For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ ಮಹಿಳೆಯರಿಗೆ ಜನನಾಂಗದಲ್ಲಿ ತುರಿಕೆ ಉಂಟಾಗುವುದು!

|

ಮಹಿಳೆಯರೇ, ನಿಮಗೆ ಸತತವಾಗಿ ಜನನಾಂಗದ ಒಳಭಾಗದಲ್ಲಿ ತುರಿಕೆಯಾಗುತ್ತಿರುತ್ತದೆಯೇ? ಈ ತೊಂದರೆಗೆ ಇಂದಿನ ಲೇಖನದಲ್ಲಿ ಸಾಮಾನ್ಯವಾದ ಏಳು ಬಗೆಯ ಕಾರಣಗಳನ್ನೂ ಹಾಗೂ ಇದಕ್ಕೆ ಸೂಕ್ತ ಪರಿಹಾರಗಳನ್ನೂ ವಿವರಿಸಲಾಗಿದೆ. ಸಾಮಾನ್ಯವಾಗಿ ಒಂಟಿಯಾಗಿರುವ ಸ್ಥಳದ ಹೊರತು ಇತರೆಡೆಯಲ್ಲಿ ಈ ತುರಿಕೆಯನ್ನು ಶಮನಮಾಡಿಕೊಳ್ಳುವುದು ಭಾರೀ ಮುಜುಗರಕ್ಕೆ ಕಾರಣವಾಗಿರುವ ವಿಷಯವಾಗಿದೆ.

ಕೆಲವೊಮ್ಮೆ ಹಲವು ಜನರ ಗಮನ ನಿಮ್ಮ ಮೇಲಿರುವಾಗಲೇ ಈ ತುರಿಕೆಯೂ ಗರಿಷ್ಟ ಮಟ್ಟಕ್ಕೇರುವುದು ಮುಜುಗರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ತುರಿಕೆಗೆ ಸಾಮಾನ್ಯವಾಗಿ ಮಾಸಿಕ ದಿನಗಳಲ್ಲಿ ಉಪಯೋಗಿಸುವ ವಸ್ತುಗಳು ಕಾರಣ ಎಂದು ಮೊದಲಾಗಿ ಊಹಿಸಿಕೊಳ್ಳಬಹುದು ಹಾಗೂ ವೈದ್ಯರು ಕಂಡುಕೊಂಡಂತೆ ಇವೇ ಹೆಚ್ಚಿನ ಮಹಿಳೆಯರಲ್ಲಿ ತುರಿಕೆಗೆ ಕಾರಣವಾಗಿವೆ.

ಇನ್ನುಳಿದಂತೆ ಈ ತುರಿಕೆ ದೇಹದೊಳಗಿನ ಪ್ರಮುಖ ಅಂಗಗಳಲ್ಲಿ ಉಂಟಾಗಿರುವ ಸೋಂಕು ಅಥವಾ ಇನ್ನಾವುದೋ ಪ್ರಮುಖ ತೊಂದರೆಯ ಲಕ್ಷಣವೂ ಆಗಿರಬಹುದು. ಇಂದಿನ ಲೇಖನದಲ್ಲಿ ನಿಮಗೆ ಎದುರಾಗಿರುವ ತುರಿಕೆಗೆ ಏನು ನಿಜವಾದ ಕಾರಣ ಹಾಗೂ ಇದಕ್ಕೆ ಸೂಕ್ತವಾದ ಚಿಕಿತ್ಸೆ ಹೇಗಿರಬೇಕು ಎಂಬುದನ್ನು ವಿವರಿಸಲಾಗಿದೆ. (ಮಹಿಳೆಯರ ಆರೋಗ್ಯದಲ್ಲಿ ಜನನಾಂಗಗಳಿಗೆ ಸಂಬಂಧಿಸಿದ ಯಾವುದೇ ತೊಂದರೆ ಅತಿ ಸೂಕ್ಷ್ಮವಾಗಿದ್ದು ಈ ಭಾಗದ ಚಿಕಿತ್ಸೆಯನ್ನು ಸದಾ ತಜ್ಞವೈದ್ಯರ ಅಥವಾ ಸ್ತ್ರೀರೋಗ ತಜ್ಞರ ಸಲಹೆಯ ಮೇರೆಗೆ ಮಾತ್ರವೇ ಪಡೆದುಕೊಳ್ಳಬೇಕು.

ಬ್ಯಾಕ್ಟೀರಿಯಾದ ಸೋಂಕು (Bacterial vaginosis)

ಬ್ಯಾಕ್ಟೀರಿಯಾದ ಸೋಂಕು (Bacterial vaginosis)

BV ಎಂದು ವೈದ್ಯರು ಹೃಸ್ವರೂಪದಲ್ಲಿ ಕರೆಯುವ ಈ ತೊಂದರೆ ಅತಿ ಸಾಮಾನ್ಯವಾದ ಕಾರಣವಾಗಿದೆ ಹಾಗೂ ಇದು ಯೋನಿಯೊಳಗಿನ ತೇವಭಾಗದಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ ಹಾಗೂ ಮಾರಕ ಬ್ಯಾಕ್ಟೀರಿಯಾಗಳ ನಡುವಣ ಸಮತೋಲನ ಏರುಪೇರಾಗಿರುವ ಸಂಕೇತವಾಗಿದೆ. ಪರಿಣಾಮವಾಗಿ ತೇವಭಾಗದ ಪಿ ಎಚ್ ಮಟ್ಟ (ಆಮ್ಲೀಯ-ಕ್ಷಾರೀಯ

ಮಟ್ಟ) ಬದಲಾಗಿರುತ್ತದೆ. ಈ ಸೋಂಕು ಹೊರನೋಟಕ್ಕೆ ಶಿಲೀಂಧ್ರದ ಸೋಂಕಿನಂತೆಯೇ ಕಾಣುತ್ತದೆ. ಆದರೆ ಸ್ರಾವ ಹೆಚ್ಚು ನೀರು ನೀರಾಗಿದ್ದು ಕೊಂಚ ಕಮಟು ವಾಸನೆಯಿಂದ ಕೂಡಿರುತ್ತದೆ. ಈ ಸ್ಥಿತಿ ಎದುರಾಗಿರುವುದು ಖಚಿತವಾದರೆ ಔಷಧಿ ಅಂಗಡಿಯಲ್ಲಿ ಸುಲಭವಾಗಿ ಸಿಗುವ ಬ್ಯಾಕ್ಟೀರಿಯಾ ನಿವಾರಕ ಕ್ರೀಂ ಕೊಂಡು ಹಚ್ಚಿಕೊಳ್ಳಬಹುದು. ಈ ಔಷಧಿಯ ವಿವರಗಳಲ್ಲಿ ಬರೆದಿರುವ ಅವಧಿಯೊಳಗೆ ಈ ಸೋಂಕು ಕಡಿಮೆಯಾಗದೇ

ಇದ್ದರೆ ಸ್ತ್ರೀರೋಗ ತಜ್ಞರ ಬಳಿ ತಪಾಸಿಸಿಕೊಂಡು ಅವರ ಸಲಹೆಯ ಮೇರೆಗೆ ಸೂಕ್ತ ಔಷಧಿಯನ್ನು ಪಡೆದುಕೊಳ್ಳಬೇಕು.

ಹುದುಗು ಸೋಂಕು (yeast infection)

ಹುದುಗು ಸೋಂಕು (yeast infection)

ಬ್ಯಾಕ್ಟೀರಿಯಾದ ಸೋಂಕಿನಂತೆಯೇ ಈ ಸೋಂಕಿಗೂ ತೇವಭಾಗದಲ್ಲಿ ಪಿ ಎಚ್ ಮಟ್ಟ ಏರುಪೇರಾಗಿರುವುದು ಕಾರಣವಾಗಿದೆ ಎಂದು ಸ್ತ್ರೀರೋಗ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಸೋಂಕಿನಿಂದ ಎದುರಾಗುವ ಸ್ರಾವ ತಡೆತಡೆದು ಬರುತ್ತಿರುತ್ತದೆ ಅಥವಾ ಪ್ರತಿಜೀವಕ ಔಷಧಿಗಳ ಸೇವನೆಯ ಬಳಿಕ ಅಥವಾ ಮಾನಸಿಕ ಒತ್ತಡದ ಸಮಯದಲ್ಲಿ, ಆಹಾರಕ್ರಮದಲ್ಲಿ ಬದಲಾವಣೆ ಅಥವಾ ಮಿಲನಕ್ರಿಯೆಯ ಬಳಿಕ ಸ್ರಾವ ಧಾರೆಯಾಗಿ ಕಾಣಿಸಿಕೊಳ್ಳುತ್ತದೆ. (ಮಧುಮೇಹ ಇರುವ ಮಹಿಳೆಯರಲ್ಲಿ ಈ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚು). ಒಳಭಾಗದಲ್ಲಿ ತುರಿಕೆಯ ಜೊತೆಗೇ ಸ್ರಾವವೂ ಮೊಸರಿನಂತೆ ಅಥವಾ ಬಿಳಿಯಾಗಿ ಗೋಂದಿನಷ್ಟು ಸ್ನಿಗ್ಧವಾಗಿರುತ್ತದೆ. ನೋಡಲಿಕ್ಕೆ ಕೊಂಚ ಭಯಾನಕವಾಗಿ ಕಂಡರೂ ಇದು ಸುಲಭ ಔಷಧಿಗಳಿಂದ ಮಣಿಯುಉತ್ತದೆ. ಈ ತೊಂದರೆಯನ್ನು ಹೇಳಿಕೊಂಡು ಔಷಧಿ ಅಂಗಡಿಯಲ್ಲಿ ಸುಲಭವಾಗಿ ಸಿಗುವ ಹುದುಗು ನಿವಾರಕ ಔಷಧಿಗಳನ್ನು ಪಡೆಯಬಹುದು. ಈ ಔಷಧಿಯಿಂದ ಒಂದೇ ದಿನದಲ್ಲಿ ತಪ್ಪಿದರೆ ಎರಡು ದಿನಗಳಲ್ಲಿ ಈ ತೊಂದರೆ ಇಲ್ಲವಾಗಬೇಕು. ಈ ಸೋಂಕು ಸತತವಾಗಿ ಬರದೇ ಇರಲು acidophilus ಎಂಬ ಬ್ಯಾಕ್ಟೀರಿಯಾ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ದೇಹದಲ್ಲಿ ಹುದುಗು ನಿರಪಾಯಕರ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ. ಸೂಚನೆ: ಈ ಸೋಂಕು ಚಳಿಗಾಲದಲ್ಲಿ ಅತಿ ಹೆಚ್ಚಾಗಿ ಆವರಿಸುತ್ತದೆ ಹಾಗೂ ಬೇಸಿಗೆಯಲ್ಲಿ ಕನಿಷ್ಟವಾಗಿರುತ್ತದೆ.

Most Read: ಯೋನಿಯಲ್ಲಿ ತುರಿಕೆ-ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

ಅಲರ್ಜಿಕಾರಕ ಸೋಂಕು (Contact dermatitis)

ಅಲರ್ಜಿಕಾರಕ ಸೋಂಕು (Contact dermatitis)

ಕೆಲವು ವಸ್ತುಗಳಿಗೆ ಇರುವ ಅಲರ್ಜಿಯಿಂದಲೂ ಈ ತುರಿಕೆ ಎದುರಾಗಬಹುದು ಎಂದು ಪ್ರಸೂತಿತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಅಲರ್ಜಿ ನೀವು ಉಪಯೋಗಿಸುವ ನಿತ್ಯಬಳಕೆಯ ವಸ್ತುಗಳಿಂದಲೂ ಬರಬಹುದು. ಸುಗಂಧ, ನೀವು ಧರಿಸುವ ಕೆಲವು ಅಲಂಕಾರಿಕಾ ವಸ್ತುಗಳು, ಮಿಲನ ಸಮಯದಲ್ಲಿ ಬಳಸಿದ ಕಾಂಡಂ, ಜಾರುಕದ್ರವ, ಮಾಸಿಕ ದಿನಗಳಲಿ ಬಳಸುವ ಖಾಸಗಿ ವಸ್ತುಗಳು ಇತ್ಯಾದಿ. ಅಲರ್ಜಿಯಿಂದ ಉಂಟಾದ ತುರಿಕೆಯ ಜೊತೆಗೇ ಯೋನಿಯ ತುಟಿಗಳು ಕೆಂಪಗಾಗಿರುವುದು, ಊದಿಕೊಂಡಿರುವುದು ಹಾಗೂ ಸುತ್ತಲ ಚರ್ಮ ದಪ್ಪಗಾಗಿರುವುದನ್ನು ಗಮನಿಸಬಹುದು. ಕೆಲವು ಮಹಿಳೆಯರಲ್ಲಿ ಈ ಭಾಗದಲ್ಲಿ ನಡೆಸುವ ಕ್ಷೌರವೂ ಅಲರ್ಜಿ ಕಾರಕವಾಗಿರ ಬಹುದು. ತುರಿಕೆ ಎದುರಾದ ಹಿಂದಿನ ದಿನಗಳಲ್ಲಿ ನೀವು ಬಳಸಿದ ವಸ್ತುಗಳನ್ನು ಕೊಂಚ ಅವಲೋಕಿಸಿದರೆ ನಿಮಗೆ ಯಾವ ವಸ್ತು ಅಲರ್ಜಿಕಾರಕವಾಗಿದೆ ಎಂದು ಸ್ಥೂಲವಾಗಿ ಊಹಿಸಿಕೊಳ್ಳಬಹುದು. ಆದರೆ ಅಲರ್ಜಿಯಿಂದಲೇ ತುರಿಕೆಯುಂಟಾಗಿದೆ ಎಂದು ಖಾತರಿಯಾದರೆ ನಿಮ್ಮ ನಿತ್ಯಬಳಕೆಯ ವಸ್ತುಗಳನ್ನು ಅಲರ್ಜಿಕಾರಕವಲ್ಲದ ನೈರ್ಮಲ್ಯ ವಸ್ತುಗಳಿಗೆ (hypoallergenic hygiene products)ಬದಲಿಸಿಕೊಳ್ಳುವುದೇ ಒಳಿತು. ಉದಾಹರಣೆಗೆ ನೀವು ಉಪಯೋಗಿಸುವ ಶಾಂಪೂ, ಬಟ್ಟೆಗಳಿಗೆ ಉಪಯೋಗಿಸುವ ಮೃದುಕಾರಕ (softener),ಬಟ್ಟೆ ಒಗೆಯುವ ಪೌಡರ್ ಇತ್ಯದಿ. ಅಲ್ಲದೇ ನೀವು ಉಪಯೋಗಿಸುವ ವಸ್ತುಗಳಲ್ಲಿ ರಾಸಾಯನಿಕಗಳು, ಪ್ರಬಲ ಸೋಪುಗಳು ಅಥವಾ ಉರಿ ತರಿಸುವ ಜಾರುಕಗಳು ಇರದಂತೆ ಜಾಗ್ರತೆ ವಹಿಸಿ ಎಂದು ಡಾ.ವೊರ್ಲಿ ವಿವರಿಸುತ್ತಾರೆ. ನೀವು ಶೌಚಾಲಯದಲ್ಲಿ ಉಪಯೋಗಿಸುವ ಸ್ವಚ್ಛತಾ ಕಾಗದಗಳೂ ಸುಗಂಧರಹಿತ ಮತ್ತು ಬಣ್ಣ ರಹಿತವಾಗಿರಲಿ. ಒಂದು ವೇಳೆ ನಿಮ್ಮ ತ್ವಚೆ ಸೂಕ್ಷ್ಮಸಂವೇದಿಯಾಗಿದ್ದರೆ ನೀವು ಕ್ಷೌರ ಮಾಡಿಕೊಳ್ಳದಿರುವುದೇ ಮೇಲು ಹಾಗೂ ಎಂದಿಗೂ, ಜನನಾಂಗದ ಒಳಭಾಗವನ್ನು ಸ್ವಚ್ಛಗೊಳಿಸುವ ಕ್ರಮಗಳನ್ನು (douche)ಅನುಸರಿಸಬಾರದು! ಏಕೆಂದರೆ ಯೋನಿಗೆ ತನ್ನನ್ನು ತಾನೇ ಸ್ವಚ್ಛಗೊಳಿಸುವ ಗುಣವಿದೆ, ಇದರಿಂದ ನೀವೇ ಇದರ ಸ್ವಚ್ಛತೆಗೆ ಮುಂದಾಗಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.

ಎಕ್ಸಿಮಾ ಅಥವಾ ಸೋರಿಯಾಸಿಸ್ (Eczema or psoriasis)

ಎಕ್ಸಿಮಾ ಅಥವಾ ಸೋರಿಯಾಸಿಸ್ (Eczema or psoriasis)

ವಂಶವಾಹಿನಿಯಾಗಿ ಬರುವ ಚರ್ಮದ ತೊಂದರೆಗಳಾದ ಸೋರಿಯಾಸಿಸ್ ಸಹಾ ಜನನಾಂಗದ ಭಾಗದಲ್ಲಿ ಕೆಂಪಗಾಗುವುದು ಮತ್ತು ಒಳಭಾಗದಲ್ಲಿ ತುರಿಕೆಗೆ ಕಾರಣವಾಗಬಹುದು. ಈ ತೊಂದರೆ ಇರುವವರಿಗೆ ಜನನಾಂಗದ ಅಕ್ಕ ಪಕ್ಕದ ಚರ್ಮದಲ್ಲಿ ಬಿಳಿಯ ಅಥವಾ ಕೆಂಪಗಿನ ಅಗಲವಾದ ಮಚ್ಚೆಗಳಂತೆ ಆಕಾರಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ನಿಮಗೆ ಹಿಂದೆಯೂ ಸೋರಿಯಾಸಿಸ್ ಅಥವಾ ಎಕ್ಸಿಮಾ ಎಂಬ ಚರ್ಮರೋಗ ಎದುರಾಗಿದ್ದರೆ hydrocortisone ಎಂಬ ಸೌಮ್ಯ ಸ್ಟೆರಾಯ್ಡ್ ಚಿಕಿತ್ಸೆ ಪಡೆದುಕೊಳ್ಳಬೇಕು ಹಾಗೂ ಈ ಭಾಗವನ್ನು ಓಟ್ಸ್ ರವೆಯ ನೀರಿನಿಂದ ತೊಳೆದುಕೊಳ್ಳುವ ಮೂಲಕ ತುರಿಕೆಯನ್ನು ಶಮನಗೊಳಿಸಬಹುದು. ಸಾಮಾನ್ಯವಾಗಿ ಈ ತೊಂದರೆ ಒಂದು ವಾರದಲ್ಲಿ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಮುಂದಿನ ಚಿಕಿತ್ಸೆಗಾಗಿ ವೈದ್ಯರನ್ನು ಕಾಣಬೇಕು.

Most Read: ಸ್ಯಾನಿಟರಿ ಪ್ಯಾಡ್‌ಗಳಿಂದ ದದ್ದುಗಳಾಗಲು ಕಾರಣಗಳೇನು?

ಲೈಂಗಿಕವಾಗಿ ಹರಡಿರುವ ಸೋಂಕುಗಳು Sexually transmitted infections (STIs)

ಲೈಂಗಿಕವಾಗಿ ಹರಡಿರುವ ಸೋಂಕುಗಳು Sexually transmitted infections (STIs)

ಅಸುರಕ್ಷಿತ ಲೈಂಗಿಕ ಸಂಪರ್ಕ ಅತ್ಯಂತ ಅಪಾಯಕಾರಿ ಎಂದು ನಿಮಗೆ ಇನ್ನೊಮ್ಮೆ ಹೇಳುವ ಅವಶ್ಯಕತೆ ಇಲ್ಲ. (ಆದ್ದರಿಂದ ನೀವು ಸದಾ, ಸದಾ, ಸೂಕ್ತ ಸುರಕ್ಷತಾ ವಿಧಾನವನ್ನು ಅನುಸರಿಸಲೇ ಬೇಕು). ಆದರೂ ಈ ಎಚ್ಚರಿಕೆಯ ಹೊರತಾಗಿ ಅಥವಾ ಅಜ್ಞಾನದಿಂದ ನಿಮಗೆ ಈಗಾಗಲೇ ಯಾವುದಾದರೂ ಸೋಂಕು ಎದುರಾಗಿದ್ದರೆ ಇದರ ಮೊದಲ ಸೂಚನೆಯಾಗಿ ಜನನಾಂಗದ ಒಳಭಾಗದಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಈ ರೋಗಗಳಲ್ಲಿ chlamydia, herpes, trichomoniasis ಮತ್ತು gonorrhoea ಪ್ರಮುಖವಾಗಿವೆ. ಜನನಾಂಗದ ಭಾಗದ ಕೂದಲನ್ನು ಕ್ಷೌರಗೊಳಿಸದೇ ಬಿಟ್ಟಿರುವ ಮಹಿಳೆಯರಲ್ಲಿ ಈ ಭಾಗದ ಕೂದಲುಗಳ ನಡುವೆ ಸೀರು ಅಥವಾ ಹೇನುಗಳೂ (Crabs, or pubic lice) ಕಾಣಿಸಿಕೊಂಡು ಓಡಾಡುವಾಗ ತುರಿಕೆಯುಂಟು ಮಾಡುತ್ತವೆ. ಕಾರಣ ಯಾವುದೇ ಇದ್ದರೂ ಸರಿ, ಸತತ ತುರಿಕೆ, ಹೊರಚರ್ಮದಲ್ಲಿ ಕಚಗುಳಿ ಇಟ್ಟಂತೆ ಪ್ರಾರಂಭವಾಗುವ ಈ ತೊಂದರೆ ನಿಧಾನವಾಗಿ ಭಾರೀ ನೋವು ಮತ್ತು ಉರಿಯೊಂದಿಗೆ ಉಲ್ಬಣಗೊಳ್ಳುತ್ತಾ ಸಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಲೈಂಗಿಕವಾಗಿ ಹರಡಿರುವ ಸೋಂಕುಗಳ ಸೂಚನೆಗಳು

ಲೈಂಗಿಕವಾಗಿ ಹರಡಿರುವ ಸೋಂಕುಗಳ ಸೂಚನೆಗಳು

ಒಂದು ವೇಳೆ ಜನನಾಂಗದ ಒಳಗೆ ತುರಿಕೆಯಾಗುವ ಜೊತೆಗೇ ಲೈಂಗಿಕವಾಗಿ ಹರಡಿರುವ ಸೋಂಕುಗಳ ಇತರ ಸೂಚನೆಗಳು ಕಂಡುಬಂದರೆ, ಉದಾಹರಣೆಗೆ ಮೂತ್ರ ವಿಸರ್ಜಿಸುವಾಗ ಬೆಂಕಿ ಬಿದ್ದಂತೆ ಉರಿಯುವುದು, ಸ್ರಾವದಲ್ಲಿ ಕೆಟ್ಟ ವಾಸನೆ ಇರುವುದು, ಜನನಾಂಗದ ತುಟಿ ಮತ್ತು ಪಕ್ಕದ ಚರ್ಮದ ಭಾಗಗಳಲ್ಲಿ ಚಿಕ್ಕ ಚಿಕ್ಕ ಕೀವುಗುಳ್ಳೆಗಳೇಳುವುದು, ಲೈಂಗಿಕ ಸಂಪರ್ಕದಲ್ಲಿ ನೋವು ಕಾಣಿಸಿಕೊಳ್ಳುವುದು ಮೊದಲಾದ ಯಾವುದೇ ಸೂಚನೆ ಕಂಡುಬಂದರೆ ನೀವು ಮೊತ್ತ ಮೊದಲಾಗಿ ನಿಮಗೆ ಹತ್ತಿರವಿರುವ ಸ್ತ್ರೀರೋಗ ತಜ್ಞರಲ್ಲಿ ಧಾವಿಸಿ ಪರೀಕ್ಷೆಗೊಳಪಡಬೇಕು. ಒಂದು ವೇಳೆ ನಿಮಗೆ ಲೈಂಗಿಕವಾಗಿ ಹರಡಿರುವ ಸೋಂಕು ಎದುರಾಗಿರುವುದು ಖಚಿತವಾದರೆ ವೈದ್ಯರೇ ನಿಮಗೆ ಸೇವಿಸಬೇಕಾದ ಔಷಧಿ ಹಾಗೂ ಇಂಜೆಕ್ಷನ್ ಮೂಲಕ ನೀಡಬೇಕಾದ ಪ್ರತಿಜೀವಕ ಔಷಧಿಗಳನ್ನು ಒದಗಿಸುತ್ತಾರೆ ಹಾಗೂ ಹರ್ಪಿಸ್ ರೋಗವಿದ್ದರೆ ವೈರಸ್ ನಿರೋಧಕ ಔಷಧಿಗಳನ್ನು ಪಡೆಯಲು ವೈದ್ಯರು ಸೂಚಿಸುತ್ತಾರೆ ಹಾಗೂ ಈ ಸೋಂಕು ಸಂಪೂರ್ಣವಾಗಿ ಗುಣವಾಗುವವರೆಗೂ ವಹಿಸಬೇಕಾದ ಜಾಗ್ರತೆಗಳನ್ನು (ಲೈಂಗಿಕ ಕ್ರಿಯೆಗೆ ರಜೆ) ವಿವರಿಸುತ್ತಾರೆ.

ಲೈಖೆನ್ ಸ್ಕ್ಲೆರೋಸಸ್ (Lichen sclerosus)

ಲೈಖೆನ್ ಸ್ಕ್ಲೆರೋಸಸ್ (Lichen sclerosus)

ಇದೊಂದು ಗಂಭೀರ ತೆರನಾದ ಚರ್ಮರೋಗವಾಗಿದ್ದು ಇದರಿಂದ ವಿಶೇಷವಾಗಿ ಯೋನಿಗಳ ಒಳತುಟಿಗಳ ಅಂಚಿನಲ್ಲಿ ಭಾರೀ ತುರಿಕೆ ಎದುರಾಗುತ್ತದೆ ಹಾಗೂ ಅಕ್ಕ ಪಕ್ಕದ ಚರ್ಮದಲ್ಲಿ ಚಿಕ್ಕ ಚಿಕ್ಕ ಬಿಳಿಯ ಗುಳ್ಳೆಗಳೇಳುತ್ತವೆ ಎಂದು ಡಾ. ಸ್ಟ್ರೀಶರ್ ರವರು ವಿವರಿಸುತ್ತಾರೆ. ಈ ರೋಗ ಎಲ್ಲಿಂದಲೋ, ಯಾರಿಗೆ ಬೇಕಾದರೂ ಆವರಿಸಬಹುದು, ಆದರೆ ಕೆಲವು ರಸದೂತಗಳು ಅಥವಾ ರೋಗ ನಿರೋಧಕ ಶಕ್ತಿಯ ಅತಿಯಾದ ಪ್ರತಿಕ್ರಿಯೆಯೂ ಇದಕ್ಕೆ ಕಾರಣವಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ತೊಂದರೆ ಎದುರಾದ ತಕ್ಷಣವೇ ಸ್ತ್ರೀರೋಗ ತಜ್ಞರ ಬಳಿ ಧಾವಿಸಬೇಕು. ಕೇವಲ ಸೂಕ್ತ ಪರೀಕ್ಷೆಗಳ ಮೂಲಕವೇ ಈ ರೋಗದ ಇರುವಿಕೆ ಖಚಿತವಾಗುತ್ತದೆ ಹಾಗೂ ವೈದ್ಯರೇ ಇದರ ಪ್ರಾಬಲ್ಯ ಮತ್ತು ಲಕ್ಷಣಗಳನ್ನು ಅವಲಂಬಿಸಿ ಔಷಧಿಯನ್ನೂ ಸೂಚಿಸುತ್ತಾರೆ.

ರಸದೂತಗಳು

ರಸದೂತಗಳು

ನಿಮ್ಮ ದೇಹದ ರಸದೂತಗಳು ಏರುಪೇರಾಗುತ್ತಿರುವ ಸಮಯದಲ್ಲಿಯೇ ಈ ತುರಿಕೆಯೂ ಕಂಡುಬರಬಹುದು. ಉದಾಹರಣೆಗೆ ಮಾಸಿಕ ದಿನಗಳಲ್ಲಿ, ಗರ್ಭಾವಸ್ಥೆಯಲ್ಲಿ, ರಜೋನಿವೃತ್ತಿಯ ಸಮಯದಲ್ಲಿ ಅಥವಾ ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುತ್ತಿರುವ ಸಮಯದಲ್ಲಿ ರಸದೂತಗಳ ಮಟ್ಟ ಏರುಪೇರಾಗುತ್ತಿರುತ್ತದೆ. ಇದಕ್ಕೆ ವಿರುದ್ದವಾಗಿ ಕೆಲವು ಸಂದರ್ಭಗಳಲ್ಲಿ ರಸದೂತಗಳ ಏರುಪೇರಿನಿಂದ ಜನನಾಂಗದ ಒಳಭಾಗವೂ ಒಣಗುತ್ತದೆ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಮಾಸಿಕ ದಿನಗಳ ಸಮಯದಲ್ಲಿ ನೀವು ಬಳಸುವ ನೈರ್ಮಲ್ಯ ವಸ್ತುಗಳಲ್ಲಿ ಅಡಕವಾಗಿರುವ ಸುಗಂಧಗಳು ಅಥವಾ ಬಣ್ಣಗಳ ರಾಸಾಯನಿಕಗಳು ಈ ತುರಿಕೆಯನ್ನು ಹೆಚ್ಚಿಸಬಹುದು. ಒಂದು ವೇಳೆ ಪ್ರತಿ ಮಾಸಿಕ ದಿನದಲ್ಲಿಯೂ ಇದೇ ತೊಂದರೆ ಮರುಕಳಿಸುತ್ತಿದ್ದರೆ ನಿಮ್ಮ ಎಂದಿನ ನೈರ್ಮಲ್ಯ ಉತ್ಪನ್ನಗಳ ಬದಲಿಗೆ ಬೇರೆಯೇ ಆದ ಇತರ ಉತ್ಪನ್ನಗಳನ್ನು (ಉದಾಹರಣೆಗೆ menstrual cup ಅಥವಾ ಸಾವಯವ ವಿಧಾನದಲ್ಲಿ ನಿರ್ಮಿಸಲಾದ ಹತ್ತಿಯ ಉತ್ಪನ್ನಗಳು) ಬಳಸಲು ಪ್ರಾರಂಭಿಸಿ. ಇದು ತುರಿಕೆಯನ್ನು ಕಡಿಮೆಯಾಗಿಸಲು ನೆರವಾಗಬಹುದು.

Most Read: ಇದೇ ಕಾರಣಕ್ಕೆ ಮಹಿಳೆಯರಿಗೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುವುದು!

ಗರ್ಭನಿರೋಧಕ ಗುಳಿಗೆಗಳು

ಗರ್ಭನಿರೋಧಕ ಗುಳಿಗೆಗಳು

ಒಂದು ವೇಳೆ, ನಿಮ್ಮ ಗರ್ಭನಿರೋಧಕ ಗುಳಿಗೆಗಳು ಈ ತುರಿಕೆಗೆ ಕಾರಣವಾಗಿದ್ದರೆ (ಕೆಲವೊಮ್ಮೆ ಇದೇ ಕಾರಣ ಎಂದು ಖಚಿತಪಡಿಸಿಕೊಳ್ಳಲು hormonal contraception (ಕೃತಕವಾಗಿ ಈಸ್ಟ್ರೋಜೆನ್ ರಸದೂತವನ್ನು ನೀಡಿ ರಸದೂತಗಳ ಏರುಪೇರನ್ನು ಸರಿಪಡಿಸುವ ಚಿಕಿತ್ಸೆ) ಎಂಬ ವಿಧಾನವನ್ನು ಪ್ರಾರಂಭಿಸಬೇಕಾಗಿ ಬರಬಹುದು ಅಥವಾ ಪ್ರಾರಂಭಿಸಿದ್ದರೆ ನಿಲ್ಲಿಸಬೇಕಾಗಿ ಬರಬಹುದು ಎಂದು ಡಾ. ವೊರ್ಲಿ ವಿವರಿಸುತ್ತಾರೆ). ನಿಮಗೆ ತುರಿಕೆ ಯಾವುದೇ ಬಗೆಯ ರಸದೂತಗಳ ಏರುಪೇರಿನಿಂದಲೇ ಎದುರಾಗಿದೆ ಎಂದು ಖಚಿತವಾದರೆ ಇದನ್ನು ಸರಿಪಡಿಸಲು ಸ್ಥಳೀಯವಾಗಿ ಹಚ್ಚಬಹುದಾದ ರಸದೂತ ಕ್ರೀಂ (hormonal cream) ಹಚ್ಚಿಕೊಳ್ಳಲು ನೀಡಬಹುದು ಹಾಗೂ ಇದಕ್ಕೂ ತುರಿಕೆ ಕಡಿಮೆಯಾಗದೇ ಇದ್ದರೆ ನೀವು ಈಗ ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಬದಲಿಸಿ ಬೇರೆಯೇ ಔಷಧಿಗಳನ್ನು ಸೇವಿಸಲು ಸಲಹೆ ಮಾಡಬಹುದು.

English summary

Common Causes of Vaginal Itching

Itchy vagina? Here, seven common reasons your vagina is itchy beyond belief. Plus, the treatment options that’ll soothe the irritation.It’s not exactly easy to scratch an itch down there, which is why it’s so frustrating when it happens (and sometimes it’s like it comes completely out of nowhere, right?). Vaginal itching can be caused by something as simple as your period products – but in other cases, it can actually be a symptom of a more serious issue.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more