Latest Updates
-
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್
ಲೈಂಗಿಕ ಜೀವನ ಚೆನ್ನಾಗಿರಬೇಕಾದ್ರೆ, ಜೀವನ ಶೈಲಿ ಹೀಗಿರಲಿ
ಹೀಗೆ ಒಂದು ಕಲ್ಪನೆಯನ್ನು ಮಾಡಿಕೊಳ್ಳಿ... ನೀವು ನಿಮ್ಮ ಸಂಗಾತಿಯನ್ನು ಪ್ರಣಯದ ವಿಹಾರಕ್ಕೆ ಕರೆದೊಯ್ದಿದ್ದೀರಿ... ರಮಣೀಯವಾದ ಆ ಸ್ಥಳದಲ್ಲಿ ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಂಡಿದ್ದೀರಿ... ನಿಮ್ಮ ಆಸೆಯಂತೆ ಸಂಗಾತಿಯೂ ಸಹ ನಿಮ್ಮ ಭಾವನೆಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿದ್ದಾಳೆ. ಆಗಾಗ ಸಂಗಾತಿಯಿಂದ ಪಡೆದುಕೊಳ್ಳುವ ಪ್ರೀತಿಯ ನೋಟ ಹಾಗೂ ಸ್ಪರ್ಶ ನಿಮ್ಮನ್ನು ರೋಮಾಂಚನ ಗೊಳಿಸುತ್ತಿದೆ. ಅತ್ಯಂತ ಸುಂದರ ಅನುಭವ ಪಡೆಯುವ ಉದ್ದೇಶಕ್ಕಾಗಿ ಒಂದು ಮುಂಬತ್ತಿಯ ಊಟ ಸವಿಯಲು ಮುಂದಾಗಿದ್ದೀರಿ... ಅದರಂತೆಯೇ ನಸು ಬೆಳಕಿನ ನಡುವೆ ಪರಸ್ಪರ ಭಾವನೆಗಳನ್ನು ಕೇವಲ ಕಣ್ಣಲ್ಲೇ ಹಂಚಿಕೊಳ್ಳುತ್ತ... ತಂಪಾದ ತಂಗಾಳಿಯ ಅನುಭವವನ್ನು ಸವಿಯುತ್ತಿದ್ದೀರಿ...
ಈ ಎಲ್ಲಾ ಕ್ಷಣಗಳು ಹಾಗೂ ವಾತಾವರಣವು ಇನ್ನಷ್ಟು ಮಧುರ ಕ್ಷಣಗಳನ್ನು ದೋಚಿ ಕೊಳ್ಳುವ ಮನಸ್ಸು ಮಾಡುತ್ತಿದೆ.... ಊಟವನ್ನು ಮುಗಿಸಿ... ಮಂಚದ ಮೇಲೆ ಜಾರುವಾಗ ಕನಸುಗಳು ಹಾಗೂ ಬಯಕೆಗಳು ಹಲವು ಬಗೆಯಲ್ಲಿ ಇತ್ತು... ನೀವು ಅಂದುಕೊಂಡ ಸಂತೋಷ ಹಾಗೂ ನೀಡಬೇಕು ಎಂದುಕೊಂಡ ಪ್ರೀತಿ ಎಲ್ಲವೂ ಮರೆಯಾಯಿತು... ನಿಮ್ಮಿಂದ ನಿಮ್ಮ ಕನಸನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದಾಗ... ದಿನವಿಡೀ ಕಂಡ ಕನಸು... ಸಂಗಾತಿಗೆ ನೀಡಿದ ಭರವಸೆ ಎಲ್ಲವೂ ನುಚ್ಚು ನೂರಾಗುತ್ತದೆ... ಜೊತೆಗೆ ಒಂದಿಷ್ಟು ಬೇಸರ ನಿಮ್ಮ ಪ್ರಣಯ ಪೂರಕ ಪ್ರಯಾಣಕ್ಕೆ ಉಡುಗೊರೆಯಾಗುತ್ತದೆ ಅಷ್ಟೆ...
ಬನ್ನಿ ಪ್ರಣಯದ ಜೀವನವನ್ನು ಕಳೆದುಕೊಳ್ಳಲು ಯಾವೆಲ್ಲಾ ಕಾರಣಗಳು ಪ್ರಮುಖವಾಗುತ್ತದೆ? ನಮ್ಮ ಜೀವನಶೈಲಿ ಹೇಗಿರಬೇಕು? ಯಾವ ಸುಧಾರಣೆಯಿಂದ ಪುನರ್ ಯೌವನ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಅರಿಯಿರಿ...

ಬೆರ್ರಿ ಹಣ್ಣುಗಳು
ಇತ್ತೀಚೆಗೆ ಇಂಡಿಯನ್ ವಿಶ್ವವಿದ್ಯಾಲಯವು ನಡೆಸಿದ ಸಂಶೋಧನಾ ಅಧ್ಯಯನದ ಪ್ರಕಾರ ವ್ಯಕ್ತಿ ಅಧಿಕವಾಗಿ ಬೆರ್ರಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಅಂದರೆ ಹಣ್ಣುಗಳು, ಕಪ್ಪು ಬಣ್ಣದ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಸೇವಿಸಬೇಕು. ಇದರಿಂದ ಆಮ್ಲಜನಕಯುಕ್ತ ರಕ್ತದ ಹರಿವು ಜನನಾಂಗಗಳಿಗೆ ಸೂಕ್ತ ರೀತಿಯಲ್ಲಿ ರವಾನೆಯಾಗುತ್ತದೆ. ಇದು ಸಂಭೋಗ ಕ್ರಿಯೆಗೆ ಅಧಿಕ ಶಕ್ತಿ ಹಾಗೂ ಪೂರಕ ಆರೋಗ್ಯವನ್ನು ಒದಗಿಸಿಕೊಡುತ್ತದೆ ಎನ್ನಲಾಗುವುದು.

ಒತ್ತಡದಿಂದ ದೂರ ಇರಿ
ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನೀವು ನಿಮ್ಮ ನರಗಳನ್ನು ಶಾಂತಗೊಳಿಸಲು ಮತ್ತು ಪ್ರೇಮದ ವಿಚಾರದಿಂದ ಉತ್ತಮ ಫಲವನ್ನು ಪಡೆಯಲು ಒತ್ತಡ ಮುಕ್ತರಾಗಿರಬೇಕು. ಆಗ ಮನಸ್ಸು ಶಾಂತವಾಗಿ ಪ್ರಣಯ ಪೂರ್ವಕ ಆಲೋಚನೆಗಳಿಗೆ ಸಹಕರಿಸುವುದು.

ಡಾರ್ಕ್ ಚಾಕೊಲೇಟ್ ಸೇವಿಸಿ
ಡಾರ್ಕ್ ಚಾಕೊಲೇಟ್ ಆಂಟಿಆಕ್ಸಿಡೆಂಡ್ ಮತ್ತು ಫ್ಲೇವನಾಯಿಡ್‍ಗಳೊಂದಿಗೆ ಕೂಡಿರುತ್ತದೆ. ಇದು ಕೇವಲ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಮೆದುಳು ಮತ್ತು ಜನನಾಂಗಗಳಿಗೆ ರಕ್ತದ ಆರೋಗ್ಯಕರ ಹರಿವನ್ನು ಅನುಮತಿಸುತ್ತದೆ. ಬಲವಾದ ನಿರ್ಮಾಣವನ್ನು ಪ್ರೇರೇಪಿಸುವುದು.

ಆಕ್ಯುಪಂಕ್ಚರ್‍ಅನ್ನು ಪ್ರಯತ್ನಿಸಿ
ಆಕ್ಯುಪಂಕ್ಚರ್ ಎನ್ನುವುದು ಪರ್ಯಾಯ ಚಿಕಿತ್ಸೆಯ ಪ್ರಾಚೀನ ಕಾಲದ ವಿಧಾನವಾಗಿದೆ. ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ಸುಧಾರಿಸುತ್ತದೆ. ಆಕ್ಯುಪಂಕ್ಚರ್ ಥೆರಪಿಯಿಂದ ಲೈಂಗಿಕ ಸಾಮರ್ಥ್ಯವು ಅಧಿಕವಾಗುವುದು. ಅಲ್ಲದೆ ಆರೋಗ್ಯ ಸುಧಾರಣೆಯನ್ನು ಮಾಡುವುದು ಎಂದು ಸಂಶೋಧನಾ ಅಧ್ಯಯನವು ದೃಢಪಡಿಸಿದೆ.

ಪೆಲ್ವಿಕ್ ವ್ಯಾಯಾಮ
ಶಕ್ತಿಯುತವಾದ ಪೆಲ್ವಿಕ್ ಸ್ನಾಯುಗಳು ಲೈಂಗಿಕ ಕ್ರಿಯೆಗೆ ಉತ್ತಮ ಸಹಕಾರ ನೀಡುತ್ತವೆ. ಪೆಲ್ವಿಕ್ ಸ್ನಾಯುಗಳಿಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದರಿಂದ ಲೈಂಗಿಕ ಸಾಮಥ್ರ್ಯವು ಆರೋಗ್ಯಕರವಾಗಿ ಹಾಗೂ ಉತ್ತಮ ಸಾಮರ್ಥ್ಯದಿಂದ ಕೂಡಿರುತ್ತದೆ.

ಔಷಧಗಳನ್ನು ಪರಿಶೀಲಿಸಿ
ನಿಮ್ಮ ಅನಾರೋಗ್ಯಕ್ಕಾಗಿ ಸೇವಿಸುತ್ತಿರುವ ಕೆಲವು ಔಷಧಗಳು ಉದಾಹರಣೆಗೆ ಮನೋವಿಕೃತ ಔಷಧಗಳು, ಮಧುಮೇಹ, ಹೃದಯ ರೋಗಗಳು, ನಿರೋಧಕ ಔಷಧಗಳು ಲೈಂಗಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಇವು ನಿಮ್ಮ ಲೈಂಗಿಕ ಆಸಕ್ತಿ ಹಾಗೂ ಆರೋಗ್ಯವನ್ನು ಕುಂಟಿತಗೊಳಿಸುವ ಸಾಧ್ಯತೆಗಳಿವೆ. ಹಾಗಾಗಿ ವೈದ್ಯರ ಸಲಹೆಯ ಮೇರೆಗೆ ಔಷಧವನ್ನು ಸೇವಿಸುವುದನ್ನು ಮರೆಯದಿರಿ.

ವಾಕಿಂಗ್ ಮಾಡಿ
ನಿಯಮಿತವಾದ ವಾಕಿಂಗ್ ಮತ್ತು ಜಾಗಿಂಗ್ ಜನನಾಂಗಕ್ಕೆ ರಕ್ತದ ಹರಿವನ್ನು ಅಧಿಕಗೊಳಿಸುತ್ತದೆ. ಇದರಿಂದ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವು ನಿಮ್ಮ ಹಿಡಿತದಲ್ಲಿ ಇರುವುದು. ಅಲ್ಲದೆ ಪ್ರಣಯ ಪೂರಕ ಜೀವನವನ್ನು ಅನುಭವಿಸಲು ಅನುಕೂಲವಾಗುವುದು.



Click it and Unblock the Notifications











