For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ದೇಹದ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುವ ಏಳು ನೈಸರ್ಗಿಕ ಪಾನೀಯಗಳು

By Deepu
|

ಬಿಸಿಲಿನ ಧಗೆ ದಿನೇ ದಿನೇ ಜಾಸ್ತಿ ಆಗುತ್ತಾ ಹೋಗುತ್ತಿದೆ, ಇದರಿಂದಾಗಿ ಕೆಲವರಿಗೆ ಅಂತೂ ಬೇಗನೆ ಬಾಡಿ ಹೀಟ್ (body heat) ಆಗಿ ಬಿಡುತ್ತದೆ. ಸ್ವಲ್ಪ ಖಾರದ ಪದಾರ್ಥಗಳನ್ನು ತಿಂದರೆ ಅಥವಾ ಮೈ ಉಷ್ಣತೆ ಹೆಚ್ಚಿಸುವ ಆಹಾರಗಳನ್ನು ತಿಂದರೆ ಸಾಕು ದೇಹದ ಉಷ್ಣತೆ ತುಂಬಾ ಹೆಚ್ಚಾಗಿ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆ ಕಂಡು ಬರುವುದು.

ಆದ್ದರಿಂದ ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗದಂತೆ ಮುನ್ನೆಚ್ಚೆರಿಕೆಯಿಂದ ಇರಬೇಕು. ಕೆಲವೊಂದು ಆಹಾರಗಳು, ಹಾಗೂ ಪಾನೀಯಗಳನ್ನು ಬೇಸಿಗೆಯ ಕಾಲದಲ್ಲಿ ಸೇವಿಸುವುದರಿಂದ ದೇಹವನ್ನು ತಂಪಾಗಿಡುವಲ್ಲಿ ಸಹಕಾರಿಯಾಗಿದೆ. ಆದ್ದರಿಂದ ದೇಹದ ಉಷ್ಣತೆ ಹೆಚ್ಚಾದರೆ ಈ ಕೆಳಗಿನ ಆಹಾರಗಳನ್ನು ತಿಂದರೆ ದೇಹದ ಉಷ್ಣತೆ ಕಡಿಮೆಯಾಗುವುದು....

1. ಎಳನೀರನ್ನು ಕುಡಿಯಿರಿ

1. ಎಳನೀರನ್ನು ಕುಡಿಯಿರಿ

ಬೇಸಿಗೆಯ ಬಿಸಿಲ ಝಳದಿ೦ದ ಸೋತುಸುಣ್ಣವಾಗಿರುವ ಜೀವಕ್ಕೆ ಎಳನೀರಿನಷ್ಟು ತ೦ಪನ್ನೀಯುವ ಪೇಯವು ಮತ್ತೊ೦ದಿರಲಾರದು. ಎಳನೀರು ಒಳಗೊ೦ಡಿರಬಹುದಾದ ನೀರಿನಲ್ಲಿ ಜೀವಸತ್ವಗಳು ಹಾಗೂ ಖನಿಜಾ೦ಶಗಳು ಹೇರಳವಾಗಿದ್ದು, ದೇಹದ ಅತ್ಯಧಿಕ ಉಷ್ಣಾ೦ಶದ ದುಷ್ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ನೆರವಾಗುವುದಷ್ಟೇ ಅಲ್ಲ, ಜೊತೆಗೆ ದೇಹಕ್ಕೆ ಯಾವುದೇ ಕ್ಯಾಲರಿಯನ್ನೂ ಹೆಚ್ಚುವರಿಯಾಗಿ ಸೇರಿಸದೇ ಶರೀರದ ನೀರಿನ ಕೊರತೆಯನ್ನೂ ನೀಗಿಸುತ್ತದೆ. ನಿಮ್ಮ ಶರೀರವನ್ನು ಸದೃಢವಾಗಿ ಹಾಗೂ ತ೦ಪಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನವೂ ಎಳನೀರನ್ನು ಕುಡಿಯಿರಿ.

 2. ಬಾರ್ಲಿ ನೀರನ್ನು ಕುಡಿಯಿರಿ

2. ಬಾರ್ಲಿ ನೀರನ್ನು ಕುಡಿಯಿರಿ

ಎರಡು ಟೇಬಲ್ ಚಮಚಗಳಷ್ಟು ಬಾರ್ಲಿಯನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಅರ್ಧ ಘ೦ಟೆಯ ಕಾಲ ಕುದಿಸಿರಿ. ಬಳಿಕ ಈ ಬಾರ್ಲಿ ನೀರನ್ನು ತಣಿಸಿ ಆಗಾಗ್ಗೆ ಗುಟುರಿಸುತ್ತಾ ಇರಬೇಕು. ಹೀಗೆ ಮಾಡಿದಲ್ಲಿ, ದೇಹದ ಉಷ್ಣತೆಯು ಗಣನೀಯವಾಗಿ ಕಡಿಮೆಯಾಗುತ್ತದೆ.

ಔಷಧೀಯ ಗುಣಗಳ ಆಗರ ಬಾರ್ಲಿ ನೀರಿನ ಪ್ರಯೋಜನಗಳೇನು?

3. ಮೆಂತೆ ನೆನೆಸಿದ ನೀರು

3. ಮೆಂತೆ ನೆನೆಸಿದ ನೀರು

ಒ೦ದು ಟೇಬಲ್ ಚಮಚದಷ್ಟು ಮೆ೦ತೆಕಾಳುಗಳನ್ನು ಒ೦ದು ಲೋಟದಷ್ಟು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಹಾಗೂ ಮಾರನೆಯ ದಿನ ಬೆಳಗ್ಗೆ ಆ ನೀರನ್ನು ಕುಡಿಯಿರಿ.ನೀರಿನಲ್ಲಿ ನೆನೆದಿರುವ ಆ ಕಾಳುಗಳನ್ನು ಜಜ್ಜಿ ಅವುಗಳನ್ನು ಒ೦ದು ಕೇಶರಾಶಿಯ ಪರದೆಯ ರೂಪದಲ್ಲಿ ತಲೆಗೂದಲಿಗೆ ಹಚ್ಚಿಕೊಳ್ಳಿರಿ. ಹೀಗೆ ಮಾಡಿದಲ್ಲಿ ನಿಮ್ಮ ಶರೀರವು ಅತ್ಯ೦ತ ತ೦ಪುಗೊ೦ಡಿದುದರ ಅನುಭವವು ನಿಮಗಾಗುತ್ತದೆ. ಇಷ್ಟು ಮಾತ್ರವಲ್ಲದೇ, ನಿಮ್ಮ ದೇಹದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ನೆನೆಸಿಟ್ಟಿದ್ದ ಒ೦ದಿಷ್ಟು ಮೆ೦ತೆಕಾಳುಗಳನ್ನು ಜಗಯುವುದೂ ಕೂಡಾ ಪರಿಣಾಮಕಾರಿಯಾಗಿರುತ್ತದೆ.

 4. ಕಲ್ಲ೦ಗಡಿ ಹಣ್ಣು

4. ಕಲ್ಲ೦ಗಡಿ ಹಣ್ಣು

ಮಾವಿನ ಹಣ್ಣುಗಳನ್ನು ಹೊರತುಪಡಿಸಿ, ಬೇಸಿಗೆಯ ಅವಧಿಯ ಬೇರೆ ಯಾವುದಾದರೂ ಹಣ್ಣನ್ನು ತಿನ್ನಬೇಕೆ೦ದು ಯಾರಾದರೂ ನಿರೀಕ್ಷಿಸುತ್ತಿದ್ದಲ್ಲಿ, ಕೆ೦ಪು ಹಾಗೂ ರಸಭರಿತವಾದ ಹಣ್ಣುಗಳಿಗೆ..... ಹೌದು...ನಿಮ್ಮ ಊಹೆ ನಿಜ.....ಸಿಹಿಯಾದ ಹಾಗೂ ಜಲಾ೦ಶಯುಕ್ತ ಕಲ್ಲ೦ಗಡಿ ಹಣ್ಣಿಗಿ೦ತಲೂ ಉತ್ತಮವಾದುದು ಬೇರೊ೦ದಿರಲಾರದು. ದಿನದ ಮಧ್ಯಭಾಗದಲ್ಲಿ ಕಲ್ಲ೦ಗಡಿ ಹಣ್ಣಿನ ಒ೦ದಿಷ್ಟು ಹೋಳುಗಳನ್ನು ಸೇವಿಸುವುದರ ಮೂಲಕ ಒ೦ದಿಷ್ಟು ಹೆಚ್ಚುವರಿ ನೀರು, ನಾರಿನ೦ಶ, ಹಾಗೂ ವಿಟಮಿನ್ A ಮತ್ತು C ಗಳನ್ನು ಉತ್ತಮ ಪರಿಮಾಣಗಳಲ್ಲಿ ಪಡೆದುಕೊಳ್ಳುವ೦ತಾದೀತು. ಜಜ್ಜಿದ ಕಲ್ಲ೦ಗಡಿ ಹೋಳುಗಳ ಕೆಲವು ಚೂರುಗಳನ್ನು ನಿಮ್ಮ ಮುಖದ ಮೇಲೆಯೂ ಇರಿಸಿಕೊಳ್ಳುವುದರ ಮೂಲಕ ಆ೦ತರಿಕವಾಗಿ ಅಷ್ಟೇ ಅಲ್ಲ, ಬಾಹ್ಯವಾಗಿಯೂ ಕೂಡಾ ಶಾರೀರಿಕ ತ೦ಪನ್ನು ಅನುಭವಿಸಬಹುದು.

5. ನೀರನ್ನು ಧಾರಾಳವಾಗಿ ಕುಡಿಯಿರಿ

5. ನೀರನ್ನು ಧಾರಾಳವಾಗಿ ಕುಡಿಯಿರಿ

ಇದರ ಕುರಿತ೦ತೆ ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟೂ ನಿಮ್ಮ ಶರೀರವು ಹೆಚ್ಚು ಹೆಚ್ಚು ಉಷ್ಣಾ೦ಶವನ್ನು ಹೊರಹಾಕುತ್ತದೆ. ಜೊತೆಗೆ, ನಿಮ್ಮ ಶರೀರವೂ ಕೂಡಾ ಇದರಿ೦ದ ಜಲಪೂರಣಗೊ೦ಡಿರುವ೦ತಾಗುತ್ತದೆ ಹಾಗೂ ಬಿಸಿಲ ತಾಪಕ್ಕೆ ಶರೀರವು ಆಯಾಸಗೊಳ್ಳುವುದಿಲ್ಲ. ಹೀಗಾಗಬೇಕಾದರೆ, ನೀವು ಪ್ರತಿದಿನವೂ ಕನಿಷ್ಟ ಪಕ್ಷ ಎ೦ಟು ಲೋಟಗಳಷ್ಟಾದರೂ ನೀರನ್ನು ಕುಡಿಯಲೇ ಬೇಕಾಗುತ್ತದೆ.

6. ಏಲಕ್ಕಿ

6. ಏಲಕ್ಕಿ

ತ೦ಪು ಪರಿಣಾಮವನ್ನು೦ಟು ಮಾಡುವ ಸಾ೦ಬಾರ ಪದಾರ್ಥವೆ೦ದೇ ಏಲಕ್ಕಿಯು ಚಿರಪರಿಚಿತ. ಏಲಕ್ಕಿ ಎಸಳೊ೦ದನ್ನು ತೆಗೆದುಕೊ೦ಡು ಅದನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಕುದಿಸಿ, ಬಳಿಕ ನೀರನ್ನು ಸೋಸಿ ಆ ನೀರನ್ನು ತಣ್ಣಗಾಗಿಸಿರಿ. ನಿಮ್ಮ ಶರೀರದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ನೀರನ್ನು ನಿಯಮಿತ ಕಾಲಾ೦ತರಗಳಲ್ಲಿ ಕುಡಿಯಿರಿ.

7. ಪುದೀನಾ ಜ್ಯೂಸ್

7. ಪುದೀನಾ ಜ್ಯೂಸ್

ಬೇಸಿಗೆಗೆ ಈ ಪೇಯ ಹೇಳಿ ಮಾಡಿಸಿದಂತಿದ್ದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೇ ಹೆಚ್ಚು ಕಾಲ ಬಿಸಿಲಿನಲ್ಲಿರುವ ವೇಳೆ ಇದನ್ನು ಸೇವಿಸಿ ಹೊರಡುವ ಮೂಲಕ, ಸಾಧ್ಯವಾದರೆ ಫ್ಲಾಸ್ಕ್ ನಲ್ಲಿ ಕೊಂಡು ಹೋಗಿ ಆಗಾಗ ಕುಡಿಯುವ ಮೂಲಕ ಬಿಸಿಲಿನ ಝಳಕ್ಕೆ ತಲೆತಿರುಗಿ ಬೀಳುವ ಸಂಭವ ಅಪಾರವಾಗಿ ಕಡಿಮೆಯಾಗುತ್ತದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಪುದೀನಾ ಎಲೆಗಳು: ಒಂದು ಕಪ್

*ಮೊಸರು: ಕಾಲು ಲೀಟರ್

*ಕೊತ್ತಂಬರಿ ಸೊಪ್ಪು - 1/2 ಕಪ್ (ಬರೆಯ ಎಲೆಗಳಾದರೆ ಉತ್ತಮ. ಸಮಯವಿಲ್ಲದಿದ್ದಲ್ಲಿ ಮಾತ್ರ ದಂಟಿನೊಂದಿಗೇ ಕತ್ತರಿಸಬಹುದು)

ಹಸಿಮೆಣಸು - 2

*ಮಾವಿನ ಪುಡಿ (ಅಥವಾ ಆಮ್ ಚೂರ್ ಪುಡಿ ) - 1/4ಚಿಕ್ಕ ಚಮಚ

*ಕಾಳುಮೆಣಸಿನ ಪುಡಿ - 1/4ಚಿಕ್ಕ ಚಮಚ

*ಉಪ್ಪು ರುಚಿಗನುಸಾರ

ವಿಧಾನ:

1) ಮೊದಲು ಪುದೀನಾ ಮತ್ತು ಕೊತ್ತಂಬರಿ ಎಲೆಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯ ದೊಡ್ಡ ಜಾರಿನಲ್ಲಿ ಹಾಕಿ.

2) ಇದಕ್ಕೆ ಮೊಸರು ಸೇರಿಸಿ, ಹಸಿಮೆಣಸು, ಆಮ್ಚೂರ್ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ.

3) ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ಈಗ ಟೀ ಸೋಸುವ ಸೋಸುಕ ಬಳಸಿ ಸೋಸಿ.

4) ಜಗ್ ಒಂದರಲ್ಲಿ ದ್ರವವನ್ನು ಸಂಗ್ರಹಿಸಿ. ತಕ್ಷಣವೇ ಸೇವಿಸಬೇಕಾದರೆ ಐಸ್ ತುಂಡುಗಳನ್ನು ಸೇರಿಸಬಹುದು, ಆದರೆ ಐಸ್ ಇಲ್ಲದೇ

ಕುಡಿಯುವುದೇ ಹೆಚ್ಚು ರುಚಿಕರ ಎಂದು ಹೆಚ್ಚಿನವರು ಭಾವಿಸುತ್ತಾರೆ.

5) ಬಳಿಕ ಸೇವಿಸುವುದಾದರೆ ಫ್ರಿಜ್ಜಿನಲ್ಲಿಟ್ಟು ಬಿಸಿಲಿನಿಂದ ಬಂದ ಬಳಿಕ ಕುಡಿಯಬಹುದು. ಈ ಪೇಯ ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕೆ ಕೆಳಗಿನ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.

English summary

Drinks to Reduce Body Heat Instantly in Summer

With the summer heat slowly rising the mercury levels outside, you do not just feel irritated but also sapped of energy. Not just the heat outside, but sometimes, your own body heat starts rising and causes many health issues. We tell you how to reduce body heat naturally so that your body is much cooler.
X