For Quick Alerts
ALLOW NOTIFICATIONS  
For Daily Alerts

ಪುರುಷರಿಗೂ ಸ್ತನ ಕ್ಯಾನ್ಸರ್ ಬರಬಹುದಂತೆ!! ಇಲ್ಲಿದೆ ನೋಡಿ ಅದರ ಲಕ್ಷಣಗಳು

By Arshad
|

ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ ಎಂದಾಕ್ಷಣ ಇದು ಕೇವಲ ಮಹಿಳೆಯರಿಗೆ ಮಾತ್ರವೇ ಬರಬಹುದಾದ ಕಾಯಿಲೆ ಎಂದೇ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ವಾಸ್ತವವೆಂದರೆ ಪುರುಷರಲ್ಲಿಯೂ ಎದೆಯಭಾಗದಲ್ಲಿ ಸ್ತನಕ್ಕೆ ಸಮನಾದ ಅಂಗಾಂಶಗಳಿವೆ ಹಾಗೂ ಇವು ತೀರಾ ಕಡಿಮೆ ಪ್ರಮಾಣದಲ್ಲಿರುವ ಕಾರಣ ಈ ಭಾಗದ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಅತಿ ಕಡಿಮೆಯೇ. ಆದರೆ ಕ್ಯಾನ್ಸರ್ ಆವರಿಸುವುದೇ ಇಲ್ಲ ಎಂಬುವುದು ಮಾತ್ರ ಸತ್ಯವಲ್ಲ. ಸ್ತನ ಕ್ಯಾನ್ಸರ್ ಪರೀಕ್ಷೆಗೆ ಪುರುಷರು ಒಳಗಾಗುವುದು ಎಂದರೆ ಈ ಬಗ್ಗೆ ನಾವು ಯಾರೂ ಕಲ್ಪಿಸದೇ ಇರುವ ವಿಷಯವಾಗಿದೆ ಹಾಗೂ ಇದು ಮಹಿಳೆಯರಿಗೆ ಮಾತ್ರವೇ ಅನ್ವಯವಾಗುವ ಪರೀಕ್ಷೆ ಎಂದೇ ನಾವೆಲ್ಲರೂ ಭಾವಿಸಿದ್ದೇವೆ.

ಆದರೆ ವಿಶ್ವದಾದ್ಯಂತ ಕಂಡುಬಂದಿರುವ ಒಟ್ಟಾರೆ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಖಡಾ ಒಂದರಷ್ಟು ಪ್ರಕರಣಗಳು ಪುರುಷರಲ್ಲಿ ಕಂಡುಬಂದಿವೆ. ಶೇಖಡಾ ಒಂದು ಎಂದರೂ ಸರಿ, ಇದು ಬರುವ ಸಾಧ್ಯತೆ ಇದೆ ಎಂದೇ ಅರ್ಥವಲ್ಲವೇ? ಅಲ್ಲದೇ ಈ ಸಾಧ್ಯತೆ ಕಡಿಮೆ ಇರುವ ಕಾರಣದಿಂದಲೇ ಪರೀಕ್ಷೆಗೆ ಒಳಗಾಗದೇ ಉಲ್ಬಣಗೊಂಡ ಬಳಿಕವೇ ಪ್ರಕರಣ ಬೆಳಕಿಗೆ ಬಂದಿದ್ದು ಬೆಳವಣಿಗೆಯ ಹಂತದಲ್ಲಿರುವ ಕ್ಯಾನ್ಸರ್ ನ್ನು ಪರಿಗಣಿಸಿದರೆ ಈ ಸಂಖ್ಯೆ ಗಣನೀಯವಾಗಿ ಏರಬಹುದು. ಈ ಸ್ಥಿತಿಗೆ ಒಳಗಾಗಿರುವ ಹೆಚ್ಚಿನ ಪುರುಷರು ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಇರುವ ಮೂಲಕ ಕ್ಯಾನ್ಸರ್ ಇರುವಿಕೆಯ ಲಕ್ಷಣಗಳನ್ನು ಕಡೆಗಣಿಸುವುದೇ ಹೆಚ್ಚು.

brest cancer in men

ಪುರುಷರಲ್ಲಿ ಈ ಸ್ಥಿತಿ ಎದುರಾಗಿದೆಯೇ ಎಂಬುದನ್ನು ಸ್ವಪರೀಕ್ಷೆಯ ಮೂಲಕ ನಿಯಮಿತವಾಗಿ ಪರಿಶೀಲಿಸಿಕೊಳ್ಳುವ ಅಗತ್ಯವಿಲ್ಲವಾದರೂ ಎದೆಯ ಭಾಗದಲ್ಲಿ ಒತ್ತಿದಾಗ ನೋವು ಅಥವಾ ಗಡ್ಡೆಗಳು ಇವೆಯೇ ಎಂಬುದನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಿರಬೇಕು. ಒಂದು ವೇಳೆ ನೋವು ಇದ್ದರೆ ಇದನ್ನು ಖಂಡಿತಾ ನಿರ್ಲಕ್ಷಿಸಕೂಡದು ಹಾಗೂ ವೈದ್ಯರಿಂದ ತಪಾಸಣೆಗೊಳಗಾಗಬೇಕು. ಮುಂದಿನ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಅರಿವಿನ ತಿಂಗಳನ್ನಾಗಿ ಆಚರಿಸಲಿರುವ ಮುನ್ನವೇ ಈ ಬಗ್ಗೆ ಬೋಲ್ಡ್ ಸ್ಕೈ ತಂಡ ಈ ಕಾಯಿಲೆ ಇರುವಿಕೆಯ ಲಕ್ಷಣಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತಿದೆ ಹಾಗೂ ಪುರುಷರು ಗಮನ ನೀಡಬೇಕಾದ ಕೆಲವು ಸೂಕ್ಷ್ಮ ಸಂಗತಿಗಳನ್ನೂ ವಿವರಿಸಲಾಗಿದೆ.

ಸ್ತನ ಕ್ಯಾನ್ಸರ್: ನಂಬಲೇ ಬಾರದ ಇಂತಹ ತಪ್ಪು ಕಲ್ಪನೆಗಳು

ಸಂಭಾವ್ಯ ಕಾರಣಗಳು

ಪುರುಷರಲ್ಲಿ ಸ್ತನ ಕ್ಯಾನ್ಸರ್ ಆವರಿಸಲು ಏನು ಕಾರಣ ಎಂಬುದನ್ನು ಇದುವರೆಗೆ ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಉಳಿದ ಕ್ಯಾನ್ಸರ್ ಗಳಂತೆಯೇ ಎದೆಯ ಭಾಗದಲ್ಲಿರುವ ಅಂಗಾಂಶದ ಜೀವಕೋಶಗಳು ಅನಿಯಂತ್ರಿತವಾಗಿ ಹಾಗೂ ಉಳಿದ ಆರೋಗ್ಯವಂತ ಜೀವಕೋಶಗಳಿಗಿಂತಲೂ ವೇಗವಾಗಿ ಬೆಳೆಯುತ್ತಾ ಹೋಗುತ್ತವೆ. ಹೀಗೇ ಬೆಳೆದ ಜೀವಕೋಶಗಳು ಸಾಂದ್ರೀಕೃತಗೊಂಡು ಗಡ್ಡೆಯ ರೂಪ ಪಡೆಯುತ್ತವೆ ಹಾಗೂ ಅಕ್ಕ ಪಕ್ಕದ ಇತರ ಅಂಗಾಂಶಗಳಿಗೂ, ದುಗ್ಧಗ್ರಂಥಿಗಳಿಗೂ ಈ ರೋಗ ಹರಡುವ ಸಾಧ್ಯತೆ ಹೊಂದಿರುತ್ತವೆ (metastasizing).

ಈ ಬೆಳವಣಿಗೆ ಎಲ್ಲಿಂದ ಪ್ರಾರಂಭವಾಗುತ್ತದೆ?

ಮಾನವರೆಲ್ಲರಿಗೂ ಸ್ತನತೊಟ್ಟುಗಳಿರುತ್ತವೆ. ಅಂತೆಯೇ ಪುರುಷರಲ್ಲಿಯೂ ಈ ಭಾಗದ ಅಡಿ ತೆಳುವಾದ ಸ್ತನದ ಅಂಗಾಂಶವೂ ಇರುತ್ತದೆ. ಹುಟ್ಟಿದ ಬಳಿಕ ಮಗು ಗಂಡಾಗಲೀ ಹೆಣ್ಣಾಗಲಿ ಹದಿಹರೆಯದವರೆಗೂ ಈ ಭಾಗಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಹದಿಹರೆಯಲ್ಲಿ ಹೆಣ್ಣಿನ ದೇಹದಲ್ಲಿ ಸ್ರವಿಸುವ ರಸದೂತಗಳು ಈ ಭಾಗದಲ್ಲಿ ಹಾಲನ್ನು ಉತ್ಪಾದಿಸುವ ಗ್ರಂಥಿಗಳು (lobules),ಹಾಲನ್ನು ಸ್ತನತೊಟ್ಟಿನತ್ತ ಕೊಂಡೊಯ್ಯುವ ನಾಳಗಳ ಮತ್ತು ಕೊಬ್ಬನ್ನು ಸಂಗ್ರಹಿಸುವ ಕಾರಣ ಬೆಳವಣಿಗೆ ಪಡೆಯುತ್ತವೆ. ಆದರೆ ಪುರುಷರಲ್ಲಿ ಈ ಬೆಳವಣಿಗೆಯಾಗದೇ ಹಾಗೇ ಉಳಿಯುತ್ತದೆ. ವಾಸ್ತವದಲ್ಲಿ ಪುರುಷರಲ್ಲಿಯೂ ಚಿಕ್ಕ ಪ್ರಮಾಣದಲ್ಲಿಯಾದರೂ ಸರಿ, ಸ್ತನದ ಅಂಗಾಂಶವನ್ನು ಹೋಲುವ ಅಂಗಾಂಶಗಳು ಇದ್ದೇ ಇರುತ್ತವೆ ಹಾಗೂ ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಇದ್ದೇ ಇರುತ್ತದೆ. ಪುರುಷರಲ್ಲಿ ಕಂಡುಬಂದಿರುವ ಸ್ತನ ಕ್ಯಾನ್ಸರ್‌ನ ಬಗೆಗಳು...

• Ductal Carcinoma- ಸ್ತನದ ಅಂಗಾಂಶದಿಂದ ಹಾಲನ್ನು ಕೊಂಡು ತರುವ ನಾಳಗಳಲ್ಲಿ ಈ ಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಪುರುಷರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವುದೇ ಅಪರೂಪವಾಗಿದ್ದರೂ ಕಂಡುಬಂದಿರುವ ಪ್ರಕರಣಗಳಲ್ಲಿ ಈ ಭಾಗದ ಕ್ಯಾನ್ಸರ್ ಅತಿ ಹೆಚ್ಚಿನ ಪ್ರಮಾಣದಲ್ಲಿದೆ.
• Lobular Carcinoma-ಹಾಲನ್ನು ಉತ್ಪಾದಿಸುವ ಗ್ರಂಥಿಗಳಿಗೆ ಎದುರಾಗುವ ಕ್ಯಾನ್ಸರ್ ಸಹಾ ಅಪರೂಪವಾಗಿದೆ. ಏಕೆಂದರೆ ಹಾಲನ್ನುಉತ್ಪಾದಿಸುವ ಅಗತ್ಯವೇ ಇಲ್ಲದ ಕಾರಣ ಪುರುಷರಲ್ಲಿ ಈ ಗ್ರಂಥಿಗಳು ಕನಿಷ್ಟ ಹಾಗೂ ಅತಿ ಚಿಕ್ಕ ಗಾತ್ರದಲ್ಲಿರುತ್ತವೆ.

* ಇತರ ಬಗೆಗಳು: ಮೇಲಿನ ಎರಡು ಬಗೆಗಳ ಹೊರತಾಗಿ ಇನ್ನೂ ಅಪರೂಪದಲ್ಲಿ Paget's disease (ಸ್ತನತೊಟ್ಟುಗಳಲ್ಲಿ ಆವರಿಸುವ ಕ್ಯಾನ್ಸರ್) ಹಾಗೂ inflammatory breast cancer ಅಥವಾ ಸ್ತನಭಾಗದಲ್ಲಿ ತ್ವಚೆ ಕೆಂಪಗಾಗುವ ಮತ್ತು ದೊರಗಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸ್ತನ ಕ್ಯಾನ್ಸರ್ ಇರುವಿಕೆಯನ್ನು ತೋರ್ಪಡಿಸುವ ಲಕ್ಷಣಗಳು:

1. ಗಡ್ಡೆಗಳು:

ಸಾಮಾನ್ಯವಾಗಿ ಪುರುಷರು ತಮ್ಮ ಎದೆಯಭಾಗದಲ್ಲಿ ಗಡ್ಡೆಯ ಇರುವಿಕೆಯನ್ನೇ ಅಲಕ್ಷಿಸುತ್ತಾರೆ, ಏಕೆಂದರೆ ಇದು ಸ್ತನ ಕ್ಯಾನ್ಸರ್ ಇರಬಹುದು ಎಂಬ ಕಲ್ಪನೆಯೇ ಇವರಿಗೆ ಇರುವುದಿಲ್ಲ. ಸಾಮಾನ್ಯವಾಗಿ ಈ ಗಡ್ಡೆಗಳಲ್ಲಿ ನೋವಿಲ್ಲದಿದ್ದು ಕೆಲವರಲ್ಲಿ ಮಾತ್ರ ಸ್ಪರ್ಶಿಸಿದರೆ ನವಿರಾದ ಕಚಗುಳಿಯಂತಹ ಭಾವನೆ ಮೂಡುತ್ತದೆ. ಒಂದು ವೇಳೆ ಈ ಕ್ಯಾನ್ಸರ್ ಹೆಚ್ಚು ಹರಡುತ್ತಾ ಹೋದರೆ ಕಂಕುಳು ಹಾಗೂ ಭುಜದ ಮೂಳೆಗಳ ಬಳಿಯಲ್ಲಿಯೂ ಗಡ್ಡೆಗಳು ಕಾಣಿಸಿಕೊಳ್ಳಬಹುದು.

2. ಸ್ತನತೊಟ್ಟು ಒಳಕ್ಕೆ ಸೆಳೆದಿರುವುದು

ಆರೋಗ್ಯವಂತ ಪುರುಷರು ಮತ್ತು ಮಹಿಳೆಯರಲ್ಲಿ ಸ್ತನತೊಟ್ಟು ಸದಾ ಹೊರಚಾಚಿಕೊಂಡಿರಬೇಕು. ಒಂದು ವೇಳೆ ಎದೆಯ ಅಂಗಾಂಶ ಕ್ಯಾನ್ಸರ್ ಗೆ ಒಳಗಾದರೆ ಇದು ಸ್ತನತೊಟ್ಟಿನ ಸುತ್ತಲ ಭಾಗವನ್ನು ಸೆಳೆಯಲು ತೊಡಗುತ್ತದೆ. ಪರಿಣಾಮವಾಗಿ ಸ್ತನತೊಟ್ಟಿನ ಅಡಿಭಾಗದಲ್ಲಿ ಖಾಲಿಜಾಗ ಕಂಡುಬಂದು ಸ್ತನತೊಟ್ಟನ್ನು ಒಳಗೆಳೆದುಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ತನತೊಟ್ಟಿನ ಸುತ್ತಲ ಭಾಗದ ಚರ್ಮ ತೀರಾ ಒಣಗಿ ಸಿಪ್ಪೆಯಂತೆ ಏಳಲು ಪ್ರಾರಂಭಿಸುತ್ತದೆ.

3. ಸ್ತನತೊಟ್ಟಿನಿಂದ ದ್ರವ ಜಿನುಗುವುದು:

ಕೆಲವು ಸಂದರ್ಭಗಳಲ್ಲಿ ಪುರುಷರಲ್ಲಿ ಸ್ತನ ಕ್ಯಾನ್ಸರ್ ಈಗತಾನೇ ಪ್ರಾರಂಭವಾಗಿದ್ದರೆ ಸ್ತನತೊಟ್ಟಿನಿಂದ ಕೆಲವು ತೊಟ್ಟು ದ್ರವ ಜಿನುಗಿ ತೊಟ್ಟಿದ್ದ ಬನಿಯನ್ ಅಥವಾ ಶರ್ಟಿನ ಮೇಲೆ ಕಲೆಗಳನ್ನು ಮೂಡಿಸುತ್ತದೆ. ಸಾಮಾನ್ಯವಾಗಿ ಈ ಕಲೆಗಳು ಟೀ ಚೆಲ್ಲಿ ಆಗಿರಬಹುದು ಎಂದೇ ಹೆಚ್ಚಿನ ಪುರುಷರು ಅಸಡ್ಡೆ ತೋರುತ್ತಾರೆ. ಒಂದು ವೇಳೆ ಎದೆಯ ಒಂದೇ ಭಾಗದಲ್ಲಿ ಈ ಸ್ರವಿಕೆ ಸತತವಾಗಿ ಕಂಡುಬರುತ್ತಿದ್ದರೆ ಇದಕ್ಕೆ ಸ್ತನ ಕ್ಯಾನ್ಸರ್ ಗೆ ಒಳಗಾದ ಅಂಗಾಂಶದ ಸುತ್ತಲ ಭಾಗದಲ್ಲಿ ದ್ರವ ತುಂಬಿಕೊಂಡು ಸ್ತನತೊಟ್ಟಿನ ಮೂಲಕ ಹೊರಸ್ರವಿಸುತ್ತದೆ.

4. ಸ್ತನತೊಟ್ಟಿನ ಚರ್ಮದಲ್ಲಿ ರಂಧ್ರ ಮೂಡುವುದು (Open Sores)

ಕ್ಯಾನ್ಸರ್ ನ ಇರುವಿಕೆಯನ್ನು ಕಡೆಗಣಿಸಿದ ಕೆಲವು ವಿಪರೀತ ಸಂದರ್ಭಗಳಲ್ಲಿ ಪುರುಷರ ಸ್ತನತೊಟ್ಟಿನ ಚರ್ಮದ ಭಾಗದಲ್ಲಿ ರಂಧ್ರವೊಂದು ಮೂಡುತ್ತದೆ. ಅಡಿಯಲ್ಲಿರುವ ಅಂಗಾಂಶ ಅತಿ ಹೆಚ್ಚೇ ಬೆಳೆದು ಈಗ ಸ್ತನತೊಟ್ಟಿನ ಮೂಲಕ ಹೊರಗೆ ತೂರುವ ಪ್ರಯತ್ನದಲ್ಲಿ ಚರ್ಮ ಹರಿದು ರಂಧ್ರವುಂಟಾಗುತ್ತದೆ. ಪುರುಷರು ಹುಟ್ಟಿದಾಗಿನಿಂದ ಅತಿ ಕಡಿಮೆ ಪ್ರಮಾಣದ ಸ್ತನ ಅಂಗಾಂಶವನ್ನು ಹೊಂದಿದ್ದರೂ ಈಗ ಬೆಳವಣಿಗೆಯಾಗಿರುವ ಕ್ಯಾನ್ಸರ್ ಗಡ್ಡೆ ಚರ್ಮವನ್ನು ತೂರಿ ಹೊರಬರುವ ಸಾಧ್ಯತೆಗಳಿವೆ. ಈ ಸ್ಥಿತಿ ಎದುರಾದ ಪುರುಷರ ಸ್ತನದ ತೊಟ್ಟಿನಲ್ಲಿ ಈ ರಂಧ್ರ ಈಗ ತಾನೇ ಒಡೆದ ಮೊಡವೆಯಂತೆ ತೋರುತ್ತದೆ. ಈ ಭಾಗದಲ್ಲಿ ಚಿಕ್ಕದೇ ಆದರೂ ಸರಿ, ಯಾವುದೇ ಲಕ್ಷಣಗಳು ಕಂಡುಬಂದರೆ ತಡಮಾಡದೇ ವೈದ್ಯರಲ್ಲಿ ಸಲಹೆ ಪಡೆದುದೊಳ್ಳಬೇಕು.

ಅಲ್ಲದೇ ಅಪರೂಪವಾದ ಈ ಕ್ಯಾನ್ಸರ್ ಗೆ ಪ್ರಾರಂಭಿಕ ಸ್ಥಿತಿಯಲ್ಲಿಯೇ ಚಿಕಿತ್ಸೆ ಆರಂಭಿಸಿದರೆ ಪೂರ್ಣವಾಗಿ ಗುಣವಾಗುವ ಸಾಧ್ಯತೆಯೂ ಹೆಚ್ಚು. ಕ್ಯಾನ್ಸರ್ ಆವರಿಸಿದ ಅಂಗಾಂಶದ ಗಡ್ಡೆಯ ಬೆಳವಣಿಗೆಯನ್ನು ಅನುಸರಿಸಿ ವೈದ್ಯರು ಈ ಭಾಗವನ್ನೇ ಪೂರ್ಣವಾಗಿ ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸುವ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಉಳಿದಂತೆ ಖೀಮೋಥೆರಪಿ, ರೇಡಿಯೇಶನ್ ಥೆರಪಿ ಮೊದಲಾದ ಚಿಕಿತ್ಸೆಗಳನ್ನು ವೈದ್ಯರೇ ಅಗತ್ಯಕ್ಕನುಗುಣವಾಗಿ ನಿರ್ಧರಿಸಿ ಸೂಚಿಸುತ್ತಾರೆ.

ಸ್ತನ ಕ್ಯಾನ್ಸರ್ ಬರದಂತೆ ತಡೆಯಲು 7 ಉತ್ತಮ ಸಲಹೆಗಳು!

English summary

Can Men Get Breast Cancer, Too? Yes, At Any Age!

Men generally think that they don't really have breast tissue. But the truth is, they do. Maybe men have lesser breast tissue than women and so the risk of developing breast cancer in men is comparatively rarer, but it's not an absolute myth. It's true that whenever we talk about breast cancer, we barely talk or even think about men who are also diagnosed with this condition. We assume breast cancer is exclusively a woman's disease. In fact, men make up even less than one per cent of global breast cancer cases. But the risk still exists, right? And you know what's worse? Most men often ignore the symptoms.
X
Desktop Bottom Promotion