ರಾಗಿ ಮುದ್ದೆಯಲ್ಲಿರುವ ತಾಕತ್ತು-ಎಷ್ಟು ಹೊಗಳಿದರೂ ಸಾಲದು!

Posted By: Deepu
Subscribe to Boldsky

ಒತ್ತಡದ ಜೀವನದಲ್ಲಿ ದೇಹವು ಬಳಲಿ ಬೆಂಡಾಗುವಂತಹ ಸಮಯದಲ್ಲಿ ಅದರ ಆರೋಗ್ಯ ಹಾಗೂ ಫಿಟ್ನೆಸ್ ಅನ್ನು ಕಾಪಾಡುವುದು ಅತೀ ಅಗತ್ಯ. ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ತಮ್ಮ ದೇಹದ ಬಗ್ಗೆ ಕಾಳಜಿ ಬಂದಿದೆ ಮತ್ತು ಅದರ ಫಿಟ್ನೆಸ್ ಕಡೆ ಗಮನ ಹರಿಸುತ್ತಿದ್ದಾರೆ. ಇದು ಒಳ್ಳೆಯ ಸಂಕೇತ ಕೂಡ. ಆದರೆ ದೇಹದ ತೂಕವನ್ನು ಸಮತೋಲನದಲ್ಲಿಡಲು ಸರಿಯಾದ ಕ್ರಮ ಅಳವಡಿಸಿಕೊಳ್ಳಬೇಕು. ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೆ ರಾಗಿಯ ಆರೋಗ್ಯ ಲಾಭಗಳ ಬಗ್ಗೆ ತಿಳಿಸಲಿದೆ. ಇದು ತೂಕ ಕಳೆದುಕೊಳ್ಳಲು ಎಷ್ಟು ಪರಿಣಾಮಕಾರಿ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು.

ನೈಸರ್ಗಿಕವಾಗಿ ಸಿಗುವ ರಾಗಿಯನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡು ತೂಕ ಇಳಿಸಿಕೊಂಡರೆ ತುಂಬಾ ಒಳ್ಳೆಯದು. ಈ ಲೇಖನ ಪೂರ್ತಿಯಾಗಿ ಓದಿಕೊಂಡರೆ ರಾಗಿಯಿಂದ ಎಷ್ಟು ನೆರವಾಗಲಿದೆ ಎಂದು ತಿಳಿಯಬಹುದು. ಪೋಷಕಾಂಶಗಳನ್ನು ಒಳಗೊಂಡಿರುವ ಧಾನ್ಯವಾಗಿರುವ ರಾಗಿಯು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಖನಿಜಾಂಶ ಒಳಗೊಂಡಿದೆ. ಇದರಲ್ಲಿ ಪೂರ್ತಿ ಆರ್ದ್ರವಾದ ಕೊಬ್ಬು ಕಡಿಮೆ ಇದ್ದು, ತೂಕ ಕಳೆದುಕೊಳ್ಳಲು ಸಹಕಾರಿ. ರಾಗಿಯು ಹೆಚ್ಚು ಸಂಸ್ಕರಣೆ ಒಳಪಡದೆ ಇರುವ ಕಾರಣ ಇದನ್ನು ನೈಸರ್ಗಿಕ ರೂಪದಲ್ಲಿ ಸೇವಿಸಬಹುದು. ಇದರ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ.... 

ಮಧುಮೇಹ ನಿಯಂತ್ರಣ

ಮಧುಮೇಹ ನಿಯಂತ್ರಣ

ರಾಗಿಯಲ್ಲಿ ಆಹಾರದ ಕೊಬ್ಬು ಮತ್ತು ಪಾಲಿಫಿನಾಲ್ ಗಳು ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ನಿಧಾನವಾಗಿಸುವುದು ಮತ್ತು ಇದರಿಂದ ರಕ್ತದ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುವುದು. ಇದರಿಂದ ಮಧುಮೇಹ ಬರುವ ಸಾಧ್ಯತೆ ಕಡಿಮೆ.

ಆತಂಕ ಮತ್ತು ಖಿನ್ನತೆಗೆ

ಆತಂಕ ಮತ್ತು ಖಿನ್ನತೆಗೆ

ರಾಗಿಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಅಮೀನೋ ಆಮ್ಲವಿದೆ. ಇದು ಸ್ನಾಯುಗಳ ಸಂಪೂರ್ಣ ಕಾರ್ಯಚಟುವಟಿಕೆಗೆ ನೆರವಾಗುವುದು ಮತ್ತು ಚಯಾಪಚಾಯ ಕ್ರಿಯೆಯನ್ನು ನಿಯಂತ್ರಣದಲ್ಲಿಡುವುದು. ಖಿನ್ನತೆ ಹಾಗೂ ಆತಂಕ ಕಡಿಮೆ ಮಾಡಲು ಇದು ಸಹಕಾರಿ. ಇದು ಬೆಳವಣಿಗೆಯ ಹಾರ್ಮೋನು ಬಿಡುಗಡೆ ಮಾಡುವುದು.

ಕ್ಯಾಲ್ಸಿಯಂನ ಆಗರ

ಕ್ಯಾಲ್ಸಿಯಂನ ಆಗರ

ಕ್ಯಾಲ್ಸಿಯಂ ಬೇಕೆಂದರೆ ಹಾಲು ಕುಡಿಯಬೇಕು ಎಂಬ ನಂಬಿಕೆ ಇದೆ. ಇದು ಸತ್ಯವಾದರೂ ಹಾಲಿನಲ್ಲಿರುವ ಕ್ಯಾಲ್ಸಿಯಂ ನಾವು ಪಡೆದುಕೊಳ್ಳಬೇಕಾದರೆ ಇದರೊಂದಿಗೆ ಜೇನನ್ನು ಸೇರಿಸಲೇಬೇಕು. ಆಗಲೇ ಕ್ಯಾಲ್ಸಿಯಂ ಮೂಳೆಗಳಿಗೆ ದಕ್ಕುತ್ತದೆ. ಆದರೆ ಜೇನಿನಲ್ಲಿ ಸಕ್ಕರೆ ಅಂಶವೂ ಹೆಚ್ಚಿರುವ ಕಾರಣ ಅನಿವಾರ್ಯವಾಗಿ ಅನಗತ್ಯ ಪ್ರಮಾಣದ ಸಕ್ಕರೆ ದೇಹ ಸೇರುತ್ತದೆ. ಬದಲಿಗೆ ರಾಗಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದು ದೇಹ ಸುಲಭವಾಗಿ ಹೀರಿಕೊಳ್ಳುತ್ತದೆ ಹಾಗೂ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಗುವ osteoporosis ನಿಂದ ರಕ್ಷಿಸುತ್ತದೆ. ರಾಗಿಯನ್ನು ತಿನ್ನುತ್ತಾ ಬಂದವರ ಮೂಳೆಗಳು ದೃಢವಾಗಿರಲಿಕ್ಕೆ ಇದೇ ಕಾರಣ. ರಾಗಿ ರೊಟ್ಟಿ, ಮುದ್ದೆ, ಗಂಜಿ, ಮೊದಲಾದ ಯಾವುದೇ ರೂಪದಲ್ಲಿ ಸೇವಿಸಿದರೂ ಕ್ಯಾಲ್ಸಿಯಂ ಸಿಗುವುದು ಮಾತ್ರ ಖಚಿತ.

ರಕ್ತದಲ್ಲಿರುವ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ

ರಕ್ತದಲ್ಲಿರುವ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ

ರಾಗಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ರಕ್ತದಲ್ಲಿರುವ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಗಿ ಸೇವನೆ ಉತ್ತಮ ಪರಿಹಾರವಾಗಿದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಸಿ ಈ ಕಬ್ಬಿಣವನ್ನು ರಕ್ತ ಹೀರಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ರಾಗಿಯನ್ನು ಮೊಳಕೆ ಬರಿಸಿ ಸೇವಿಸಿದರೆ ಇದರಲ್ಲಿರುವ ವಿಟಮಿನ್ ಸಿ ಪ್ರಮಾಣ ಹೆಚ್ಚುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಕಬ್ಬಿಣ ರಕ್ತ ಸೇರಲು ಸಾಧ್ಯವಾಗುತ್ತದೆ.

ರಕ್ತದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವುದು

ರಕ್ತದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವುದು

ರಾಗಿಯಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಲೂ ನೆರವಾಗುತ್ತವೆ. ಯಕೃತ್ ನಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸಿ ಹೊರದಬ್ಬಲು ರಾಗಿ ಅತ್ಯುತ್ತಮವಾಗಿದೆ. ಜೊತೆಗೇ ಇನ್ನಷ್ಟು ಕೊಬ್ಬು ಬೆಳೆಯುವುದನ್ನು ತಡೆಗಟ್ಟುತ್ತದೆ. ಪರಿಣಾಮವಾಗಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ.

ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ

ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ

ದೇಹವನ್ನು ಬಾಧಿಸುವ ಅಪೌಷ್ಟಿಕತೆ, ವಯಸ್ಸಿಗೂ ಮುನ್ನವೇ ವೃದ್ಧಾಪ್ಯ ಆವರಿಸುವುದು, ಅಂಗಾಂಶಗಳು ಘಾಸಿಗೊಂಡು ಹೊಸ ಅಂಗಾಂಶ ಬೆಳೆಯದೇ ದೇಹ ಸೊರಗುವುದು (ಮಧುಮೇಹದ ಒಂದು ಅಡ್ಡಪರಿಣಾಮ) ಮೊದಲಾದ ತೊಂದರೆಗಳಿಗೆ ರಾಗಿಮುದ್ದೆ ಉತ್ತಮವಾಗಿದೆ. ಹಸಿರು ರಾಗಿ (ರಾಗಿ ಹಸಿಯಿದ್ದಾಗಲೇ ಕೊಯ್ಲು ಮಾಡಿದ್ದುದು) ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ, ದುರ್ಬಲವಾಗಿದ್ದ ಹೃದಯ ಸಬಲಗೊಳ್ಳುತ್ತದೆ, ಯಕೃತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಅಸ್ತಮಾ ಮತ್ತು ಹಾಲೂಣಿಸುವ ತಾಯಂದಿರ ದೇಹದಲ್ಲಿ ಹೊಸ ಹಾಲು ಉತ್ಪಾದಿಸಲು ನೆರವಾಗುತ್ತದೆ.

ರಾಗಿ ಮತ್ತು ತೂಕ ಇಳಿಸುವುದು

ರಾಗಿ ಮತ್ತು ತೂಕ ಇಳಿಸುವುದು

ತೂಕ ಇಳಿಸಲು ರಾಗಿಯು ತುಂಬಾ ಪರಿಣಾಮಕಾರಿ ಆಹಾರವೆಂದು ಪರಿಗಣಿಸಲಾಗಿದೆ. ಇದರಲ್ಲಿ ಉನ್ನತ ಮಟ್ಟದ ನಾರಿನಾಂಶ ಮತ್ತು ಅಮಿನೋ ಆಮ್ಲವಿದೆ. ಇದು ಹಸಿವನ್ನು ಕಡಿಮೆ ಮಾಡುವುದು ಮತ್ತು ದೀರ್ಘಕಾಲ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು. ಆಹಾರದ ಕೊಬ್ಬು ಜೀರ್ಣಕ್ರಿಯೆ ನಿಧಾನಗೊಳಿಸುವುದು. ಗೋಧಿ ಮತ್ತು ಅಕ್ಕಿ ಬದಲಿಗೆ ರಾಗಿ ಸೇವಿಸಿ. ಇದರಲ್ಲಿ ಅಪರ್ಯಾಪ್ತ ಕೊಬ್ಬು ತುಂಬಾ ಕಡಿಮೆಯಿದೆ ಮತ್ತು ಇತರ ಧಾನ್ಯಗಳಿಗಿಂತ ಇದರಲ್ಲಿ ಕೊಬ್ಬಿನಾಂಶವು ಕಡಿಮೆಯಿದೆ.

ರಾಗಿ ಮುದ್ದೆ ತಯಾರಿಸುವ ವಿಧಾನ

ರಾಗಿ ಮುದ್ದೆ ತಯಾರಿಸುವ ವಿಧಾನ

ರಾಗಿ ಮುದ್ದೆ ತಯಾರಿಸುವ ವಿಧಾನ ರಾಗಿಯನ್ನು ಅತ್ಯಂತ ನುಣ್ಣಗೂ ಅಲ್ಲದೇ ರವೆಯೂ ಅಲ್ಲದ ಮಟ್ಟಿಗೆ ಹಿಟ್ಟು ಮಾಡಿಕೊಳ್ಳಬೇಕು. ಇದಕ್ಕೆ ಉಗುರುಬೆಚ್ಚನೆಯ ನೀರನ್ನು ಹಾಗಿ ಕೈಯಿಂದ ನವಿರಾಗಿ ಕಲಸುತ್ತಾ ಬಂದರೆ ಸಾಕು, ಕೆಲವೇ ನಿಮಿಷಗಳಲ್ಲಿ ಮುದ್ದೆ ಸಿದ್ಧ. ನಿಮಗೆ ಇಷ್ಟವಾದ ಹದಕ್ಕೆ ಕಲಸಿಕೊಂಡು ಸೊಪ್ಪಿನ ಸಾರು, ಟೊಮೇಟೊ ರಸಂ, ಸಾಂಬಾರು ಅಥವಾ ನಿಮಗಿಷ್ಟದ ಸಾರಿನೊಂದಿಗೆ ಮುದ್ದೆಯನ್ನು ಸೇವಿಸಬಹುದು. ಆದರೆ ಮುದ್ದೆಯನ್ನು ಇತರ ಪದಾರ್ಥಗಳಂತೆ ಕಚ್ಚಿ ತಿನ್ನಲು ಸಾಧ್ಯವಿಲ್ಲ. ಚಿಕ್ಕ ಚಿಕ್ಕ ತುತ್ತನ್ನು ಸಾರಿನೊಂದಿಗೆ ಕಲಸಿ ಬಾಯಿಯಲಿಟ್ಟು ನೇರವಾಗಿ ನುಂಗಿಬಿಡಬೇಕು. ಮೊದಮೊದಲು ಸ್ವಲ್ಪ ವಿಚಿತ್ರವಾದರೂ ಕ್ರಮೇಣ ಈ ಪರಿ ಇಷ್ಟವಾಗತೊಡಗುತ್ತದೆ.

ತೂಕ ಕಳೆದುಕೊಳ್ಳಲು ನೀವು ರಾಗಿಯ ಯಾವ ಖಾದ್ಯಗಳನ್ನು ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳುವ.

ತೂಕ ಕಳೆದುಕೊಳ್ಳಲು ನೀವು ರಾಗಿಯ ಯಾವ ಖಾದ್ಯಗಳನ್ನು ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳುವ.

ರಾಗಿ ಉಪ್ಪಿಟ್ಟು

ಯಾವತ್ತಾದರೂ ರಾಗಿ ಉಪ್ಪಿಟ್ಟು ಮಾಡಿದ್ದೀರಾ? ಇದು ಉಪಾಹಾರಕ್ಕೆ ತುಂಬಾ ಒಳ್ಳೆಯ ಆಹಾರವೆಂದು ಪರಿಗಣಿಸಲಾಗಿದೆ. ಇದಕ್ಕೆ ಎರಡು ಕಪ್ ರಾಗಿ ಹಿಟ್ಟು ಮತ್ತು ಉಪ್ಪಿಟ್ಟಿಗೆ ಬಳಸುವಂತಹ ಇತರ ಪದಾರ್ಥಗಳು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

1.ರಾಗಿ ಹಿಟ್ಟು,ಉಪ್ಪು, ಸಕ್ಕರೆ ಮತ್ತು ಅರ್ಧ ಕಪ್ ಮೊಸರನ್ನು ಮಿಶ್ರಣ ಮಾಡಿ.

2.ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಇದರಲ್ಲಿ ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವಿನ ಎಲೆ ಮತ್ತು ಸಾಸಿವೆ ಬಿಸಿ ಮಾಡಿ.

3. ಸ್ವಲ್ಪ ಸಮಯದ ಬಳಿಕ ಕತ್ತರಿಸಿಕೊಂಡ ಈರುಳ್ಳಿ, ಮೆಣಸು ಸೇರಿಸಿ. ಸ್ವಲ್ಪ ಸಮಯ ಕರಿಯಿರಿ.

4. ಇದಕ್ಕೆ ಈಗ ರಾಗಿ ಹಿಟ್ಟು ಹಾಕಿ ಮತ್ತು ಕಡಿಮೆ ಬೆಂಕಿಯಲ್ಲಿ ತಿರುಗಿಸುತ್ತಾ ಇರಿ. ರಾಗಿ ಉಪ್ಪಿಟ್ಟು ತಯಾರಾಗಿದೆ ಮತ್ತು ಸವಿಯಸಲು ಸಿದ್ಧ.

ರಾಗಿ ರೊಟ್ಟಿ

ರಾಗಿ ರೊಟ್ಟಿ

ರಾಗಿಯನ್ನು ಬಳಸಿಕೊಂಡು ರಾಗಿ ದೋಸೆ, ರಾಗಿ ಇಡ್ಲಿ ಮತ್ತು ರಾಗಿ ಉಪ್ಪಿಟ್ಟು ಮಾಡಬಹುದು. ಇಲ್ಲಿ ರಾಗಿ ರೊಟ್ಟಿ ಮಾಡುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಇದಕ್ಕೆ ಎರಡು ಕಪ್ ರಾಗಿ ಹಿಟ್ಟು, ಒಂದು ಕಪ್ ಕತ್ತರಿಸಿಕೊಂಡು

ಈರುಳ್ಳಿ, ಹಸಿರು ಮೆಣಸು, ಕೊತ್ತಂಬರಿ ಸೊಪ್ಪು, ಜೀರಿಗೆ, ಒಂದು ಕಪ್ ತುರಿದ ತೆಂಗಿನಕಾಯಿ, ಒಂದು ಚಮಚ ಎಣ್ಣೆ, ಶುಂಠಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು.

ತಯಾರಿಸುವ ವಿಧಾನ

ಎಲ್ಲವನ್ನು ಒಂದು ಪಾತ್ರೆಗೆ ಹಾಕಿಕೊಂಡು ಕಲಸಿ ಹಿಟ್ಟು ತಯಾರಿ ಮಾಡಿ.

ಇದರಿಂದ ಸಣ್ಣ ಉಂಡೆಗಳನ್ನು ಮಾಡಿ ಮತ್ತು ಅದನ್ನು ತವಾದ ಮೇಲೆ ಬಿಡಿಸಿಕೊಳ್ಳಿ.

ಇದನ್ನು ಸರಿಯಾಗಿ ಕಾಯಿಸಿಕೊಂಡ ಬಳಿಕ ಸ್ವಲ್ಪ ತುಪ್ಪ ಹಾಕಿ ಸೇವಿಸಿ.

English summary

health-benefits-of-ragi-and-how-to-lose-weight

Ragi is a nutritious cereal that is enriched with protein, calcium and iron. It also contains less saturated fats and is already your best pal for weight loss. Ragi does not undergo several rounds of processing and polishing and can be consumed it its original form. So, let us take a look at the health benefits of ragi...