For Quick Alerts
ALLOW NOTIFICATIONS  
For Daily Alerts

ಈ ಒಂದು ಕೆಟ್ಟ ಅಭ್ಯಾಸ ಎರಡು ಬದಿ ಹರಿತವಿರುವ ಖಡ್ಗದಂತೆ! ಇದರಿಂದ ದೂರವಿರಿ...

By Hemanth
|

ಹಸ್ತಮೈಥುನ ಎನ್ನುವುದು ತಮ್ಮಲ್ಲಿ ಮೂಡಿರುವಂತಹ ಕಾಮಾಸಕ್ತಿ ತಣಿಸುವಂತಹ ಅಪಾಯಕಾರಿಯಲ್ಲದ ವಿಧಾನವಾಗಿದೆ. ಕೆಲವೊಂದು ಸಂಪ್ರದಾಯ, ಧರ್ಮ ಹಾಗೂ ದೇಶಗಳಲ್ಲಿ ಇದು ನಿಷಿದ್ಧವೆಂದಿದ್ದರೂ ಇದರಿಂದ ಯಾವುದೇ ರೀತಿಯ ಪ್ರಾಣಹಾನಿಯಾಗುವಂತಹ ಅಪಾಯವಿಲ್ಲವೆಂದು ಅಧ್ಯಯನಗಳು ಕೂಡ ಹೇಳಿವೆ.

ನಮಗೆಲ್ಲಾ ಗೊತ್ತಿರುವ ಹಾಗೆ ಹಸ್ತಮೈಥುನ ಸಾಮಾನ್ಯವಾದ ಚಟುವಟಿಕೆಗಳಲ್ಲಿ ಒಂದು ಎಂದು ಹೇಳಬಹುದು. ಕೆಲವು ಪುರುಷರು ವಿವಾಹದ ಪೂರ್ವದಲ್ಲಿ ಈ ಚಟವನ್ನು ಹೊಂದಿರುತ್ತಾರೆ. ಇನ್ನೂ ಕೆಲವರು ವಿವಾಹದ ನಂತರದ ದಿನಗಳಲ್ಲೂ ಇದನ್ನು ಮುಂದುವರಿಸುತ್ತಾರೆ ಎಂದು ಕೆಲವು ಅಧ್ಯಯನವು ದೃಢ ಪಡಿಸಿದೆ. ಹಸ್ತಮೈಥುನವು ದಿನಕ್ಕೆ ಒಮ್ಮೆ, ದಿನಕ್ಕೆರಡು ಬಾರಿ, ಮೂರು ಬಾರಿ ಹೀಗೆ ಸಂಖ್ಯೆಯು ಹೆಚ್ಚುತ್ತಾ ಹೋದಂತೆ ಅಪಾಯದ ಮಟ್ಟವೂ ಹೆಚ್ಚುತ್ತದೆ ಎಂದು ವೈದ್ಯಕೀಯಶಾಸ್ತ್ರ ದೃಢ ಪಡಿಸಿದೆ.

ಈ ಒಂದು ಅಭ್ಯಾಸವನ್ನು, ಹುಡುಗ-ಹುಡುಗಿಯರು ಕಂಟ್ರೋಲ್ ಮಾಡಲೇಬೇಕು!

ವೈದ್ಯಕೀಯ ಶಾಸ್ತ್ರದಲ್ಲಿ ವಾರಕ್ಕೆ 2-3 ಬಾರಿಯೂ ಹಸ್ತಮೈಥುನಕ್ಕೆ ಒಳಗಾಗಬಾರದು ಎಂದು ಹೇಳುತ್ತದೆ. ಹಸ್ತಮೈಥುನ ಮಾಡಿ ಕೊಳ್ಳುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ಮೇಲೆ ಪರಿಣಾಮಗಳು ಉಂಟಾಗುತ್ತವೆ. ಮುಂದೆ ಓದಿ

ಹಸ್ತಮೈಥುನ ಮಾಡಿಕೊಳ್ಳುವುದು ಯಾಕೆ?

ಹಸ್ತಮೈಥುನ ಮಾಡಿಕೊಳ್ಳುವುದು ಯಾಕೆ?

ಪುರುಷರು ಹಸ್ತಮೈಥುನವನ್ನು ಸಾಮಾನ್ಯ ಲೈಂಗಿಕ ಅಭಿವೃದ್ಧಿ ಎಂದು ಭಾವಿಸಿರುವುದಾಗಿ ಕೆಲವೊಂದು ಅಧ್ಯಯನಗಳು ಹೇಳಿವೆ. ಮಹಿಳೆಯರು ಇದು ಸರಿಯೋ ಅಥವಾ ತಪ್ಪೋ ಎನ್ನುವ ಗೊಂದಲದ ಮಧ್ಯೆ ಸಿಲುಕಿರುವರು. ಆದರೆ ಹೆಚ್ಚಿನವರು ಇದನ್ನು ತಮ್ಮ ಲೈಂಗಿಕ ಜೀವನದ ಭಾಗನ್ನಾಗಿಸಿಕೊಂಡಿದ್ದಾರೆ.

ಜನರು ಹಸ್ತಮೈಥುನ ಮಾಡಿಕೊಳ್ಳಲು ಇರುವ ಕಾರಣಗಳು ಯಾವುದು?

ಜನರು ಹಸ್ತಮೈಥುನ ಮಾಡಿಕೊಳ್ಳಲು ಇರುವ ಕಾರಣಗಳು ಯಾವುದು?

ಲೈಂಗಿಕ ಆಸಕ್ತಿ ತಣಿಸಲು ಹಸ್ತುಮೈಥುನವು ಪ್ರಮುಖ ಮಾರ್ಗವಾಗಿದೆ. ಲೈಂಗಿಕ ಸಂಬಂಧದಲ್ಲಿ ಇಲ್ಲದೆ ಇರುವವರು ಮತ್ತು ಸಂಬಂಧವನ್ನು ಕಡೆಗಣಿಸುವವರಿಗೆ ಇದು ತುಂಬಾ ಒಳ್ಳೆಯದು. ಲೈಂಗಿಕ ಕ್ರಿಯೆಯಿಂದ ಕೆಲವೊಂದು ರೀತಿಯ ಲೈಂಗಿಕ ರೋಗಗಳು ಹರಡುವ ಕಾರಣದಿಂದ ಇದು ತುಂಬಾ ಸುರಕ್ಷಿತ ಲೈಂಗಿಕ ಕ್ರಿಯೆಯಾಗಿದೆ. ಕೆರಳಿದ ಹಾರ್ಮೋನುಗಳ ಕಾರಣ ಯಾವುದೇ ರೀತಿಯ ಗರ್ಭಧಾರಣೆಯ ಅಪಾಯವಿಲ್ಲದೆ ಹಸ್ತಮೈಥುನ ಮಾಡಿಕೊಳ್ಳುವುದು ಸುರಕ್ಷಿತ. ಲೈಂಗಿಕ ಸಂಗಾತಿಯಿದ್ದರೂ ಸಹಿತ ಹಸ್ತಮೈಥುನವು ಕೆಲವೊಂದು ಸಲ ನಿಮ್ಮ ಸಮಯ ನೀಡುವುದು. ನಿಮಗೆ ಏನು ಬೇಕೆಂದು ನಿಮಗಿಂತ ಚೆನ್ನಾಗಿ ತಿಳಿಯಲು ಬೇರೆ ಯಾರಿಂದಲೂ ಸಾಧ್ಯವಿಲ್ಲ.

ಹಸ್ತಮೈಥುನ ಎರಡು ಬದಿ ಹರಿತವಿರುವ ಖಡ್ಗದಂತೆ!

ಹಸ್ತಮೈಥುನ ಎರಡು ಬದಿ ಹರಿತವಿರುವ ಖಡ್ಗದಂತೆ!

ಸಂಗಾತಿಗಳು ತಮ್ಮ ಕಾಮಸಕ್ತಿಯನ್ನು ಸುಧಾರಿಸಿಕೊಳ್ಳಲು ಮತ್ತು ಗುಣಮಟ್ಟದ ಲೈಂಗಿಕ ಜೀವನಕ್ಕೆ ತಜ್ಞರು ಹಸ್ತಮೈಥುನದ ಸಲಹೆ ನೀಡುವರು ಪರಸ್ಪರರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಂಟಿ ಹಸ್ತಮೈಥುನವನ್ನು ಕೂಡ ಕೆಲವೊಂದು ಸಂದರ್ಭದಲ್ಲಿ ಸಲಹೆ ಮಾಡಲಾಗುತ್ತದೆ. ಸ್ವಜಾಗೃತಿಯೊಂದಿಗೆ ಇದರಿಂದ ನೀವು ಹೆಚ್ಚಿನ ಜ್ಞಾನ ಪಡೆದುಕೊಂಡು ಯಾವಾಗ ನೀವು ಹೆಚ್ಚು ಉತ್ತೇಜನಗೊಳ್ಳುವಿರಿ ಎಂದು ಸಂಗಾತಿಗೆ ಹೇಳಬಹುದು ಮತ್ತು ಸುಖದ ಪರಾಕಾಷ್ಠೆ ಪಡೆಯಬಹುದು. ಇನ್ನೊಂದು ಕಡೆಯಲ್ಲಿ ಇದು ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ ಒಬ್ಬನಿಗೆ ಹಸ್ತಮೈಥುನ ಚಟವಾಗಿದ್ದರೆ ಆಗ ಸಂಬಂಧದಲ್ಲಿ ಬಿರುಕು ಮೂಡಬಹುದು.

ಅಧ್ಯಯನಗಳ ಪ್ರಕಾರ

ಅಧ್ಯಯನಗಳ ಪ್ರಕಾರ

ಅಧ್ಯಯನಗಳ ಪ್ರಕಾರ ಯುವ ಮಹಿಳೆಯರಲ್ಲಿ ಲೈಂಗಿಕ ಸಂಬಂಧದಲ್ಲಿ ಸ್ವಾಭಿಮಾನವು ತುಂಬಾ ಕಡಿಮೆ ಇರುವುದು ಮತ್ತು ಹಸ್ತಮೈಥುನ ಮಾಡಿಕೊಳ್ಳುವಂತೆ ತಮ್ಮ ಸಂಗಾತಿಯು ಕೇಳಿಕೊಂಡಾಗ ಅವರ ಸಂಬಂಧದ ಗುಣಮಟ್ಟ ಮತ್ತು ಲೈಂಗಿಕ ತೃಪ್ತಿಯು ತುಂಬಾ ಕುಗ್ಗುವುದು.

ಮಾನಸಿಕ ಪರಿಣಾಮ

ಮಾನಸಿಕ ಪರಿಣಾಮ

ಹಸ್ತಮೈಥುನವು ಯಾವುದೇ ರೀತಿಯ ಸಮಸ್ಯೆ ಉಂಟು ಮಾಡದು. ಆದರೆ ಅದರ ಕಡೆ ನಿಮ್ಮ ನಿಲುವು ಪರಿಣಾಮ ಬೀರುವುದು. ತುಂಬಾ ಸಂಪ್ರದಾಯಬದ್ಧ ಹಿನ್ನೆಲೆ ಮತ್ತು ಕುಟುಂಬದಿಂದ ಬಂದಿರುವಂತಹವರು ಹಸ್ತಮೈಥುನವನ್ನು ಒಂದು ಪಾಪವೆಂದು ಪರಿಗಣಿಸುವರು. ಹಸ್ತಮೈಥುನವು ಕ್ರಿಯೆಯ ವೇಳೆ ನಿಮಗೆ ತುಂಬಾ ಸುಖ ನೀಡಬಹುದು. ಆದರೆ ಇದರ ಬಳಿಕ ಅದು ತಪ್ಪಿತಸ್ಥ ಭಾವನೆ ಮೂಡಿಸಬಹುದು.

ನೀಲಿಚಿತ್ರಗಳ ಅತಿಯಾದ ಬಳಕೆ

ನೀಲಿಚಿತ್ರಗಳ ಅತಿಯಾದ ಬಳಕೆ

ಹಸ್ತಮೈಥುನ ಮಾಡಿಕೊಳ್ಳಲು ನೀವು ಹೆಚ್ಚಾಗಿ ನೀಲಿ ಚಿತ್ರಗಳನ್ನು ನೋಡುತ್ತಲಿದ್ದರೆ ಆಗ ಖಂಡಿತವಾಗಿಯೂ ಅಪಾಯವಿದ್ದೇ ಇರುತ್ತದೆ. ಯಾಕೆಂದರೆ ಇದು ಚಟವಾಗಿ ಹೋಗಬಹುದು. ಆರೋಗ್ಯಕರ ಲೈಂಗಿಕ ಜೀವನಕ್ಕೆ ಕೆಲವರು ಹಸ್ತಮೈಥುನಕ್ಕಾಗಿ ನೀಲಿಚಿತ್ರಗಳನ್ನು ವೀಕ್ಷಿಸಬಹುದು. ಆದರೆ ಇದು ಗೀಳಾಗಿ ಬದಲಾಗಬಹುದು. ನೀಲಿಚಿತ್ರಗಳನ್ನು ನೋಡಿಕೊಂಡು ಹಸ್ತಮೈಥುನ ಮಾಡಿದರೆ ಅದರಿಂದ ತುಂಬಾ ಕೆಟ್ಟ ಪರಿಣಾಮವಾಗುವುದು. ಯಾಕೆಂದರೆ ಇದನ್ನು ಅವರು ಏಕಾಂಗಿಯಾಗಿ ಮಾಡಿಕೊಳ್ಳುವರು. ಇದು ಪುರುಷರಲ್ಲಿ ನಕಾರಾತ್ಮಕ ಸಂಬಂಧದ ತೃಪ್ತಿಯನ್ನು ಉಂಟು ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಅತಿಯಾಗಿ ನೀಲಿ ಚಿತ್ರ ನೋಡಿದರೆ, ನೋಡಿ ಇಂತಹ ಸಮಸ್ಯೆ ಕಾಡಬಹುದು!

ಹಸ್ತಮೈಥುನದ ಅಡ್ಡಪರಿಣಾಮ-ಮೂತ್ರನಾಳದ ಸೋಂಕು

ಹಸ್ತಮೈಥುನದ ಅಡ್ಡಪರಿಣಾಮ-ಮೂತ್ರನಾಳದ ಸೋಂಕು

ಈ ವ್ಯಸನಕ್ಕೆ ತುತ್ತಾದ ವ್ಯಕ್ತಿಗಳು ತಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥವನ್ನು ಕಳೆದುಕೊಂಡಿರುವುದನ್ನು ಕೆಲವು ಸಂದರ್ಭಗಳಲ್ಲಿ ಗಮನಿಸಲಾಗಿದೆ. ತನ್ಮೂಲಕ ನಾಲ್ಕು ಜನರ ನಡುವೆ ಇದ್ದ ಸಮಯದಲ್ಲಿ ಮೂತ್ರ ಪ್ರಕಟಗೊಂಡು ಮುಜುಗರ ಅನುಭವಿಸಬೇಕಾಗುತ್ತದೆ. ಇತ ಅಡ್ಡಪರಿಣಾಮಗಳಲ್ಲಿ ಅತೀವವಾದ ದೈಹಿಕ ಸುಸ್ತು, ನಪುಂಸಕತೆ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ, ಅನಿಯಂತ್ರಿತ ವೀರ್ಯಸ್ಖಲನ , ಮಹಿಳೆಯರಲ್ಲಿ ಅನಿಯಂತ್ರಿತ ಯೋನಿಸ್ರಾವ, ಆರ್ದ್ರತೆಯ ಕೊರತೆಯಿಂದಾಗಿ ಒಣಗುವಿಕೆ, ಮೂತ್ರನಾಳದಲ್ಲಿ ಸೋಂಕು ಮೊದಲಾದವು ಎದುರಾಗುತ್ತವೆ.

ಭಾವನಾತ್ಮಕವಾಗಿ ದೂರವಾಗಲು ಕಾರಣವಾಗುತ್ತದೆಯಾ?

ಭಾವನಾತ್ಮಕವಾಗಿ ದೂರವಾಗಲು ಕಾರಣವಾಗುತ್ತದೆಯಾ?

ವಾಸ್ತವಕತೆ ಇಲ್ಲದೆ ಇರುವ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕುವಂತಹ ನೀಲಿಚಿತ್ರಗಳಿಂದ ಹೀಗೆ ಆಗುವುದು ಮತ್ತು ಸಂಗಾತಿಯನ್ನುಲೈಂಗಿಕ ಅನುಭವದಿಂದ ದೂರವಿಡುವುದು. ಭಾವನಾತ್ಮಕವಾಗಿ ಪುರುಷರು ತುಂಬಾ ಕುಗ್ಗುವರು ಮತ್ತು ತಮ್ಮ ಲೈಂಗಿಕ ಸಂಗಾತಿಯಿಂದ ಅಂತರ ಕಾಯ್ದುಕೊಳ್ಳುವರು. ನೀಲಿಚಿತ್ರದ ಬಳಕೆ ಮತ್ತು ಹಸ್ತಮೈಥುನವು ಸಂಗಾತಿ ಜತೆಗಿನ ಕಾಮಾಸಕ್ತಿ ಮೇಲೆ ಪರಿಣಾಮ ಬೀರಬಹುದು.

English summary

Over Side Effects Of masturbation You Should Know

Masturbation, the art of self-pleasuring, is no longer the taboo it once was in most progressive circles. However, it is not without stigma in some cultures, and there are still concerns around whether the act is harmful to your health in some way While research has proven that there are no dire consequences from masturbation, are there some other side effects you should know about?
X
Desktop Bottom Promotion