್ತು ಭಾಂದವ್ಯ ಹೆಚ್ಚಿಸುವುದು. ನಿಮ್ಮ ಕನಸುಗಳು, ಆಶಯ, ಸಂಗಾತಿ ಜತೆಗೆ ಏನು ಮಾಡಲು ಬಯಸಿದ್ದೀರಿ ಎನ್ನುವುದು ಎಲ್ಲವನ್ನು ಮಾತನಾಡಿ.

ನೀರು ಸೇವಿಸಿ

ನೀರು ಸೇವಿಸಿ

ಲೈಂಗಿಕ ಕ್ರಿಯೆಗೆ ಮೊದಲು ನೀರಿನ ಬಾಟಲಿಯನ್ನು ಫ್ರಿಡ್ಜ್ ನಿಂದ ತೆಗೆದು ಹಾಸಿಗೆ ಬದಿಯಲ್ಲಿ ಇಟ್ಟುಕೊಳ್ಳಿ ಅಥವಾ ಲೈಂಗಿಕ ಕ್ರಿಯೆ ಬಳಿಕ ನೇರವಾಗಿ ಅಡುಗೆ ಮನೆಗೆ ಹೋಗಿ. ಲೈಂಗಿಕ ಕ್ರಿಯೆ ಬಳಿಕ ಎಂಟು ಔನ್ಸ್ ನಷ್ಟು ನೀರು ಕುಡಿದರೆ ಅದರಿಂದ ನಿಮ್ಮ ದೇಹವು ತೇವಾಂಶದಿಂದ ಇರುವುದು ಮತ್ತು ಶಕ್ತಿಯ ಮಟ್ಟವು ಹೆಚ್ಚಾಗುವುದು. ಯಾಕೆಂದರೆ ಲೈಂಗಿಕ ಕ್ರಿಯೆ ವೇಳೆ ಶಕ್ತಿಯು ಕಡಿಮೆಯಾಗುವುದು ಎಂದು ರಾಡ್ಜರ್ಸ್ ಹೇಳುತ್ತಾರೆ. ಇದು ಮೂತ್ರನಾಳದಲ್ಲಿರುವ ಬ್ಯಾಕ್ಟೀರಿಯಾವನ್ನು ಹೊರಹಾಕಲು ನೆರವಾಗುವುದು ಎನ್ನುವುದು ಅವರ ನಿಲುವು.

ತಿಂಡಿ ತಿನ್ನಿ

ತಿಂಡಿ ತಿನ್ನಿ

ಲೈಂಗಿಕ ಕ್ರಿಯೆ ಬಳಿಕ ನಿಮಗೆ ಹಸಿವಾಗುವುದು ಅಸಾಮಾನ್ಯವೇನಲ್ಲ. ಯಾಕೆಂದರೆ ಲೈಂಗಿಕ ಕ್ರಿಯೆ ವೇಳೆ ಕ್ಯಾಲರಿ ದಹಿಸುವುದು ಮತ್ತು ಹೃದಯದ ಬಡಿತ ಹೆಚ್ಚಾಗುವುದು. ಕ್ರಿಯೆ ಬಳಿಕ ಚಿಯಾ ಬೀಜಗಳು ಅಥವಾ ಗ್ರೀನ್ ಟೀ ಕುಡಿಯಿರಿ ಎಂದು ರಾಡ್ಜರ್ಸ್ ಸಲಹೆ ನೀಡುತ್ತಾರೆ. ಇದಲ್ಲದೆ ನೀವಿಬ್ಬರು ಜತೆಯಾಗಿ ಆನಂದಿಸಬಹುದಾದ ಸರಳ ಹಾಗೂ ಬೇಗನೆ ತಯಾರಿಸಬಲ್ಲ ಆಮ್ಲೆಟ್ ನಂತಹ ತಿಂಡಿ ಮಾಡಬಹುದು. ಇದು ನಿಮ್ಮಿಬ್ಬರ ಪ್ರೀತಿ, ಸಂವಹನ ಹೆಚ್ಚಿಸುವುದು.

ಸಾಮಾನ್ಯವಾಗಿ ಊಟ ಮಾಡಿದ ಬಳಿಕ ಮಿಲನ ಕ್ರಿಯೆ ನಡೆಸುವುದಕ್ಕಿಂತಲೂ ಮಿಲನ ಕ್ರಿಯೆಯ ಬಳಿಕ ಸ್ನಾನ ಮುಗಿಸಿ ಊಟ ಮಾಡುವುದೇ ಒಳ್ಳೆಯದು. ಕೆಲವೊಮ್ಮೆ ಊಟದ ಬಳಿಕ ಹಲವರಿಗೆ ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಉರಿ, ನಿದ್ದೆ ಬರುವುದು ಮೊದಲಾದವು ಎದುರಾಗುತ್ತವೆ ಹಾಗೂ ಇವೆಲ್ಲವೂ ಮಿಲನಕ್ರಿಯೆಯ ಆಸಕ್ತಿಯಿಂದ ವಿಮುಖರನ್ನಾಗಿಸುತ್ತವೆ. ವಾಸ್ತವದಲ್ಲಿ ಮಿಲನದ ಬಳಿಕ ಊಟ ಮಾಡಿದಾಗ ಪಡೆಯುವ ಹೆಚ್ಚಿನ ಶಕ್ತಿ ಇನ್ನೊಂದು ಬಾರಿಗೂ ಪ್ರೇರಣೆ ನೀಡಬಹುದು!

ಪರಸ್ಪರ ಶ್ಲಾಘಿಸಿ

ಪರಸ್ಪರ ಶ್ಲಾಘಿಸಿ

ಮುಂದಿನ ಸಲದ ಲೈಂಗಿಕ ಕ್ರಿಯೆಗೆ ತಯಾರಾಗಲು ನೀವಿಬ್ಬರು ಈಗ ಮಾತುಕತೆ ನಡೆಸುವುದು ಅತೀ ಅಗತ್ಯ. ಲೈಂಗಿಕ ಕ್ರಿಯೆ ಬಳಿಕ ಆಕ್ಸಿಟೋಸಿನ್ ಉನ್ನತ ಮಟ್ಟದಲ್ಲಿ ಇರುವುದು ಎಂದು ವನ್ ಪೇಟೆಂಟ್ ಗ್ಲೋಬಲ್ ಹೆಲ್ತ್ ನ ತಜ್ಞೆ ಹಾಗೂ ಮನೋಚಿಕಿತ್ಸಕಿಯಾಗಿರುವ ಕರ್ಲಾ ಇವಾನಕೊವಿಕ್ ಹೇಳುತ್ತಾರೆ. ಲೈಂಗಿಕ ಕ್ರಿಯೆ ವೇಳೆ ನಿಮಗೆ ನಿಜವಾಗಿಯೂ ಆನಂದ ನೀಡಿದ ವಿಚಾರದ ಬಗ್ಗೆ ನೀವು ಪರಸ್ಪರ ಹಂಚಿಕೊಳ್ಳಿ. ಇದು ಭಾಂದವ್ಯ ವೃದ್ಧಿಸುವುದು. ನೀವು ಪರಾಕಾಷ್ಠೆ ತಲುಪದೆ ಇದ್ದರೂ ಭಾವನಾತ್ಮಕ ಮಟ್ಟದಲ್ಲಿ ಬೆಸೆಯುವಿಕೆ ಮತ್ತು ಪರಸ್ಪರ ಮಾತನಾಡುವುದು ಇಬ್ಬರನ್ನು ತೃಪ್ತಿಪಡಿಸುವುದು ಎಂದು ಇವಾನಕೊವಿಕ್ ಅಭಿಪ್ರಾಯಪಟ್ಟಿದ್ದಾರೆ.

ನಗು

ನಗು

ಲೈಂಗಿಕ ಕ್ರಿಯೆ ಬಳಿಕ ನೀವು ಮನಸ್ಸನ್ನು ಆಡುವ ಸ್ಥಿತಿಯಲ್ಲಿಡಬೇಕು ಮತ್ತು ಸ್ವಲ್ಪ ತಮಾಷೆ ಮಾಡಬೇಕು. ಇದು ಯುಫೋರಿಯಾದ ನಂತರದ ಸ್ಥಿತಿಯಾಗಿದೆ ಮತ್ತು ಪ್ರತಿಯೊಂದನ್ನು ಇದು ಉತ್ತಮಪಡಿಸುವುದು ಎಂದು ಇವಾನಕೋವಿಕ್ ತಿಳಿಸಿದ್ದಾರೆ. ತುಂಬಾ ತಮಾಷೆಯ ಮಾತುಗಳು, ಪೋಲಿ ಜೋಕುಗಳನ್ನು ಹೇಳಿ. ನೀವು ಸಂಗಾತಿಯನ್ನು ತಕ್ಷಣವೇ ಬಿಟ್ಟರೆ ಆಗ ಏನೋ ದೊಡ್ಡ ಮಟ್ಟದ ನಿರಾಶೆ ಉಂಟಾಗಬಹುದು. ಲೈಂಗಿಕ ಕ್ರಿಯೆ ಒಂದು ಕಾಮದ ಆಟ ಮಾತ್ರವಲ್ಲ. ಇದು ನೀವು ಆರಾಮವಾಗಿರಲು, ಭಾಂದವ್ಯ ಹೆಚ್ಚಿಸಲು ಮತ್ತು ಆರೋಗ್ಯದ ಬಗ್ಗೆ ಗಮನ ನೀಡಲು ಅತೀ ಅಗತ್ಯವಾಗಿದೆ.

ಜೊತೆಯಾಗಿ ಸ್ನಾನ ಮಾಡಿ

ಜೊತೆಯಾಗಿ ಸ್ನಾನ ಮಾಡಿ

ಮಿಲನದ ಬಳಿಕ ಸ್ನಾನ ಮಾಡುವುದರಿಂದ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂಬ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಆದರೆ, ಇಬ್ಬರಿಗೂ ಪರಸ್ಪರ ಅನ್ಯೋನ್ಯತೆ ಹೆಚ್ಚಿಸಲು ಇದೊಂದು ಸ್ಮರಣಾರ್ಥ ಕ್ಷಣವಾಗಿ ಪರಿಣಮಿಸಬಹುದು ಹಾಗೂ ಸ್ನಾನದ ಸಮಯದ ಸ್ಪರ್ಶ ಹಾಗೂ ಹಿತಕರ ಭಾವನೆ ಪರಸ್ಪರರ ಪ್ರತಿ ಗೌರವ, ಪ್ರೀತಿಗಳನ್ನು ಹೆಚ್ಚಿಸಿ ಮುಂದಿನ ದಿನದ ಅವಧಿಯನ್ನು ತೇಜೋಮಯವಾಗಿಸಲು ಖಂಡಿತವಾಗಿಯೂ ನೆರವಾಗುತ್ತದೆ.

ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ

ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ

ಸಾಮಾನ್ಯವಾಗಿ ಮಿಲನಕ್ರಿಯೆಯಲ್ಲಿ ಗಲೀಜಾಗುವುದು ಅನಿವಾರ್ಯ. ಆದರೆ ಮಿಲನದ ಬಳಿಕ ಇಬ್ಬರಿಂದಲೂ ಆದ ಮಲಿನವನ್ನು ಸ್ವಚ್ಛಗೊಳಿಸುವುದು ಹಾಗೂ ಮಲಗಿದ ಸ್ಥಳ ಹಾಗೂ ಆಸುಪಾಸಿನ ಸ್ಥಳಗಳನ್ನು ಮೊದಲಿನಂತೆಯೇ ಸ್ವಚ್ಛಗೊಳಿಸುಸುವು ಮುಖ್ಯವಾಗಿದೆ. ಸಾಮಾನ್ಯವಾಗಿ ಸಂಗಾತಿಯ ಮನ ಗೆಲ್ಲಲು ಮಿಲನಕ್ರಿಯೆಗೂ ಮುನ್ನ ನೀಡುವ ದ್ರವಾಹಾರ ಮೊದಲಾದವುಗಳು ಚೆಲ್ಲಿದ ಬಳಿಕ ಸ್ವಚ್ಛಗೊಳಿಸುವಷ್ಟೇ ಕಾಳಜಿಯನ್ನು ಮಿಲನಕ್ರಿಯೆಯ ಬಳಿಕ ಎದುರಾಗುವ ಪರಿಸ್ಥಿತಿಯನ್ನು ಸ್ವಚ್ಛಗೊಳಿಸಲೂ ಬಳಸಬೇಕು. ಹಾಗಾಗಿ, ಈ ಪರಿಸ್ಥಿತಿಯನ್ನು ಮುಂಗಂಡು ಇದನ್ನು ಸ್ವಚ್ಛಗೊಳಿಸುವ ಪರಿಕರಗಳು ಕೈಗೆಟುಕುವಂತಿರಿಸುವುದು ಜಾಣತನದ ಕ್ರಮವಾಗಿದೆ. ಇದಕ್ಕಾಗಿ ಟಿಶ್ಯೂ ಕಾಗದ, ವಿಸರ್ಜಿಸಬಹುದಾದ ಬಟ್ಟೆಗಳು, ಸ್ವಚ್ಛಗೊಳಿಸುವ ಮಾರ್ಜಕ ಮೊದಲಾದ ಇತರ ವಸ್ತುಗಳು ಕೈಗೆಟುವಂತಿದ್ದು ಮಿಲನ ಕ್ರಿಯೆಯ ಬಳಿಕ ಸ್ವಚ್ಛಗೊಳಿಸುವತ್ತ ಹೆಚ್ಚಿನ ಕಾಳಜಿ ವಹಿಸಿದರೆ ಈ ಕ್ರಿಯೆಯನ್ನು ನಿಮ್ಮ ಸಂಗಾತಿಯೂ ಮೆಚ್ಚಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತದೆ.

English summary

Things You Should Always Do After Having Sex

You’re probably well aware of what should be done before physical intimacy ― from communication to setting the mood ― but you may be less certain about what should be done after sex. After all, there’s a wide variety of post-coital preferences: Some like to sleep it off, others like to cuddle quietly, some like to laugh or talk. However, you should also be making moves for your physical and mental health.By doing just few essential things right after you enjoy your partner,
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more