For Quick Alerts
ALLOW NOTIFICATIONS  
For Daily Alerts

ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು

|

ಸಾಲ ಮಾಡಿಯಾದ್ರೂ ತುಪ್ಪ ತಿನ್ನು...ಎನ್ನುವ ಹಾಡು ಇಲ್ಲಿ ಪ್ರಸ್ತುತವೆನಿಸುತ್ತಿದೆ. ಯಾಕೆಂದರೆ ತುಂಬಾ ದುಬಾರಿಯೆಂದೆನಿಸಿರುವಂತಹ ತುಪ್ಪವನ್ನು ಹಿಂದಿನಿಂದಲೂ ಭಾರತೀಯರು ತಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಹಲವಾರು ಆರೋಗ್ಯ ಲಾಭಗಳನ್ನು ನೀಡುವಂತಹ ತುಪ್ಪವು ಶಮನಕಾರಿ, ಆರೋಗ್ಯದ ರಕ್ಷಣೆ ಮತ್ತು ಸೌಂದರ್ಯವರ್ಧಕ ಗುಣಗಳನ್ನು ಹೊಂದಿದೆ.

ಹಾಲಿನಿಂದ ತಯಾರಿಸಲ್ಪಡುವಂತಹ ತುಪ್ಪದಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಎ, ಬಟ್ರಿಕ್ ಆಮ್ಲ ಮತ್ತು ಆರೋಗ್ಯಕರ ಕೊಬ್ಬು ಇದ್ದು, ಸಂಪೂರ್ಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೀರ್ಣಕ್ರಿಯೆಗೆ ನೆರವಾಗುವುದು ಮಾತ್ರವಲ್ಲದೆ, ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು, ಪ್ರಮುಖ ವಿಟಮಿನ್ ಗಳೊಂದಿಗೆ ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಕೂದಲು ಮತ್ತು ತ್ವಚೆಯ ಆರೋಗ್ಯ ಕಾಪಾಡುವುದು. ವೈವಿಧ್ಯಮಯ ಗುಣಗಳನ್ನು ಹೊಂದಿರುವಂತಹ ತುಪ್ಪದಿಂದ ನೀವು ಹಲವಾರು ರೀತಿಯ ಮನೆಮದ್ದುಗಳನ್ನು ತಯಾರಿಸಿಕೊಳ್ಳಬಹುದು. ಚರ್ಮ ಮತ್ತು ಕೂದಲಿನ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಇತ್ಯಾದಿಗಳು. ಸಂಪೂರ್ಣ ಸಾಮರ್ಥ್ಯದಿಂದ ತುಪ್ಪವನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ಜೀರ್ಣಕ್ರಿಯೆ ಆರೋಗ್ಯಕ್ಕೆ ಮನೆಮದ್ದು

ಜೀರ್ಣಕ್ರಿಯೆ ಆರೋಗ್ಯಕ್ಕೆ ಮನೆಮದ್ದು

ಆರೋಗ್ಯ ತಜ್ಞರ ಪ್ರಕಾರ ಬಿಸಿ ಹಾಲಿನೊಂದಿಗೆ ಒಂದು ಅಥವಾ ಎರಡು ಚಮಚ ತುಪ್ಪವನ್ನು ಹಾಕಿ ರಾತ್ರಿ ಮಲಗುವ ಮೊದಲು ನೀವು ಕುಡಿಯಬೇಕು. ಇದರಿಂದ ಮಲಬದ್ಧತೆಯು ದೂರವಾಗುವುದು. ತುಪ್ಪದಲ್ಲಿ ಇರುವಂತಹ ಬಟ್ರಿಕ್ ಆಮ್ಲವು ಕರುಳಿನ ಪದರದ ಆರೋಗ್ಯಕ್ಕೆ ನೆರವಾಗುವುದು. ತುಪ್ಪವು ಜೀರ್ಣಕ್ರಿಯೆಯ ಬೆಂಕಿ ಹೆಚ್ಚಿಸಿ, ಹೀರುವಿಕೆ ಮತ್ತು ಸಮೀಕರಣ ಹೆಚ್ಚು ಮಾಡುವುದು.

ಕಟ್ಟಿರುವ ಮೂಗಿಗೆ ಹೇಗೆ ಮನೆಮದ್ದು?

ಕಟ್ಟಿರುವ ಮೂಗಿಗೆ ಹೇಗೆ ಮನೆಮದ್ದು?

ಶೀತ ಮತ್ತು ಕಟ್ಟಿದ ಮೂಗಿನಿಂದ ಹಲವಾರು ರೀತಿಯಿಂದ ಕಿರಿಕಿರಿಯಾಗುವುದು. ಸೀನುವಿನಿಂದ ನೀವು ಬಳಲುವುದು ಮಾತ್ರವಲ್ಲದೆ, ಉಸಿರಾಡಲು ಕೂಡ ಕಷ್ಟಪಡಬೇಕಾಗುತ್ತದೆ. ಇದೇ ವೇಳೆ ಒಂದು ಬದಿಯಲ್ಲಿ ತಲೆನೋವು ಕೂಡ ಕಾಡಲು ಆರಂಭವಾಗುವುದು. ಕಟ್ಟಿದ ಮೂಗನ್ನು ನಿವಾರಣೆ ಮಾಡಲು ಶುದ್ಧ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಮೂಗಿನನಾಳಕ್ಕೆ ಬೆಳಗ್ಗೆ ಬಿಡಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಆರಾಮ ಸಿಗುವುದು. ತುಪ್ಪವು ಮೂಗಿನ ಮೂಲಕ ಗಂಟಲಿಗೆ ಸಾಗಿ ಸೋಂಕಿನಿಂದ ಶಮನ ನೀಡುವುದು. ಉಗುರುಬೆಚ್ಚಗಿನ ತುಪ್ಪವನ್ನು ಮೂಗಿಗೆ ಬಿಡಿ.

Most Read: ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ-ಈ 8 ವಾಸ್ತು ಟಿಪ್ಸ್ ಅನುಸರಿಸಿ

ಹೊಟ್ಟೆಯ ಕೊಬ್ಬು ಕರಗಲು

ಹೊಟ್ಟೆಯ ಕೊಬ್ಬು ಕರಗಲು

ತುಪ್ಪದಲ್ಲಿ ಇರುವಂತಹ ಅಮಿನೋ ಆಮ್ಲವು ಕೊಬ್ಬನ್ನು ಸಜ್ಜುಗೊಳಿಸಿ, ಕೊಬ್ಬಿನ ಕೋಶಗಳು ಗಾತ್ರದಲ್ಲಿ ಕುಗ್ಗಲು ನೆರವಾಗುವುದು. ಇದರಲ್ಲಿ ಇರುವಂತಹ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲವು ನಿಮ್ಮ ದೇಹವು ಅಧಿಕ ಭಾರ ಕಳೆದು, ಕೊಬ್ಬು ಕರಗಿಸಲು ನೆರವಾಗುವುದು. ಮನೆಯಲ್ಲೇ ತಯಾರಿಸಿದ ತುಪ್ಪವನ್ನು ಒಂದು ಚಮಚ ಆಹಾರದೊಂದಿಗೆ ಸೇರಿಸಿಕೊಳ್ಳಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುವುದು ಮತ್ತು ತೂಕ ಕಳೆದುಕೊಳ್ಳಲು ಸಹಕಾರಿ.

ಮಧುಮೇಹಕ್ಕೆ ಚಿಕಿತ್ಸೆ

ಮಧುಮೇಹಕ್ಕೆ ಚಿಕಿತ್ಸೆ

ಮಧುಮೇಹದಿಂದ ಬಳಲುತ್ತಿದ್ದರೆ ಅನ್ನ ಮತ್ತು ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯು ಒಳ್ಳೆಯದಲ್ಲ. ಇವುಗಳನ್ನು ಅಧಿಕ ಗ್ಲೈಸಮಿಕ್ ಸಂಕೀರ್ಣ ಹೊಂದಿರುವ ಆಹಾರವೆನ್ನಲಾಗುತ್ತದೆ. ಚಪಾತಿ, ಪರೋಟಾ ಮತ್ತು ಬಿಳಿ ಅನ್ನದ ಮೇಲೆ ತುಪ್ಪವನ್ನು ಹಾಕಿ ತಿನ್ನುವುದರಿಂದ ಗ್ಲೈಸಮಿಕ್ ಸಂಕೀರ್ಣವು ಕಡಿಮೆಯಾಗುವುದು. ಇದರಿಂದ ಸರಿಯಾಗಿ ಜೀರ್ಣವಾಗಲು ಸಹಕಾರಿಯಾಗುವುದು.

ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ತುಪ್ಪದಲ್ಲಿರುವ ಪರಿಪೂರ್ಣ ಕೊಬ್ಬು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಓಡಿಸುವ ಮತ್ತು ನಿಯಂತ್ರಣದಲ್ಲಿರಿಸುವ ಗುಣವನ್ನು ಹೊಂದಿದೆ. ಇದು ಹೃದಯಕ್ಕೆ ಪೂರಕವಾಗಿದೆ. ಅಲ್ಲದೇ ಇದರಲ್ಲಿ ಉಪ್ಪು ಇಲ್ಲದೇ ಇರುವ ಕಾರಣ ಹೆಚ್ಚಿನ ಶ್ರಮವೂ ಬೇಕಾಗಿಲ್ಲ. ನಿತ್ಯವೂ ತಮ್ಮ ಊಟದಲ್ಲಿ ಕೊಂಚ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುತ್ತಾ ಬಂದವರು ಹೃದಯದ ತೊಂದರೆಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಸಂಶೋಧನೆಗಳಿಂದ ಕಂಡುಬಂದಿದೆ.

Most Read: ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಏಕೆ ಇಷ್ಟೊಂದು ಮಹತ್ವ?

ತ್ವಚೆಗೆ ಮನೆಮದ್ದು

ತ್ವಚೆಗೆ ಮನೆಮದ್ದು

ತುಪ್ಪವನ್ನು ಹಲವಾರು ರೀತಿಯ ಸೌಂದರ್ಯವರ್ಧಕಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಇರುವಂತಹ ಪ್ರಮುಖ ಕೊಬ್ಬಿನಾಮ್ಲವು ಪೋಷಣೆ ನೀಡಿ, ನಿಸ್ತೇಜ ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುವುದು. ತುಪ್ಪವು ಎಲ್ಲಾ ರೀತಿಯ ಚರ್ಮಕ್ಕೆ ಹೊಂದಾಣಿಕೆಯಾಗುವುದು. ಕಾಂತಿಯುತ ಹಾಗೂ ನಯವಾದ ಚರ್ಮ ಪಡೆಯಲು ಫೇಸ್ ಮಾಸ್ಕ್ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು

  • 2 ಚಮಚ ತುಪ್ಪ
  • 2 ಚಮಚ ಕಡಲೆಹಿಟ್ಟು
  • 1 ಚಮಚ ಅರಿಶಿನ
  • ನೀರು

ವಿಧಾನ

ಎಲ್ಲಾ ಸಾಮಗ್ರಿಗಳನ್ನು ಜತೆಯಾಗಿ ಸೇರಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣವು ಗಟ್ಟಿಯಾಗಲಿ, ಆದರೆ ಒಣಗದಂತೆ ನೋಡಿಕೊಳ್ಳಿ. ಇದು ಪೇಸ್ಟ್ ರೂಪಕ್ಕೆ ಬಂದ ಬಳಿಕ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿದರೆ ಅತ್ಯುತ್ತಮ ಫಲಿತಾಂಶ ಸಿಗುವುದು.

ಒಣ ಹಾಗೂ ಒಡೆದ ತುಟಿಗಳಿಗೆ

ಒಣ ಹಾಗೂ ಒಡೆದ ತುಟಿಗಳಿಗೆ

ದೇಹದ ಪ್ರಮುಖವಾಗಿರುವ ಸೌಂದರ್ಯದ ಅಂಗಗಳಲ್ಲಿ ತುಟಿಗಳು ಕೂಡ ಇವೆ. ಇದು ಕಲುಷಿತ ವಾತಾವರಣ, ಸೂರ್ಯನ ಬಿಸಿಲು, ಧೂಳು ಮತ್ತು ಧೂಮಪಾನದಿಂದಾಗಿ ತಮ್ಮ ನೈಸರ್ಗಿಕ ಗುಲಾಬಿ ಬಣ್ಣವನ್ನು ಕಳೆದುಕೊಳ್ಳುವುದು. ಸ್ವಲ್ಪ ತುಪ್ಪ ಬಿಸಿ ಮಾಡಿಕೊಂಡು ಅದನ್ನು ಮಲಗುವ ಮೊದಲು ತುಟಿಗಳಿಗೆ ಹಚ್ಚಿಕೊಳ್ಳಿ. ಮರುದಿನ ಬೆಳಗ್ಗೆ ಎದ್ದಾಗ ಒಣಗಿದ ಪದರಗಳು ನಿಮಗೆ ಕಾಣಿಸಿಕೊಳ್ಳಬಹುದು. ಇದನ್ನು ಸ್ಕ್ರಬ್ ಮಾಡಿದರೆ ಫಲಿತಾಂಶವು ನಿಮ್ಮ ಮುಂದಿರುವುದು. ಸುಂದರವಾದ ತುಟಿಗಳು ಬೇಕಿದ್ದರೆ ಪ್ರತಿನಿತ್ಯ ಹೀಗೆ ಮಾಡಿ.

Most Read: ಬ್ಯೂಟಿ ಟಿಪ್ಸ್: ತಾಜಾ ಹಾಲಿನ ಫೇಶಿಯಲ್-ಮನೆಯಲ್ಲೇ ಮಾಡಿ ನೋಡಿ

ಬಿಸಿಯಾದರೂ ತನ್ನ ಗುಣಗಳನ್ನು ಕಳೆದುಕೊಳ್ಳದ ತುಪ್ಪ

ಬಿಸಿಯಾದರೂ ತನ್ನ ಗುಣಗಳನ್ನು ಕಳೆದುಕೊಳ್ಳದ ತುಪ್ಪ

ಸಾಮಾನ್ಯವಾಗಿ ಪ್ರತಿ ಎಣ್ಣೆಯೂ ತಾಪಮಾನತೊಡನೆ ತನ್ನ ಕೆಲವು ಗುಣಗಳನ್ನು ಬದಲಿಸಿಕೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬೆಣ್ಣೆ. ಬೆಣ್ಣೆ ಕಾದು ಹೊಗೆ ಬರುತ್ತಿದ್ದಂತೆಯೇ ಕಾದ ಬೆಣ್ಣೆಯ ದ್ರವ ಕ್ಯಾನ್ಸರ್ ಕಾರಕ ಗುಣವನ್ನು ಹೊಂದುತ್ತದೆ. ಪಾಮ್ ಎಣ್ಣೆ, ಡಾಲ್ಡಾ ಮೊದಲಾದ ಘನ ಎಣ್ಣೆಗಳು ಸಹಾ ಕ್ಯಾನ್ಸರ್ ಕಾರಕವಾಗುತ್ತವೆ. ಆದರೆ ತುಪ್ಪ ಇದಕ್ಕೆ ಅಪವಾದವಾಗಿದೆ. ತಣ್ಣಗಿದ್ದಾಗ ಇರುವ ಗುಣಗಳು ಬಿಸಿಯಾದ, ಕುದಿದ ಬಳಿಕವೂ ಅಂತೆಯೇ ಇರುತ್ತವೆ. ವಾಸ್ತವದಲ್ಲಿ 375°F (190.5 ಡಿಗ್ರಿ ಸೆಲ್ಸಿಯಸ್) ನಷ್ಟು ತಾಪಮಾನದಲ್ಲಿಯೂ ತನ್ನ ಗುಣಗಳನ್ನು ಕಳೆದುಕೊಳ್ಳದಿರುವುದು ದೇಸಿ ತುಪ್ಪದ ಹೆಗ್ಗಳಿಕೆಯಾಗಿದೆ. ಇದರಲ್ಲಿ ತಯಾರಿಸಿದ ಅಡುಗೆಗಳೂ ಹಲವು ಬಾರಿ ಬಿಸಿ ಮಾಡಿದ ಬಳಿಕವೂ ತಮ್ಮ ಉತ್ತಮ ಗುಣಗಳನ್ನು ಉಳಿಸಿಕೊಳ್ಳುತ್ತವೆ.

English summary

How To Use Ghee For Various Home Remedies

One of India's most treasured foods, ghee or clarified butter has long been known for its healing properties and health and beauty benefits. Ghee is made from milk, which contains omega-3 fatty acids, vitamin A, butyric acid and healthy fats that benefit your overall health. From aiding the digestive system to strengthening the immune system, providing essential vitamins to having anti-inflammatory properties, and making your hair and skin healthy, ghee has a lot to offer.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more