For Quick Alerts
ALLOW NOTIFICATIONS  
For Daily Alerts

  ಆರೋಗ್ಯ ಟಿಪ್ಸ್: ಗೋಡಂಬಿ ಸೇವಿಸಿದರೆ ದೇಹದ ತೂಕ ಇಳಿಸಬಹುದು!

  By Hemanth
  |

  ಗೋಡಂಬಿಯಲ್ಲಿ ಉನ್ನತ ಮಟ್ಟದ ಒಮೆಗಾ-3 ಅಲ್ಪಾ ಲಿನೊಲೆನಿಕ್ ಆಮ್ಲವಿದೆ ಮತ್ತು ಏಕಪರ್ಯಾಪ್ತ ಆಲಿರೀಕ್ ಆಮ್ಲವಿದೆ. ಇದನ್ನು ಹೊರತುಪಡಿಸಿ, ಇತರ ವಿವಿಧ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಗೋಡಂಬಿಯಲ್ಲಿದೆ. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಗೋಡಂಬಿಯಲ್ಲಿರುವ ಉನ್ನತ ಮಟ್ಟದ ಕ್ಯಾಲರಿಯಿಂದಾಗಿ ತೂಕ ಹೆಚ್ಚಿಸಬಹುದು. ಆದರೆ ಗೋಡಂಬಿಯು ತೂಕ ಕಳೆದುಕೊಳ್ಳಲು ನೆರವಾಗಲಿದೆ ಎಂದು ನಿಮಗೆ ತಿಳಿದಿದೆಯಾ? ಹೌದು, ಗೋಡಂಬಿಯಿಂದಲೂ ತೂಕ ಕಳೆದುಕೊಳ್ಳಬಹುದು. ಇದು ಹೇಗೆಂದು ನೀವು ಓದುತ್ತಾ ತಿಳಿಯಿರಿ.....

  ಗೋಡಂಬಿಯ ಆರೋಗ್ಯ ಲಾಭಗಳು

  ತೂಕ ಹೆಚ್ಚಿಸಲು ಗೋಡಂಬಿಯು ನೆರವಾಗುತ್ತದೆ ಎಂದಾದರೆ ಇದನ್ನು ಯಾಕೆ ಸೇವಿಸಬೇಕು? ಆದರೆ ಗೋಡಂಬಿಯಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಂಡು ನೀವು ಮುಂದುವರಿಯಿರಿ.

  *ಗೋಡಂಬಿಯಲ್ಲಿ ಆರೋಗ್ಯಕರ ಕೊಬ್ಬು ಇದ್ದು, ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು. ಇದರಲ್ಲಿರುವ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಹೃದಯವನ್ನು ಆರೋಗ್ಯವಾಗಿಡುವುದು.

  *ಗೋಡಂಬಿಯಲ್ಲಿರುವಂತಹ ಪ್ರೋಟೀನ್ ದಿನವಿಡಿ ನಿಮ್ಮ ದೇಹವು ಶಕ್ತಿಭರಿತವಾಗಿರುವಂತೆ ನೋಡಿಕೊಳ್ಳುವುದು.

  *ಗೋಡಂಬಿಯಲ್ಲಿ ವಿಟಮಿನ್ ಸಿ, ಥೈಮೇನ್, ವಿಟಮಿನ್ ಬಿ6, ಮ್ಯಾಂಗನೀಸ್, ಸತು, ತಾಮ್ರ, ಕಬ್ಬಿಣ ಮತ್ತು ಪೊಟಾಶಿಯಂ ಇದೆ.

  Cashews

  *ಹೆಚ್ಚಿನ ಪ್ರಮಾಣದಲ್ಲಿರುವ ಮೆಗ್ನೀಶಿಯಂ ಇದನ್ನೊಂದು ಆರೋಗ್ಯಕರ ಆಹಾರವನ್ನಾಗಿಸಿದೆ. ಇದು ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇಂದಿನ ಧಾವಂತದ ದಿನಗಳಲ್ಲಿ ಅಧಿಕ ರಕ್ತದೊತ್ತಡ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿರುವಾಗ ಗೋಡಂಬಿ ಒಂದು ಆಪದ್ಭಾಂಧವನಂತೆ ಕೆಲಸ ಮಾಡುತ್ತದೆ. ಗೋಡಂಬಿಯಲ್ಲಿರುವ ಉತ್ತಮ ಪ್ರಮಾಣದ ತಾಮ್ರ ಕೂದಲ ಹೊಳಪು ಮತ್ತು ಬಣ್ಣವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಕೂದಲು ನೆರೆಯಲು ತಾಮ್ರದ ಕೊರತೆ ಅಥವಾ ತಾಮ್ರವನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಕಡಿಮೆಯಾಗುವುದೇ ಕಾರಣ ಎಂದು ಇತ್ತೀಚೆಗೆ ತಿಳಿದುಬಂದಿದೆ.

  *ಗೋಡಂಬಿಯ ಉತ್ತಮ ಗುಣಗಳು ಇಷ್ಟೇ ಎಂದು ನಿಗದಿಪಡಿಸುವಂತಿಲ್ಲ. ಏಕೆಂದರೆ ಇದರಲ್ಲಿರುವ ಹಲವು ಪೋಷಕಾಂಶಗಳು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪೂರಕ ಎಂಬುದನ್ನು ದಿನಗಳೆದಂತೆ ಸಂಶೋಧನೆಗಳು ತಿಳಿಸುತ್ತಾ ಬರುತ್ತಿವೆ. ಅಂತೆಯೇ ಇದರಲ್ಲಿರುವ ಮೆಗ್ನೀಶಿಯಂ ನರವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಇನ್ನೊಂದು ವಿಶೇಷವೆಂದರೆ ಮೂಳೆಗಳಿಗೆ ಅಂಟಿಕೊಂಡಿರುವ ನರಗಳ ಗೋಡೆಗಳ ಮೂಲಕ ಕ್ಯಾಲ್ಸಿಯಂ ನರಗಳ ಒಳಭಾಗ ಪ್ರವೇಶಿಸುವುದನ್ನು ತಡೆಯುತ್ತದೆ.

  *ಒಂದು ವೇಳೆ ಕ್ಯಾಲ್ಸಿಯಂ ಮೂಳೆಗಳಿಂದ ಸಡಿಲವಾಗಿ ನರಗಳು ಹೀರಿಕೊಳ್ಳುವಂತಾದರೆ ನರಗಳು ಗಟ್ಟಿಯಾಗಿಬಿಡುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇತರ ದುಷ್ಪರಿಣಾಮಗಳನ್ನೂ ಹುಟ್ಟುಹಾಕುತ್ತದೆ. ಇದೇ ರೀತಿ ಸ್ನಾಯುಗಳೂ ಸೆಡೆತಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ ಮತ್ತು ಆರೋಗ್ಯಕ್ಕೆ ಅಗತ್ಯವಿರುವಷ್ಟೇ ಸಡಿಲತೆಯನ್ನು ಹೊಂದಲು ಸಾಧ್ಯವಾಗುತ್ತದೆ.

  Cashews

  *ಗೋಡಂಬಿಯಲ್ಲಿ ವಿಟಮಿನ್B5 (Pantothenic Acid), ವಿಟಮಿನ್ B-1(Thiamin), ರೈಬೋಫ್ಲೋವಿನ್, ವಿಟಮಿನ್ B6 (Pyridoxine) ಮೊದಲಾದ ವಿಟಮಿನ್ನುಗಳಿವೆ. ಇವೆಲ್ಲವೂ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿಯೇ ಇರುವುದು ಒಂದು ಹೆಗ್ಗಳಿಕೆ. ಈ ವಿಟಮಿನ್ನುಗಳು ದೇಹದಲ್ಲಿದ್ದರೆ homocystinuria (ದೇಹ ಅತೀವವಾಗಿ ಕೃಶವಾಗುವುದು), dermatitis (ಚರ್ಮರೋಗ), sideroblastic anemia (ಅಸ್ಥಿಮಜ್ಜೆಯಲ್ಲಿ ಕೆಂಪುರಕ್ತಕಣಗಳ ಜೊತೆಗೆ ನೀಲಿ ರಕ್ತಕಣಗಳೂ ಉತ್ಪತ್ತಿಯಾಗುವುದು) ಮೊದಲಾದ ರೋಗಗಳಿಂದ ದೂರವಿರುತ್ತದೆ.

  *ಗೋಡಂಬಿಯಲ್ಲಿರುವ ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ದೃಢತೆಯನ್ನು ಹೆಚ್ಚಿಸಲು ಸಕ್ಷಮವಾಗಿವೆ. ಹಾಲಿನಲ್ಲಿಯೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದರೂ ಕೇವಲ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಮೂಳೆಗಳಿಗೆ ದಕ್ಕಲು ಸಾಧ್ಯವಿಲ್ಲ. ಅದಕ್ಕೆ ಜೇನು ಸೇರಿಸಿದಾಗಲೇ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕೆಲಸವನ್ನು ಗೋಡಂಬಿ ನೇರವಾಗಿಯೇ ಮಾಡುತ್ತದೆ. ನಿತ್ಯವೂ ನಾಲ್ಕಾರು ಗೋಡಂಬಿಗಳನ್ನು ತಿನ್ನುತ್ತಾ ಬಂದರೆ ಮೂಳೆ ಮತ್ತು ಹಲ್ಲುಗಳು ಸದೃಢವಾಗಿರಲು ಸಾಧ್ಯವಾಗುತ್ತದೆ. ಅಲ್ಲದೇ ಗೋಡಂಬಿ ಒಸಡುಗಳಿಗೂ ಉತ್ತಮವಾಗಿದೆ.

  ಗೋಡಂಬಿ ಮತ್ತು ತೂಕ ಹೆಚ್ಚಳ

  ಒಂದು ಔನ್ಸ್(ಸುಮಾರು 30 ಗ್ರಾಂನಷ್ಟು) ಹಸಿ ಗೋಡಂಬಿಯಲ್ಲಿ 155 ಕ್ಯಾಲರಿ ಇದೆ. ಇದರಿಂದ ಗೋಡಂಬಿಯು ತೂಕ ಹೆಚ್ಚಿಸಲು ನೆರವಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ಇದನ್ನು ಸರಿಯಾದ ವಿಧಾನ ಮತ್ತು ಪ್ರಮಾಣದಲ್ಲಿ ಸೇವಿಸಬೇಕು. ಆರೋಗ್ಯ ತಜ್ಞರ ಪ್ರಕಾರ ಒಂದು ಔನ್ಸ್ ಮಿಶ್ರ ಬೀಜಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ಇದರಿಂದ ನಮ್ಮ ದೇಹಕ್ಕೆ ಅದರಲ್ಲಿ ಇರುವಂತಹ ಅಮೂಲ್ಯವಾದ ಆರೋಗ್ಯ ಲಾಭಗಳು ಸಿಗುವುದು.

  ಪೋಷಕಾಂಶ ತಜ್ಞರ ಪ್ರಕಾರ ಅತಿಯಾಗಿ ಸೇವಿಸದೆ ಇದ್ದರೆ ಗೋಡಂಬಿಯು ತೂಕ ಹೆಚ್ಚಿಸುವುದಿಲ್ಲ. ಗೋಡಂಬಿಯಲ್ಲಿರುವಂತಹ ಅತಿಯಾದ ಕ್ಯಾಲರಿಯಿಂದಾಗಿ ಗೋಡಂಬಿಯು ತೂಕ ಹೆಚ್ಚಿಸುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಇದನ್ನು ಇತರ ಕೆಲವು ಬೀಜಗಳಾದ ವಾಲ್ ನಟ್, ಬಾದಾಮಿ ಮತ್ತು ಒಣದ್ರಾಕ್ಷಿ ಜತೆಗೆ ಸೇವಿಸಿದರೆ ಆಗ ಗೋಡಂಬಿಯ ಪರಿಣಾಮವು ಕಡಿಮೆಯಾಗುವುದು. ಒಂದು ಔನ್ಸ್ ಗೋಡಂಬಿಯಲ್ಲಿ 4 ಗ್ರಾಂ ಪ್ರೋಟೀನ್ ಇದೆ. ಮಹಿಳೆಯೊಬ್ಬಳು ದಿನದಲ್ಲಿ ತೆಗೆದುಕೊಳ್ಳಬೇಕಾದ ಪ್ರೋಟೀನ್ ನ ಶೇ.10ರಷ್ಟಿದೆ. ಅಧಿಕ ಪ್ರೋಟೀನ್ ಇರುವ ಆಹಾರ ಸೇವನೆಯಿಂದ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ತೂಕ ಕಳೆದುಕೊಳ್ಳಲು ಸಹಕಾರಿ.

  Cashews

  ಆಹಾರ ಕ್ರಮದಲ್ಲಿ ಗೋಡಂಬಿ ಸೇರ್ಪಡೆ

  ಹುರಿದಿರುವಂತಹ ಗೋಡಂಬಿಗಳು, ಕರಿದು ಉಪ್ಪು ಹಾಕಿರುವಂತಹ ಗೋಡಂಬಿಗಿಂತ ತುಂಬಾ ಒಳ್ಳೆಯದು. ಕರಿದರೆ ಅದರಲ್ಲಿ ಇರುವಂತಹ ಕೊಬ್ಬು ಮತ್ತಷ್ಟು ಹೆಚ್ಚಾಗುವುದು. ಏಕ ಮತ್ತು ಬಹುಪರ್ಯಾಪ್ತ ಕೊಬ್ಬಿರುವ ಗೋಡಂಬಿಯು ಪ್ರಾಣಿಜನ್ಯ ಪ್ರೋಟೀನ್ ಮತ್ತು ಕೊಬ್ಬಿಗೆ ಒಳ್ಳೆಯ ಪರ್ಯಾಯ. ಪ್ರಾಣಿಜನ್ಯ ಕೊಬ್ಬು ಹಾಗೂ ಪ್ರೋಟೀನ್ ಗೆ ಗೋಡಂಬಿಯು ಒಳ್ಳೆಯದು ಮತ್ತು ಇದರಿಂದ ರುಚಿಕರ ತಿನಿಸುಗಳನ್ನು ತಯಾರಿಸಬಹುದು.

  ಈ ಮೂಲಕವಾಗಿ ನೀವು ತೂಕ ಕಳೆದುಕೊಳ್ಳುವುದು ಮಾತ್ರವಲ್ಲದೆ, ಹೃದಯಲ್ಲಿ ಜಮೆಯಾಗಿರುವ ಕೊಬ್ಬು ಮತ್ತು ಕೊಲೆಸ್ಟ್ರಾಲ್ ತಗ್ಗಿಸಬಹುದು. ನಿಮ್ಮ ಆಹಾರಕ್ರಮದಲ್ಲಿ ಗೋಡಂಬಿ ಸೇರಿಸಲು ಒಳ್ಳೆಯ ವಿಧಾನವೆಂದು ಒಂದು ಹಿಡಿ ಹಸಿ ಗೋಂಡಂಬಿ ಸೇವಿಸುವುದು. ಇದನ್ನು ನಿಮ್ಮ ಆಹಾರ ಅಥವಾ ಬೇರೆ ಯಾವುದೇ ತಿನಿಸಿನೊಂದಿಗೆ ಸೇರಿಸಬಹುದು. ಸಲಾಡ್, ಬೀನ್ಸ್, ಯಾವುದೇ ತಿಂಡಿ ಜತೆಗೆ ಸೇರಿಸಿಕೊಳ್ಳಿ.

  ತೀರ್ಮಾನ

  ಇತರ ಬೀಜಗಳಿಗೆ ಹೋಲಿಸಿದರೆ ಗೋಡಂಬಿಯು ತುಂಬಾ ಆರೋಗ್ಯಕಾರಿ, ವೈವಿಧ್ಯಮಯ ಮತ್ತು ವಿಭಿನ್ನ ಆಹಾರವಾಗಿದೆ. ಇದರಲ್ಲಿ ತುಂಬಿರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗೋಡಂಬಿಯಲ್ಲಿ ಇರುವಂತಹ ಕೊಬ್ಬು ಆರೋಗ್ಯಕರ ಕೊಬ್ಬು ಆಗಿದ್ದು, ಇದು ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು ಮತ್ತು ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ತೂಕ ಹೆಚ್ಚಿಸಲು ನೆರವಾಗಲ್ಲ. ಸೂಕ್ತ ಪ್ರಮಾಣದಲ್ಲಿ ಗೋಡಂಬಿ ಸೇವಿಸುವ ಜತೆಗೆ ವ್ಯಾಯಾಮ ಮಾಡಿದರೆ ಅದರಿಂದ ನಿಮ್ಮ ತೂಕ ಕಡಿಮೆಯಾಗುವುದು ಖಚಿತ.

  English summary

  Does Eating Cashews Lead To Weight Gain?

  Cashews are high in health value due to the presence of omega-3 alpha linolenic acid (ALA) and monounsaturated oleic acid, apart from the presence of several other vitamins and minerals. However, despite being high in nutrition, cashews have always been linked to weight gain, due to the high calories that they contain. But, have you actually tried to find out if cashews really add to weight gain? Do you really have to avoid them completely if you are on a weight lossdiet? Let's find out.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more