For Quick Alerts
ALLOW NOTIFICATIONS  
For Daily Alerts

ಪುರುಷರಿಗೆ ಶಿಶ್ನದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿವು, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ

|

ಮನುಷ್ಯನ ದೇಹದ ಆರೋಗ್ಯ ಮಾತ್ರವಲ್ಲದೆ ಲೈಂಗಿಕ ಆರೋಗ್ಯವು ಮುಖ್ಯವಾಗಿರುವುದು. ಇವೆರಡು ಇದ್ದರೆ ಆಗ ಪರಿಪೂರ್ಣ ಜೀವನ ಸಾಗಿಸಬಹುದು. ನಮ್ಮ ಆರೋಗ್ಯದೊಂದಿಗೆ ಜನನೇಂದ್ರಿಯಗಳ ಆರೋಗ್ಯವು ಅತೀ ಅಗತ್ಯ. ಇದನ್ನು ಕಾಪಾಡಿಕೊಂಡು ಹೋದರೆ ಮಾತ್ರ ನಮಗೆ ಲೈಂಗಿಕ ಜೀವನದಲ್ಲಿ ಸರಿಯಾದ ತೃಪ್ತಿ ಪ್ರಾಪ್ತಿಯಾಗುವುದು. ನಿಮಿರುವಿಕೆ, ಸ್ಖಲನ ಮತ್ತು ಸಂತಾನೋತ್ಪತ್ತಿಯು ಇದರಲ್ಲಿ ಪ್ರಮುಖವಾಗಿರುವಂತದ್ದಾಗಿದೆ.

ಈ ಮೂರರಲ್ಲಿ ಒಂದರ ಕೊರತೆಯಿದ್ದರೆ ಆಗ ಶಿಶ್ನದ ಆರೋಗ್ಯವು ಸರಿಯಿಲ್ಲವೆಂದು ಹೇಳಬಹುದು. ಶಿಶ್ನದ ಸಮಸ್ಯೆಯು ನಿಮ್ಮ ದೇಹದ ಯಾವುದೇ ರೀತಿಯ ಅನಾರೋಗ್ಯದ ಕಾರಣವಾಗಿರಬಹುದು. ಶಿಶ್ನದ ಮೇಲೆ ಬೀರುವಂತಹ ಪರಿಣಾಮವು ಜೀವನದ ಮೇಲೂ ಪರಿಣಾಮ ಬೀರಬಹುದು. ಇದರಿಂದಾಗಿ ನಿಮಗೆ ಖಿನ್ನತೆ ಕಾಡಬಹುದು, ಸಂಬಂಧದಲ್ಲಿ ಬಿರುಕು ಮತ್ತು ಆತ್ಮವಿಶ್ವಾಸದ ಕೊರತೆ ಕಾಣಿಸಿಕೊಳ್ಳಬಹುದು. ಶಿಶ್ನದ ಸಮಸ್ಯೆಯ ಕೆಲವೊಂದು ಲಕ್ಷಣಗಳು ಹಾಗೂ ಚಿಹ್ನೆಗಳನ್ನು ತಿಳಿದುಕೊಂಡು ಅದನ್ನು ರಕ್ಷಿಸುವುದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ..

ಶಿಶ್ನದ ಆರೋಗ್ಯದ ಮೇಲೆ ಯಾವುದು ಪರಿಣಾಮ ಬೀರುವುದು?

ಶಿಶ್ನದ ಆರೋಗ್ಯದ ಮೇಲೆ ಯಾವುದು ಪರಿಣಾಮ ಬೀರುವುದು?

ವಿವಿಧ ರೀತಿಯ ಅಂಶಗಳು ಶಿಶ್ನದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಲ್ಲಿ ಕೆಲವನ್ನು ಸರಿಪಡಿಸಬಹುದು ಮತ್ತು ಇನ್ನು ಕೆಲವು ಸರಿಪಡಿಸಲಾಗದು.

ಉದಾಹರಣೆಗೆಅಸುರಕ್ಷಿತ ಲೈಂಗಿಕ ಕ್ರಿಯೆ: ನೀವು ಲೈಂಗಿಕ ಕ್ರಿಯೆ ನಡೆಸುವ ವೇಳೆ ಯಾವುದೇ ರೀತಿಯ ಸುರಕ್ಷತೆ ಬಳಸದೆ ಇದ್ದರೆ ಆಗ ಲೈಂಗಿಕ ರೋಗಗಳು ಬರುವುದು.

*ಹೃದಯಕಾಯಿಲೆ ಮತ್ತು ಮಧುಮೇಹ: ಹೃದಯದ ಕಾಯಿಲೆಗೆ ಮಧುಮೇಹ ಮತ್ತು ಅಧಿಕರಕ್ತದೊತ್ತಡವು ಪ್ರಮುಖ ಕಾರಣವಾಗಿದೆ. ಇದು ನಿಮಿರು ದೌರ್ಬಲ್ಯವನ್ನು ಉಂಟು ಮಾಡಬಹುದು.

ಶಿಶ್ನದ ಆರೋಗ್ಯದ ಮೇಲೆ ಯಾವುದು ಪರಿಣಾಮ ಬೀರುವುದು?

ಶಿಶ್ನದ ಆರೋಗ್ಯದ ಮೇಲೆ ಯಾವುದು ಪರಿಣಾಮ ಬೀರುವುದು?

*ಕೆಲವೊಂದು ಔಷಧಿಗಳು ಹಾಗೂ ಚಿಕಿತ್ಸೆಗಳು: ಕೆಲವೊಂದು ರೀತಿಯ ಔಷಧಿಗಳು ಹಾಗೂ ಚಿಕಿತ್ಸೆಗಳು ನಿಮ್ಮ ಶಿಶ್ನದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಉದಾಹರಣೆಗೆ ಪ್ರೊಸ್ಟೇಟ್ ಕ್ಯಾನ್ಸರ್ ಬಂದ ವೇಳೆ ಜನನೇಂದ್ರೀಯದ ಗ್ರಂಥಿ ಅಥವಾ ಅದರ ಸುತ್ತಲಿನ ಅಂಗಾಂಶಗಳನ್ನು ತೆಗೆಯುವ ಪರಿಣಾಮ ತಡೆಯದೆ ಬರುವ ಮೂತ್ರ ಮತ್ತು ನಿಮಿರುವಿಕೆ ಸಮಸ್ಯೆಯಾಗಬಹುದು.

*ಧೂಮಪಾನ: ಹೃದಯದ ಅಪಾಯದೊಂದಿಗೆ ಧೂಮಪಾನ ಕೂಡ ನಿಮಿರು ದೌರ್ಬಲ್ಯವನ್ನು ಹೆಚ್ಚಿಸುವುದು.

*ಹಾರ್ಮೊನು ಅಸಮತೋಲನ: ಹಾರ್ಮೋನು ಅಸಮತೋಲವೆಂದರೆ ಪ್ರಮುಖವಾಗಿ ಟೆಸ್ಟೋಸ್ಟೆರಾನ್ ಮಟ್ಟವು ಕುಸಿಯುವುದು ನಿಮಿರು ದೌರ್ಬಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಬೊಜ್ಜಿನಿಂದಾಗಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು.

ಮಾನಸಿಕ ಸಮಸ್ಯೆ

ಮಾನಸಿಕ ಸಮಸ್ಯೆ

ನಿಮಗೆ ನಿಮಿರು ದೌರ್ಬಲ್ಯದ ಸಮಸ್ಯೆ ಕಾಡಿದ್ದರೆ ಆಗ ನೀವು ಮತ್ತೆ ಇದು ಬರುವುದು ಎಂದು ಆತಂಕ ಹಾಗೂ ಖಿನ್ನತೆಗೆ ಒಳಗಾಗುವಿರಿ. ಇದರಿಂದಾಗಿ ನಿಮಿರುವಿಕೆಯಲ್ಲಿ ಮತ್ತಷ್ಟು ಸಮಸ್ಯೆ ಉಂಟು ಮಾಡುವುದು.

Most Read:ಪುರುಷರು ತಮ್ಮ ಶಿಶ್ನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಲು ನೈಸರ್ಗಿಕ ಪರಿಹಾರ ಸೂತ್ರಗಳು

ನರ ವೈಜ್ಞಾನಿಕ ಪರಿಸ್ಥಿತಿ

ನರ ವೈಜ್ಞಾನಿಕ ಪರಿಸ್ಥಿತಿ

ಪಾರ್ಶ್ವವಾಯು, ಬೆನ್ನುಹುರಿ ಮತ್ತು ಬೆನ್ನಿಗೆ ಆಗಿರುವ ಗಾಯ, ಬಹು ಸ್ಕ್ಲೆರೋಸಿಸ್, ಮತ್ತು ಬುದ್ಧಿಮಾಂದ್ಯತೆಯು ನರ ಸಂವಹನವನ್ನು ಮೆದುಳಿನಿಂದ ಶಿಶ್ನಕ್ಕೆ ತಲುಪಿಸಲು ವಿಫಲವಾಗುವುದು. ಇದರಿಂದಾಗಿ ನಿಮಿರು ದೌರ್ಬಲ್ಯ ಕಾಡುವುದು.

ವಯಸ್ಸಾಗುವುದು

ವಯಸ್ಸಾಗುವುದು

ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ನಿಮಿರು ದೌರ್ಬಲ್ಯ ಮತ್ತು ಇತರ ಕೆಲವೊಂದು ಲೈಂಗಿಕ ಅಸಮರ್ಥತೆಗಳು ಕಾಡುವುದು. ವಯಸ್ಸಾಗುತ್ತಾ ಹೋದಂತೆ ಟೆಸ್ಟೋಸ್ಟೆರಾನ್ ಮಟ್ಟವು ಕಡಿಯಾಗುತ್ತಾ ಹೋಗುವುದು.

ಚುಚ್ಚುವಿಕೆ

ಚುಚ್ಚುವಿಕೆ

ಶಿಶ್ನಕ್ಕೆ ಚುಚ್ಚುವಿಕೆಯಿಂದಾಗಿ ಚರ್ಮದ ಸೋಂಕು ಬರಬಹುದು ಮತ್ತು ಮೂತ್ರವಿಸರ್ಜನೆಗೆ ಸಮಸ್ಯೆಯಾಗಬಹುದು. ಎಲ್ಲಿ ನೀವು ಆಭರಣ ಚುಚ್ಚಿಸಿಕೊಂಡಿದ್ದೀರಿ ಎನ್ನುವುದರ ಮೇಲೆ ಇದು ನಿಮಿರುವಿಕೆ ಮತ್ತು ಪರಾಕಾಷ್ಠೆ ತಲುಪಿಸುವಂತಹ ಸಾಧ್ಯತೆಯನ್ನು ಕುಗ್ಗಿಸುವುದು.

ಆಕ್ರಮಣಶೀಲ ಅಥವಾ ಚಮತ್ಕಾರಿಕ ಸೆಕ್ಸ್ ಅಥವಾ ಹಸ್ತಮೈಥುನ

ಆಕ್ರಮಣಶೀಲ ಅಥವಾ ಚಮತ್ಕಾರಿಕ ಸೆಕ್ಸ್ ಅಥವಾ ಹಸ್ತಮೈಥುನ

ನಿಮಿರುವಿಕೆ ಉಂಟಾದಾಗ ನೀವು ಶಿಶ್ನವನ್ನು ಹಠಾತ್ ಆಗಿ ಬಾಗಿಸಿದರೆ ಅಥವಾ ಅದಕ್ಕೆ ಒತ್ತಡ ಹಾಕಿದರೆ ಆಗ ಇದರಿಂದ ಶಿಶ್ನ ಮುರಿತಕ್ಕೆ ಒಳಗಾಗಬಹುದು. ಇದು ನಿಮಗೆ ಶಾಶ್ವತ ಸಮಸ್ಯೆ ಉಂಟು ಮಾಡಬಹುದು. ಆದರೆ ಶಿಶ್ನವು ಮುರಿತಕ್ಕೊಳಗಾಗುವುದು ಕಡಿಮೆ.

ಶಿಶ್ನದ ಕೆಲವು ಸಾಮಾನ್ಯ ಸಮಸ್ಯೆಗಳು ಯಾವುದು?

ಶಿಶ್ನದ ಕೆಲವು ಸಾಮಾನ್ಯ ಸಮಸ್ಯೆಗಳು ಯಾವುದು?

ಶಿಶ್ನದಲ್ಲಿ ಕಂಡುಬರುವಂತಹ ಕೆಲವೊಂದು ಪರಿಸ್ಥಿತಿಗಳು ಹೀಗೆ ಇರುವುದು.....

ನಿಮಿರುವಿಕೆ ಮತ್ತು ಸ್ಖಲನದ ಸಮಸ್ಯೆ

ಸೆಕ್ಸ್ ಗೆ ಬೇಕಾಗಿರುವಂತಹ ನಿಮಿರುವಿಕೆ ಪಡೆಯಲು ಅಸಮರ್ಥವಾಗುವುದು ಅಥವಾ ಅದನ್ನು ಉಳಿಸಿಕೊಳ್ಳಲು ವಿಫಲವಾಗುವುದು. ಅಸಾಮಾನ್ಯವೆಂದರೆ ಲೈಂಗಿಕ ಉತ್ತೇಜನ ವೇಳೆ ನಿರಂತರ ಅಥವಾ ನೋವಿನಿಂದ ಕೂಡಿರುವಂತಹ ನಿಮಿರುವಿಕೆ ಉಂಟಾಗುವುದು. ಇತರ ಸಮಸ್ಯೆಯೆಂದರೆ ಸ್ಖಲನವಾಗದೆ ಇರುವುದು, ಶೀಘ್ರ ಸ್ಖಲನವಾಗುವುದು, ವಿಳಂಬವಾಗಿ ಸ್ಖಲನವಾಗುವುದು, ನೋವಿನಿಂದ ಕೂಡಿದ ಸ್ಖಲನ, ತಗ್ಗಿದ ಸ್ಖಲನ ಹಿಮ್ಮುಖ ಸ್ಖಲನವಾಗುವುದು. ಹಿಮ್ಮುಖ ಸ್ಖಲನ ವೇಳೆ ವೀರ್ಯವು ಶಿಶ್ನದ ಬದಲಿಗೆ ಮೂತ್ರನಾಳದೊಳಗೆ ಹೋಗುವುದು.

Most Read:ಬಲವಾದ ಆರೋಗ್ಯಕರ ನಿಮಿರುವಿಕೆ ಪಡೆಯುವುದು ಹೇಗೆ?

ಕಾಮಾಸಕ್ತಿಯಲ್ಲಿ ಬದಲಾವಣೆ

ಕಾಮಾಸಕ್ತಿಯಲ್ಲಿ ಬದಲಾವಣೆ

ಹಾರ್ಮೋನು ವೈಪರಿತ್ಯ, ಸಂಬಂಧದ ಸಮಸ್ಯೆ ಅಥವಾ ಖಿನ್ನತೆಯಿಂದಲೂ ಕಾಮಾಸಕ್ತಿಯು ಕುಂದುವುದು. ಪದೇ ಪದೇ ಮತ್ತು ಅತಿಯಾಗಿ ಕಾಮಾಸಕ್ತಿ, ಅದರಲ್ಲೂ ವಯಸ್ಸಾದ ವ್ಯಕ್ತಿಗಳಲ್ಲಿ ಕಂಡುಬರುವುದು. ಇದು ಕೆಲವೊಂದು ವಸ್ತುಗಳ ಬಳಕೆ ಅಥವಾ ಮೆದುಳಿನ ಪರಿಣಾಮವಾಗಿದೆ. ವೈದ್ಯರಲ್ಲಿ ನಿಮ್ಮ ಕಾಮಾಸಕ್ತಿ ಬದಲಾಗಿರುವುದರ ಬಗ್ಗೆ ಚರ್ಚಿಸಿ.

ಲೈಂಗಿಕ ರೋಗಗಳು

ಲೈಂಗಿಕ ರೋಗಗಳು

ವಿವಿಧ ರೀತಿಯ ಲೈಂಗಿಕ ರೋಗಗಳು ಶಿಶ್ನದ ಮೇಲೆ ಪರಿಣಾಮ ಬೀರುವುದು. ಇದರಲ್ಲಿ ಪ್ರಮುಖವಾಗಿ ಜನನಾಂಗದ ನರೂಲಿಗಳು, ಗೊನೊರಿಯಾ, ಕ್ಲಮೈಡಿಯ, ಸಿಫಿಲಿಸ್ ಮತ್ತು ಜನನಾಂಗದ ಹರ್ಪಿಸ್ ಇದೆ. ಇದರ ಪ್ರಮುಖ ಚಿಹ್ನೆಗಳು ಹಾಗೂ ಲಕ್ಷಣಗಳೆಂದರೆ ಅದು ನೋವಿನಿಂದ ಕೂಡಿರುವಂತಹ ಮೂತ್ರವಿಸರ್ಜನೆ, ಶಿಶ್ನದಿಂದ ವಿಸರ್ಜನೆ, ಶಿಶ್ನ ಅಥವಾ ಜನನಾಂಗದ ಭಾಗದಲ್ಲಿ ಹುಣ್ಣುಗಳು ಅಥವಾ ಗುಳ್ಳೆಗಳು.

ಮುಂದೊಗಲಿನ ಸಮಸ್ಯೆ

ಮುಂದೊಗಲಿನ ಸಮಸ್ಯೆ

ಶಿಶ್ನದ ತಲೆಯಿಂದ ಮುಂದೊಗಲು ಹಿಂದಕ್ಕೆ ಬಾರದೆ ಇದ್ದಾಗ ಉಂಟಾಗುವಂತಹ ಸಮಸ್ಯೆಯನ್ನು ಫಿಮೊಸಿಸ್ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಸೋಂಕು ಕಾಡಬಹುದು. ಮೂತ್ರವಿಸರ್ಜನೆ ವೇಳೆ ನೋವು ಮತ್ತು ನಿಮಿರುವಿಕೆ ವೇಳೆಯೂ ನೋವು ಕಂಡುಬರಬಹುದು.

Most Read:ಪುರುಷರ ಶಿಶ್ನದ ಆರೋಗ್ಯ ವೃದ್ಧಿಸುವ ಆಹಾರಗಳು

ಪ್ಯಾರಾಫಿಮೋಸಿಸ್

ಪ್ಯಾರಾಫಿಮೋಸಿಸ್

ಮುಂದೊಗಲು ಹಿಮ್ಮುಖಗೊಂಡ ಬಳಿಕ ಮತ್ತೆ ತನ್ನ ನೈಜಸ್ಥಾನಕ್ಕೆ ಮರಳದೆ ಇರುವಂತಹ ಪರಿಸ್ಥಿತಿಯನ್ನು ಪ್ಯಾರಾಫಿಮೋಸಿಸ್ ಎಂದು ಕರೆಯಲಾಗುತ್ತದೆ. ಇದು ತುಂಬಾ ನೋವಿನ ಸ್ಥಿತಿಯಾಗಿದ್ದು, ಶಿಶ್ನದ ಊತ ಮತ್ತು ರಕ್ತಸಂಚಾರಕ್ಕೆ ಸಮಸ್ಯೆಯಾಗಬಹುದು.

Most Read:ಶಿಶ್ನದಲ್ಲಿ ನೋವು ಬರಲು ಕಾರಣವೇನು? ಇದಕ್ಕೆ ಚಿಕಿತ್ಸೆ ಏನು?

ಇತರ ಕಾಯಿಲೆಗಳು ಮತ್ತು ಪರಿಸ್ಥಿತಿಗಳು

ಇತರ ಕಾಯಿಲೆಗಳು ಮತ್ತು ಪರಿಸ್ಥಿತಿಗಳು

ಶಿಲೀಂಧ್ರ ಸೋಂಕು ಶಿಶ್ನದ ಮೇಲೆ ಕೆಂಪು ಅಥವಾ ಬಿಳಿ ಕಲೆ ಉಂಟು ಮಾಡಬಹುದು. ಶಿಶ್ನದ ತಲೆಯಲ್ಲಿನ ಸೋಂಕು ನೋವು ಉಂಟು ಮಾಡಬಹುದು ಮತ್ತು ವಿಸರ್ಜನೆ ಉಂಟಾಗಬಹುದು. ಪೆರೋನೀಸ್ ಎನ್ನುವ ಕಾಯಿಲೆಯಿಂದಾಗಿ ಶಿಶ್ನದ ಒಳಗಡೆ ಅಸಮಾನ್ಯವಾಗಿ ಅಂಗಾಂಶಗಳು ಬೆಳೆಯಬಹುದು, ಇದರಿಂದ ನಿಮಿರುವಿಕೆ ವೇಳೆ ನೋವು ಮತ್ತು ಬಾಗುವಿಕೆಗೆ ಸಮಸ್ಯೆಯಾಗಬಹುದು.

ಶಿಶ್ನದ ಕ್ಯಾನ್ಸರ್- ಇದು ಮುಂದೊಗಲು, ತಲೆ ಅಥವಾ ಶಿಶ್ನದ ಶಾಫ್ಟ್ ನಲ್ಲಿ ಗುಳ್ಳೆಗಳು ಕಂಡುಬರುವುದು. ಇದರಿಂದ ನೀರಿನಂತಹ ವಿಸರ್ಜನೆಯು ಆಗಬಹುದು. ಆದರೆ ಇದು ಬರುವುದು ತುಂಬಾ ಅಪರೂಪ.

ಶಿಶ್ನದ ಸಮಸ್ಯೆಗಳ ಚಿಹ್ನೆಗಳು ಮತ್ತು ಲಕ್ಷಣಗಳು

ಶಿಶ್ನದ ಸಮಸ್ಯೆಗಳ ಚಿಹ್ನೆಗಳು ಮತ್ತು ಲಕ್ಷಣಗಳು

ನಿಮಗೆ ಈ ಕೆಳಗಿನ ಚಿಹ್ನೆಗಳು ಅಥವಾ ಲಕ್ಷಣಗಳು ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.

• ಸ್ಖಲನದಲ್ಲಿ ಬದಲಾವಣೆಯಾಗುವುದು.

• ಮೂತ್ರವಿಸರ್ಜನೆ ಅಥವಾ ಸ್ಖಲನದ ವೇಳೆ ರಕ್ತಸ್ರಾವ

• ಗುಳ್ಳೆಗಳು, ಬೊಕ್ಕೆ ಅಥವಾ ಗಾಯ ಅಥವಾ ದದ್ದು ಶಿಶ್ನ ಅಥವಾ ಜನನೇಂದ್ರೀಯ ಭಾಗದಲ್ಲಿ

ಕಾಣಿಸುವುದು.

• ಶಿಶ್ನವು ಬಾಗಿದಾಗ ನೋವು ಉಂಟಾಗುವುದು ಮತ್ತು ಲೈಂಗಿಕ ಕ್ರಿಯೆಯಲ್ಲಿ ಸಮಸ್ಯೆಯಾಗುವುದು.

• ಮೂತ್ರವಿಸರ್ಜನೆ ವೇಳೆ ನಿಮಗೆ ಉರಿಯ ಭಾವನೆಯಾಗುವುದು.

• ಶಿಶ್ನದಿಂದ ವಿಸರ್ಜನೆ

• ಶಿಶ್ನಕ್ಕೆ ಗಾಯದ ಬಳಿಕ ತೀವ್ರ ನೋವು

• ಲೈಂಗಿಕ ಆಸಕ್ತಿಯು ಹೆಚ್ಚಳವಾಗುವುದು, ಅದರಲ್ಲೂ ವಯಸ್ಸಾದವರಲ್ಲಿ.

• ಲೈಂಗಿಕ ಆಸಕ್ತಿಯು ತೀವ್ರವಾಗಿ ಕುಸಿಯುವುದು.

ನಿಮ್ಮ ಶಿಶ್ನಗಳ ರಕ್ಷಣೆ ಮತ್ತು ಅದರ ಆರೋಗ್ಯಕ್ಕೆ ನೀವು ಪ್ರಮುಖವಾಗಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ಮುಂದೆ ಓದಿಕೊಳ್ಳಿ.

 ಲೈಂಗಿಕ ಜವಾಬ್ದಾರಿಗಳು

ಲೈಂಗಿಕ ಜವಾಬ್ದಾರಿಗಳು

ನೀವು ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಿ. ನೀವು ಯಾವುದೇ ಲೈಂಗಿಕ ರೋಗಗಳು ಇಲ್ಲವೆಂದು ಪರೀಕ್ಷಿಸಲ್ಪಟ್ಟ ಏಕ ಸಂಗಾತಿಯೊಂದಿಗೆ ಯಾವಾಗಲೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಿ. ಇದರಿಂದ ಸೋಂಕು ಹರಡುವುದು ಕಡಿಮೆಯಾಗುವುದು.

ಲಸಿಕೆ ಹಾಕಿಸಿಕೊಳ್ಳಿ

ಲಸಿಕೆ ಹಾಕಿಸಿಕೊಳ್ಳಿ

ನಿಮ್ಮ ವಯಸ್ಸು 26 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಆಗ ನೀವು ಶಿಶ್ನದ ನರೂಲಿಗಳನ್ನು ತಡೆಯುವ ಸಲುವಾಗಿ ಹ್ಯೂಮನ್ ಪ್ಯಾಪಿಲೋಮವೈರಸ್(ಎಚ್ ಪಿವಿ) ಲಸಿಕೆ ಹಾಕಿಸಿಕೊಳ್ಳಿ.

 ದೈಹಿಕವಾಗಿ ಚಟುವಟಿಕೆಯಿಂದ ಇರಿ

ದೈಹಿಕವಾಗಿ ಚಟುವಟಿಕೆಯಿಂದ ಇರಿ

ಮಿತವಾಗಿ ನೀವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಮದ ನಿಮಿರು ದೌರ್ಬಲ್ಯದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.

ಒಳ್ಳೆಯ ಸ್ವಚ್ಚತೆ ಕಾಪಾಡಿ

ಒಳ್ಳೆಯ ಸ್ವಚ್ಚತೆ ಕಾಪಾಡಿ

ಯಾವಾಗಲೂ ಮುಂದೊಗಲನ್ನು ಸೋಪ್ ಮತ್ತು ನೀರು ಹಾಕಿ ತೊಳೆಯುತ್ತಾ ಇರಿ. ಲೈಂಗಿಕ ಕ್ರಿಯೆ ಬಳಿಕ ಮುಂದೊಗಲು ಸಾಮಾನ್ಯ ಸ್ಥಿತಿಗೆ ಬರುವುದನ್ನು ದೃಢಪಡಿಸಿಕೊಳ್ಳಿ.

ಔಷಧೀಯ ಬಗ್ಗೆ ತಿಳಿಯಿರಿ

ಔಷಧೀಯ ಬಗ್ಗೆ ತಿಳಿಯಿರಿ

ನೀವು ಬಳಸುತ್ತಿರುವಂತಹ ಔಷಧಿ ಮತ್ತು ಅದರಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ನೀವು ವೈದ್ಯರೊಂದಿಗೆ ಮಾತನಾಡಿ.

English summary

Most Common Penis Problems, dont be neglect

Penis problems can be a sign of an underlying health condition. Ongoing health issues affecting your penis also can impact other areas of your life, causing stress or relationship problems and harming your self-confidence. Know the signs and symptoms of penis problems and what you can do to protect your penis health.
X
Desktop Bottom Promotion