Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 19 (March 19 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನವು ಸಮಸ್ಯೆಗಳಿವೆ. ಈ ದಿನ ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಬಹು ಸಮಯದ ನಿಮ್ಮ ಬಯಕೆಯೊಂದನ್ನು ಇಂದು ಈಡೇರಿಸಿಕೊಳ್ಳುವ ನಿರೀಕ್ಷೆ ಕೈ ತಪ್ಪಬಹುದು. ದಿನದ ಅಂತ್ಯದಲ್ಲಿ ನೆಮ್ಮದಿಯ ವಾತಾವರಣ ಇದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ಶುಭವಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆಪ್ತರ, ಸಂಬಂಧಿಕರ ಭೇಟಿಯಿಂದ ಸಂತಸವಿದೆ. ದಿನದ ಅಂತ್ಯದಲ್ಲಿ ಧನಲಾಭವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಅನುಕೂಲಕರ ದಿನ. ಆಧ್ಯಾತ್ಮಿಕ ವಿಚಾರವಾಗಿ ನಿಮಗೆ ಬಹಳ ಪ್ರಸಕ್ತ ದಿನ. ಸಭೆ ಸಮಾರಂಭಗಳಲ್ಲಿ ಇಂದು ಭಾಗಿಯಾಗಬಹುದು. ಹಲವರಿಗೆ ವಿಶ್ರಾಂತಿಯ ದಿನವಾಗಿರಲಿದೆ. ದಾಂಪತ್ಯದಲ್ಲಿ ನೆಮ್ಮದಿಯ ದಿನ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಸಂತಸದ ದಿನ. ಕೆಲಸಗಳಲ್ಲಿ ಧನಾತ್ಮಕ ವಿಚಾರಗಳಿವೆ. ನಿಮಗೆ ಸೇರಬೇಕಿದ್ದ ವಸ್ತುವೊಂದು ಕೈ ಸೇರಲಿದೆ. ಪ್ರಮಾಣಿಕ ಪ್ರಯತ್ನದಿಂದ ನಿಮಗೆ ಶುಭವಾಗುವುದು.
ಸಿಂಹ ರಾಶಿ
ಸಿಂಹ ರಾಶಿ ಜನರಲ್ಲಿ ಈ ದಿನ ಅನುಕೂಲವಿದೆ. ನೀವು ಮಾಡುವ ಕೆಲಸಗಳಲ್ಲಿ ಹೆಚ್ಚಿನ ಫಲಿತಾಂಶ ಪಡೆಯಲಿದ್ದೀರಿ. ಮನಸ್ಸಿಗೆ ನೆಮ್ಮದಿ ಇರಲಿದೆ. ಹಣ ಒಲಿದು ಬರುವ ದಿನ. ನಿಮಗೆ ಹಣಕಾಸಿನ ಒತ್ತಡ ಇರಬಹುದು. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ಇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಮಿಶ್ರಫಲವಿದೆ. ಪ್ರಯಾಣ ಮಾಡುವಿರಿ. ಮನೆಯ ವಾತಾವರಣವು ನೆಮ್ಮದಿಯಿಂದ ಕೂಡಿರಲಿದೆ. ಆರ್ಥಿಕ ಸಮಸ್ಯೆಗೆ ಪರಿಹಾರ ಪಡೆಯಲಿದ್ದೀರಿ. ಬಹಳಷ್ಟು ಹಣ ಉಳಿತಾಯಕ್ಕೆ ಇಡುವ ಮನಸ್ಸು ಮಾಡಬಹುದು.
ತುಲಾ ರಾಶಿ
ನೀವಿಂದು ದೇವಾಲಯ ಭೇಟಿಯಂತಹ ಕೆಲಸದಲ್ಲಿ ಭಾಗಿಯಾಗಬಹುದು. ಮನೆಯ ಹೊರಗಿನ ಕೆಲಸದಿಂದ ಆಯಾಸಕ್ಕೆ ತುತ್ತಾಗಬಹುದು. ವಾಹನ ವಿಚಾರದಲ್ಲಿ ಎಚ್ಚರ. ಆಪ್ತರ ಭೇಟಿಯಾಗಬಹುದು. ಅಮೂಲ್ಯ ವಸ್ತುಗಳನ್ನು ಖರೀದಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನ ಪ್ರಯಾಣಗಳಿವೆ. ನೀವು ಬಹಳ ದಿನದಿಂದ ಮಾಡಬೇಕಿದ್ದ ಕೆಲಸವನ್ನು ಈ ಸಮಯದಲ್ಲಿ ಪೂರ್ಣ ಮಾಡುವಿರಿ. ಯಾರೊಂದಿಗಾದರು ಹಣಕಾಸಿನ ತಗಾದೆಗಳಿದ್ದರೆ ಇಂದು ಬಗೆಹರಿಸಿಕೊಳ್ಳಿ.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನ ಪ್ರಯತ್ನಗಳಿಗೆ ಫಲಿತಾಂಶ ಸಿಗುವ ದಿನ. ಮನೆಯಲ್ಲಿ ಶುಭ ಗಳಿಗೆಗೆ ಸಾಕ್ಷಿಯಾಗಲಿದ್ದೀರಿ. ಆಪ್ತರ ಭೇಟಿಯಿಂದ ನೆಮ್ಮದಿ ಇದೆ. ಪ್ರಯಾಣ ಮಾಡುವಿರಿ. ಗೃಹಿಣಿಯರಲ್ಲಿ ಧನಲಾಭ ನೋಡಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಪ್ರಯಾಣ ಮಾಡಬೇಕಾಗುತ್ತದೆ. ದಾಂಪತ್ಯ ಸಂಬಂಧಿತ ವಿಚಾರದಲ್ಲಿ ನೆಮ್ಮದಿ ಇದೆ. ಯಾರಿಗಾದರು ಹಣ ನೀಡುವುದು ಬಾಕಿ ಇದ್ದರೆ ಈ ದಿನ ನೀಡುವುದು ಉತ್ತಮ. ವ್ಯಾಪಾರಿಗಳಿಗೆ ಲಾಭದಾಯಕವಾಗಿರಲಿದೆ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಉತ್ತಮ ದಿನ. ನಿಮ್ಮ ಆಧ್ಯಾತ್ಮಿಕ ಚಿಂತನೆಗಳು ಮತ್ತಷ್ಟು ಬಲವಾಗುತ್ತವೆ. ಯಾರ ಬಳಿಯಾದರು ನೀವು ಹಣ ಪಡೆದಿದ್ದರೆ ಮರಳಿ ಕೇಳುವ ಒತ್ತಡವಿದೆ. ಹೊಸ ಆರಂಭಗಳಿಗೆ ಇಂದು ಶುಭದಿನ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ದಿನ ಬಹಳ ಅನುಕೂಲ. ವ್ಯಾಪಾರ ಸಂಬಂಧಿತ ವಿಚಾರವಾಗಿ ನಿಮ್ಮಲ್ಲಿ ಶುಭವಿದೆ. ಪಂಚೇಂದ್ರಿಯ ಸಂಬಂಧಿತ ಸಮಸ್ಯೆಗಳ ಎದುರಿಸಿದ್ದರೆ ಈ ದಿನ ಅದರಿಂದ ಮುಕ್ತಿ ಪಡೆಯಬಹುದು. ಸವಾಲುಗಳನ್ನು ಎದುರಿಸುವುದು ಉತ್ತಮ.



Click it and Unblock the Notifications
