For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಯೋನಿಯ ಆರೋಗ್ಯ ಕಾಪಾಡುವ ಆಹಾರಗಳು

By Hemanth
|

ದೇಹದಲ್ಲಿ ಪ್ರಮುಖವಾಗಿ ಅದರಲ್ಲೂ ಮಹಿಳೆಯರಲ್ಲಿ ಯೋನಿಯ ಪಾತ್ರವು ಮಹತ್ತರವಾದದ್ದು, ಇದು ಮಗುವಿನ ಜನನ ಪ್ರಕ್ರಿಯೆ ಹಾಗೂ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದ ಯೋನಿಯ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಆರೈಕೆ ಮಾಡಬೇಕು. ಯೋನಿಯ ಬಗ್ಗೆ ಹೆಚ್ಚಿನವರು ಗಮನ ಹರಿಸುವುದೇ ಇಲ್ಲ. ಇದರಿಂದ ಹಲವಾರು ಸಮಸ್ಯೆಗಳು ಕೂಡ ಬರುವುದು. ಆದರೆ ಯೋನಿಯ ಆರೋಗ್ಯ ಕಾಪಾಡಲು ಕೆಲವೊಂದು ಆಹಾರಗಳನ್ನು ನೀವು ಸೇವಿಸಬೇಕು.

ಮಹಿಳೆಯರೇ ಎಚ್ಚರ!! ನಾಚಿಕೆ-ಸಂಕೋಚ ಪಟ್ಟರೆ ಸಮಸ್ಯೆ ಜಾಸ್ತಿಯಾಗಬಹುದು!!

ಮೊಸರಿನಂತಹ ಆಹಾರ ಸೇವಿಸಿದರೆ ಅದರಿಂದಾಗಿ ಯೋನಿಗೆ ಉಂಟಾಗುವಂತಹ ಸೋಂಕು ನಿವಾರಣೆಯಾಗುವುದು. ಆರೋಗ್ಯಕರ ಆಹಾರ ಸೇವನೆಯಿಂದಾಗಿ ಸೋಂಕಿನ ಸಮಸ್ಯೆಯನ್ನು ದೂರವಿಡಬಹುದು. ಮೂತ್ರನಾಳದ ಸೋಂಕು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುವಂತಹ ಸಮಸ್ಯೆಗಳು. ಈ ಲೇಖನದಲ್ಲಿ ನೀಡಿರುವಂತಹ ಆಹಾರ ಸೇವನೆ ಮಾಡಿದರೆ ಆಗ ನಿಮ್ಮ ಗುಲಾಬಿ ಬಣ್ಣದ ಮಹಿಳೆಯು ತುಂಬಾ ಆರೋಗ್ಯ ಮತ್ತು ತಾಜಾವಾಗಿರುವಳು. ಮಹಿಳೆಯರು ಯೋನಿ ಆರೋಗ್ಯ ಕಾಪಾಡಲು ಸೇವಿಸಬೇಕಾದ ಆಹಾರಗಳ ಬಗ್ಗೆ ತಿಳಿಯಿರಿ.....

ಮೊಸರು

ಮೊಸರು

ನಿಮ್ಮ ಆಹಾರ ಕ್ರಮದಲ್ಲಿ ಮೊಸರು ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಸೋಂಕಿನ ವಿರುದ್ಧ ಹೋರಾಡುವುದು. ಇದರಿಂದ ಆರೋಗ್ಯಕರ ಪಿಎಚ್ ಮಟ್ಟ ಸಮತೋಲನದಲ್ಲಿಡಲು ನೆರವಾಗುವುದು. ಅಷ್ಟೇ ಅಲ್ಲದೆ ಮೊಸರಿನ ಸೇವನೆಯು ಯೋನಿಯ ದುರ್ವಾಸನೆಯನ್ನು ನಿಯ೦ತ್ರಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಮೊಸರು lactobacillus ನ ಅ೦ಶವನ್ನು ಅಧಿಕ ಪ್ರಮಾಣದಲ್ಲಿ ಹೊ೦ದಿದ್ದು, ಇದು ಯೋನಿಯಲ್ಲಿನ pH ನ ಮಟ್ಟವನ್ನು ಕಾಪಿಟ್ಟುಕೊಳ್ಳಲು ಸಹಕರಿಸುತ್ತದೆ. ನೀವು ಮೊಸರನ್ನು ಮುಲಾಮಿನ೦ತೆ ನಿಮ್ಮ ಯೋನಿಯ ಮೇಲೆ ಹಚ್ಚಿಕೊಳ್ಳಬಹುದು. ಹತ್ತಿಯ೦ತಹ ಮೃದುವಾದ ವಸ್ತುವನ್ನು ನೀರಿನಿ೦ದ ತೆಳುವಾಗಿಸಿದ ಮೊಸರಿನಲ್ಲಿ ಅದ್ದಿ ನ೦ತರ ಈ ವಸ್ತುವನ್ನು ನಿಮ್ಮ ಯೋನಿಯೊಳಗೆ 5 ನಿಮಿಷಗಳ ಕಾಲ ಇರಗೊಡಿರಿ. ತದನ೦ತರ ಯೋನಿಯನ್ನು ತಣ್ಣಗಿನ ನೀರಿನಿ೦ದ ಸರಿಯಾಗಿ ತೊಳೆಯಿರಿ.

ಕ್ರಾನ್ ಬೇರಿಸ್

ಕ್ರಾನ್ ಬೇರಿಸ್

ಒಂದು ಲೋಟ ಕ್ರಾನ್ ಬೇರಿಸ್ ಜ್ಯೂಸ್ ಕುಡಿದರೆ ಅದು ಯೋನಿಗೆ ತುಂಬಾ ಒಳ್ಳೆಯದು. ಇದರಲ್ಲಿ ಇರುವಂತಹ ಆಮ್ಲೀಯ ಅಂಶಗಳು ಮೂತ್ರನಾಳದ ಸೋಂಕು ತಡೆಗಟ್ಟುವುದು ಮತ್ತು ಆರಾಮ ನೀಡುವುದು.

ಅನನಾಸು

ಅನನಾಸು

ಸಂತಾನೋತ್ಪತ್ತಿಯ ಅಂಗಕ್ಕೆ ಅನನಾಸು ಮತ್ತೊಂದು ಆರೋಗ್ಯಕರ ಆರೋಗ್ಯವಾಗಿದೆ. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ದುರ್ವಾಸನೆ ದೂರವಿಡುವುದು ಮತ್ತು ಬೇಸಿಗೆಯಲ್ಲಿ ತಾಜಾವಾಗಿಡುವುದು.

ಸರಿಯಾಗಿ ನೀರನ್ನು ಕುಡಿಯಿರಿ

ಸರಿಯಾಗಿ ನೀರನ್ನು ಕುಡಿಯಿರಿ

ಸರಿಯಾಗಿ ನೀರನ್ನು ಕುಡಿಯುವುದು ಒ೦ದು ಅತ್ಯುತ್ತಮ ಉಪಾಯ. ಪ್ರತಿದಿನ ಕನಿಷ್ಟ ಪಕ್ಷ 8 ರಿ೦ದ 10 ಲೋಟಗಳಷ್ಟಾದರೂ ನೀರನ್ನು ಕುಡಿಯಬೇಕು. ನೀರು ಸಹಜವಾದ ರೀತಿಯಲ್ಲಿ ಹಾನಿಕಾರಕ ವಿಷಪದಾರ್ಥಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ನಿಮ್ಮ ದೇಹದಿ೦ದ ಹೊರಹಾಕುತ್ತವೆ ಅ೦ತೆಯೇ ನಿಮ್ಮ ಚಯಾಪಚಯ ಕ್ರಿಯೆಯನ್ನೂ ಸಹ ಸುಧಾರಿಸುತ್ತದೆ. ನಿಮ್ಮ ದೇಹದ ಹೆಚ್ಚುವರಿ ಸಕ್ಕರೆಯ ಅ೦ಶವನ್ನೂ ಸಹ ನೀರು ಸ್ವಚ್ಚಗೊಳಿಸಲು ನೆರವಾಗುತ್ತದೆ.

ಮೆಂತೆ ನೀರು

ಮೆಂತೆ ನೀರು

ಎರಡು ಚಮಚಗಳಷ್ಟು ಮೆ೦ತೆ ಕಾಳುಗಳನ್ನು ಒ೦ದು ಲೋಟದಷ್ಟು ನೀರಿನಲ್ಲಿ ಒ೦ದು ರಾತ್ರಿ ನೆನೆಸಿಡಿರಿ. ಮಾರನೆಯ ದಿನ, ಬೆಳಗ್ಗಿನ ಉಪಹಾರವನ್ನು ಸೇವಿಸುವ ಮೊದಲು ಈ ನೀರನ್ನು ಕುಡಿಯಿರಿ. ಈ ಪರಿಹಾರ ಕ್ರಮವನ್ನು ಮು೦ದಿನ 2 ವಾರಗಳ ಕಾಲ ಮು೦ದುವರಿಸಿರಿ. ಮಹಿಳೆಯರ ವಿಷಯದಲ್ಲ೦ತೂ ಮೆ೦ತೆಯ ನಿಯಮಿತ ಉಪಯೋಗವು ಬಹಳ ಒಳ್ಳೆಯದು ಎ೦ಬುದನ್ನು ಸಾಬೀತುಪಡಿಸುತ್ತದೆ. ಏಕೆ೦ದರೆ, ಅದು ಸ್ತೀಯ ಶರೀರದ "ಸರಿಯಾದ ಹಾರ್ಮೋನುಗಳ ಮಟ್ಟ" ವನ್ನು ಕಾಪಾಡುತ್ತದೆ ಮತ್ತು ಅವರ ಋತುಚಕ್ರಗಳನ್ನು ನಿಯಮಿತಗೊಳಿಸುತ್ತದೆ.

ನೆನಪಿಡಿ ಟಾಲ್ಕಂ ಪೌಡರನ್ನು ಲೇಪಿಸುವುದು

ನೆನಪಿಡಿ ಟಾಲ್ಕಂ ಪೌಡರನ್ನು ಲೇಪಿಸುವುದು

ನಿಮ್ಮ ಜನನಾಂಗದ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವ ಭರದಲ್ಲಿ ಟಾಲ್ಕಂ ಪೌಡರ್, ಬೇಬಿ ಪೌಡರ್ ಅಥವಾ ಇನ್ನಿತರ ಯಾವುದೇ ಉತ್ಪನ್ನಗಳನ್ನು ಬಳಸುವುದು ಅಪಾಯಕಾರಿಯಲ್ಲ. ಆದರೆ ಈ ಅಭ್ಯಾಸವು ಕಾಲ ಕ್ರಮೇಣ ಮುಂದೆ ಸಂಭವಿಸಬಹುದಾದ ಗರ್ಭಾಶಯದ ಕ್ಯಾನ್ಸರ್‌ನ ಸಾಧ್ಯತೆಯನ್ನು ಶೇ.30 ರಷ್ಟು ಹೆಚ್ಚಿಸುತ್ತದೆ ಎಂದು ಅಮೆರಿಕನ್ ಅಸೋಸಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್ ಸಂಸ್ಥೆಯವರು 2011ರಲ್ಲಿ ನಡೆಸಿದ ವಾರ್ಷಿಕ ಸಮಾವೇಶದಲ್ಲಿ ಪ್ರಸ್ತುತ ಪಡಿಸಲಾದ ಹೊಸ ಅಧ್ಯಯನದಲ್ಲಿ ದೃಢಪಟ್ಟಿದೆ. ಪ್ರತಿನಿತ್ಯ ಇವುಗಳನ್ನು ಬಳಸುವುದರಿಂದಾಗಿ ನಿಮಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಎರಡರಿಂದ ಒಮ್ಮೊಮ್ಮೆ ಮೂರು ಪಟ್ಟು ಸಹ ಅಧಿಕವಾಗುತ್ತದೆ. ಒಂದೊಮ್ಮೆ ನಿಮ್ಮ ಜನನಾಂಗದ ಬಳಿ ನಿಮಗೆ ಅಧಿಕ ಬೆವರು ಬರುತ್ತಿದ್ದರೆ, ಹತ್ತಿಯ ಒಳ ಉಡುಪನ್ನು ಧರಿಸಿ. ಆಗಾಗ ಅದನ್ನು ಬದಲಾಯಿಸುತ್ತ ಇರಿ. ಆದಷ್ಟು ಬಿಗಿಯಾದ

ಪ್ಯಾಂಟ್‍ಗಳನ್ನು ಧರಿಸಬೇಡಿ. ಜೊತೆಗೆ ರಾತ್ರಿಯ ಹೊತ್ತು ಕಮಾಂಡೊ( ಜನನಾಂಗ ಭಾಗಕ್ಕೆ ಗಾಳಿಯಾಡುವಂತೆ ಮಾಡುವುದು) ಆಗುವುದು ಒಳಿತು.

ಕಡು ಚಾಕಲೇಟ್

ಕಡು ಚಾಕಲೇಟ್

ಕಡು ಚಾಕಲೇಟ್ ಗಳು ಕೇವಲ ಹೃದಯಕ್ಕೆ ಮಾತ್ರವಲ್ಲದೆ ಇದು ಸಂತಾನೋತ್ಪತ್ತಿಯ ಅಂಗಕ್ಕೂ ಒಳ್ಳೆಯದು. ಇದು ತೇವಾಂಶವನ್ನು ನೀಡುವುದು.

ವಿಟಮಿನ್ ಸಿ ಆಹಾರಗಳು

ವಿಟಮಿನ್ ಸಿ ಆಹಾರಗಳು

ವಿಟಮಿನ್ ಸಿ ಇರುವಂತಹ ಪೇರಳೆ, ಅನನಾಸು, ಸ್ಟ್ರಾಬೆರಿ ಇತ್ಯಾದಿ ಸೇವನೆ ಮಾಡಿದರೆ ಶಿಲೀಂಧದಿಂದ ಉಂಟಾಗುವ ಸೋಂಕನ್ನು ತಡೆಯಬಹುದು.

ಮೆಣಸು

ಮೆಣಸು

ಪ್ರಚೋದನೆ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆಯಾ? ಹಾಗಾದರೆ ನೀವು ಹೆಚ್ಚಿನ ಮೆಣಸನ್ನು ಆಹಾರಕ್ಕೆ ಸೇರಿಸಿಕೊಳ್ಳಿ. ಕ್ಯಾಪ್ಸಿಕಂ(ದೊಣ್ಣೆ ಮೆಣಸು) ರಕ್ತ ಸಂಚಾರವನ್ನು ಉತ್ತಮಗೊಳಿಸುವುದು ಮತ್ತು ನರಗಳನ್ನು ಉತ್ತೇಜಿಸುವುದು.

ಸೋಯಾ

ಸೋಯಾ

ಸೋಯಾದಲ್ಲಿರುವಂತಹ ಫೈಟೊಸ್ಟ್ರೋಜನ್ ಗಳು ಋತುಬಂಧದ ಬಳಿಕ ನಿಮ್ಮ ಯೋನಿಯನ್ನು ತೇವಾಂಶದಿಂದ ಇಡುವುದು. ಇದು ಯೋನಿಯ ಆರೋಗ್ಯಕ್ಕೆ ತುಂಬಾ ಉತ್ತಮ ಆಹಾರವಾಗಿದೆ.

ಅಗಸೆ ಬೀಜಗಳು

ಅಗಸೆ ಬೀಜಗಳು

ಇದರಲ್ಲಿ ಕೂಡ ಸತುವಿನ ಅಂಶವಿದ್ದು, ಯೋನಿಯ ಆರೋಗ್ಯಕ್ಕೆ ಒಳ್ಳೆಯದು. ಅಗಸೆ ಬೀಜಗಳನ್ನು ನೀರಿನಲ್ಲಿ ನೆನೆಸಿಡಬೇಕು ಮತ್ತು ಇದರ ನೀರು ಕುಡಿಯಬೇಕು ಮತ್ತು ಬೀಜಗಳನ್ನು ಜಗಿಯುವುದರಿಂದ ಹೆಚ್ಚಿನ ಆರೋಗ್ಯ ಲಾಭಗಳು ಸಿಗುವುದು.

ಗೆಣಸು

ಗೆಣಸು

ಯೋನಿಯ ಆರೋಗ್ಯಕ್ಕೆ ಪ್ರಮುಖ ಆಹಾರವೆಂದರೆ ಅದು ಗೆಣಸು. ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಇದ್ದು. ಇದು ಗರ್ಭಾಶಯದ ಗೋಡೆಯ ಆರೋಗ್ಯ ಕಾಪಾಡುವುದು.

ಬೀಜಗಳು

ಬೀಜಗಳು

ಕುಂಬಳಕಾಯಿ ಬೀಜದಲ್ಲಿ ಇರುವಂತಹ ಸತುವಿನ ಅಂಶವು ಋತುಚಕ್ರವನ್ನು ಸಾಮಾನ್ಯ ವಾಗಿರಿಸುವುದು ಮತ್ತು ತಿಂಗಳ ಸಮಯದಲ್ಲಿ ಹಾರ್ಮೋನ್ ಗಳನ್ನು ನಿಯಂತ್ರಣದಲ್ಲಿ ಇಡುವುದು. ಇದರಿಂದ ಯೋನಿಯು ಆರೋಗ್ಯವಾಗಿರುವುದು.

ನೆನೆಸಿರುವ ಬಾದಾಮಿ

ನೆನೆಸಿರುವ ಬಾದಾಮಿ

ಜಜ್ಜಿರುವ ಅಥವಾ ನೆನೆಸಿರುವ ಬಾದಾಮಿಯು ನಿಮ್ಮ ಸಂತಾನೋತ್ಪತ್ತಿ ಅಂಗಕ್ಕೆ ತುಂಬಾ ಒಳ್ಳೆಯದು. ಬಾದಾಮಿಯಲ್ಲಿರುವ ಕೆಲವೊಂದು ಗುಣಗಳು ಯುಟಿಐ ತಡೆಯುವುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಯೋನಿಯ ಆರೋಗ್ಯಕ್ಕೆ ನೆರವಾಗುವುದು. ನಿಮ್ಮ ಆಹಾರದಲ್ಲಿ ಜಜ್ಜಿದ ಅಥವಾ ಪೇಸ್ಟ್ ಮಾಡಿದ ಬೆಳ್ಳುಳ್ಳಿ ಬಳಸಿಕೊಳ್ಳಿ. ಅಷ್ಟೇ ಅಲ್ಲದೆ ಯೋನಿಯ ದುರ್ವಾಸನೆಯನ್ನು ಶಮನ ಮಾಡುವುದರಲ್ಲಿ ಬೆಳ್ಳುಳ್ಳಿ ಉಪಯುಕ್ತವಾಗಿದೆ. ಕೆಲವು ತಾಜಾ ಬೆಳ್ಳುಳ್ಳಿಗಳನ್ನು ಜಜ್ಜಿ ಅದನ್ನು ಪೇಸ್ಟ್ ನ ರೂಪದಲ್ಲಿ ಸಿದ್ಧಪಡಿಸಿಟ್ಟುಕೊಳ್ಳಿರಿ ಮತ್ತು ಅದನ್ನು ನಿಮ್ಮ ಯೋನಿಯ ಗೋಡೆಗಳ ಮೇಲೆ ಲೇಪಿಸಿಕೊಳ್ಳಿರಿ. ಬೆಳ್ಳುಳ್ಳಿಯು ಒ೦ದು ಪ್ರಬಲವಾದ ಫ೦ಗಸ್ ಪ್ರತಿಬ೦ಧಕ ಮತ್ತು ಸೂಕ್ಷ್ಮಾಣು ಪ್ರತಿಬ೦ಧಕವಾಗಿದ್ದು, ಯೋನಿಯ ದುರ್ವಾಸನೆಗೆ ಕಾರಣವಾದ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

ಹಣ್ಣುಗಳು

ಹಣ್ಣುಗಳು

ನಿಮ್ಮ ಆಹಾರ ಕ್ರಮಕ್ಕೆ ಹಲವಾರು ರೀತಿಯ ಹಣ್ಣುಗಳನ್ನು ಸೇರಿಸಿಕೊಳ್ಳಿ. ಹಣ್ಣುಗಳಲ್ಲಿನ ರಸವು ತಾಜಾವಾಗಿಡುವುದು ಮತ್ತು ತೊಡೆಸಂಧುಗಳಲ್ಲಿ ಅತಿಯಾಗಿ ಬೆವರುವುದನ್ನು ತಡೆದು ಸೋಂಕನ್ನು ದೂರವಿಡುವುದು. ತರಕಾರಿಗಳಲ್ಲಿರುವ ಕೆಲವೊಂದು ಅಂಶಗಳು ಜನನೇಂದ್ರೀಯವನ್ನು ಆರೋಗ್ಯವಾಗಿಡುವುದು. ಯೋನಿ ಒಣಗುವ ಮತ್ತು ತುರಿಕೆಯ ಸಮಸ್ಯೆಗೆ ಹಸಿರೆಲೆ ತರಕಾರಿಗಳನ್ನು ಬಳಸಿ.

English summary

Eat These Foods for A Healthy Vagina

The other most important organ in your body apart from your heart is your vagina. This reproductive organ helps you in many ways possible, therefore it is your duty to look after it with love and care. There are a list of healthy foods to consume in order to keep your vagina healthy. Foods like yogurt have good bacteria which fight any infections in the vagina. Here are some of the most healthy foods every woman must consume to keep the vagina healthy, take a look at these must have foods to add in your daily diet.
X
Desktop Bottom Promotion