For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಸೆಕ್ಸ್ ಬಳಿಕ, ಗುಪ್ತಾಂಗದ ಆರೋಗ್ಯಕ್ಕಾಗಿ ಮಾಡಲೇಬೇಕಾದ ಕಾರ್ಯಗಳು

|

ಸೆಕ್ಸ್ ಅನ್ನುವುದು ದೇಹಕ್ಕೆ ಸುಖ ಹಾಗೂ ಮನಸ್ಸಿಗೆ ಹಿತ ನೀಡುವುದು. ಸೆಕ್ಸ್ ವೇಳೆ ಕೆಲವೊಂದು ಕ್ರಮಗಳನ್ನು ತೆಗೆದುಕೊಂಡರೆ ಲೈಂಗಿಕ ರೋಗಗಳು ಬರುವುದನ್ನು ತಡೆಯಬಹುದು. ಅದೇ ರೀತಿ ಸೆಕ್ಸ್ ಬಳಿಕವೂ ಕೆಲವೊಂದು ಕ್ರಮ ತೆಗೆದುಕೊಂಡರೆ ನಿಮ್ಮ ಲೈಂಗಿಕ ಆರೋಗ್ಯವು ಉತ್ತಮವಾಗಿರುವುದು. ಇದರಿಂದ ಯುಟಿಐ, ಯೋನಿಯಲ್ಲಿನ ಕಿರಿಕಿರಿಯಿಂದ ದೂರವಿರಬಹುದು.

ಇದಕ್ಕೆ ನೀವು ತುಂಬಾ ಪರಿಶ್ರಮ ಪಡಬೇಕಾಗಿಲ್ಲ. ಇದಕ್ಕಾಗಿ ನೀವು ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಯೋನಿ ಸಂತೋಷವಾಗಿರುವುದು ಮತ್ತು ಕಾಮಾಸಕ್ತಿಯು ಚೆನ್ನಾಗಿರುವುದು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಲೇಖನವನ್ನು ಮುಂದಕ್ಕೆ ಓದುತ್ತಾ ಸಾಗಿ....

ಯುಟಿಐ ಸಮಸ್ಯೆಯಿದ್ದ ಸೆಕ್ಸ್ ಬಳಿಕ ಮೂತ್ರ ವಿಸರ್ಜಿಸಿ

ಯುಟಿಐ ಸಮಸ್ಯೆಯಿದ್ದ ಸೆಕ್ಸ್ ಬಳಿಕ ಮೂತ್ರ ವಿಸರ್ಜಿಸಿ

ಸೆಕ್ಸ್ ಬಳಿಕ ನಿಮಗೆ ನೈಸರ್ಗಿಕವಾಗಿ ಮೂತ್ರವಿಸರ್ಜನೆ ಮಾಡಬೇಕೆಂದು ಅನಿಸುವುದಿಲ್ಲ. ಆದರೆ ನ್ಯೂಯಾರ್ಕ್ ನ ವೆಸ್ಟ್ ಚೆಸ್ಟರ್ ನ ಸ್ತ್ರೀರೋಗ ತಜ್ಞೆ ಹಾಗೂ `ದ ಕಂಪ್ಲೀಟ್ ಎ ಟು ಝಡ್ ಫಾರ್ ಯುವರ್ ವೈ' ಪುಸ್ತಕದ ಲೇಖಕಿ ಅಲ್ಯಸ್ಸಾ ಡ್ವೆಕ್ ಪ್ರಕಾರ ಯುಟಿಐ ಸಮಸ್ಯೆಯನ್ನು ಎದುರಿಸುವಂತಹ ಮಹಿಳೆಯರು ಮೂತ್ರವಿಸರ್ಜನೆ ಮಾಡಿಕೊಳ್ಳಬೇಕು. ಯಾಕೆಂದರೆ ಲೈಂಗಿಕ ಕ್ರಿಯೆ ವೇಳೆ ಗುದನಾಳದ ಬಳಿ ಇರುವಂತಹ ಬ್ಯಾಕ್ಟೀರಿಯಾವು ಗರ್ಭಕಂಠ ಮತ್ತು ಯೋನಿಗೆ ಹತ್ತಿರವಾಗಬಹುದು. ಇದರಿಂದ ಗರ್ಭಕೋಶದಲ್ಲಿ ಸೋಂಕು ಕಾಣಿಸಿಕೊಳ್ಳ ಬಹುದು. ಮೂತ್ರ ವಿಸರ್ಜನೆ ವೇಳೆ ಬ್ಯಾಕ್ಟೀರಿಯಾವು ಹೊರಹೋಗುವುದು. ಇದರಿಂದ ಯುಟಿಐ ಬಗ್ಗೆ ಚಿಂತೆ ಮಾಡಬೇಕಿಲ್ಲವೆಂದು ಡ್ವೆಕ್ ಹೇಳುತ್ತಾರೆ.

 ಕ್ರಾನ್ಬೇರಿ ಸಪ್ಲಿಮೆಂಟ್

ಕ್ರಾನ್ಬೇರಿ ಸಪ್ಲಿಮೆಂಟ್

ಸೆಕ್ಸ್ ಬಳಿಕ ಯುಟಿಐ ಸಮಸ್ಯೆಯಿಂದ ಬಳಲುತ್ತಿರುವಂತಹ ಮಹಿಳೆಯರು ಕ್ರಾನ್ಬೇರಿ ಮಾತ್ರೆ ಅಥವಾ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರಾನ್ಬೇರಿ ಅಂಟನ್ನು ಬಳಸಬೇಕು. ಆದರೆ ಸಕ್ಕರೆಯುಳ್ಳ ಕ್ರಾನ್ಬೇರಿ ಜ್ಯೂಸ್ ನ್ನು ಬಳಸಬಾರದು ಎಂದು ಡ್ವೆಕ್ ಅವರು ಸೂಚಿಸಿದ್ದಾರೆ.

 ಒರೆಸಿಕೊಳ್ಳಿ

ಒರೆಸಿಕೊಳ್ಳಿ

ಲ್ಯೂಬ್ರಿಕೆಂಟ್, ಜೊಲ್ಲು ಏನು ಬೇಕಾದರೂ ನೀವು ಕರೆಯಬಹುದು. ಆದರೆ ಸೆಕ್ಸ್ ಬಳಿಕ ನೀವು ಇದನ್ನು ಬೇಗನೆ ಒರೆಸಿಕೊಳ್ಳಬಹುದು. ಬೆರಳುಗಳು, ಬಾಯಿ ಮತ್ತು ಗುದನಾಳದ ಲ್ಯೂಬ್ರಿಕೆಂಟ್ ಮತ್ತು ಬ್ಯಾಕ್ಟೀರಿಯಾವು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದ ಮಹಿಳಾ ಆರೋಗ್ಯ ತಜ್ಞೆ ಶೆರ್ರಿ ರೋಸ್ ತಿಳಿಸಿದರು. ನಿಮ್ಮ ಜನನೇಂದ್ರೀಯದ ಸುತ್ತ ನೀವು ಸೆಕ್ಸ್ ಬಳಿಕ ಸುಗಂಧವಿಲ್ಲದೆ ಸೋಪ್ ಹಾಕಿ ತೊಳೆಯಿರಿ. ಯೋನಿಯನ್ನು ಸೋಪ್ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಬಳಿಕ ಒರೆಸಿಕೊಳ್ಳಿ. ಆದರೆ ನೀವು ಒಳಗಡೆ ತೊಳೆಯಬೇಕೆಂದಿಲ್ಲ. ಯಾಕೆಂದರೆ ಯೋನಿಯು ತನ್ನದೇ ಆಗಿರುವಂತಹ ಸ್ವಚ್ಛತೆಯನ್ನು ಮಾಡಿಕೊಳ್ಳುವುದು ಎಂದು ಅವರು ಹೇಳುತ್ತಾರೆ.

Most Read: ಸೆಕ್ಸ್ ಬಳಿಕ ಒಳಉಡುಪು ಹಾಕಬೇಡಿ! ಇಲ್ಲಾಂದ್ರೆ ಸೋಂಕು ಮತ್ತು ತುರಿಕೆ ಕಾಡಬಹುದು

 ಬಾತ್ ಟಬ್ ನಲ್ಲಿ ಮುಳುಗಿ

ಬಾತ್ ಟಬ್ ನಲ್ಲಿ ಮುಳುಗಿ

ನೀವು ಸೆಕ್ಸ್ ಬಳಿಕ ಬಾತ್ ಟಬ್ ನಲ್ಲಿ ಮುಳುಗಿದರೆ ಆಗ ನಿಮಗೆ ಹೆಚ್ಚಿನ ಆರಾಮ ಸಿಗುವುದು. ಉಗುರು ಬೆಚ್ಚಿನ ನೀರಿಗೆ ತೆಂಗಿನೆಣ್ಣೆ ಹಾಕಿಕೊಂಡರೆ ಆಗ ಯೋನಿಯ ಹೊರಗಿನ ಚರ್ಮವು ತೇವಾಂಶದಿಂದ ಇರುವುದು. ಯೋನಿಯ ಊತ ಅಥವಾ ಕಿರಿಕಿರಿಯು ತಪ್ಪುವುದು ಎಂದು ರೋಸ್ ತಿಳಿಸುತ್ತಾರೆ. ಇದು ಸೋಂಕು ಬರದಂತೆ ತಡೆಯುವುದು ಎಂದು ಅವರು ತಿಳಿಸಿದ್ದಾರೆ. ಆದರೆ ಅತಿಯಾಗಿ ಬಾತ್ ಟಬ್ ನಲ್ಲಿ ನೊರೆಗಳನ್ನು ಬರಿಸಬೇಡಿ, ಎಣ್ಣೆ ಹೆಚ್ಚು ಹಾಕಿಕೊಳ್ಳಬೇಡಿ ಎಂದು ಯಾಲೆ ಸ್ಕೂಲ್ ಆಫ್ ಮೆಡಿಸಿನ್ ನ ಸ್ತ್ರೀರೋಗ ತಜ್ಞೆಯಾಗಿರುವ ಮೆರಿ ಜೇನ್ ಮಿನ್ಕಿನ್ ತಿಳಿಸುತ್ತಾರೆ. ಅತಿಯಾಗಿ ಮಾಡಿದರೆ ಆಗ ಯೋನಿ ಭಾಗಕ್ಕೆ ಕಿರಿಕಿರಿಯಾಗ ಬಹುದು. ರಜಾ ಸಮಯದ ಬಳಿಕ ಹೆಚ್ಚಿನ ರೋಗಿಗಳು ಯೋನಿಯ ಕಿರಿಕಿರಿಯ ಬಗ್ಗೆ ದೂರುವರು. ಇದಕ್ಕೆ ಅವರು ಬಳಸುವಂತಹ ಉಡುಗೊರೆ ಸಿಕ್ಕಿದ ಸೋಪ್ ಕಾರಣವಾಗಿದೆ ಎಂದು ಮಿನ್ಕಿನ್ ಹೇಳುತ್ತಾರೆ.

ನೈಲನ್ ಒಳ ಉಡುಪನ್ನು ಧರಿಸಿ

ನೈಲನ್ ಒಳ ಉಡುಪನ್ನು ಧರಿಸಿ

ನೀವು ಒಂದು ಸಲ ತೊಳೆದುಕೊಂಡು ಸ್ವಚ್ಛ ಮಾಡಿಕೊಂಡ ಬಳಿಕ ನೀವು ಧರಿಸುವಂತಹ ಹತ್ತಿಯ ಒಳಉಡುಪು ಅಥವಾ ಸಡಿಲವಾಗಿರುವಂತಹ ಪಿಜೆಯಿಂದ ನಿಮ್ಮ ಜನನೇಂದ್ರಿಯು ಒಣಗಿರುವುದು ಅಥವಾ ಇದಕ್ಕೆ ಉಸಿರಾಡಲು ಹೆಚ್ಚಿನ ಗಾಳಿ ಸಿಗುವುದು. ಈ ವೇಳೆ ನೀವು ನೈಲನ್ ಒಳ ಉಡುಪನ್ನು ಧರಿಸುವುದರಿಂದ ದೂರವಿರಬೇಕು. ಇದರಿಂದ ತೇವಾಂಶವು ಉಳಿದುಕೊಂಡು ಬ್ಯಾಕ್ಟೀರಿಯಾ ಬೆಳೆಯಲು ನೆರವಾಗುವುದು.

ನೀರು ಕುಡಿಯಿರಿ

ನೀರು ಕುಡಿಯಿರಿ

ಲೈಂಗಿಕ ಕ್ರಿಯೆ ವೇಳೆ ನಿಮಗೆ ತುಂಬಾ ಬೆವರಿದ್ದರೆ ಆಗ ನೀವು ಸೆಕ್ಸ್ ಬಳಿಕ ನೀರು ಕುಡಿಯಬೇಕು ಎಂದು ಇಂಡಿಯಾನಾ ಯೂನಿವರ್ಸಿಟಿಯ ಸ್ತ್ರೀರೋಗ ತಜ್ಞ ನಿಕೊಲೆ ಸ್ಕಾಟ್ ತಿಳಿಸಿದ್ದಾರೆ. ಸೆಕ್ಸ್ ಬಳಿಕ ನಿಮ್ಮ ದೇಹವು ನಿರ್ಜಲೀಕರಣಕ್ಕೆ ಒಳಗಾಗಬಹುದು. ಇದರಲ್ಲಿ ನಿಮ್ಮ ಯೋನಿಯು ಸೇರಿಕೊಂಡಿದೆ. ನೀರು ಕುಡಿದ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಆಗ ಮೂತ್ರನಾಳದಲ್ಲಿ ಇರುವಂತಹ ಬ್ಯಾಕ್ಟೀರಿಯಾವನ್ನು ಹೊರಹಾಕಬಹುದು.

ಪ್ರೋಬಯಾಟಿಕ್ ಆಹಾರ ಸೇವಿಸಿ

ಪ್ರೋಬಯಾಟಿಕ್ ಆಹಾರ ಸೇವಿಸಿ

ಸೆಕ್ಸ್ ಬಳಿಕದ ಆಹಾರವು ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಯೋನಿಯನ್ನು ಸಂತೋಷವಾಗಿಡಬಹುದು. ಮೊಸರು, ಕಿಮ್ಚಿ, ಮತ್ತು ಇತರ ಹುದುಗುಬರಿಸಿದ ಆಹಾರದಲ್ಲಿ ಯೋನಿಯಲ್ಲಿ ಇರುವಂತಹ ಒಳ್ಳೆಯ ಬ್ಯಾಕ್ಟೀರಿಯಾ ಇದೆ ಎಂದು ಇಂಡಿಯಾನಾ ಯೂನಿವರ್ಸಿಟಿಯ ಸ್ತ್ರೀರೋಗ ತಜ್ಞೆ ಕೆಲ್ಲಿ ಕಾಸ್ಪೆರ್ ತಿಳಿಸಿದ್ದಾರೆ. ಈ ಆಹಾರಗಳ ಸೇವನೆಯಿಂದಾಗಿ ದೇಹಕ್ಕೆ ಸೆಕ್ಸ್ ಬಳಿಕ ಒಳ್ಳೆಯ ಬ್ಯಾಕ್ಟೀರಿಯಾವು ಸಿಗುವುದು. ಇದರಿಂದ ಶಿಲೀಂಧ್ರ ಸೋಂಕು ಕಡಿಮೆಯಾಗುವುದು.

Most Read:ನೋಡಿ ಇದೇ ಕಾರಣಕ್ಕೆ ಮಹಿಳೆಯರು ಸೆಕ್ಸ್ ವಿಷಯದಲ್ಲಿ ಭಯಪಡುವುದು!

ತಣ್ಣೀರಿನ ಸ್ನಾನ ಮಾಡಿ

ತಣ್ಣೀರಿನ ಸ್ನಾನ ಮಾಡಿ

ಸಾಮಾನ್ಯವಾಗಿ ಮಿಲನದ ಬಳಿಕ ಯೋನಿಯ ಸ್ನಾಯುಗಳು ಸಡಿಲವಾಗಿ ತೆರೆದ ಸ್ಥಿತಿಯಲ್ಲಿರುತ್ತವೆ. ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಅಥವಾ ಬಿಸಿನೀರಿರುವ ಸ್ನಾನದ ತೊಟ್ಟಿಯಲ್ಲಿ ಮುಳುಗುವುದು ಸೋಂಕುಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಬಿಸಿನೀರಿನ ಸ್ನಾನ ಬೇಡ. ಮುಖ್ಯವಾದ ಸಂಗತಿ ಏನೆಂದರೆ ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.

English summary

Things to do after sex to keep your vagina healthy

There are some pretty simple things to do after sex to keep your vagina and your libido equally happy.
X
Desktop Bottom Promotion