For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರಗಳು

By Arshad
|

ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ಲೈಂಗಿಕ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇದಕ್ಕೆ ದೈಹಿಕ, ಮಾನಸಿಕ, ಜೀವನಕ್ರಮ ಅಥವಾ ದೂರವನ್ನು ಅನಿವಾರ್ಯವಾಗಿ ಕಾಪಾಡಿಕೊಳ್ಳಬೇಕಾದ ಕಾರಣಗಳಿರಬಹುದು. ಆದರೆ ಯಾರಿಗೂ ಈ ಆರೋಗ್ಯದಿಂದ ವಿಮುಖರಾಗುವುದು ಇಷ್ಟವಿಲ್ಲ. ಪುರುಷರಲ್ಲಿ ಈ ಶಕ್ತಿಯನ್ನು ಉತ್ತಮವಾಗಿ ಉಳಿಸಿಕೊಂಡು ಹೋಗುವ ಆಹಾರಗಳನ್ನು ಸೇವಿಸುವುದು ಅಗತ್ಯ.

ಲೈಂಗಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವ ಆಹಾರಗಳನ್ನು ಸೇವಿಸುವ ಹಾಗೂ ಲೈಂಗಿಕ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಮಾರಕವಾಗುವ ಯಾವುದೇ ವ್ಯಸನಗಳಿಂದ ದೂರವಿರುವುದೂ ಅಷ್ಟೇ ಅಗತ್ಯವಾಗಿದೆ. ಮದ್ಯಪಾನ, ಮಾದಕ ವಸ್ತುಗಳ ಸೇವನೆ, ನಿದ್ದೆಯ ಕೊರತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಹಾರ್ಮೋನುಗಳ ಏರಿಳಿತ ಮೊದಲಾದವು ಲೈಂಗಿಕ ಶಕ್ತಿ ಕುಂದಲು ಕಾರಣವಾಗಿವೆ.

ಕೆಲವು ಅನಾರೋಗ್ಯದ ಪರಿಣಾಮದಿಂದಲೂ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಒಂದು ವೇಳೆ ಮಾನಸಿಕ ಒತ್ತಡ ತೀವ್ರವಾಗಿದ್ದರೂ ಇದು ದೇಹದ ರಸದೂತಗಳ ಕ್ರಿಯೆಗೆ ಅಡ್ಡಿಪಡಿಸುವ ಮೂಲಕವೂ ಲೈಂಗಿಕ ಶಕ್ತಿ ಕುಂದಲು ಕಾರಣವಾಗಬಹುದು. ಲೈಂಗಿಕ ಶಕ್ತಿ ಕುಂದಲಿಕ್ಕೂ ಖಿನ್ನತೆಯೂ ಸಂಕೀರ್ಣವಾದ ಸಂಬಂಧವಿರುವುದನ್ನು ಕಂಡುಕೊಳ್ಳಲಾಗಿದೆ. ಆತ್ಮವಿಶ್ವಾಸದ ಕೊರತೆಯೂ ಇದಕ್ಕೆ ಇನ್ನೊಂದು ಕಾರಣ.

ಲೈಂಗಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವುದು ದಂಪತಿಗಳ ನಡುವಣ ಬಾಂಧವ್ಯ ಉತ್ತಮವಾಗಿರಿಸಲು ಅಗತ್ಯ ಹಾಗೂ ಪರಸ್ಪರರ ಜೊತೆಗೂ ಮೂಲವಾಗಿದೆ. ಪುರುಷರ ಲೈಂಗಿಕ ವಿಷಯದಲ್ಲಿ ಒಳ್ಳೆಯ ಸುದ್ದಿ ಏನೆಂದರೆ ನಿತ್ಯದ ಸೇವನೆಯಲ್ಲಿ ಕೆಲವು ಆಹಾರಗಳನ್ನು ಸೇರಿಸಿಕೊಳ್ಳುವ ಮೂಲಕ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ..

ಮಲಗುವ ಮುನ್ನ ಬಾಳೆಹಣ್ಣು ಸೇವಿಸಿ

ಮಲಗುವ ಮುನ್ನ ಬಾಳೆಹಣ್ಣು ಸೇವಿಸಿ

ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ. ಇನ್ನು ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ೧ ಹಾಗೂ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತವೆ. ಬಾಳೆಹಣ್ಣಿನಲ್ಲಿರುವ ಇನ್ನೊಂದು ಕಿಣ್ವವಾದ ಬ್ರೋಮಿಲೈನ್ ಒಂದು ನೈಸರ್ಗಿಕ ಉರಿಯೂತ ನಿವಾರಕ ವಾಗಿದ್ದು ಒಟ್ಟು ವೀರ್ಯಾಣುಗಳ ಸಂಖ್ಯೆ ಹಾಗೂ ಅದರಲ್ಲಿ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುತ್ತದೆ.

ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸಿ

ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸಿ

ಕಾಫಿ ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

ನಿಯಮಿತವಾಗಿ ಬಿಸಿ ಮಸಾಲೆ ಪದಾರ್ಥಗಳನ್ನು ಸೇವಿಸಿ

ನಿಯಮಿತವಾಗಿ ಬಿಸಿ ಮಸಾಲೆ ಪದಾರ್ಥಗಳನ್ನು ಸೇವಿಸಿ

ಒಂದು ಅಧ್ಯಯನದ ಪ್ರಕಾರ ಬಿಸಿ ಸಾಸ್ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸುವ ಪುರುಷರಲ್ಲಿ ಪುರುಷರ ಹಾರ್ಮೋನ್ ಆದ ಟೆಸ್ಟೋಸ್ಟಿರೋನ್ ಅಧಿಕವಾಗಿರುವುದು ಕಂಡು ಬರುತ್ತದೆಯಂತೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ಅಂಶವು ಶಿಶ್ನದ ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಸಹ ಕರಗಿಸುತ್ತದೆಯಂತೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್‌ನಲ್ಲಿ ಮೆಗ್ನಿಷಿಯಂ ಪ್ರಮಾಣ ಅಧಿಕವಾಗಿರುತ್ತದೆ ಮತ್ತು ಇದು ರಕ್ತ ನಾಳಗಳ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್ ಅನ್ನು ಪ್ರತಿದಿನ ಸೇವಿಸುವ ಮೂಲಕ ವಯಾಗ್ರ ನೀಡುವಂತಹ ಶಕ್ತಿಯನ್ನು ನಾವು ಸ್ವಾಭಾವಿಕವಾಗಿ ಪಡೆಯಬಹುದು. ಇದರಲ್ಲಿ ಉದ್ದೀಪನಗೊಳಿಸುವ ಅಂಶ ಹಾಗು ಲೈಂಗಿಕ ಕ್ರಿಯೆ ನಡೆಸುವಾಗ ಅಧಿಕ ಆನಂದವನ್ನು ಸಹ ನೀಡಲು ಸಹಾಯ ಮಾಡುತ್ತದೆ.

ಟೊಮೇಟೊ ಹಣ್ಣುಗಳು

ಟೊಮೇಟೊ ಹಣ್ಣುಗಳು

ಟೊಮೇಟೊಗಳನ್ನು ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ ಹಾಗು ಇವರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೊಮಾಟೊದಲ್ಲಿರುವ "ಲೈಕೊಪೀನ್" ಎಂಬ ಆಂಟಿಆಕ್ಸಿಡೆಂಟ್ ಕಾರಣ. ಇದು ಪುರುಷರ ಜನನಾಂಗದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ನಿವಾರಿಸುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆಹಣ್ಣಿನಲ್ಲಿರುವ ಪೋಷಕಾಂಶಗಳು ಈ ಹಣ್ಣನ್ನು ಅತ್ಯುತ್ತಮ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸಿವೆ. ಇದರಲ್ಲಿ ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್ B6 ಸಹಿತ ಹಲವಾರು ಪೋಷಕಾಂಶಗಳಿದ್ದು ದೇಹದ ಚೈತನ್ಯವನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಪುರುಷರಲ್ಲಿ ಬೆಣ್ಣೆಹಣ್ಣಿನ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆಯಲ್ಲಿ ವೃದ್ಧಿ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.

ಏಲಕ್ಕಿ

ಏಲಕ್ಕಿ

ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಏಲಕ್ಕಿಯೂ ಪ್ರಮುಖ ಸ್ಥಾನವನ್ನು ಪಡೆದಿದೆ. ಇದರಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಉತ್ತಮ ನಿಮಿರುವಿಕೆಗೂ ಏಲಕ್ಕಿ ಅದ್ಭುತವಾದ ಆಹಾರವಾಗಿದೆ.

ಶುಂಠಿ

ಶುಂಠಿ

ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ. ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ. ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿ ಸಮೃದ್ಧವಾಗಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆಮ್ಲವು ನಿಮಿರುವಿಕೆಯನ್ನು ಗಟ್ಟಿಗೊಳಿಸುತ್ತದೆಯಂತೆ. ಈ ಅಮೈಒ ಆಮ್ಲವು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಕಲ್ಲಂಗಡಿಯು ನಿಮ್ಮ ಶಿಶ್ನದ ಆರೋಗ್ಯವನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಆಹಾರ ಪದಾರ್ಥವಾಗಿರುತ್ತದೆ.

ಚಾಕಲೇಟು

ಚಾಕಲೇಟು

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ನೆಚ್ಚಿನ ಚಾಕಲೇಟು ಸಹಾ ಒಂದು ಇದರಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಕಪ್ಪು ಚಾಕಲೇಟು (ಅಂದರೆ ಇಡಿಯ ಚಾಕಲೇಟಿನಲ್ಲಿ ಕೋಕೋ ಪ್ರಮಾಣ 70%ಕ್ಕೂ ಹೆಚ್ಚಿರುವ ಚಾಕಲೇಟು) ಸಹಾ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಳಕ್ಕೆ ನೆರವಾಗುತ್ತದೆ. ಇದರಲ್ಲಿರುವ ಅಮೈನೋ ಆಮ್ಲಗಳು ಒಟ್ಟು ವೀರ್ಯಾಣುಗಳ ಸಂಖ್ಯೆ ಹಾಗೂ ಆರೋಗ್ಯವಂತ ವೀರ್ಯಾಣುಗಳ ಪ್ರಮಾಣವೂ ಹೆಚ್ಚಾಗಲು ನೆರವಾಗುತ್ತವೆ. ಅಷ್ಟೇ ಅಲ್ಲ, ದಂಪತಿಗಳ ಮಿಲನದ ಸಮಯದಲ್ಲಿ ಕಾಮಪರಾಕಾಷ್ಠೆಯನ್ನೂ ಉತ್ತಮಗೊಳಿಸುತ್ತದೆ.

ಜಾಯಿಕಾಯಿ (Nutmeg)

ಜಾಯಿಕಾಯಿ (Nutmeg)

ಜಾಯಿಕಾಯಿ ನರಗಳ ಜೀವಕೋಶಗಳಿಗೆ ಪ್ರಚೋದನೆ ನೀಡಿ ಹೆಚ್ಚಿನ ರಕ್ತಸಂಚಾರಕ್ಕೆ ನೆರವಾಗುತ್ತದೆ. ಪರಿಣಾಮವಾಗಿ ಪುರುಷರಲ್ಲಿ ನಿಮಿರುತನ ಇನ್ನಷ್ಟು ಉತ್ತಮಗೊಳ್ಳುತ್ತದೆ.

ಶೇಂಗಾಬೀಜ

ಶೇಂಗಾಬೀಜ

ಶೇಂಗಾಬೀಜಗಳಲ್ಲಿರುವ ಸತು ಆರೋಗ್ಯಕರ ವೀರ್ಯಾಣುಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಹಾಗೂ ಈ ಮೂಲಕ ವೀರ್ಯಾಣುಗಳ ಸಂಖ್ಯೆಯೂ ಹೆಚ್ಚುತ್ತದೆ. ಈ ಸಂಖ್ಯೆ ಹೆಚ್ಚಿದಷ್ಟೂ ಫಲವತ್ತತೆಯೂ ಹೆಚ್ಚುತ್ತದೆ.

ಎಡಮೇಮ್ (Edamame)

ಎಡಮೇಮ್ (Edamame)

ನಮ್ಮ ಹಸಿರು ಬಟಾಣಿಯಂತೆಯೇ ತೋರುವ ಈ ಬೀಜಗಳು ಸಹಾ ಪುರುಷರ ಲೈಂಗಿಕ ಆರೋಗ್ಯ ಉತ್ತಮಗೊಳಿಸಲು ಯೋಗ್ಯವಾದ ಆಹಾರಗಳಾಗಿವೆ. ಇದರಲ್ಲಿರುವ ಕೆಲವು ರಾಸಾಯನಿಕಗಳು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೆಗ್ನೀಸಿಯಮ್ ಭರಿತ ಆಹಾರಗಳು

ಮೆಗ್ನೀಸಿಯಮ್ ಭರಿತ ಆಹಾರಗಳು

ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಮೆಗ್ನೀಸಿಯಮ್ ಸಹಾಯ ಮಾಡುತ್ತದೆ. ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವುದು ಪುರುಷತ್ವಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಕೊನೆಗೊಳ್ಳುವಲ್ಲಿ ಸಹಾಯ ಮಾಡುತ್ತದೆ. ಪುರುಷ ವರ್ಧನೆಗೆ ಇದು ಅತ್ಯುತ್ತಮ ಮನೆ ಪರಿಹಾರವಾಗಿದೆ.

ಮೆಣಸಿನ ಕಾಳು

ಮೆಣಸಿನ ಕಾಳು

ಮೆಣಸಿನ ಕಾಳು ವಿಟಮಿನ್ ಎ, ವಿಟಮಿನ್ ಬಿ 6, ವಿಟಮಿನ್ ಸಿ, ರಿಬೋಫ್ಲಾವಿನ್, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ನ ಉತ್ತಮ ಮೂಲವಾಗಿದೆ, ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಪುರುಷತ್ವವನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ.

ವಿಟಮಿನ್ B3 ಹೊಂದಿರುವ ಆಹಾರಗಳು

ವಿಟಮಿನ್ B3 ಹೊಂದಿರುವ ಆಹಾರಗಳು

ವಿಟಮಿನ್ ಬಿ 3 ದೈನಂದಿನ ಪ್ರಮಾಣವು ನಿಮಿರುವಿಕೆಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಪುರುಷರ ಅಂಗಾಂಶಕ್ಕೆ ರಕ್ತದ ಹರಿವನ್ನು ಹೆಚ್ಚಿಸಲು ಈ ಜೀವಸತ್ವವು ಸಹಾಯ ಮಾಡುತ್ತದೆ.

ಕ್ಯಾರೆಟ್

ಕ್ಯಾರೆಟ್

ಪುರುಷರ ಫಲವತ್ತತೆಯನ್ನು ಸುಧಾರಿಸಲು ಗಜ್ಜರಿ ಅಥವಾ ಕ್ಯಾರೆಟ್ ಸಹಾಯ ಮಾಡುತ್ತದೆ. ಅವುಗಳು ಅತ್ಯಂತ ಪರಿಣಾಮಕಾರಿ ಅಯಾನ್ ಚತುರತೆ ಹೊಂದಿವೆ. ಇದು ಮೊಟ್ಟೆಯ ಕಡೆಗೆ ಈಜುವುದಕ್ಕೆ ವೀರ್ಯದ ಸಾಮರ್ಥ್ಯ ಹೆಚ್ಚಿಸುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ಸತು, ಸೆಲೆನಿಯಮ್ ಮತ್ತು ವಿಟಮಿನ್ ಇ ಸಮೃದ್ಧವಾಗಿರುತ್ತವೆ. ಇವು ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿಗೆ ಹೆಚ್ಚು ಸಹಾಯಕವಾಗಿರುತ್ತದೆ. ಇದರಲ್ಲಿರುವ ಝಿಂಕ್ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

 ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ B5 ಹಾಗೂ B6 ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ. ಇನ್ನು ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ B5 ಹಾಗೂ B6 ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ

ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ.

English summary

Best Foods for Sexual Stamina for men

Sexual health is usually something that we overlook. No matter, whether it is due to physiological, emotional or lifestyle factors; nobody wants to compromise on sexual health. Include foods that increase sexual health in men is a plus point. Sexual health food for men helps to enhance the sex life. Usually alcohol and drug use, lack of sleep, certain medications and hormone imbalance are some reasons for low libido. Some health conditions will cause erectile dysfunction as well.
X
Desktop Bottom Promotion