For Quick Alerts
ALLOW NOTIFICATIONS  
For Daily Alerts

ದೇಹದ ತೂಕ ಇಳಿಸಲು ತ್ರಿಫಲದ ಬಳಕೆ ಹೇಗೆ?

|

ತ್ರಿಫಲ, ಇದೊಂದು ಆಯುರ್ವೇದೀಯ ಸಾಂಪ್ರಾದಾಯಿಕವಾದ ಮೂರು ಬಗೆಯ ಫಲಗಳ ಮಿಶ್ರಣವಾಗಿದೆ. ಈ ಮೂರು ಫಲಗಳೆಂದರೆ ನೆಲ್ಲಿಕಾಯಿ, ತಾರೆಕಾಯಿ (Terminalia bellirica),ಮತ್ತು ಅಳಲೆಕಾಯಿ (black myrobalan).ತ್ರಿಫಲದ ಸೇವನೆಯಿಂದ ಹೊಟ್ಟೆ, ಸಣ್ಣಕರುಳು ಹಾಗೂ ದೊಡ್ದ ಕರುಳುಗಳಿಂದ ಕಲ್ಮಶಗಳು ನಿವಾರಣೆಗೊಂಡು ಆರೋಗ್ಯವನ್ನು ಕಾಪಾಡುತ್ತವೆ. ಈ ಮೂಲಕ ತೂಕ ಇಳಿಕೆಗೆ ಅಪಾರವಾದ ಕೊಡುಗೆಯನ್ನು ನೀಡುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ಸೂಕ್ಷ್ಮಜೀವಿಗಳ ಸೋಂಕಿನಿಂದ ರಕ್ಷಿಸುವುದು ಮೊದಲಾದ ಪ್ರಯೋಜನಗಳೂ ಲಭಿಸುತ್ತವೆ. ಇಂದಿನ ಲೇಖನದಲ್ಲಿ ತ್ರಿಫಲದ ಸೇವನೆಯಿಂದ ತೂಕ ಇಳಿಸಲು ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ....

ತ್ರಿಫಲ ಎಂದರೇನು?

ಭಾರತವೇ ಮೂಲವಾಗಿರುವ ಈ ಮೂರು ಫಲಗಳ ಮಿಶ್ರಣ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಈ ಮಿಶ್ರಣದಲ್ಲಿ ಮೂರು ಫಲಗಳಿರುವುದರಿಂದಲೇ ತ್ರಿಫಲ ಎಂಬ ಹೆಸರನು ನಮ್ಮ ಪೂರ್ವಜರು ನೀಡಿದ್ದಾರೆ. ನೆಲ್ಲಿಕಾಯಿ ಇದರಲ್ಲಿ ಪ್ರಮುಖವಾಗಿದ್ದು ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಪ್ರಬಲವಾಗಿದೆ ಹಾಗೂ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ಮೇದೋಜೀರಕ ಗ್ರಂಥಿಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರಿಸಲು ಹಾಗೂ ಮೂಳೆಗಳ ಸಾಂದ್ರತೆ ಹೆಚ್ಚಿಸಲು ನೆರವಾಗುತ್ತದೆ.

ಎರಡನೆಯ ಫಲವಾದ ತಾರೆಕಾಯಿ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಹಾಗೂ ಸ್ನಾಯುಗಳನ್ನು ದೃಢವಾಗಿರಿಸಲು ಹಾಗೂ ಮೂಳೆಗಳನ್ನು ಆರೋಗ್ಯಕರವಾಗಿರಿಸಲು ನೆರವಾಗುತ್ತದೆ. ಅಳಲೆಕಾಯಿ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಹಾಗೂ ದೇಹದ ತೂಕವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.

ದೇಹದ ತೂಕ ಇಳಿಸಲು ತ್ರಿಫಲ ಹೇಗೆ ನೆರವಾಗುತ್ತದೆ?

ಆಯುರ್ವೇದ ಗ್ರಂಥಿಗೆ ಅಂಗಡಿಯಲ್ಲಿ ಇದು ಮಾತ್ರೆಗಳ ರೂಪದಲ್ಲಿ ಅಥವಾ ಪುಡಿಯ ರೂಪದಲ್ಲಿಯೂ ದೊರಕುತ್ತದೆ. ಮೂರು ಫಲಗಳ ಮಿಶ್ರಣವಾದ ತ್ರಿಫಲದ ಸೇವನೆಯಿಂದ ಪ್ರಡೆಯಬಹುದಾದ ಪ್ರಯೋಜನಗಳು ಇಂತಿವೆ:

ನೆಲ್ಲಿಕಾಯಿಯಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟುಗಳು ದೇಹದಿಂದ ಕಲ್ಮಶಗಳನ್ನು ನಿವಾರಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಕರುಳುಗಳಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದರ ಹೊರತಾಗಿ ನೆಲ್ಲಿಕಾಯಿಯ ಸೇವನೆಯಿಂದ ಶ್ವಾಸಕೋಶದ ಕ್ಷಮತೆ ಹೆಚ್ಚುತ್ತದೆ, ರಕ್ತಹೀನತೆಯಿಂದ ರಕ್ಷಿಸುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಪ್ರಬಲವಾದ ಪುನಃಶ್ಚೇತನಗೊಳಿಸುವ ಗುಣಗಳಿವೆ.

ತಾರೆಕಾಯಿ ವಾಸ್ತವವಾಗಿ ಉತ್ತಮವಾದ ವಿರೇಚಕವಾಗಿದ್ದು ಮಲಬದ್ದತೆಯಾಗದಂತೆ ತಡೆಯುತ್ತದೆ. ಅಲ್ಲದೇ ಜೀರ್ಣಾಂಗಗಳಲ್ಲಿರುವ ಕಲ್ಮಶಗಳನ್ನು ಹೊರಹಾಕಿ ಶುದ್ದೀಕರಿಸಲು ನೆರವಾಗುತ್ತದೆ. ತನ್ಮೂಲಕ ಜೀರ್ಣವ್ಯವಸ್ಥೆ ಅತ್ಯುತ್ತಮವಾಗಿ ಆಹಾರವನ್ನು ಜೀರ್ಣಿಸಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. ಅಲ್ಲದೇ ಇತರ ಅನಾರೋಗ್ಯಗಳಾದ ಮರೆಗುಳಿತನ ನಿವಾರಿಸಲು ಮತ್ತು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.

ಅಳಲೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್, ಅತಿಸೂಕ್ಷ್ಮಜೀವಿನಿರೋಧಕ, ಮಧುಮೇಹ ನಿವಾರಕ, ಗುಣಪಡಿಸುವ, ಕಫನಿವಾರಕ, ಅಧಿಕ ರಕ್ತದೊತ್ತಡನಿವಾರಕ ಹಾಗೂ ಮುಖ್ಯವಾಗಿ ರಕ್ತನಾಳಗಳ ಒಳಭಾಗದಲ್ಲಿ ಜಿಡ್ಡು ಉಂಟಾಗದಂತೆ ತಡೆಯುವ ಗುಣಗಳಿವೆ. ಅಲ್ಲದೇ ಅಳಲೇಕಾಯಿ ದೇಹದಲ್ಲಿ ಕೊಬ್ಬು ಸಂಗ್ರಹವಾಗದಂತೆ ತಡೆಯುವ ಗುಣವಿದೆ ಹಾಗೂ ಇದರಲ್ಲಿರುವ ಗ್ಯಾಲಿಕ್ ಆಮ್ಲ ದೇಹದಲ್ಲಿ ನೀರಿನ ಪ್ರಮಾಣ ಅಗತ್ಯಪ್ರಮಾಣದಷ್ಟೇ ಇರಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಫಿನಾಲಿಕ್ ಸಂಯುಕ್ತಗಳು ಸ್ಥೂಲದೇಹ ಆವರಿಸದಂತೆ ತಡೆಯುವ ಗುಣಗಳಿವೆ.

ತ್ರಿಫಲ ದೇಹದ ಕರುಳುಗಳ ಸ್ನಾಯುಗಳು ಮತ್ತು ಅಂಗಾಂಶಗಳನ್ನು ಬಲಪಡಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ವಿಶೇಷವಾಗಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಗಳ ಮಟ್ಟವನ್ನು ಕಡಿಮೆಗೊಳಿಸಿ ದೇಹದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗಲು, ಕ್ಯಾಲೋರಿಗಳನ್ನು ಕಡಿಮೆ ಸೇವಿಸಲು ಹಾಗೂ ಆರೋಗ್ಯಕರ ದೇಹದ ತೂಕ ಕಾಪಾಡಿಕೊಳ್ಳಲು ನೆರವಾಗುತ್ತದೆ.

ತ್ರಿಫಲ ಎಂದರೇನು?

ತ್ರಿಫಲ ಎಂದರೇನು?

ಭಾರತವೇ ಮೂಲವಾಗಿರುವ ಈ ಮೂರು ಫಲಗಳ ಮಿಶ್ರಣ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಈ ಮಿಶ್ರಣದಲ್ಲಿ ಮೂರು ಫಲಗಳಿರುವುದರಿಂದಲೇ ತ್ರಿಫಲ ಎಂಬ ಹೆಸರನು ನಮ್ಮ ಪೂರ್ವಜರು ನೀಡಿದ್ದಾರೆ. ನೆಲ್ಲಿಕಾಯಿ ಇದರಲ್ಲಿ ಪ್ರಮುಖವಾಗಿದ್ದು ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಪ್ರಬಲವಾಗಿದೆ ಹಾಗೂ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ಮೇದೋಜೀರಕ ಗ್ರಂಥಿಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರಿಸಲು ಹಾಗೂ ಮೂಳೆಗಳ ಸಾಂದ್ರತೆ ಹೆಚ್ಚಿಸಲು ನೆರವಾಗುತ್ತದೆ.

ಮಲಬದ್ಧತೆ ನಿವಾರಿಸುತ್ತದೆ

ಮಲಬದ್ಧತೆ ನಿವಾರಿಸುತ್ತದೆ

ತ್ರಿಫಲವನ್ನು ಒಂದು ನೈಸರ್ಗಿಕ ವಿರೇಚಕವಾಗಿ ಬಳಸಲಾಗುತ್ತಾ ಬರಲಾಗಿದೆ. ಹೊಟ್ಟೆಯಲ್ಲಿನ ಕಲ್ಮಶಗಳನ್ನು ಸುಲಭವಾಗಿ ನಿವಾರಿಸುವ ಮೂಲಕ ಹೊಟ್ಟೆನೋವು, ಮಲಬದ್ದತೆ ಹಾಗೂ ವಾಯುಪ್ರಕೋಪವನ್ನು ನಿವಾರಿಸಲು ನೆರವಾಗುತ್ತದೆ.

ವಿವಿಧ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ

ವಿವಿಧ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ

ತ್ರಿಫಲದಲ್ಲಿರುವ ಪಾಲಿಫೆನಾಲ್ ಹಾಗೂ ಗ್ಯಾಲಿಕ್ ಆಮ್ಲದಂತಹ ಪ್ರಬಲ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ವಿರುದ್ದ ಹೋರಾಡುವ ಕ್ಷಮತೆ ಹೊಂದಿವೆ.

ದಂತರೋಗಗಳಿಂದ ರಕ್ಷಣೆ ಒದಗಿಸುತ್ತದೆ

ದಂತರೋಗಗಳಿಂದ ರಕ್ಷಣೆ ಒದಗಿಸುತ್ತದೆ

ದಂತಗಳಲ್ಲಿ ಎದುರಾಗುವ ಜಿಡ್ಡು ದಂತಕುಳಿ ಹಾಗೂ ಒಸಡಿನ ಉರಿಯೂತಕ್ಕೆ ಪ್ರಮುಖ ಕಾರಣವಾಗಿದೆ. ತ್ರಿಫಲದಲ್ಲಿರುವ ಅತಿಸೂಕ್ಷ್ಮನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳು ಈ ಸೋಂಕು ಉಂಟಾಗದಂತೆ ತಡೆಯುತ್ತದೆ.

ತೂಕ ಇಳಿಸಲು ತ್ರಿಫಲದ ಸೇವನೆ ಹೇಗೆ?

ತೂಕ ಇಳಿಸಲು ತ್ರಿಫಲದ ಸೇವನೆ ಹೇಗೆ?

ಉಗುರುಬೆಚ್ಚನೆಯ ನೀರಿನಲ್ಲಿ ತ್ರಿಫಲದ ಪುಡಿ:

* ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ದೊಡ್ಡ ಚಮಚ ತ್ರಿಫಲ ಪುಡಿಯನ್ನು ಬೆರೆಸಿ ಇಡಿಯ ರಾತ್ರಿ ನೆನೆಸಿಡಿ.

*ಮರುದಿನ ಬೆಳಿಗ್ಗೆ ಈ ನೀರನ್ನು ಕುದಿಸಿ, ಕುದಿಯಲು ಪ್ರಾರಂಭವಾದ ಬಳಿಕ ಉರಿ ತಗ್ಗಿಸಿ ನೀರು ಅರ್ಧವಾಗುವವರೆಗೆ ಮುಂದುವರೆಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣ್ಣಗಾದ ಬಳಿಕ ಸೇವಿಸಿ.

ತ್ರಿಫಲ ಟೀ

ತ್ರಿಫಲ ಟೀ

* ಒಂದು ಕಪ್ ನೀರಿಗೆ ಒಂದು ದೊಡ್ಡ ಚಮಚ ತ್ರಿಫಲ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ.

* ಈ ನೀರನ್ನು ಚಿಕ್ಕ ಉರಿಯಲ್ಲಿ ಸುಮಾರು ಅರ್ಧ ಘಂಟೆ ಕುದಿಸಿ ಬಳಿಕ ತಣಿಯಲು ಬಿಡಿ.

* ಕುಡಿಯುವ ಮುನ್ನ ಕೆಲವು ಹನಿ ಲಿಂಬೆರಸವನ್ನು ಬೆರೆಸಿ ಕುಡಿಯಿರಿ.

ತಣ್ಣೀರಿನಲ್ಲಿ ತ್ರಿಫಲ ಪುಡಿ

ತಣ್ಣೀರಿನಲ್ಲಿ ತ್ರಿಫಲ ಪುಡಿ

* ಎರದು ದೊಡ್ಡ ಚಮಚ ತ್ರಿಫಲ ಪುಡಿಯನ್ನು ಒಂದು ಲೋಟ ತಣ್ಣೀರಿಗೆ ಬೆರೆಸಿ

* ಇಡಿಯ ರಾತ್ರಿ ಹಾಗೇ ನೆನೆಸಿಟ್ಟು ಮರುದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸಿ.

ತ್ರಿಫಲ ಪುಡಿ, ದಾಲ್ಚಿನ್ನಿ ಮತ್ತು ಜೇನು

ತ್ರಿಫಲ ಪುಡಿ, ದಾಲ್ಚಿನ್ನಿ ಮತ್ತು ಜೇನು

* ಒಂದು ದೊಡ್ಡಚಮಚ ತ್ರಿಫಲ ಪುಡಿ, ಒಂದು ಚಿಕ್ಕ ತುಂಡು ದಾಲ್ಚಿನ್ನಿ ಚೆಕ್ಕೆ ಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ

* ಇಡಿಯ ರಾತ್ರಿ ಹಾಗೇ ನೆನೆಸಿಟ್ಟು ಮರುದಿನ ಬೆಳಿಗ್ಗೆ ಒಂದು ದೊಡ್ಡ ಚಮಚ ಜೇನು ಬೆರೆಸಿ ಕುಡಿಯಿರಿ.

ಈ ಲೇಖನ ಇಷ್ಟವಾದರೆ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

English summary

How To Use Triphala For Weight Loss

Triphala is a traditional ayurvedic formulation consisting of three fruits - Amalaki (Indian gooseberry), Bibhitaki (bedda nut), and Haritaki (black myrobalan). It aids in keeping the stomach, small intestine and large intestine healthy by flushing out the toxins. This, in turn, benefits weight loss, improves immunity, boosts metabolism and prevent microbial infections. In this article, we will be addressing how to lose weight with triphala.
X
Desktop Bottom Promotion