For Quick Alerts
ALLOW NOTIFICATIONS  
For Daily Alerts

'ತೊಂಡೆಕಾಯಿ ಎಲೆಗಳು': ಮಧುಮೇಹ, ಕಾಮಾಲೆ ರೋಗ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸುತ್ತದೆ

|

ಬಳ್ಳಿಯಲ್ಲಿ ಬೆಳೆಯುವಂತಹ ತೊಂಡೆಕಾಯಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇಷ್ಟು ಮಾತ್ರವಲ್ಲದೆ ಇದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ತೊಂಡೆಕಾಯಿ ಮಾತ್ರವಲ್ಲದೆ ಇದರ ಎಲೆಗಳು ಕೂಡ ಮೊಡವೆ, ಮಧುಮೇಹ, ಪಾದಗಳು ಮತ್ತು ಅಂಗೈಯಲ್ಲಿರುವ ಉಷ್ಣತೆ, ಋತುಚಕ್ರದ ನೋವು, ಯೋನಿ ನೋವು ಇತ್ಯಾದಿಗಳನ್ನು ನಿವಾರಣೆ ಮಾಡುವುದು.

ತೊಂಡೆ ಕಾಯಿಯ ವೈಜ್ಞಾನಿಕ ಹೆಸರು ಕೊಕ್ಸಿನಿಯ ಗ್ರ್ಯಾಂಡಿಸ್, ಸೆಫಲೆಂಡ್ರ ಇಂಡಿಕಾ ಮತ್ತು ಕೊಕ್ಕಿನಿಯಾ ಇಂಡಿಕಾ. ಸಂಸ್ಕೃತದಲ್ಲಿ ಇದನ್ನು ರಕ್ತಫಲ, ತುಂಡಿಕೆರಿ ಎಂದು ಕರೆಯಲಾಗುತ್ತದೆ. ಇದನ್ನು ಗದ್ದೆ ಅಥವಾ ಕೈದೋಟದಲ್ಲಿ ಕೂಡ ಬೆಳೆಯಬಹುದಾಗಿದೆ. ತೊಂಡೆಕಾಯಿಯು ದೇಹದಲ್ಲಿ ನಿಧಾನವಾಗಿ ಜೀರ್ಣವಾಗುವುದು ಮತ್ತು ಅತಿಯಾಗಿ ಕಫ ಉಂಟು ಮಾಡುವುದು. ಆದರೆ ಇದು ಕಫ, ಶೀತ, ಅಸ್ತಮಾ, ವಾಂತಿ ಮತ್ತು ಇತರ ವಾತ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುವುದು. ಆಯುರ್ವೇದದಲ್ಲಿ ಇದರ ಎಲೆಗಳನ್ನು ವಿವಿಧ ಕಾಯಿಲೆಗಳನ್ನು ನಿವಾರಿಸಲು ಬಳಸಲಾಗುತ್ತದೆ.

ತಲೆಬುರುಡೆಯ ಬೊಕ್ಕೆ ನಿವಾರಣೆಗೆ

ತಲೆಬುರುಡೆಯ ಬೊಕ್ಕೆ ನಿವಾರಣೆಗೆ

ತೊಂಡೆಕಾಯಿ ಎಲೆಗಳಿಂದ ನೀರು ಹಾಕದೆ ರಸ ತೆಗೆಯಿರಿ. ಕೆಲವು ಸಮುದ್ರ ಚಿಪ್ಪುಗಳನ್ನು(ಹಸಿರು ಬಣ್ಣದ್ದು) ಮೂರು ದಿನಗಳ ಕಾಲ ಇದರಲ್ಲಿ ನೆನೆಸಿಡಿ. ನಾಲ್ಕನೇ ದಿನ ಇದನ್ನು ಹೊರತೆಗೆದು ಇದ್ದಿಲಿನಲ್ಲಿ ಸುಟ್ಟುಬಿಡಿ. ಇದರ ಬೂದಿ ತೆಗೆದುಕೊಂಡು ಅದನ್ನು ಹಸುವಿನ ಬೆಣ್ಣೆಯ ಜತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ತಲೆಬುರುಡೆಯಲ್ಲಿರುವ ಬೊಕ್ಕೆಗಳಿಗೆ ಹಚ್ಚಿಕೊಳ್ಳಿ. ಇದು ಸರಳ ಆಯುರ್ವೇದ ಔಷಧಿ.

 ಮಧುಮೇಹಕ್ಕೆ

ಮಧುಮೇಹಕ್ಕೆ

ತೊಂಡೆಕಾಯಿ ಎಲೆಗಳ ರಸ ತೆಗೆದುಕೊಂಡು 20-30 ಮಿ.ಲೀ.ನಷ್ಟು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಕುಡಿಯಿರಿ. ಹೀಗೆ ಮಾಡಿದರೆ ಮೂರು ತಿಂಗಳಲ್ಲಿ ಸಕ್ಕರೆ ಮಟ್ಟವು ತಗ್ಗುವುದು. ಈ ಎಲೆಗಳಲ್ಲಿರುವ ಅಂಶವು ಕಿಣ್ವ ಗ್ಲೂಕೋಸ್ -6-ಫಾಸ್ಫಟೇಸ್ ಅನ್ನು ಪ್ರತಿಬಂಧಿಸುತ್ತವೆ. ಗ್ಲೂಕೋಸ್ -6-ಫಾಸ್ಫಟೇಸ್ ಯಕೃತ್ ನ ಪ್ರಮುಖ ಕಿಣ್ವವಾಗಿದ್ದು, ಇದು ಸಕ್ಕರೆಯ ಚಯಾಪಚಯವನ್ನು ನಿಯಂತ್ರಿಸುವುದು. ಇದರಿಂದಾಗಿ ಮಧುಮೇಹಿಗಳಿಗೆ ಇದನ್ನು ಸಲಹೆ ಮಾಡಲಾಗಿದೆ. ಮಧುಮೇಹ ನಿಯಂತ್ರಣಕ್ಕೆ ಒಂದಿಷ್ಟು ಸರಳ ಟಿಪ್ಸ್

*ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.

*ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು. ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

*ಮಧುಮೇಹವನ್ನು ದೂರ ಮಾಡಲು ಪ್ರತೀ ದಿನ ಓಟ್ ಮೀಲ್ ಉಪಾಹಾರ ಸೇವನೆ ಮಾಡಿ. ಓಟ್ ಮೀಲ್ ನಲ್ಲಿ

ಹೆಚ್ಚಿನ ನಾರಿನಾಂಶವಿದೆ ಮತ್ತು ಇದರಲ್ಲಿರುವ ಕಾರ್ಬ್ ಗಳು ರಕ್ತದ ಸಕ್ಕರೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಇದರಿಂದ ಪ್ರತೀ ದಿನ ಓಟ್ ಮೀಲ್ ಉಪಹಾರ ಸೇವಿಸಿ.

*ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ.

ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

Most Read: Most Read: ತೊಂಡೆಕಾಯಿಯ ಆರೋಗ್ಯಕಾರಿ ಗುಣಗಳು

ಕಾಮಾಲೆ ರೋಗ ನಿವಾರಣೆ

ಕಾಮಾಲೆ ರೋಗ ನಿವಾರಣೆ

30 ಮಿ.ಲೀ. ತಾಜಾ ತೊಂಡೆಕಾಯಿ ಎಲೆಗಳ ರಸ, 50 ಗ್ರಾಂ ಎಮ್ಮೆಯ ಹಾಲಿನ ಮೊಸರು(ಎಮ್ಮೆಗೆ ಗಂಡು ಕರುವಿರಬೇಕು). ಇದನ್ನು ಮಿಶ್ರಣ ಮಾಡಿಕೊಂಡು ಒಂದು ವಾರ ಕಾಲ ಸೇವಿಸಿ ಮತ್ತು ಆಹಾರ ಪಥ್ಯ ಮಾಡಿದರೆ ಒಂದು ವಾರದಲ್ಲಿ ಕಾಮಾಲೆ ನಿವಾರಣೆಯಾಗುವುದು.

 ಪಾದಗಳು ಮತ್ತು ಅಂಗೈಯ ಉರಿಗೆ

ಪಾದಗಳು ಮತ್ತು ಅಂಗೈಯ ಉರಿಗೆ

ತೊಂಡೆಕಾಯಿ ಎಲೆಗಳ ರಸ, ಕಪ್ಪುಮುಳ್ಳಿನ ಸೇಬಿನ ಎಲೆಗಳ ರಸ, ದೊಡ್ಡ ಬೀನ್ಸ್ ನ ಎಲೆಗಳ ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿಕೊಂಡು ಅದನ್ನು ತೆಗೆದಿಡಬೇಕು. ಇದರ ಬಳಿಕ ಪ್ರತಿನಿತ್ಯ ಪಾದಗಳು ಮತ್ತು ಅಂಗೈಗೆ ಇದನ್ನು 10-15 ನಿಮಿಷ ಕಾಲ ಮಸಾಜ್ ಮಾಡಿದರೆ ಆಗ ಅತಿಯಾದ ಉಷ್ಣತೆ, ಉರಿ ನಾಲ್ಕನೇ ದಿನದಿಂದಲೇ ಕಡಿಮೆಯಾಗುವುದು.

 ಋತುಚಕ್ರದ ನೋವಿಗೆ

ಋತುಚಕ್ರದ ನೋವಿಗೆ

ತೊಂಡೆಕಾಯಿ ಎಲೆಗಳ ರಸ, ಕಪ್ಪು ಸಾಸಿವೆ ಹುಡಿ(3-5ಗ್ರಾಂ), ಬೆಳ್ಳುಳ್ಳಿ ರಸ(1 ಚಮಚ) ಬೆರೆಸಿಕೊಂಡು ಸಣ್ಣ ಸಾಸಿವೆ ಗುಳಿಗೆ ತಯಾರಿಸಿ. ಪ್ರತಿನಿತ್ಯ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಬಳಿಕ 2-3 ಗುಳಿಗೆಯನ್ನು ನೀರಿನೊಂದಿಗೆ ಸೇವಿಸಿ. ಇದು 2ನೇ ದಿನವೇ ಋತುಚಕ್ರದ ನೋವು ನಿವಾರಿಸುವುದು. ಋತುಚಕ್ರದ ನೋವಿಗೆ ಒಂದಿಷ್ಟು ಸರಳ ಮನೆಮದ್ದುಗಳು

*ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ. ಈ ನೀರನ್ನು ಐದು ನಿಮಷಗಳ ಕಾಲ ಕುದಿಸಿ ತಣಿಸಿದ ನಂತರ ಸೇವಿಸಿ

*ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತ್ರ ಅದ್ರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ. ಹಾಗೆಯೇ ಕುಡಿಯಲು ಸಾಧ್ಯವಾಗಿಲ್ಲ ಅಂದ್ರೆ ಜೇನುತುಪ್ಪ ಇಲ್ಲ ಸಕ್ಕರೆ ಅಥ್ವಾ ಬೆಲ್ಲ ಸೇರಿಸಿಯೂ ಸೇವಿಸ್ಬಹುದು. ಆ ದಿನಗಳಲ್ಲಿ ನಿಮ್ಮನ್ನ ಅತಿಯಾಗಿ ಕಾಡುವ ರಕ್ತಸ್ರಾವ ಸಮಸ್ಯೆಗೆ ಇದು ಕೂಡ ಉತ್ತಮ ರೀತಿಯಲ್ಲಿ ಪರಿಹಾರ ನೀಡಬಲ್ಲದು

*ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, (ಪಪಿಯನ್) ಗಳನ್ನು ಒಳಗೊಂಡಿದೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.

*ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯಿರಿ! ಹೌದು ಕ್ಯಾರೆಟ್ ಗಳು ಕೇವಲ ನಿಮ್ಮ ಕಣ್ಣುಗಳಿಗೆ ಆನಂದ ನೀಡುವುದು ಮಾತ್ರವಲ್ಲ, ಅವು ನಿಮ್ಮ ಮುಟ್ಟಿನ ಸಮಯದ ನೋವು ನೀವು ನಿವಾರಿಸಬಲ್ಲ ಶಕ್ತಿಯನ್ನೂ ಹೊಂದಿವೆ. ಋತುಚಕ್ರದ ಸಮಯದಲ್ಲಿ ರಕ್ತದ ಹರಿವು ಸುಲಭವಾಗಿ ಆಗಲು ವೈದ್ಯರು ಇಂದು ಲೋಟ ಕ್ಯಾರೆಟ್ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ.

Most Read: ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?

ಯೋನಿ ನೋವು ತಗ್ಗಿಸುವುದು

ಯೋನಿ ನೋವು ತಗ್ಗಿಸುವುದು

ತೊಂಡೆಕಾಯಿ ಎಲೆಗಳ ರಸ(50ಮಿ.ಲೀ.), 50 ಗ್ರಾಂ ಎಮ್ಮೆಯ ಹಾಲಿನ ಮೊಸರು(ಎಮ್ಮೆಗೆ ಗಂಡು ಕರುವಿರಬೇಕು) ಮಿಶ್ರಣ ಮಾಡಿಕೊಂಡು ಉಪಾಹಾರ ಮತ್ತು ರಾತ್ರಿ ಊಟಕ್ಕೆ ಮೊದಲು ಇದನ್ನು ಸೇವಿಸಬೇಕು. ಇದರೊಂದಿಗೆ ನೀವು ಖಾರ, ಹುಳಿ ಮತ್ತು ಉಪ್ಪಿನಾಂಶ ಹೆಚ್ಚಿರುವ ಆಹಾರ ಸೇವನೆ ಮೂರು ದಿನಗಳ ಕಾಲ ಬಿಡಬೇಕು ಮತ್ತು ವಿವಿಧ ಕಾರಣಗಳಿಂದ ಬಂದಿರುವ ಯೋನಿ ನೋವು ನಿವಾರಣೆಯಾಗುವುದು. ತೊಂಡೆಕಾಯಿಯನ್ನು ಕುಷ್ಠರೋಗ, ಜ್ವರ, ಅಸ್ತಮಾ, ಗಂಟಲೂತ ಮತ್ತು ಕಾಮಾಲೆ ನಿವಾರಣೆಗೆ ಬಳಸಲಾಗುವುದು. ಬಾಂಗ್ಲಾದೇಶದಲ್ಲಿ ಇದನ್ನು ಸಂಧಿವಾತ ಮತ್ತು ಗಂಟು ನೋವು ನಿವಾರಣೆಗೆ ಬಳಸಲಾಗುತ್ತದೆ. ತೊಂಡೆಕಾಯಿ ಎಲೆಗಳ ಪೇಸ್ಟ್ ನ್ನು ಹಚ್ಚಿಕೊಂಡು ಚರ್ಮದ ತುರಿಗಜ್ಜಿ ನಿವಾರಿಸಬಹುದು. ತೊಂಡೆಕಾಯಿಯು ಬೆಟಾ ಕ್ಯಾರೋಟೀನ್ ನಿಂದ ಸಮೃದ್ಧವಾಗಿದೆ. ಇದು ಋತುಬಂಧದ ಮೊದಲು ಮಹಿಳೆಯರಲ್ಲಿ ಬರುವ ಸ್ತನದ ಕ್ಯಾನ್ಸರ್ ಸಮಸ್ಯೆ ನಿವಾರಿಸುವುದು. ವಯಸ್ಸಾದಾಗ ಕಾಡುವ ಅಕ್ಷಿಪಟಲದ ಅವನತಿ ತಡೆಯುವುದು.

English summary

Health Benefits of Ivy Gourd Leaves

Ivy Gourd, also known as baby watermelon, little gourd, gentleman’s toes, tindora is a tropical vine whose leaves can cure scalp pimples, diabetes, heat in feet and palms, menstrual pain, vaginal pain etc. Ivy Gourd digests slowly and it produces excess phlegm in body. However, it can control cough, cold, asthma, vomiting sensation and other Vaata diseases. However, its leaves are used in Ayurveda to cure multiple diseases.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more