ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ ಬರುವ ಆರೋಗ್ಯ ಸಮಸ್ಯೆಗಳು

Posted By: Hemanth Amin
Subscribe to Boldsky

ವೈವಾಹಿಕ ಜೀವನದಲ್ಲಿ ಲೈಂಗಿಕ ಕ್ರಿಯೆ ಕೂಡ ತುಂಬಾ ಪ್ರಮುಖ ಅಂಶ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸುವವರು ಇದ್ದಾರೆ. ಇನ್ನು ಕೆಲವರು ವಾರದಲ್ಲಿ ಇಂತಿಷ್ಟು ದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು. ಆದರೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇದ್ದರೆ ಅದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು ಎನ್ನುವುದು ನಿಮಗೆ ತಿಳಿದಿದೆಯಾ?

ಹೌದು, ಪ್ರಾಣಿಗಳ ಸಹಿತ ಮನುಷ್ಯನಿಗೆ ಕೂಡ ಕೆಲವೊಂದು ಮೂಲಭೂತ ಪ್ರವೃತ್ತಿಗಳು ಎನ್ನುವುದು ಇರುತ್ತದೆ. ಇದನ್ನು ಬಿಟ್ಟು ಆತ ಬದುಕುಳಿಯುವುದು ಅಸಾಧ್ಯವಾಗುತ್ತದೆ. ಹಸಿವು, ಬಾಯಾರಿಕೆ, ಸ್ವಯಂ ನಿಯಂತ್ರಣ ಮತ್ತು ಲೈಂಗಿಕ ಕ್ರಿಯೆಯ ಆಸಕ್ತಿಯು ನಮ್ಮ ಮೂಲ ಪ್ರವೃತ್ತಿಗಳಲ್ಲಿ ಒಳಗೊಂಡಿವೆ. ಇದು ನಮಗೆ ನೈಸರ್ಗಿಕವಾಗಿ ಬಂದಿರುವುದು. ಲೈಂಗಿಕ ಆಕಾಂಕ್ಷೆ ಹೊಂದಿರುವುದು ಸಹಜ ಹಾಗೂ ನೈಸರ್ಗಿಕ. ಆದರೆ ಹಲವಾರು ಕಾರಣಗಳಿಂದ ಕೆಲವರಿಗೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಒತ್ತಡ, ಕೆಲವು ಧಾರ್ಮಿಕ ನಂಬಿಕೆಗಳು, ಸಂಗಾತಿ ಕೊರತೆ, ನಿಮಿರುವಿಕೆ ಅಸಾಮಾನ್ಯ ಕ್ರಿಯೆ, ಫ್ರಿಜಿಡಿಟಿ, ಸೆಕ್ಸ್ ಬಗ್ಗೆ ಜ್ಞಾನದ ಕೊರತೆ ಇತ್ಯಾದಿ. ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇದ್ದರೆ ಅದರಿಂದ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮಗಳು ಬೀರುತ್ತದೆ ಎಂದು ತಿಳಿದುಕೊಳ್ಳುವ.... 

ಖಿನ್ನತೆ ಕಾಡಬಹುದು!

ಖಿನ್ನತೆ ಕಾಡಬಹುದು!

ಲೈಂಗಿಕ ಕ್ರಿಯೆಯ ವೇಳೆ ಎಂಡ್ರೋಫಿನ್ಸ್ ಅಥವಾ ಉತ್ತಮ ಭಾವನೆಯ ಹಾರ್ಮೋನುಗಳು ಮೆದುಳಿನಲ್ಲಿ ಬಿಡುಗಡೆಯಾಗುವುದು. ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇದ್ದರೆ ಖಿನ್ನತೆ ಮತ್ತು ಅಸಮಾಧಾನ ಹೆಚ್ಚಾಗುವುದು.

ಶಿಶ್ನದ ಗಾತ್ರ ಕುಗ್ಗುವುದು!!

ಶಿಶ್ನದ ಗಾತ್ರ ಕುಗ್ಗುವುದು!!

ತುಂಬಾ ದೀರ್ಘಕಾಲದ ತನಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇರುವ ಪುರುಷರ ಶಿಶ್ನದ ಗಾತ್ರವು ಕುಗ್ಗುವುದು ಎಂದು ಅಧ್ಯಯನಗಳು ಹೇಳಿವೆ. ನಿಯಮಿತವಾಗಿ ಉದ್ರೇಕಗೊಳ್ಳದೆ ಇರುವ ಕಾರಣದಿಂದ ಶಿಶ್ನದ ಕೋಶಗಳು ಕುಗ್ಗುವುದು ಮತ್ತು ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳುವುದು.

ನಿಮಿರುವಿಕೆ ಅಸಾಮಾನ್ಯತೆ

ನಿಮಿರುವಿಕೆ ಅಸಾಮಾನ್ಯತೆ

ನಿಯಮಿತವಾಗಿ ಮಿಲನದಲ್ಲಿ ಭಾಗಿಯಾಗದೇ ಇರುವ ಅಥವಾ ಬಹುಕಾಲ ಪಾಲ್ಗೊಳ್ಳದೇ ಇರುವ ಇನ್ನೊಂದು ಪ್ರಮುಖ ತೊಂದರೆ ಎಂದರೆ ನಿಮಿರು ದೌರ್ಬಲ್ಯ. ಅಗತ್ಯ ಸಮಯದಲ್ಲಿ ಜನನಾಂಗ ಸಾಕಷ್ಟು ನಿಮಿರುತನವನ್ನು ಪಡೆಯದೇ ಹೋಗುತ್ತದೆ.

ಕಾಮಾಸಕ್ತಿ ಕಳೆದುಕೊಳ್ಳುವುದು

ಕಾಮಾಸಕ್ತಿ ಕಳೆದುಕೊಳ್ಳುವುದು

ಬಹುಕಾಲ ಮಿಲನದಲ್ಲಿ ತೊಡಗಿಕೊಳ್ಳದ ದಂಪತಿಗಳಲ್ಲಿ ಕಾಮಾಸಕ್ತಿಯೂ ಕಡಿಮೆಯಾಗುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಏಕೆಂದರೆ ಈ ಸಮಯದಲ್ಲಿ ಪುರುಷರೂ ಮಹಿಳೆಯರೂ ತಮ್ಮ ಗಮನವನ್ನು ಇತರ ಅಭಿರುಚಿ, ಧಾರ್ಮಿಕ ಕಟ್ಟುಪಾಡು ಅಥವಾ ಬೇರಾವುದೋ ವಿಷಯದ ಕುರಿತು ಕೇಂದ್ರೀಕರಿಸಿರುವ ಕಾರಣ ಮಿಲನದ ಸಮಯದಲ್ಲಿಯೂ ಅವರ ಗಮನ ಅವರ ಅಭಿರುಚಿ ಅಥವಾ ಆ ಸಮಯದಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆಯೇ ಇರುವ ಕಾರಣ ಕಾಮಾಸಕ್ತಿ ಕಡಿಮೆಯಾಗುತ್ತದೆ.

ಪ್ರತಿರೋಧಕ ಶಕ್ತಿ ಕುಸಿತ

ಪ್ರತಿರೋಧಕ ಶಕ್ತಿ ಕುಸಿತ

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಅದರಿಂದ ಪ್ರತಿರೋಧಕ ಶಕ್ತಿಯು ವೃದ್ಧಿಯಾಗುವುದು. ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇದ್ದರೆ ಅನಾರೋಗ್ಯಗಳು ಕಾಡಬಹುದು.

 ಜನನೇಂದ್ರೀಯದ ಕ್ಯಾನ್ಸರ್

ಜನನೇಂದ್ರೀಯದ ಕ್ಯಾನ್ಸರ್

ತಿಂಗಳಲ್ಲಿ 21 ಸಲಕ್ಕಿಂತ ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ವೀರ್ಯ ಸ್ಖಲನ ಮಾಡುವಂತಹ ವ್ಯಕ್ತಿಗೆ ಜನನೇಂದ್ರೀಯದ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾ ಕಡಿಮೆ. ತಿಂಗಳಲ್ಲಿ 4-5 ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಜನನೇಂದ್ರಿಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುವುದು.

ಋತುಚಕ್ರದ ವೇಳೆ ಸೆಳೆತ

ಋತುಚಕ್ರದ ವೇಳೆ ಸೆಳೆತ

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇರುವಂತಹ ಮಹಿಳೆಯರಲ್ಲಿ ಕಂಡುಬರುವ ಮತ್ತೊಂದು ಸಮಸ್ಯೆಯೆಂದರೆ ಋತುಚಕ್ರದ ವೇಳೆ ಸೆಳೆತ. ಲೈಂಗಿಕ ಕ್ರಿಯೆಯು ಈ ಸಮಸ್ಯೆ ನಿವಾರಿಸುವುದು.

ಕುಂಠಿತವಾಗುವ ರೋಗ ನಿರೋಧಕ ಶಕ್ತಿ

ಕುಂಠಿತವಾಗುವ ರೋಗ ನಿರೋಧಕ ಶಕ್ತಿ

ಇನ್ನೊಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ನಿಯಮಿತವಾದ ಮಿಲನದಿಂದ ದಂಪತಿಗಳಿಬ್ಬರ ದೇಹದಲ್ಲಿಯೂ ರೋಗ ನಿರೋಧಕ ವ್ಯವಸ್ಥೆ ಉತ್ತಮವಾಗಿದ್ದು ಈ ಕ್ರಿಯೆಯನ್ನು ನಿಯಮಿತವಾಗಿಸುವ ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಅತ್ಯುತ್ತಮವಾಗಿರಿಸಬಹುದು. ಮಿಲನವಂಚಿತ ದಂಪತಿಗಳಲ್ಲಿ ರೋಗ ನಿರೋಧಕ ವ್ಯವಸ್ಥೆ ಕುಸಿಯುತ್ತದೆ.

English summary

these will Happen When You not Having sex regularly!

While it is a fact that human beings are wired to desire sexual intercourse, it is also true that some of us may not be able indulge in intercourse on a regular basis. Did you know that not having sex regularly can cause certain health problems? Yes! As we know, all animals, including human beings, have certain basic
Story first published: Thursday, February 1, 2018, 23:31 [IST]