For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿಯರ ಸಂಬಂಧದಲ್ಲಿ ಯಾರು ಮೊದಲು ಸೆಕ್ಸ್‌ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ?

|

ಸಂಬಂಧದಲ್ಲಿರುವ ಜೋಡಿಗಳು ತಮ್ಮ ಅನುಬಂಧವನ್ನು ಮುಂದುವರೆಸಿಕೊಂಡು ಹೋಗಲು ಎದುರಿಸುವ ಸವಾಲುಗಳಲ್ಲಿ ಪರಸ್ಪರರ ನಡುವೆ ಇರುವ ಆಕರ್ಷಣೆಯನ್ನು ಉಳಿಸಿಕೊಳ್ಳುವುದು ಪ್ರಮುಖವಾಗಿದೆ. ಒಂದು ಖಚಿತ ಸಂಬಂಧತೆಯತ್ತ ಮುಂದುವರೆಯುತ್ತಿರುವ ಜೋಡಿಯಲ್ಲಿ ಹೆಚ್ಚಿನವರು ನಿಧಾನವಾಗಿ ಲೈಂಗಿಕ ನಿರಾಸಕ್ತಿಯನ್ನು ಪ್ರಕಟಿಸುವ ಬಗ್ಗೆ ಹಲವಾರು ಸಂಶೋಧನೆಗಳು ಹಾಗೂ ಲೇಖನಗಳು ಈಗಾಗಲೇ ಪ್ರಕಟಗೊಂಡಿವೆ.

ಕೆಲವು ಸಂಶೋಧಕರು ಈ ಕುತೂಹಲಕರ ವಿಷಯದ ಬಗ್ಗೆ ನಡೆಸಿದ ಸಂಶೋಧನೆಯ ಮೂಲಕ ಜೋಡಿಯಲ್ಲೊಬ್ಬರು ಹೇಗೆ ಶೀಘ್ರವಾಗಿ ಲೈಂಗಿಕ ನಿರಾಸಕ್ತಿಗೆ ಒಳಗಾಗುತ್ತಾರೆ ಹಾಗೂ ಇವರಲ್ಲಿ ಪುರುಷನೋ, ಮಹಿಳೆಯೋ ಯಾರು ಹೆಚ್ಚು ಪ್ರಭಾವಿತರಾಗುತ್ತಾರೆ ಎಂಬ ವಿವರಗಳನ್ನು ಪ್ರಕಟಿಸಿದ್ದು ಇದರ ವಿವರಗಳು ಸಾಕಷ್ಟು ಕುತೂಹಲಕಾರಿಯಾಗಿವೆ.

ಒಂದು ಅಧ್ಯಯನ

ಒಂದು ಅಧ್ಯಯನ

BMJ ಎಂಬ ಖ್ಯಾತ ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಪರಸ್ಪರ ಮೂರು ತಿಂಗಳಿಂದ ಬದ್ದತೆಯ ಸಂಬಂಧದಲ್ಲಿ ಕಳೆದವರಲ್ಲಿ ಬಳಿಕ 34 ಶೇಖಡಾ ಪುರುಷರೂ 15 ಶೇಖಡಾ ಮಹಿಳೆಯರೂ ಲೈಂಗಿಕ ನಿರಾಸಕ್ತಿಗೆ ಒಳಗಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಈ ನಿರಾಸಕ್ತಿ ಒಂದು ಲಿಂಗಕ್ಕೆ ಸೀಮಿತವೇ?

ಈ ನಿರಾಸಕ್ತಿ ಒಂದು ಲಿಂಗಕ್ಕೆ ಸೀಮಿತವೇ?

ಕುತೂಹರಕಾರಿ ಎಂದರೆ ಲೈಂಗಿಕ ನಿರಾಸಕ್ತಿಯನ್ನು ಪ್ರಕಟಿಸಿದ ಜೋಡಿಯಲ್ಲಿ ಒಂದು ಲಿಂಗದ ವ್ಯಕ್ತಿಗಳೂ ಇನ್ನೊಬ್ಬರಿಗಿಂತ ಮೊದಲಾಗಿರುತ್ತಾರೆ. ಸಂಶೋಧಕರ ಪ್ರಕಾರ ಬದ್ದತೆಯ ಸಂಬಂಧದಲ್ಲಿದ್ದ ಪುರುಷರಿಗಿಂತಲೂ ಮಹಿಳೆಯರೇ ಶೀಘ್ರವಾಗಿ ಲೈಂಗಿಕ ನಿರಾಸಕ್ತಿಯನ್ನು ಪ್ರಕಟಿಸುತ್ತಾರೆ.

Most Read:ಪುರುಷರಲ್ಲಿ ಲೈಂಗಿಕ ದೌರ್ಬಲ್ಯವನ್ನು ಹೋಗಲಾಡಿಸಲು ಅಶ್ವಗಂಧದ ಪ್ರಯೋಜನಗಳು

ಈ ನಿರಾಸಕ್ತಿಗೆ ಮಹಿಳೆಯರು ಒದಗಿಸಿದ ಕಾರಣಗಳು

ಈ ನಿರಾಸಕ್ತಿಗೆ ಮಹಿಳೆಯರು ಒದಗಿಸಿದ ಕಾರಣಗಳು

ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರು ಇದಕ್ಕೆ ಹಲವಾರು ಕಾರಣಗಳನ್ನು ಒದಗಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಲೈಂಗಿಕ ಅಸಮಪರ್ಕತೆಯನ್ನು ಪ್ರಮುಖವಾದ ಕಾರಣವಾಗಿ ಪ್ರಕಟಿಸಿದ್ದಾರೆ. ಇತರ ಕಾರಣಗಳಲ್ಲಿ "ತಮ್ಮಷ್ಟೇ ಆಸಕ್ತಿಯನ್ನು ಸಂಗಾತಿಯೂ ತೋರದಿರುವುದು, ಅಸಮಾನವಾದ ಲೈಂಗಿಕ ಇಷ್ಟವಾದ ಮತ್ತು ಇಷ್ಟವಾಗದೇ ಇರುವ ಸಂಗತಿಗಳು" ಪ್ರಮುಖವಾಗಿವೆ.

ವಯಸ್ಸು ಹೇಗೆ ಲೈಂಗಿಕ ಆಸಕ್ತಿಯ ಮೇಲೆ ಪ್ರಭಾವ ಬೀರುತ್ತದೆ

ವಯಸ್ಸು ಹೇಗೆ ಲೈಂಗಿಕ ಆಸಕ್ತಿಯ ಮೇಲೆ ಪ್ರಭಾವ ಬೀರುತ್ತದೆ

ಸಂಶೋಧಕರು ಕಂಡುಕೊಂಡ ಇನ್ನೊಂದು ಅಂಶವೆಂದರೆ ವಯಸ್ಸು ಹೆಚ್ಚಿದಂತೆಲ್ಲಾ ಬದ್ದತೆಯ ಸಂಬಂಧಕ್ಕೊಳಪಟ್ಟ ಜೋಡಿಯಲ್ಲಿ ಲೈಂಗಿಕ ನಿರಾಸಕ್ತಿಯೂ ಹೆಚ್ಚುತ್ತಾ ಹೊಗುತ್ತದೆ. ಆ ಪ್ರಕಾರ, ಜೋಡಿಗೆ ವಯಸ್ಸಾದಷ್ಟೂ ಲೈಂಗಿಕ ಆಕರ್ಷಣೆ ಕಡಿಮೆಯಾಗುತ್ತಾ ಹೋಗುತ್ತದೆ.

ಲೈಂಗಿಕ ಏಕತಾನತೆ ಸಂಬಂಧವನ್ನು ಕಲಕದಿರಲಿ

ಲೈಂಗಿಕ ಏಕತಾನತೆ ಸಂಬಂಧವನ್ನು ಕಲಕದಿರಲಿ

ತಜ್ಞರ ಪ್ರಕಾರ, ದೀರ್ಘಾವಧಿಯ ಸಂಭಂಧದಲ್ಲಿ ಲೈಂಗಿಕ ಏಕತಾನತೆ ಪ್ರಭಾವ ಬೀರುತ್ತದೆ, ಹೀಗಾಗಲು ಬಿಡಬಾರದು. ಇಬ್ಬರೂ ಪರಸ್ಪರ ಲೈಂಗಿಕ ಇಚ್ಛೆಗಳು, ಇಷ್ಟವಾಗದ ಕ್ರಿಯೆಗಳು ಮೊದಲಾದವುಗಳನ್ನು ಸಮಾಲೋಚಿಸುತ್ತಾ ಇರಬೇಕು. ಈ ಮೂಲಕ ಒಬ್ಬರ ಅವಶ್ಯಕತೆಯ ಬಗ್ಗೆ ಇನ್ನೊಬ್ಬರಿಗೆ ತಿಳಿಯದೇ ಹೋಗುವ ಮೂಲಕ ಹಾಗೂ ವಯಸ್ಸಿಗನುಗುಣವಾಗಿ ಲೈಂಗಿಕ ಆದ್ಯತೆಗಳು ಬದಲಾಗಿರುವ ಬಗ್ಗೆ ಸ್ಪಷ್ಟಪಡಿಸುವುದರಿಂದ ಈ ನಿರಾಸಕ್ತಿಯನ್ನು ದೂರಾಗಿಸಬಹುದು.

Most Read:ಇದೇ ಕಾರಣಕ್ಕೆ ಮಹಿಳೆಯರಿಗೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುವುದು!

ಸಂಗಾತಿಯಲ್ಲೆಂದೂ ಗುಟ್ಟನ್ನಿರಿಸಿಕೊಳ್ಳಬಾರದು

ಸಂಗಾತಿಯಲ್ಲೆಂದೂ ಗುಟ್ಟನ್ನಿರಿಸಿಕೊಳ್ಳಬಾರದು

ಬದ್ಧತೆಗೆ ಒಳಗಾಗಿರುವ ಜೋಡಿಗಳ ನಡುವೆ ಲೈಂಗಿಕ ನಿರಾಸಕ್ತಿ ಕಂಡುಬರುವುದು ಸಾಮಾನ್ಯವಾಗಿದೆ. ಆದರೆ ಪರಸ್ಪರರಲ್ಲಿ ಗುಟ್ಟನ್ನು ಇಟ್ಟುಕೊಳ್ಳುವ ಬದಲಾಗಿ ಇವುಗಳನ್ನು ಹಂಚಿಕೊಂಡು ಪರಸ್ಪರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಾಮ ರ್ಶಿಸುವುದು ಹಾಗೂ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದೇ ಬಾಂಧವ್ಯ ಇನ್ನಷ್ಟು ಉತ್ತಮಗೊಳ್ಳಲು ಮೂಲವಾಗಿದೆ.

English summary

men or women in relationships more likely to lose interest in sex?

Among the many challenges that couples in a steady relationship often face, keeping the spark alive is the most difficult act to manage. A lot has been written and said about how most people start losing interest in sex when they are in a committed relationship for a long time. In fact, a few researchers have conducted this interesting study on how fast a person loses interest in sex and if it's gender specific, and the conclusions are quite interesting.
Story first published: Thursday, December 20, 2018, 18:06 [IST]
X
Desktop Bottom Promotion