For Quick Alerts
ALLOW NOTIFICATIONS  
For Daily Alerts

ಪ್ರಸ್ತದ ದಿನ ಹತ್ತಿರ ಬರುತ್ತಿದ್ದಂತೆ, ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕಂತೆ! ಯಾಕೆ ಗೊತ್ತೇ?

|

ಪ್ರಸ್ತದ ಕೋಣೆಯ ಅಗತ್ಯ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ಮಾದಕ ಒಳ ಉಡುಪುಗಳು ಮಾತ್ರವೇ ನಿಮ್ಮ ಪಟ್ಟಿಯಲ್ಲಿರದೇ ಜೊತೆಗೇ ಕೆಲವು ಕಾಮಪ್ರಚೋದಕಗಳೂ ಇರಲಿ. ಆದರೆ ನೀವು ನಂಬಿದರೂ ಸರಿ, ಬಿಟ್ಟರೂ ಸರಿ, ಪ್ರಸ್ತದ ಸಮಯದಲ್ಲಿ ಅಂದರೆ ಮೊದಲ ರಾತ್ರಿಯ ಸಮಯದಲ್ಲಿ ಕೆಲವು ಆಹಾರಗಳು ದೇಹಕ್ಕೆ ಅಗತ್ಯವಾದ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತವೆ ಹಾಗೂ ಕಾಮಚಟುವಟಿಕೆಯ ಪರಾಕಾಷ್ಠೆಯನ್ನು ಹೆಚ್ಚಿಸುತ್ತವೆ.

ಹಾಗಾಗಿ ಪ್ರಸ್ತದ ದಿನಕ್ಕೂ ಕೆಲವು ದಿನಗಳಿರುವಂತೆಯೇ ನಿಮ್ಮ ಮತ್ತು ನಿಮ್ಮ ಸಂಗಾತಿಯ ಆಹಾರದಲ್ಲಿ ಕೆಲವು ವಿಶೇಷ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ಈ ವಿಶೇಷ ದಿನವನ್ನು ಅವಿಸ್ಮರಣೀಯವಾಗಿಸಬಹುದು. ಬನ್ನಿ, ಈ ವಿಶೇಷ ಆಹಾರಗಳು ಯಾವುವು ಎಂಬುದನ್ನು ನೋಡೋಣ:

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಅಗಾಧ ಪ್ರಮಾಣದ ಪೌಷ್ಠಿಕಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಇ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಹೇರಳವಾಗಿದೆ. ಬೆಣ್ಣೆಹಣ್ಣಿನಲ್ಲಿ ಹೆಚ್ಚಿನ ಕೊಬ್ಬಿನಾಂಶವಿದೆ. ಇದರಲ್ಲಿ ಗರಿಷ್ಠ ಪ್ರಮಾಣದ ಕ್ಯಾಲರಿಗಳಿವೆ. ಇದರಲ್ಲಿರುವ ಕೊಬ್ಬು ಪ್ರಕೃತಿದತ್ತವಾಗಿರುವ ಕಾರಣ ಇದು ಆರೋಗ್ಯಕರ. ಪ್ರೋಟೀನ್, ವಿಟಾಮಿನ್, ನಾರಿನಾಂಶ ಮತ್ತು ಖನಿಜಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ ಈ ಹಣ್ಣಿನ ತಿರುಳಿನಲ್ಲಿ ವಿಟಮಿನ್ ಇ, ಪೊಟ್ಯಾಶಿಯಂ, ವಿಟಮಿನ್ B6 ಹಾಗೂ ಇನ್ನಿತರ ಅಗತ್ಯ ಪೋಷಕಾಂಶಗಳಿವೆ. ಈ ಹಣ್ಣಿನ ಸೇವನೆಯಿಂದ ಹೃದಯ ಮತ್ತು ರಕ್ತಪರಿಚಲನೆ ಉತ್ತಮವಾಗುತ್ತದೆ. ಆರೋಗ್ಯಕರ ಲೈಂಗಿಕ ಜೀವನಕ್ಕೆ ಉತ್ತಮ ರಕ್ತಪರಿಚಲನೆ ಅಗತ್ಯವಾಗಿದ್ದು ಬೆಣ್ಣೆಹಣ್ಣಿನ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.

Most Read: ಮೊದಲ ರಾತ್ರಿ ನವ-ದಂಪತಿಗಳಿಗೆ ಹಾಲು ನೀಡುತ್ತಾರಲ್ಲ! ಯಾಕೆ ಗೊತ್ತೇ?

ಬಾದಾಮಿ

ಬಾದಾಮಿ

ಬಾದಾಮಿ ಸ್ವಲ್ಪ ದುಬಾರಿಯಾದರೂ ಅದರಲ್ಲಿರುವ ಕೆಲವೊಂದು ಪೌಷ್ಠಿಕಾಂಶಗಳು ದೇಹಕ್ಕೆ ತುಂಬಾ ಲಾಭಗಳನ್ನು ಒದಗಿಸಿಕೊಡುವುದು. ಬಾದಾಮಿಯಲ್ಲಿ ವಿಟಮಿನ್ ಇ, ಕ್ಯಾಲ್ಸಿಯಂ, ಪೋಸ್ಪರಸ್, ಕಬ್ಬಿಣ, ಮೆಗ್ನಿಶಿಯಂ,ಸೆಲೇನಿಯಂ, ಸತು ಮತ್ತು ನಿಯಾಸಿನ್ ಇದೆ. ಬಾದಾಮಿ ಹಾಲು ತುಂಬಾ ಶಕ್ತಿಯುತ ಪೇಯ ಎಂದು ನಂಬಲಾಗಿದೆ. ಬಾದಾಮಿನ್ನು ಪುಡಿ ಮಾಡಿಕೊಂಡು ಅದರ ಹಾಲು ತಯಾರಿಸಿದರೆ ಅದು ಹಸುವಿನ ಹಾಲಿಗೂ ಪರ್ಯಾಯವಾಗಿದೆ. ಬಾದಾಮಿ ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಮತ್ತು ಇದರಿಂದ ಇದು ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡಿದರೆ ಇರುವವರಿಗೆ ಒಳ್ಳೆಯ ಆಯ್ಕೆ ಎಂದು ಪರಿಗಣಿಸಲಾಗಿದೆ. ಇನ್ನು ಈ ಅದ್ಭುತ ಒಣಫಲದಲ್ಲಿ ಸತು, ಸೆಲೆನಿಯಂ ಮತ್ತು ವಿಟಮಿನ್ ಇ ಸಮೃದ್ದವಾಗಿವೆ. ಈ ಪೋಷಕಾಂಶಗಳು ಲೈಂಗಿಕ ಆರೋಗ್ಯವನ್ನು ಅತ್ಯುತ್ತಮವಾಗಿಸುವ ಜೊತೆಗೇ ಆರೋಗ್ಯವಂತ ಸಂತಾನವನ್ನು ಪಡೆಯಲೂ ಅಗತ್ಯವಾಗಿವೆ. ತಜ್ಞರ ಪ್ರಕಾರ ಬಾದಾಮಿಗಳ ಸೇವನೆಯಿಂದ ಪುರುಷರಲ್ಲಿ ಲೈಂಗಿಕ ರಸದೂತಗಳ ಪ್ರಮಾಣ ಹೆಚ್ಚುತ್ತದೆ ಹಾಗೂ ಕಾಮಾಸಕ್ತಿಯೂ ಹೆಚ್ಚುತ್ತದೆ..

ಸಿಹಿಗೆಣಸು

ಸಿಹಿಗೆಣಸು

ಒಂದು ವೇಳೆ ನೀವು ಮತ್ತು ನಿಮ್ಮ ಸಂಗಾತಿ ಹೆಚ್ಚು ಹೆಚ್ಚಾಗಿ ಆಲುಗಡ್ಡೆಯನ್ನು ಸೇವಿಸುತ್ತಿದ್ದರೆ ಈ ದಿನಗಳಲ್ಲಿ ಆಲುಗಡ್ಡೆಯ ಬದಲಿಗೆ ಸಿಹಿಗೆಣಸನ್ನು ಸೇವಿಸಲು ಪ್ರಾರಂಭಿಸಿ. ಸಿಹಿಗೆಣಸು ಪೊಟ್ಯಾಶಿಯಂ ಮತ್ತು ವಿಟಮಿನ್ ಎ ಪೋಷಕಾಂಶಗಳ ಆಗರವಾಗಿದ್ದು ಅಧಿಕ ರಕ್ತದೊತ್ತಡ ಕಡಿಮೆಯಾಗಲು ನೆರವಾಗುತ್ತದೆ. ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ನಿಮಿರುತನವನ್ನು ಕಡಿಮೆ ಮಾಡುತ್ತದೆ ಹಾಗೂ ಲೈಂಗಿಕ ಕ್ಷಮತೆಯನ್ನೂ ಕುಗ್ಗಿಸುತ್ತದೆ.

Most Read: ಜನರನ್ನು ಹೆದರಿಸಬಲ್ಲ ಗುಣಲಕ್ಷಣವನ್ನು ಹೊಂದಿರುವ 4 ರಾಶಿಚಕ್ರದವರು

ಕಲ್ಲಂಗಡಿ

ಕಲ್ಲಂಗಡಿ

ದಕ್ಷಿಣ ಆಫ್ರಿಕಾ ಮೂಲವಾದ ಕಲ್ಲಂಗಡಿ ವಿಟಮಿನ್ ಭರಿತವಾದ ಹಣ್ಣಾಗಿದೆ. ವಿಟಮಿನ್ ಎ, ಬಿ6 ಮತ್ತು ಸಿ ಯನ್ನು ಒಳಗೊಂಡಿರುವ ಕಲ್ಲಂಗಡಿ ಬಹುವಿಟಮಿನ್ ಅಂಶದಿಂದ ಕೂಡಿದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ದೇಹಕ್ಕೆ ಚೈತನ್ಯವನ್ನುಂಟು ಮಾಡುತ್ತದೆ. ಇತರ ಹಣ್ಣು ತರಕಾರಿಗಳಿಗಿಂತ ಲೈಕೊಪಿನ್ ಹೆಚ್ಚಾಗಿರುವ ಕಲ್ಲಂಗಡಿ ಕೊಬ್ಬು ಮುಕ್ತ ನೈಸರ್ಗಿಕ ಕೊಡುಗೆಯಾಗಿದೆ. ಕೊಲೆಸ್ಟ್ರಾಲ್ ಅಂಶವಿಲ್ಲದ ದೇಹಕ್ಕೆ ಶಕ್ತಿಯನ್ನು ಒದಗಿಸುವ ವಿಟಮಿನ್ ಭರಿತ ಹಣ್ಣಾದ ಕಲ್ಲಂಗಡಿ ಬೇಸಿಗೆಯ ಬೇಗೆಯನ್ನು ಕಳೆಯುವಲ್ಲಿ ಸಹಕಾರಿ. ಇದನ್ನು ಜ್ಯೂಸ್ ಅಥವಾ ಹಾಗೆ ಕೂಡ ಸೇವಿಸಬಹುದು. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಹೇರಳವಾಗಿಸಿಕೊಂಡ ಸಮೃದ್ಧ ಹಣ್ಣು. ಇನ್ನು ಬೇಸಿಗೆಯ ನೆಚ್ಚಿನ ಹಣ್ಣಾಗಿರುವ ಕಲ್ಲಂಗಡಿ ತನ್ನಲ್ಲಿ ಗೋಪ್ಯವಾದ ಅಸ್ತ್ರವನ್ನೂ ಇರಿಸಿಕೊಂಡಿದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದರೂ ಲೈಕೋಪೀನ್ ಮತ್ತು ಬೀಟಾ ಕ್ಯಾರೋಟೀನ್ ಎಂಬ ಫೈಟೋನ್ಯೂಟ್ರಿಯೆಂಟ್ ಗಳು ಸಮೃದ್ಧವಾಗಿವೆ. Texas A&M researchers ಎಂಬ ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡಂತೆ ಕಲ್ಲಂಗಡಿಯ ಸೇವನೆಯ ಬಳಿಕ ರಕ್ತನಾಳಗಳು ನಿರಾಳಗೊಳ್ಳುತ್ತವೆ ಹಾಗೂ ತನ್ಮೂಲಕ ಹೆಚ್ಚಿನ ರಕ್ತಪರಿಚಲನೆಗೆ ನೆರವಾಗಿ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತವೆ.

ಬ್ಲಾಕ್ಬೆರಿ ಹಣ್ಣುಗಳು

ಬ್ಲಾಕ್ಬೆರಿ ಹಣ್ಣುಗಳು

ಕಪ್ಪು ಬೆರಿ ಹಣ್ಣುಗಳನ್ನು ನಿಮ್ಮ ನಿತ್ಯದ ಮೊಸರು ಅಥವಾ ಬೆಳಿಗ್ಗೆ ಸೇವಿಸುವ ಧಾನ್ಯಗಳ ಬೋಗುಣಿಯಲ್ಲಿ ಚಿಮುಕಿಸಿಕೊಂಡು ಸೇವಿಸುವ ಮೂಲಕ ಪ್ರಸ್ತದ ಸಮಯದಲ್ಲಿ ಅನಿರೀಕ್ಷಿತ ಫಲಿತಾಂಶ ದೊರಕುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ನಿಮಿರುತನವನ್ನು ಹೆಚ್ಚು ಹೊತ್ತು ಕಾಯ್ದಿರಿಸಲು ನೆರವಾಗುತ್ತವೆ ಎಂದು 7 Keys to Lifelong Sexual Vitality ಎಂಬ ಕೃತಿಯ ಲೇಖಕರಾದ ಡಾ. ಆನ್ನಾ ಮರಿಯಾ ಮತ್ತು ಡಾ. ಬ್ರಿಯಾನ್ ಕ್ಲೆಮೆಂಟ್ ವಿವರಿಸುತ್ತಾರೆ. ಅತ್ಯುತ್ತಮ ಪರಿಣಾಮ ಪಡೆಯಲು ಪ್ರಸ್ತದ ಸಮಯಕ್ಕೂ ಮುನ್ನಾ ಸೇವಿಸುವ ಆಹಾರದೊಂದಿಗೆ ಹತ್ತು ಕಪ್ಪು ಬೆರಿ ಹಣ್ಣುಗಳನ್ನು ಸೇವಿಸಬೇಕು ಎಂದು ಇವರು ತಿಳಿಸುತ್ತಾರೆ.

ಅಪ್ಪಟ ಜೇನು

ಅಪ್ಪಟ ಜೇನು

ಇನ್ನೂ ಹಲವು ಸಂಪ್ರದಾಯಗಳಲ್ಲಿ ಪ್ರಸ್ತಕ್ಕೂ ಮುನ್ನ ನವವಿವಾಹಿತರಿಗೆ ಕುಡಿಯಲು ನೀಡಲಾಗುವ ಹಾಲಿನಲ್ಲಿ ಅಪ್ಪಟ ಜೇನನ್ನು ಬೆರೆಸುವ ಕಾರಣವನ್ನು ನೋಡೋಣ. ಜೇನಿನಲ್ಲಿ ಅತ್ಯಮೋಘವಾದ ಆರೋಗ್ಯಕರ ಗುಣಗಳಿವೆ ಹಾಗೂ ಇದು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ದಂಪತಿಗಳಲ್ಲಿ ಸಾಮಾನ್ಯವಾಗಿ ಎದುರಾಗುವ ಲೈಂಗಿಕ ನಿಃಶಕ್ತಿಯನ್ನು ದೂರವಾಗಿಸಿ ಪ್ರಸ್ತದ ಕ್ಷಣಗಳನ್ನು ಪರಿಪೂರ್ಣವಾಗಿಸಲು ನೆರವಾಗುತ್ತದೆ. ಜೇನಿನಲ್ಲಿ ಬೋರಾನ್ ಎಂಬ ಖನಿಜ ಸಮೃದ್ದವಾಗಿದ್ದು ಇದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾಗೂ ಮಹಿಳೆಯರಲ್ಲಿ ಈಸ್ಟ್ರೋಜೆನ್ ರಸದೂತಗಳ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ ಹಾಗೂ ಈ ಮೂಲಕ ಗರಿಷ್ಟ ಭಾವಾವೇಶವನ್ನು ಪಡೆಯಲು ನೆರವಾಗುತ್ತದೆ.

ಸುಗಂಧಭರಿತ ಕಸ್ತೂರಿ

ಸುಗಂಧಭರಿತ ಕಸ್ತೂರಿ

ಕಾಮೋತ್ತೇಜಕ ಆಹಾರಗಳ ಪಟ್ಟಿಯಲ್ಲಿ ಕಸ್ತೂರಿ ನಿರ್ವಿವಾದವಾಗಿ ಪ್ರಥಮ ಸ್ಥಾನ ಪಡೆಯುತ್ತದೆ. ಪ್ರಸ್ತಕ್ಕೆ ಕಳಿಸುವ ಮುನ್ನ ನವದಂಪತಿಗಳಿಗೆ ಕಸ್ತೂರಿಯನ್ನು ಬೆರೆಸಿದ ಬಿಸಿಹಾಲನ್ನು ಕುಡಿಸಿ ಶುಭವಾಗಲಿ ಎಂದು ಹಾರೈಸಿ ಕಳಿಸುವ ಸಂಪ್ರದಾಯ ಭಾರತದ ಹಲವು ಧರ್ಮಗಳಲ್ಲಿ ನೂರಾರು ವರ್ಷಗಳಿಂದ ನಡೆದು ಬರುತ್ತಿರುವ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಆದರೆ ಕಸ್ತೂರಿ ತುಂಬಾ ದುಬಾರಿಯಾದ ಸಾಂಬಾರ ವಸ್ತುವಾಗಿರುವ ಕಾರಣ ವಿಶೇಷ ಅಡುಗೆ ಮತ್ತು ಕೆಲವು ಆರೋಗ್ಯ ಕಾರಣಗಳಿಗಾಗಿ ಮಾತ್ರವೇ ಬಳಸಲಾಗುತ್ತಿದೆ. ಇದರ ಕಾಮೋತ್ತೇಜಕ ಗುಣಗಳು ಪ್ರಸ್ತದ ಕ್ಷಣಗಳಿಗಾಗಿ ಅತ್ಯಂತ ಸೂಕ್ತವಾಗಿದ್ದು ವಧೂವರರು ತಪ್ಪದೇ ಸೇವಿಸಬೇಕಾದ ಆಹಾರವಾಗಿದೆ. ಇದರ ಸೇವನೆಯಿಂದ ಮೆದುಳಿಗೆ ತಲುಪುವ ನ್ಯೂರಾನ್ ಸೂಚನೆಗಳಲ್ಲಿ ಹೆಚ್ಚಳ, ಸ್ವಾಭಾವಿಕವಾಗಿ ಎದುರಾಗುವ ಒತ್ತಡ ಮತ್ತು ಉದ್ವೇಗವನ್ನು ನಿವಾರಿಸಿ ದಂಪತಿಗಳು ನಿರಾಳರಾಗಿರಲು ಹಾಗೂ ಮಧುರ ಕ್ಷಣಗಳನ್ನು ಹೆಚ್ಚು ಹೊತ್ತು ತಾಜಾತನದಲ್ಲಿರಿಸಲು ನೆರವಾಗುತ್ತದೆ.

ಕಪ್ಪು ಚಾಕಲೇಟಿನ ಜಾದೂ

ಕಪ್ಪು ಚಾಕಲೇಟಿನ ಜಾದೂ

ಕಪ್ಪು ಚಾಕಲೇಟು ಆರೋಗ್ಯಕ್ಕೆ ಉತ್ತಮ ಎಂದೇ ಹೆಚ್ಚಾಗಿ ಬಳಸಲ್ಪಡುತ್ತಿದೆ. ಆದರೆ ಇದರ ಶಕ್ತಿ ಪ್ರಸ್ತದ ಸಮಯಕ್ಕೂ ಸೂಕ್ತ ಎಂದು ಕೆಲವರು ಮಾತ್ರವೇ ಅರಿತಿದ್ದಾರೆ. ಹಾಗಾಗಿ ಪ್ರಸ್ತದ ಕ್ಷಣಕ್ಕೂ ಮುನ್ನ ಕೊಂಚ ಕಪ್ಪು ಚಾಕಲೇಟು ತಿನ್ನಬಾರದೇಕೆ? ಒಂದು ಅಥವಾ ಎರಡು ಬಾರ್ ಚಾಕಲೇಟು ಸೇವನೆಯಿಂದ, ಸಾಧ್ಯವಾದರೆ ಒಬ್ಬರಿಗೊಬ್ಬರು ತಿನ್ನಿಸುವ ಮೂಲಕ, ಪರಸ್ಪರರ ಪ್ರತಿ ಗೌರವ, ಪ್ರೇಮ, ಆತ್ಮೀಯತೆ, ಬದ್ದತೆಯ ಭಾವನೆಗಳನ್ನು ಬಲಪಡಿಸುವುದು ಮಾತ್ರವಲ್ಲ, ಮುಂದಿನ ಕ್ಷಣಗಳ ರೋಮಾಂಚನವನ್ನು ಇನ್ನಷ್ಟು ಹೆಚ್ಚಾಗಿ ಪಡೆಯಲು ಸಾಧ್ಯ.

 ರಸಭರಿತ ಸ್ಟ್ರಾಬೆರಿ ಹಣ್ಣುಗಳು

ರಸಭರಿತ ಸ್ಟ್ರಾಬೆರಿ ಹಣ್ಣುಗಳು

ನವವಿವಾಹಿತರು ತಮ್ಮ ಆತ್ಮೀಯ ಕ್ಷಣಗಳನ್ನು ಜೊತೆಯಾಗಿ ಕಳೆಯಲು ಸವಿಯುವ ವಿಶೇಷ ಆಹಾರಗಳಲ್ಲಿ ಈಗತಾನೇ ಕರಗಿರುವ ಚಾಕಲೇಟಿನ ದಪ್ಪ ದ್ರವದಲ್ಲಿ ತಾಜಾ ಹಾಗೂ ರಸಭರಿತ ಸ್ಟ್ರಾಬೆರಿ ಹಣ್ಣುಗಳನ್ನು ಮುಳುಗಿಸಿ ತಿನ್ನುವುದನ್ನು ಮರೆಯಬಾರದು. ಏಕೆ? ಈ ಆಹಾರ ಮುಂದಿನ ಕ್ಷಣಗಳನ್ನು ಹೆಚ್ಚು ಶಕ್ತಿಯುತವಾಗಿಸಲು ನೆರವಾಗುತ್ತವೆ.

ತಾಜಾ ಪುದಿನಾ ಎಲೆಗಳು

ತಾಜಾ ಪುದಿನಾ ಎಲೆಗಳು

ಈ ಪಟ್ಟಿಯಲ್ಲಿ ಕಡೆಯದಾಗಿ ಬರುವ ಪುದಿನಾ ಎಲೆಗಳು ಸಹಾ ಪ್ರಸ್ತದ ಕ್ಷಣಗಳನ್ನು ಪರಿಪೂರ್ಣವಾಗಿ ಅನುಭವಿಸಲು ನೆರವಾಗುವ ಪೋಷಕಾಂಶಗಳನ್ನು ಹೊಂದಿವೆ. ಇದರಲ್ಲಿ ಅತಿ ಹೆಚ್ಚಿನ ವಿಟಮಿನ್ನುಗಳಿರುವುದು ಮಾತ್ರವಲ್ಲ, ಇದರ ರುಚಿ ಹಾಗೂ ಪರಿಮಳವೂ ನವದಂಪತಿಗಳ ನಡುವಣ ಪ್ರೇಮವನ್ನು ಹೆಚ್ಚಿಸಲು ಪರೋಕ್ಷವಾಗಿ ನೆರವಾಗಬಹುದು. ಬಾಯಿಯ ದುರ್ವಾಸನೆಯನ್ನು ಇಲ್ಲವಾಗಿಸುವ ಹಾಗೂ ಈ ಮೂಲಕ ಪರಸ್ಪರರ ಚುಂಬನವನ್ನು ನಿರಾಕರಿಸಲು ಸಾಧ್ಯವೇ ಇಲ್ಲದಂತಾಗಿಸಿ ಇಬ್ಬರ ನಡುವಣ ಭಾವೋದ್ರಿಕ್ತ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ಪ್ರಸ್ತದ ರಾತ್ರಿ ಪವಡಿಸುವ ಮುನ್ನ ಕೊಂಚ ಪುದಿನಾ ಎಲೆಗಳನ್ನು ಹಸಿಯಾಗಿ ಅಗಿದು ನುಂಗುವ ಮೂಲಕ ದೈಹಿಕವಾಗಿಯೂ, ಮಾನಸಿಕವಾಗಿಯೂ ನವದಾಂಪತ್ಯದ ಪ್ರಥಮ ಕ್ಷಣಗಳನ್ನು ಜೀವನದ ಸ್ಮರಣೀಯ ಕ್ಷಣಗಳಾಗಿಸಲು ಸಾಧ್ಯವಾಗುತ್ತದೆ.

 ತಾಜಾ ಪುದಿನಾ ಎಲೆಗಳು

ತಾಜಾ ಪುದಿನಾ ಎಲೆಗಳು

ಒಂದು ವೇಳೆ ಶೀಘ್ರದಲ್ಲಿಯೇ ನೀವು ವಿವಾಹಬಂಧನಕ್ಕೆ ಒಳಗಾಗುವವರಿದ್ದರೆ ಈ ಮಾಹಿತಿ ನಿಮಗೆ ಖಂಡಿತವಾಗಿಯೂ ನೆರವಿಗೆ ಬರಲಿದೆ. ಈ ಎಲ್ಲಾ ವಿಧಾನಗಳು ಸುರಕ್ಷಿತ ಹಾಗೂ ನೂರಾರು ವರ್ಷಗಳಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ನೈಸರ್ಗಿಕ ಕಾಮೋತ್ತೇಜಕ ಆಹಾರಗಳಾಗಿವೆ. ಹಾಗಾಗಿ ನಿಮಗೆ ಸೂಕ್ತವಾದುದನ್ನು ಆರಿಸಿಕೊಳ್ಳಲು ಸರ್ವಥಾ ಹಿಂದೇಟು ಹಾಕದಿರಿ. ಪ್ರಸ್ತದ ರಾತ್ರಿಯನ್ನು ಜೀವಮಾನವಿಡೀ ನೆನಪಿನಲ್ಲಿರಿಸುವಂತಾಗಿಸಲು ಈ ಆಹಾರಗಳು ಖಂಡಿತವಾಗಿಯೂ ನೆರವಾಗುತ್ತವೆ.

English summary

Foods to Eat for Better Wedding Night Sex

Sexy lingerie shouldn't be the only thing on your wedding night shopping list — a few aphrodisiacs should be, too. Whether you believe in the idea of libido-boosting foods or not, experts say there are certain nutrients that can improve your sex life. So, in the weeks leading up to your big day, we recommend incorporating a few of the magical fruits, vegetables, and snacks into you and your fiancé's diet.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more