ತೂಕ ಇಳಿಸಿ ಕೊಳ್ಳಬೇಕೇ? ಹಾಗಾದರೆ ಕಿತ್ತಳೆ ಹಣ್ಣು ಸೇವಿಸಿ

Posted By: Hemanth
Subscribe to Boldsky

ಪ್ರತಿಯೊಂದು ಹಣ್ಣಿನಲ್ಲೂ ನಮ್ಮ ದೇಹಕ್ಕೆ ಬೇಕಾಗುವಂತಹ ಒಂದಲ್ಲ ಒಂದು ರೀತಿಯ ಪೋಷಕಾಂಶಗಳು ಇದ್ದೇ ಇರುತ್ತದೆ. ಅದರಲ್ಲೂ ಪ್ರಕೃತಿದತ್ತವಾಗಿ, ಸಾವಯವವಾಗಿ ಬೆಳೆದಿರುವ ಹಣ್ಣುಗಳ ಸೇವನೆ ನಮಗೆ ದೀರ್ಘಾಯುಷ್ಯ ನೀಡುವುದು. ಇದೇ ಹಣ್ಣುಗಳನ್ನು ಬಳಸಿಕೊಂಡು ಬೊಜ್ಜು ದೇಹ ಬೆಳೆಸಿಕೊಂಡಿರುವವರು ತಮ್ಮ ತೂಕ ಇಳಿಸಿಕೊಳ್ಳಬಹುದು. ಇದರಲ್ಲಿ ಪ್ರಮುಖವಾಗಿ ಸಿಟ್ರಸ್ ಹಾಗೂ ವಿಟಮಿನ್ ಸಿ ಹೊಂದಿರುವ ಕಿತ್ತಳೆ ಹಣ್ಣಿನಿಂದ ದೇಹದ ತೂಕ ಇಳಿಸಬಹುದು. ಇದರಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ.

ಕಿತ್ತಳೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಕ್ಯಾಲ್ಸಿಯಂ, ವಿಟಮಿನ್ ಬಿ6 ಮತ್ತು ಮೆಗ್ನಿಶಿಯಂ ಇದೆ. ಇದು ತಿನ್ನಲು ತುಂಬಾ ರುಚಿ ಮತ್ತು ಹಲವಾರು ಆರೋಗ್ಯ ಗುಣಗಳು ಇದರಲ್ಲಿ ಇವೆ. ಕಿತ್ತಳೆ ಹಣ್ಣು ಒಸಡು ಮತ್ತು ನಾಲಗೆ ಶುಚಿಗೊಳಿಸುವುದು. ಗಂಟಿಲಿನ ಸೋಂಕು ನಿವಾರಿಸುವುದು, ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಕರುಳನ್ನು ಕೂಡ ಶುದ್ಧೀಕರಿಸುವುದು. ಈ ಲೇಖನದಲ್ಲಿ ಕಿತ್ತಳೆ ಹಣ್ಣನಿಂದ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ತಿಳಿಯುವ.

Orange

ಕಿತ್ತಳೆಯ ನಾರಿನಾಂಶವು ತೂಕ ಇಳಿಸಲು ಸಹಕಾರಿ

ಕಿತ್ತಳೆ ಹಣ್ಣಿನಲ್ಲಿ ಆಹಾರದ ನಾರಿನಾಂಶವಿದೆ. ಒಂದು ಕಿತ್ತಳೆಯಲ್ಲಿ 3.1 ಗ್ರಾಂ ಆಹಾರದ ನಾರಿನಾಂಶವಿದೆ. ಇದರಿಂದ ಹೊಟ್ಟೆಯು ದೀರ್ಘಕಾಲದ ತನಕ ತುಂಬಿದಂತೆ ಆಗುವುದು. ಊಟಕ್ಕೆ ಮೊದಲು ಕಿತ್ತಳೆ ಸೇವಿಸಿದರೆ ಅದರಲ್ಲಿನ ನಾರಿನಾಂಶವು ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ನೀವು ಊಟ ಕಡಿಮೆ ಮಾಡುತ್ತೀರಿ.

ಕ್ಯಾಲರಿ ಕಡಿಮೆ ಇರುವ ತಿನಿಸು

ಇತರ ತಿನಿಸುಗಳಿಗಿಂತ ಕಿತ್ತಳೆ ಹಣ್ಣಿನಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ. ಸದಾ ಉಪ್ಪಿರುವ ಬಟಾಟೆ ಚಿಪ್ಸ್ ನಲ್ಲಿ 154 ಕ್ಯಾಲರಿ ಇದೆ. ಇದು ಕಿತ್ತಳೆಯಿಂದ ಎರಡು ಪಟ್ಟು ಹೆಚ್ಚಾಗಿದೆ. ಆರೋಗ್ಯಕಾರಿ ತಿನಿಸಾಗಿ ಕಿತ್ತಳೆ ಸೇವಿಸಿ.

weight loss

ತೂಕ ಇಳಿಸಲು ಕಿತ್ತಳೆ ಆಹಾರ ಕ್ರಮ

ದಿನಕ್ಕೆ ಎರಡು ಲೋಟ ಕಿತ್ತಳೆ ಜ್ಯೂಸ್ ನ್ನು ಪ್ರತಿನಿತ್ಯ ಸೇವಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಮತ್ತು ಮಧ್ಯಾಹ್ನ ಒಂದು ಲೋಟ. ಬೆಳಗ್ಗೆ ಉಪಾಹಾರ ಸೇವನೆ ಮಾಡುವ ಮೊದಲು ಕಿತ್ತಳೆ ಜ್ಯೂಸ್ ಕುಡಿಯಿರಿ. ಮಧ್ಯಾಹ್ನ ಊಟವಾದ ಎರಡು ಗಂಟೆ ಬಳಿಕ ಮತ್ತೆ ಕಿತ್ತಳೆ ಜ್ಯೂಸ್ ಕುಡಿಯಿರಿ.

Orange juice

ನೀವು ಸೇವಿಸಬಹುದಾದ ಇತರ ಆಹಾರಗಳು

ಕೇವಲ ಕಿತ್ತಳೆ ಜ್ಯೂಸ್ ಕುಡಿದರೆ ಅದರಿಂದ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ. ನೀವು ಆರೋಗ್ಯಕಾರಿ ಮತ್ತು ಸಮತೋಲಿತ ಆಹಾರ ಕ್ರಮ ಪಾಲಿಸಬೇಕು. ನೀವು ಸೇವಿಸಬಹುದಾದ ಕೆಲವೊಂದು ಆಹಾರಗಳು ಇಲ್ಲಿವೆ.

ಬೀನ್ಸ್ ಮತ್ತು ಬೀಜಗಳು

ತರಕಾರಿ ಮತ್ತು ಹಣ್ಣುಗಳು

Orange

ಇಡೀ ಧಾನ್ಯದ ಹಿಟ್ಟು ಮತ್ತು ಕಚ್ಚಾ ಸಕ್ಕರೆ

ಸೋಡಾ ಮತ್ತು ಕಾಫಿ ಕುಡಿಯಬೇಡಿ

ಕಾಫಿಗೆ ಬದಲಿಗೆ ಬ್ಲ್ಯಾಕ್ ಟೀ ಅಥವಾ ಗ್ರೀನ್ ಟೀ ಕುಡಿಯಿರಿ

ಸಿಹಿ ತಿನಿಸು ಕಡೆಗಣಿಸಿ

ಊಟ ಮಾಡುವ ವೇಳೆ ಅರ್ಧದಷ್ಟು ಬಟ್ಟಲು ತರಕಾರಿ ಮತ್ತು ಹಣ್ಣುಗಳಿಂದ ತುಂಬಿರಲಿ. ಕಿತ್ತಳೆ ಜ್ಯೂಸ್ ನ ಬದಲು ತಾಜಾ ಕಿತ್ತಳೆ ಹಣ್ಣು ತಿನ್ನಿ. ಇದು ಹೆಚ್ಚು ನಾರಿನಾಂಶ ಒದಗಿಸುವುದು. ನಿಮಗೆ ಈ ಲೇಖನ ಓದಿ ಮನಸ್ಸಿಗೆ ತೃಪ್ತಿಯಾಗಿದ್ದರೆ ಇದನ್ನು ಶೇರ್ ಮಾಡಿಕೊಳ್ಳಿ.

English summary

How Do Oranges Help You Lose Weight

Do you know oranges help you lose weight? Surprised right? In this article, we will be decoding how do oranges help you lose belly fat? Including oranges in your diet is good, but eating them does not directly burn fat because oranges contain calories. However, the citrus fruit has a low number of calories, making it a healthy choice for weight loss. Oranges are packed with vitamin C, vitamin A, calcium, vitamin B6 and magnesium. They are delicious to eat and come with a lot of health benefits.
Story first published: Saturday, March 24, 2018, 9:01 [IST]