ಭಾಂಗ್ ನಿಂದ ನಶೆ ಮಾತ್ರವಲ್ಲ... ಆರೋಗ್ಯಕ್ಕೂ ಲಾಭಗಳಿವೆ!

Posted By: Hemanth
Subscribe to Boldsky

ಹೋಳಿ ರೇ.... ಹೋಳಿ.... ಹೋಳಿ ಎನ್ನುವುದು ಬಣ್ಣಗಳ ಹಬ್ಬ. ಬಣ್ಣಗಳಿಂದಲೇ ಮಿಂದೇಳುವ ಹೋಳಿ ಹಬ್ಬದ ಮತ್ತೊಂದು ವಿಶೇಷವೆಂದರೆ ಭಾಂಗ್. ಇದು ನಶೆಯನ್ನು ಉಂಟು ಮಾಡಿದ ಹೋಳಿ ಆಡುವುದಕ್ಕೆ ಮತ್ತಷ್ಟು ಹುಮ್ಮಸ್ಸು ನೀಡುವುದು. ಭಾಂಗ್ ಪ್ರಿಯರು ಹೋಳಿಯ ಸಮಯಕ್ಕಾಗಿಯೇ ಕಾಯುತ್ತಲಿರುತ್ತಾರೆ. ಭಾಂಗ್ ಅನ್ನು ತುಂಬಾ ವಿಶೇಷವಾಗಿ ತಯಾರಿಸಲಾಗುತ್ತದೆ.

ಅದರಲ್ಲೂ ಉತ್ತರ ಭಾರತದಲ್ಲಿ ಸಿಗುವಂತಹ ಬಾಂಗ್ ಮತ್ತೆಲ್ಲೂ ಸಿಗುವುದಿಲ್ಲವೆನ್ನಲಾಗುತ್ತದೆ. ಇಂತಹ ಭಾಂಗ್ ನಶೆ ಏರಿಸಿದರೂ ಹಲವಾರು ರೀತಿಯ ಲಾಭಗಳು ಇದರಿಂದ ಇದೆ. ಭಾಂಗ್ನಿಂದ ಆರೋಗ್ಯಕ್ಕೆ ಯಾವ ಲಾಭಗಲು ಇದೆ ಎಂದು ನೀವು ತಿಳಿಯಿರಿ. ಆದರೆ ಮಿತವಾಗಿ ಕುಡಿಯಿರಿ....

ಅಜೀರ್ಣ ನಿವಾರಣೆ

ಅಜೀರ್ಣ ನಿವಾರಣೆ

ಭಾಂಗ್ ನಿಂದ ನಶೆ ಏರುವುದೆನ್ನುವ ನಂಬಿಕೆಯಿದೆ. ಅದೇ ರೀತಿಯಲ್ಲಿ ಇದು ಅಜೀರ್ಣ ಸಮಸ್ಯೆಯನ್ನು ನಿವಾರಿಸುವುದು. 500ಮಿ.ಗ್ರಾಂ. ಭಾಂಗ್ಹುಡಿಯನ್ನು 500 ಮಿ.ಗ್ರಾಂ ಕರಿಮೆಣಸಿನ ಹುಡಿ ಜತೆ ಮಿಶ್ರಣ ಮಾಡಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ. ಇದು ಜೀರ್ಣಕ್ರಿಯೆಗೆ ಅತ್ಯುತ್ತಮ ಔಷಧಿ. ಬೆಳಗ್ಗೆ ಮಾತ್ತು ರಾತ್ರಿ ಸೇವನೆ ಮಾಡಿದರೆ ಒಳ್ಳೆಯದು.

ಹೊಟ್ಟೆ ನೋವು ನಿವಾರಣೆ

ಹೊಟ್ಟೆ ನೋವು ನಿವಾರಣೆ

ಮೇಲೆ ಹೇಳಿರುವ ಮಿಶ್ರಣವು ಕೇವಲ ಅಜೀರ್ಣ ಕ್ರಿಯೆ ನಿವಾರಣೆ ಮಾಡುವುದು ಮಾತ್ರವಲ್ಲದೆ. ಇದು ಹೊಟ್ಟೆನೋವನ್ನು ಕಡಿಮೆ ಮಾಡುವುದು. ಮುಂದಿನ ಸಲ ನೀವು ಹೊಟ್ಟೆಯಲ್ಲಿ ಸೆಳೆತ ಕಂಡುಬಂದರೆ(ಮಹಿಳೆಯರು ಇದನ್ನು ಎಚ್ಚರದಿಂದ ಓದಿ) ವೇಗವಾಗಿ ಚೇತರಿಕೆಗೆ ಇದು ಸರಳ ಮದ್ದು.

ವೃಷಣದ ಊತ ತಗ್ಗಿಸುವುದು

ವೃಷಣದ ಊತ ತಗ್ಗಿಸುವುದು

ವೃಷಣದಲ್ಲಿ ರಾತ್ರಿ ಊತ ಕಾಣಿಸಿಕೊಂಡಿದ್ದರೆ ಆಗ ನೀವು ಕೆಲವು ಬಾಂಗ್ ಎಲೆಗಳನ್ನು ಕೆಲವು ನಿಮಿಷ ಕಾಲ ನೀರಿಗೆ ಹಾಕಿ ಕುದಿಸಿ ಮತ್ತು ಉಗುರುಬೆಚ್ಚಗಿನ ನೀರಿನಲ್ಲಿ ವೃಷಣವನ್ನು ಮುಳುಗಿಸಿಡಿ. ಇದು ಬೇಗನೆ ಊತ ಕಡಿಮೆ ಮಾಡುವುದು.

ಅಸ್ತಮಾ ನಿವಾರಿಸುವುದು

ಅಸ್ತಮಾ ನಿವಾರಿಸುವುದು

ಅಸ್ತಮಾ ನಿವಾರಣೆ ಮಾಡಲು ಇಲ್ಲಿ ತುಂಬಾ ಸರಳವಾಗಿರುವ ವಿಧಾನವಿದೆ. 125 ಮಿ.ಗ್ರಾಂ. ಬಾಂಗ್, 2 ಗ್ರಾಂ ಕರಿಮೆಣಸಿನ ಹುಡಿ ಮತ್ತು 2 ಗ್ರಾಂ ಕಲ್ಲುಪ್ಪು ಹಾಕಿಕೊಂಡು ಮಿಶ್ರಣ ಮಾಡಿ. ಬಾಂಗ್ ನ್ನು ಸುಡುವುದರಿಂದ ಬರುವ ಹೊಗೆಯನ್ನು ಎಳೆದುಕೊಂಡು ಶ್ವಾಸಕೋಶದ ಸ್ನಾಯುಗಳಿಗೆ ಆರಾಮ ಒದಗಿಸಬಹುದು.

ಕಿರಿಕಿರಿ ಉಂಟುಮಾಡುವ ಕರುಳಿನ ಸಮಸ್ಯೆ(ಐಬಿಡಿ) ನಿವಾರಣೆ

ಕಿರಿಕಿರಿ ಉಂಟುಮಾಡುವ ಕರುಳಿನ ಸಮಸ್ಯೆ(ಐಬಿಡಿ) ನಿವಾರಣೆ

ಐಬಿಡಿ ಎನ್ನುವುದು ಸಾಮಾನ್ಯವಾಗಿ ಒತ್ತಡದಿಂದ ಬರುವುದು. ಇದರ ನಿವಾರಣೆ ಮಾಡಲು ಬಾಂಗ್ ನ ಕದಿರುಕಡ್ಡಿಗಳನ್ನು ಸುಟ್ಟು ಧೂಮಪಾನ ಮಾಡಿ. 100 ಗ್ರಾಂ ಬಾಂಗ್, 200ಗ್ರಾಂ ಶುಂಠಿ ಮತ್ತು 400 ಗ್ರಾಂ ಜೀರಿಗೆ ತೆಗೆದುಕೊಳ್ಳಿ. ಇದನ್ನು ಸಮಪ್ರಮಾಣದಲ್ಲಿ ಹಾಕಿಕೊಂಡು ಒಂದು ಕಾಗದದಲ್ಲಿ ಹಾಕಿಕೊಳ್ಳಿ. ಒಂದು ಭಾಗವನ್ನು ಎರಡು ಚಮಚ ಮೊಸರಿನೊಂದಿಗೆ ಹಾಕಿ ಪ್ರತಿನಿತ್ಯ ಬೆಳಗ್ಗೆ ಮತ್ತು ರಾತ್ರಿ ಊಟಕ್ಕೆ ಮೊದಲು ಸೇವಿಸಿ. ಇದರಿಂದ ಕೇವಲ 40 ದಿನಗಳಲ್ಲಿ ಐಬಿಡಿ ಸಮಸ್ಯೆಯು ನಿವಾರಣೆಯಾಗುವುದು.

ಸಂಧಿವಾತಕ್ಕೂ ಪರಿಣಾಮಕಾರಿ

ಸಂಧಿವಾತಕ್ಕೂ ಪರಿಣಾಮಕಾರಿ

ಬಾಂಗ್ ಎಣ್ಣೆಯನ್ನು ಊತ ಮತ್ತು ನೋವಿರುವ ಗಂಟುಗಳಿಗೆ ಹಚ್ಚಿಕೊಳ್ಳಿ. ಇದರಿಂದ ಸಂಧಿವಾತದಿಂದ ಉಂಟಾಗುವ ನೋವು ಮತ್ತು ಊತ ಕಡಿಮೆಯಾಗುವುದು.

ಗಾಯ ಶಮನ

ಗಾಯ ಶಮನ

ದೇಹದ ಸಣ್ಣಪುಟ್ಟ ಗಾಯಗಳಿಗೆ ಬಾಂಗ್ ಹುಡಿ ಹಾಕಿಕೊಂಡು ಬ್ಯಾಂಡೇಜ್ ಕಟ್ಟಿದರೆ ಅದರಿಂದ ಗಾಯವು ಬೇಗನೆ ಶಮನವಾಗುವುದು.

 ಪೈಲ್ಸ್ ಗೆ ಒಳ್ಳೆಯದು

ಪೈಲ್ಸ್ ಗೆ ಒಳ್ಳೆಯದು

ಪೈಲ್ಸ್ ನಿಂದ ಬಳಲುತ್ತಾ ಇರುವವರಾದರೆ 10 ಗ್ರಾಂ ಹಸಿರು ಬಾಂಗ್, 30 ಗ್ರಾಂ ನಾರಗಸೆಯ ಬೀಜ ಮಿಶ್ರಣ ಮಾಡಿಕೊಂಡು ಅದನ್ನು ಗುದದ್ವಾರಕ್ಕೆ ಹಚ್ಚಿಕೊಳ್ಳಿ. ಇದರಿಂದ ಪರಿಸ್ಥಿತಿ ಸುಧಾರಣೆಯಾಗುವುದು ಮತ್ತು ತುರಿಕೆ ಕಡಿಮೆಯಾಗುವುದು.

ಹೋಳಿಗೆ ಆಚರಿಸಲು ತುದಿಗಾಲಲ್ಲಿ ನಿಂತಿದ್ದೀರಾ?

ಹೋಳಿಗೆ ಆಚರಿಸಲು ತುದಿಗಾಲಲ್ಲಿ ನಿಂತಿದ್ದೀರಾ?

ನೀವು ಹೋಳಿ ಸಂದರ್ಭದಲ್ಲಿ ಬಾಂಗ್ ಲಸ್ಸಿ ಮತ್ತು ಪಕೋಡಾ ಸೇವಿಸಲು ತುದಿಗಾಲಿನಲ್ಲಿ ನಿಂತಿದ್ದೀರಾ? ಬಾಂಗ್ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳು ಹಾಗೂ ಅದರ ಸೇವನೆಯ ಅನುಭವ ಕಮೆಂಟ್ ಬಾಕ್ಸ್‌ಗೆ ಹಾಕಿ.

English summary

Holi Special: 8 Health Benefits Of Bhang

That's the traditional cheer on everyone's lips at the moment as we wait eagerly for the 2nd day of March when the festival explodes all over the country in all its colorful and vibrant ways. And while shooting colored-water out of pitchkaris and throwing gulaal at everyone, even the unwary passerby's and pristine white cars is the norm of this festival, there is another aspect of it that makes it such an interesting and much-awaited moment of the year - the consumption of bhang.