For Quick Alerts
ALLOW NOTIFICATIONS  
For Daily Alerts

ವಾಲ್‍ನಟ್ ಎಣ್ಣೆ ಸ್ವಲ್ಪ ದುಬಾರಿಯಾದರೂ, ಲಾಭಗಳು ಅಪಾರ!

By Lekhaka
|

ಅಕ್ರೋಟ ಯಾನೆ ವಾಲ್ನಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇದರಲ್ಲಿರುವ ಹಲವಾರು ರೀತಿಯ ಪೋಷಕಾಂಶಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದೇ ರೀತಿ ಅಕ್ರೋಟದ ಎಣ್ಣೆ ಕೂಡ ದೇಹಕ್ಕೆ ಒಳ್ಳೆಯದು. ಇದು ಒಮೆಗಾ-3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದೆ.

ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿದ್ದು, ಹಲವಾರು ರೀತಿಯಿಂದ ದೇಹಕ್ಕೆ ಉಪಯೋಗ ಕಾರಿಯಾಗಿದೆ. ಅಕ್ರೋಟದ ಎಣ್ಣೆಯು ತ್ವಚೆ ಹಾಗೂ ಕೂದಲಿಗೆ ತುಂಬಾ ಪರಿಣಾಮಕಾರಿಯಾಗಿದೆ. ಅಕ್ರೋಟದ ಎಣ್ಣೆಯನ್ನು ಅಡುಗೆಯಲ್ಲಿ ಅಥವಾ ನೇರವಾಗಿ ಬಳಸಬಹುದು. ಅಕ್ರೋಟದ ಎಣ್ಣೆಯಿಂದ ಆಗುವ ಹಲವಾರು ರೀತಿಯ ಆರೋಗ್ಯ ಲಾಭಗಳ ಬಗ್ಗೆ ಈ ಲೇಖನ ಮೂಲಕ ತಿಳಿದುಕೊಳ್ಳುವ....

ರೋಗಗಳಿಗೆ ಚಿಕಿತ್ಸೆ ಮತ್ತು ತಡೆಯುವುದು

ರೋಗಗಳಿಗೆ ಚಿಕಿತ್ಸೆ ಮತ್ತು ತಡೆಯುವುದು

ಅಕ್ರೋಟ ಎಣ್ಣೆಯು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಗಮನವಿರಿಸುವುದು ಮತ್ತು ಅದನ್ನು ಕಡಿಮೆ ಮಾಡಲು ನೆರವಾಗುವುದು. ಅಕ್ರೋಟದ ಎಣ್ಣೆ ಸೇವನೆಯಿಂದ ಪರಿಧಮನಿಗಳ ಕಾಯಿಲೆಗಳನ್ನು ಕಡಿಮೆ ಮಾಡಬಹುದು. ಇದು ದೇಹದ ಸಂಪೂರ್ಣ ರಕ್ತನಾಳಗಳ ಕಾರ್ಯಚಟುವಟಿಕೆಗೆ ಉತ್ತೇಝನ ನೀಡಿ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವುದು. ಅಕ್ರೋಟದ ಎಣ್ಣೆಯಿಂದ ಅಸ್ತಮಾ, ಇಸಲು, ಸಂಧಿವಾತ ಮತ್ತು ಜೀರ್ಣಕ್ರಿಯೆ ಸಮಸ್ಯೆಯಿಂದ ಪರಿಹಾರ ಸಿಗುವುದು. ಇದು ವಿರೇಚಕವಾಗಿ ಕೆಲಸ ಮಾಡುವುದರಿಂದ ಹೊಟ್ಟೆ ಖಾಲಿಯಾಗುವುದು. ಅಕ್ರೋಟದ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ನಂಜು ನಿರೋಧಕ ಗುಣಗಳನ್ನು ಹೊಂದಿದೆ. ಇದರಲ್ಲಿ ಇರುವಂತಹ ಶಿಲೀಂಧ್ರ ವಿರೋಧಿ ಗುಣಗಳಿಂದಾಗಿ ಇದು ತುರಿಕಚ್ಚಿ, ಕ್ಯಾಂಡಿಡ, ಅಥ್ಲೇಟ್ ಫುಟ್ ಮುಂತಾದ ಸಮಸ್ಯೆಗಳನ್ನು ನಿವಾರಿಸುವುದು. ಇದು ರಕ್ತಪರಿಚಲನೆ ಹೆಚ್ಚು ಮಾಡಿಕೊಂಡು ಹೃದಯ ಕಾಯಿಲೆ ಸಮಸ್ಯೆ ಹೋಗಲಾಡಿಸುವುದು. ಅಕ್ರೋಟದ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಸ್ನಾಯು ನೋವು ಮತ್ತು ಸಂಧಿವಾತದ ನೋವು ಕಡಿಮೆಯಾಗುವುದು.

ನೆನಪಿನ ಶಕ್ತಿ ಹೆಚ್ಚಿಸುವುದು

ನೆನಪಿನ ಶಕ್ತಿ ಹೆಚ್ಚಿಸುವುದು

ಅಕ್ರೋಟದ ಎಣ್ಣೆಯು ಮೆದುಳಿನ ಆರೋಗ್ಯ ವೃದ್ಧಿಸುವುದು. ಮೆದುಳಿನ ಆರೋಗ್ಯ ವೃದ್ಧಿಸುವ ಬೀಜಗಳಲ್ಲಿ ಇದು ಅಗ್ರ ಸ್ಥಾನ ಪಡೆದುಕೊಂಡಿದೆ. ಅಕ್ರೋಟದ ಎಣ್ಣೆಯು ನೆನಪಿನ ಶಕ್ತಿ ಸುಧಾರಿಸಿ, ಮೆದುಳಿನ ಕಾರ್ಯಚಟುವಟಿಕೆ ಹೆಚ್ಚಿಸುವುದು. ಇದು ಮೆದುಳಿಗೆ ಬೇಗನೆ ವಯಸ್ಸಾಗದಂತೆ ಕಾಪಾಡುವುದು. ಅಲ್ಝೈಮರ್ ಮತ್ತು ಮೆದುಳಿಗೆ ಸಂಬಂಧಿಸಿದ ಇತರ ಕೆಲವು ಕಾಯಿಲೆಗಳಿಗೆ ಇದು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ನೀವು ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಬೇಕೆಂದು ಬಯಸಿದ್ದರೆ ಆಗ ನೀವು ಅಕ್ರೋಟ ಎಣ್ಣೆಯನ್ನು ಬಳಸಬೇಕು. ಅಕ್ರೋಟ ಎಣ್ಣೆಯು ಹೊಟ್ಟೆಯ ಕೊಬ್ಬು ಕರಿಗಿಸುವುದು ಮತ್ತು ಸುಂದರ ಹೊಟ್ಟೆ ನಿಮ್ಮದಾಗುವಂತೆ ಮಾಡುವುದು. ಬೊಜ್ಜು ದೇಹದವರು ಹೊಟ್ಟೆಯ ಕೊಬ್ಬು ಕರಗಿಸಬೇಕೆಂದು ಬಯಸುತ್ತಾ ಇದ್ದರೆ ಅಕ್ರೋಟ ಎಣ್ಣೆ ಬಳಸಿ.

ಹೊಳೆಯುವ ಸುಂದರ ತ್ವಚೆಗಾಗಿ

ಹೊಳೆಯುವ ಸುಂದರ ತ್ವಚೆಗಾಗಿ

ತ್ವಚೆಗೆ ಅಕ್ರೋಟದ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದು ಚರ್ಮದ ಕಾಂತಿ ಮತ್ತು ಬಣ್ಣ ಹೆಚ್ಚಿಸುವುದು. ಕಪ್ಪು ಕಲೆಗಳು, ಕಣ್ಣ ಕೆಳಗಡೆ ನೀರು ತುಂಬಿರುವುದು ಮತ್ತು ನಿಸ್ತೇಜ ತ್ವಚೆಗಾಗಿ ಇದನ್ನು ಬಳಸಬಹುದು. ಇದು ನೆರಿಗೆ ಕಡಿಮೆ ಮಾಡಲು ಮತ್ತು ಬರದಂತೆ ತಡೆಯಲು ತುಂಬಾ ಪರಿಣಾಮಕಾರಿಯಾಗಿದೆ. ಒಣ ಚರ್ಮವನ್ನು ತಡೆದು ಸುಂದರ ಹಾಗೂ ಕಾಂತಿಯುತ ಚರ್ಮ ನೀಡುವುದು. ಕಲೆ ಮತ್ತು ಗುರುತುಗಳಿಗೆ ಇದನ್ನು ಬಳಸಿಕೊಳ್ಳಬಹುದು. ಇದು ಚರ್ಮಕ್ಕೆ ಪೋಷಣೆ ಮತ್ತು ಮೊಶ್ಚಿರೈಸ್ ನೀಡುವುದು. ಚರ್ಮಕ್ಕೆ ಬೇಗನೆ ವಯಸ್ಸಾಗದಂತೆ ಇದು ತಡೆಯುವುದು. ಸೋರಿಯಾಸಿಸ್ ಮತ್ತು ಇಸುಬು ತಡೆಯಲು ಇದು ತುಂಬಾ ಪರಿಣಾಮಕಾರಿ.

ಆರೋಗ್ಯಕರ ಕೂದಲಿಗೆ

ಆರೋಗ್ಯಕರ ಕೂದಲಿಗೆ

ಅಕ್ರೋಟದ ಎಣ್ಣೆಯನ್ನು ಕೂದಲಿನ ಆರೈಕೆಯಲ್ಲೂ ಬಳಸಲಾಗುತ್ತದೆ. ಕೂದಲಿನ ಎಣ್ಣೆಯಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಕೋಶಗಳಿಗೆ ಹಾನಿಯಾಗದಂತೆ ತಡೆಯುವುದು ಮತ್ತು ಇದರಿಂದ ಕೂದಲು ಉದುರುವುದು ನಿಲ್ಲುವುದು. ತಲೆಬುರುಡೆಗೆ ಪೋಷಣೆ ನೀಡುವ ಇದು ತಲೆಹೊಟ್ಟು ನಿವಾರಣೆ ಮಾಡುವುದು. ನಿಯಮಿತವಾಗಿ ಇದನ್ನು ಬಳಸಿದರೆ ಕೂದಲು ಬೆಳವಣಿಗೆಯಾಗುವುದು. ಅಕ್ರೋಟ ಎಣ್ಣೆಯಿಂದ ಕೂದಲು ನಯ ಹಾಗೂ ಕಾಂತಿ ಪಡೆಯುವುದು.

ಉತ್ತಮ ನಿದ್ರೆಗೆ

ಉತ್ತಮ ನಿದ್ರೆಗೆ

ಆತಂಕ ಮತ್ತು ಒತ್ತಡದ ವಿರುದ್ಧ ಹೋರಾಡಲು ಅಕ್ರೋಟ ಎಣ್ಣೆಯು ನೆರವಾಗುವುದು. ನಿದ್ರಾಹೀನತೆಯನ್ನು ತಡೆಗಟ್ಟಿ, ನಿದ್ರೆ ಸರಾಗವಾಗುವಂತೆ ಮಾಡುವುದು. ಅಕ್ರೋಟದ ಎಣ್ಣೆಯಲ್ಲಿ ಮೆಲಟೊನಿನ್ ಒಳ್ಳೆಯ ನಿದ್ರೆಗೆ ತುಂಬಾ ಸಹಕಾರಿ.

ವಯಸ್ಸಾಗುವ ಲಕ್ಷಣ ತಡೆಯುವುದು

ವಯಸ್ಸಾಗುವ ಲಕ್ಷಣ ತಡೆಯುವುದು

ಅಕ್ರೋಟದಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಗಟ್ಟುವ ಗುಣಗಳು ಇವೆ. ಅಕ್ರೋಟದಲ್ಲಿ ಒಳ್ಳೆಯ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಕೋಶಗಳಿಗೆ ಹಾನಿಯುಂಟು ಮಾಡವ ಮತ್ತು ವಯಸ್ಸಾಗುವಂತೆ ಮಾಡುವ ಫ್ರೀ ರ್ಯಾಡಿಕಲ್ ಅನ್ನು ಇದು ಪರಿಣಾಮಕಾರಿಯಾಗಿ ತಡೆಯುವುದು. ಈ ಎಲ್ಲಾ ಗುಣಗಳನ್ನು ಹೊಂದಿರುವ ಅಕ್ರೋಟದ ಎಣ್ಣೆಯನ್ನು ನಿಮ್ಮ ಶಾಪಿಂಗ್ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಇದು ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.

ವಾಲ್‍ನಟ್ ಎಣ್ಣೆ ಬಳಸಿ, ಕಲೆ ಮುಕ್ತ ತ್ವಚೆ ನಿಮ್ಮದಾಗಿಸಿ!

English summary

Health Benefits Of Walnut Oil

Walnut oil is extracted from walnuts; scientifically known as Juglans regia - a nut which resembles the brain in its surface shape. It is one of the healthiest nuts, rich in omega-3 fatty acids and is known to have numerous health benefits. This oil is rich in antioxidants, vitamins and minerals and has been in use since times immemorial for various purposes. Walnut oil is used for different purposes and it works wonders to the overall health of our body, including our skin and hair.
X
Desktop Bottom Promotion