For Quick Alerts
ALLOW NOTIFICATIONS  
For Daily Alerts

ಮನೆ ಔಷಧಿಗಳು: ಮಾತ್ರೆಗಳಿಲ್ಲದೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ!

By Deepu
|

ಪ್ರತಿದಿನವೂ ಬೋಲ್ಡ್ ಸ್ಕೈ ಓದುತ್ತಿರುವ ಪ್ರತಿಯೊಬ್ಬರಿಗೂ ಇಂದಿನ ದಿನಗಳ ಆರೋಗ್ಯ ಸಮಸ್ಯೆಗಳು, ಅದು ಬರುವ ರೀತಿ ಇತ್ಯಾದಿಗಳು ಖಂಡಿತವಾಗಿಯೂ ತಿಳಿದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರನ್ನು ಅತಿಯಾಗಿ ಕಾಡುವಂತಹ ಸಮಸ್ಯೆಯೆಂದರೆ ಅದು ಅಧಿಕ ರಕ್ತದೊತ್ತಡ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಹಲವಾರು ರೀತಿಯ ಹೃದಯದ ಕಾಯಿಲೆಗಳಾದ ಹೃದಯಾಘಾತ, ಪಾರ್ಶ್ವವಾಯು ಮತ್ತು ಕಿಡ್ನಿ ಸಮಸ್ಯೆಗಳು ಬರಬಹುದು. ಇದರಿಂದ ರಕ್ತದೊತ್ತಡದ ಬಗ್ಗೆ ಪರೀಕ್ಷೆ ಮಾಡಿಸಿಕೊಂಡು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ.

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಪ್ರಸ್ತುತ, ವಿಶ್ವದಾದ್ಯಂತ ಕಂಡು ಬರುತ್ತಿರುವ ಒಂದು ಸಾಂಕ್ರಾಮಿಕ ರೋಗ ಎನಿಸಿಕೊಂಡಿದೆ. ಅನಾರೋಗ್ಯಕ್ಕೆ ಕಾರಣವಾಗುವ ಆಹಾರಗಳ ಸೇವನೆ ಒತ್ತಡದ ಜೀವನದಿಂದಾಗಿ ಇಂದು ಭಾರತದಲ್ಲಿ ಸರಾಸರಿ ಪ್ರತಿ ಮೂರು ಜನರಲ್ಲಿ ಒಬ್ಬರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಇದು ಹೃದಯ ಖಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯವಾದ ಆರೋಗ್ಯದ ಸಮಸ್ಯೆಯಾಗಿದ್ದು, ಇದು ಅಧಿಕ ಸಂದರ್ಭಗಳಲ್ಲಿ ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಬಿಡುತ್ತದೆ. ಅಧಿಕ ರಕ್ತದೊತ್ತಡದಿಂದ ನರಳುವ ಸುಮಾರು ಜನರಿಗೆ ತುಂಬಾ ವರ್ಷಗಳ ಕಾಲ ಅದರ ಲಕ್ಷಣಗಳು ಕಂಡು ಬಂದಿರುವುದಿಲ್ಲ. ರಕ್ತವು ರಕ್ತ ನಾಳಗಳ ಮೂಲಕ ಹರಿಯುವಾಗ ಅಪಧಮನಿಯ ಗೋಡೆಗಳ ಮೇಲೆ ಉಂಟು ಮಾಡುವ ಒತ್ತಡವೇ ರಕ್ತದೊತ್ತಡ.

ಅಂದರೆ ಯಾವಾಗ ಒಬ್ಬ ವ್ಯಕ್ತಿಯು ತಾನು ಅಧಿಕ ರಕ್ತದೊತ್ತಡದಿಂದ ನರಳುತ್ತಿದ್ದೇನೆ ಎಂದು ಹೇಳುತ್ತಾನೋ, ಆಗ ಅವನ ಅಪಧಮನಿಯ ಗೋಡೆಗಳು ಹೃದಯದಿಂದ ಪಂಪ್ ಆಗಿ ಬರುವ ರಕ್ತದ ಅಧಿಕವಾದ ಒತ್ತಡವನ್ನು ಸ್ವೀಕರಿಸುತ್ತಿವೆ ಎಂದು ಭಾವಿಸಿ. ಸಾಮಾನ್ಯವಾದ ರಕ್ತದೊತ್ತಡವು 140/80mmHg ಇರುತ್ತದೆ. ಯಾವಾಗ ಇದು 140/90mmHg ಆಗುತ್ತದೋ, ಆಗ ನೀವು ಅದಕ್ಕಾಗಿ ಪರೀಕ್ಷೆಯನ್ನು ನಡೆಸುವುದು ಅತ್ಯವಶ್ಯಕ. ಬನ್ನಿ ರಕ್ತದೊತ್ತಡವನ್ನು ನಿಯಂತ್ರಸುವ ಮನೆಮದ್ದು ಯಾವುದು ಎಂಬುದನ್ನು ನೋಡೋಣ..

ಎಳ್ಳೆಣ್ಣೆ

ಎಳ್ಳೆಣ್ಣೆ

ಎಳ್ಳೆಣ್ಣೆಯಲ್ಲಿ ಒಳ್ಳೆಯ ಕೊಬ್ಬು ಇದ್ದು, ಇದು ಕೊಲೆಸ್ಟ್ರಾಲ್ ಅನ್ನು ತೆಗೆಯುವುದು. ಇದರಲ್ಲಿ ಪೂರ್ತಿ ಆರ್ದ್ರವಾದ ಕೊಬ್ಬು ಕಡಿಮೆ ಇದೆ ಮತ್ತು ಸೆಸಮೊಲ್ ಮತ್ತು ಸೆಸಮಿನ್ ಎನ್ನುವ ರಾಸಾಯನಿಕವು ಇದರಲ್ಲಿದೆ. ಇವುಗಳು ಆ್ಯಂಟಿಆಕ್ಸಿಡೆಂಟ್ ಆಗಿದ್ದು, ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ರಕ್ತದೊತ್ತಡದವಿರುವಂತಹ ರೋಗಿಗಳು ಬೇರೆ ಎಣ್ಣೆ ಬಳಸುವುದುನ್ನು ಬಿಟ್ಟು ಈ ಎಣ್ಣೆಯನ್ನು ಬಳಸಿದರೆ ರಕ್ತದೊತ್ತಡ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುವುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪು ಹಲವಾರು ಶಮನಕಾರಿ ಗುಣಗಳು ಇವೆ ಮತ್ತು ಇದು ರಕ್ತದೊತ್ತಡ ಕಡಿಮೆ ಮಾಡುವಲ್ಲೂ ಸಹಕಾರಿ ಎಂದು ಅಧ್ಯಯನಗಳು ಕಂಡುಕೊಂಡಿವೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ತುಂಬಾ ರುಚಿಕರ, ಸರಳ ಹಾಗೂ ಸಿಹಿ ವಿಧಾನ ಇದಾಗಿದೆ. ಜೇನುತುಪ್ಪವು ರಕ್ತನಾಳಗಳಿಗೆ ಆರಾಮವನ್ನು ನೀಡುವುದು. ಹಸಿ ಜೇನುತುಪ್ಪ ಸೇವಿಸಿದರೆ ರಕ್ತದೊತ್ತಡ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು

ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು

ಕೆಲವೊಂದು ಗಿಡಮೂಲಿಕೆಗಳು, ಸಾಂಬಾರ ಮತ್ತು ಬೀಜಗಳು ರಕ್ತದೊತ್ತಡ ನಿವಾರಣೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿಯು ರಕ್ತವನ್ನು ತೆಳುವಾಗಿಸುವುದು ಮತ್ತು ರಕ್ತನಾಳಗಳಲ್ಲಿನ ತಡೆ ನಿವಾರಿಸುವುದು. ಸೂರ್ಯಕಾಂತಿ ಬೀಜಗಳು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು. ಸೆಲರಿ ಬೀಜ ಸಾರ, ಅರ್ಜುನ, ಅಗಸೆ ಬೀಜಗಳು, ಬೆಕ್ಕಿನ ಪಂಜ, ಅರಶಿನ, ಕಲ್ಲಂಗಡಿ ಬೀಜಗಳು ಮತ್ತು ಮೆಂತ್ಯೆ ಬೀಜಗಳು ಪರಿಣಾಮಕಾರಿಯಾಗಿ ರಕ್ತದೊತ್ತಡ ನಿವಾರಣೆ ಮಾಡುವುದು.

ಕಡು ಚಾಕಲೇಟ್

ಕಡು ಚಾಕಲೇಟ್

ರೋಗಿ ಬಯಸಿದ್ದು ಹಾಲು ವೈದ್ಯ ಸೂಚಿಸಿದ್ದು ಹಾಲು ಎನ್ನುವ ಮಾತಿದೆ. ನಿಮ್ಮ ರೋಗಕ್ಕೆ ಚಾಕಲೇಟ್ ಮದ್ದಾದರೆ ಹೇಗಿರಬಹುದು ಯೋಚಿಸಿ. ಹೌದು, ಕಡುಬಣ್ಣದ ಚಾಕಲೇಟ್ ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನೇ ಉಂಟು ಮಾಡಲಿದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲಿದೆ.

ದಾಸವಾಳ!

ದಾಸವಾಳ!

ದಾಸವಾಳದ ಹೂವಿನ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಸಾಕಷ್ಟು ವರ್ಷಗಳಿಂದ ಹೇಳಲಾಗುತ್ತದೆ.ಆದರೆ ಇತ್ತೀಚಿಗೆ ಇದು ಆಶ್ಚರ್ಯಕರ ರೀತಿಯಲ್ಲಿ ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುತ್ತದೆ ಎಂಬುದು ಸಾಬೀತಾಗಿದೆ. ಸ್ವಲ್ಪ ದಾಸವಾಳದ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ನೀರಿನಲ್ಲಿ ಕುದಿಸಿ.ಇದಕ್ಕೆ ಜೇನು, ಲಿಂಬೆ ರಸ ಮತ್ತು ಎರಡು ಚಕ್ಕೆಯನ್ನು ಹಾಕಿ ಕುದಿಸಿ.ಸ್ವಲ್ಪ ಹೊತ್ತು ತಣಿಯಲು ಬಿಟ್ಟು ನಂತರ ಇದನ್ನು ಕುಡಿಯಿರಿ. ಈ ರೀತಿ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಯಬಹುದು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿರುವ ಸಿಟ್ರುಲಿನ್ ಎಂಬ ಸಾವಯುವ ಸಂಯುಕ್ತವು ಹೃದಯವು ರಕ್ತವನ್ನು ಪಂಪ್ ಮಾಡಲು ಸಹಕರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದು ರೂಡಿಸಿಕೊಳ್ಳಿ.ಕಲ್ಲಂಗಡಿ ಬೀಜವೂ ಕೂಡ ರಕ್ತವನ್ನು ತಿಳಿಗೊಳಿಸಿ, ಮೂತ್ರಪಿಂಡದ ಕಾರ್ಯವನ್ನು ಸುಗಮಗೊಳಿಸಿ, ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಕರಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಅಧಿಕ ರಕ್ತದೊತ್ತಡ ತಡೆಗಟ್ಟಲು ಬಾಳೆಹಣ್ಣು ರಾಮಬಾಣದಂತೆ ಕೆಲಸ ಮಾಡುತ್ತದೆ.ಬಾಳೆಹಣ್ಣಿನಲ್ಲಿರುವ ಪೊಟ್ಯಶಿಯಂ ಅಂಶ ದೇಹದಲ್ಲಿ ಸೋಡಿಯಂನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣಿನ ಜೊತೆಗೆ ಪಾಲಾಕ್, ಕಿತ್ತಳೆ ಜ್ಯೂಸ್, ದ್ರಾಕ್ಷಿ ಇನ್ನಿತರ ಹಣ್ಣು ತರಕಾರಿಗಳನ್ನು ಸೇವಿಸುವುದು ಕೂಡ ಒಳ್ಳೆಯದು.

ನುಗ್ಗೆ ಕಾಯಿ

ನುಗ್ಗೆ ಕಾಯಿ

ನುಗ್ಗೆಕಾಯಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಫಲಕಾರಿ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಸಂಶೋಧನೆಗಳು ಸಾದರಪಡಿಸಿರುವಂತೆ, ಈ ಸಸ್ಯದ ಎಲೆಗಳಲ್ಲಿರುವ ಸಾರವು ರಕ್ತದೊತ್ತಡದ ಸಂಕೋಚನ (systolic) ಮತ್ತು ವ್ಯಾಕೋಚನವನ್ನು (diastolic) ಕಡಿಮೆಗೊಳಿಸಲು ಸಹಾಯಕಾರಿಯಾಗುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ಸಾಂಪ್ರದಾಯಿಕವಾಗಿ, ನೆಲ್ಲಿಕಾಯಿಯನ್ನು ರಕ್ತದೊತ್ತಡ ಇರುವವರು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಆಮ್ಲದಲ್ಲಿರುವ ವಿಟಮಿನ್ ಸಿ ರಕ್ತನಾಳಗಳ ವಿಸ್ತರಣೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇದನ್ನು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹ ಬಳಸಲಾಗುತ್ತದೆ. ತ್ರಿಫಲಾ ಮಿಶ್ರಣದ ಆಮ್ಲ ಎಲ್ಲಾ ಆರ್ಯುವೇದ ಅಂಗಡಿಗಳಲ್ಲಿ ಲಭ್ಯ.

ಮೂಲಂಗಿ

ಮೂಲಂಗಿ

ಮೂಲಂಗಿ ಹಾಗೂ ಅದರ ಎಲೆಗಳು ಬಿಪಿಯನ್ನು ಕಡಿಮೆ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ ಇದ್ದು, ಅದು ದೇಹದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುವುದರ ಜೊತೆಗೆ ಬಿಪಿಯನ್ನು ಸಹ ಕಡಿಮೆ ಮಾಡುತ್ತದೆ

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆಯ ರಸವನ್ನು ಸೇವಿಸಿ. ಇದರಲ್ಲಿ ಪಾಲಿಫೆನೊಲಿಕ್ ಎಂಬ ಆಂಟಿಆಕ್ಸಿಡೆಂಟ್ ಇದ್ದು, ಇದು ಹೃದಯದ ನಾಳಗಳು ಕಟ್ಟಿಕೊಳ್ಳುವಿಕೆಯನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.

ಟೊಮೇಟೊ

ಟೊಮೇಟೊ

ಟೊಮೇಟೊಗಳಲ್ಲಿ ಲೈಕೊಪೀನ್ ಎಂಬ ಅಂಶವಿರುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

 ಓಟ್ಸ್

ಓಟ್ಸ್

ಓಟ್ಸ್ ಡೈಯಾಸ್ಟೊಲಿಕ್ ಮತ್ತು ಸಿಸ್ಟೊಲಿಕ್ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಓಟ್ಸ್‌ನಲ್ಲಿರುವ ನಾರಿನಂಶವು ಜೀರ್ಣಾಂಗ ವ್ಯೂಹಕ್ಕೆ ಒಳ್ಳೆಯದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

English summary

Effective Home Remedies To Reduce High Blood Pressure

Hypertension, most popularly known as high blood pressure, is a condition that most of the population in the world is facing right now. High blood pressure can lead to stroke, heart attacks, loss of vision and also can affect the kidneys as well as the cognitive functions and so it is also termed as the "silent killer". These home remedies are natural ways to keep a check on your blood pressure levels. So, here are a few of the home remedies that can be kept in mind for lowering the blood pressure levels.
X
Desktop Bottom Promotion