For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಲೈಂಗಿಕ ದೌರ್ಬಲ್ಯವನ್ನು ಹೋಗಲಾಡಿಸಲು ಅಶ್ವಗಂಧದ ಪ್ರಯೋಜನಗಳು

|

ಲೈಂಗಿಕ ಅಸಾಮರ್ಥ್ಯದಿಂದ ಬಳಲುತ್ತಿರುವ ಪುರುಷರು ಅಗತ್ಯವಾಗಿ ತಿಳಿದುಕೊಂಡಿರಬೇಕಾದ ವಿಷಯವೊಂದಿದೆ: ಲೈಂಗಿಕ ಆರೋಗ್ಯ ಪ್ರತ್ಯೇಕವಾದ ಆರೋಗ್ಯವಾಗಿದ್ದು ಒಟ್ಟಾರೆ ಆರೋಗ್ಯ, ಹುರುಪು ಅಥವಾ ಜೀವನಕ್ರಮದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಶೀಘ್ರಸ್ಖಲನ, ನಿಮಿರು ದೌರ್ಬಲ್ಯ, ನಪುಂಸಕತ್ವ ಹಾಗೂ ಇದಕ್ಕೆ ಸಂಬಂದಿಸಿದಂತೆ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿತ ಅಥವಾ ಆರೋಗ್ಯಕರ ವೀರ್ಯಾಣುಗಳ ಕೊರತೆ ಹಾಗೂ ಅಗತ್ಯಕ್ಕೂ ಕಡಿಮೆ ಇರುವ ಸಾಂದ್ರತೆ ಮೊದಲಾದವು ಕೆಲವು ಅಂಶಗಳನ್ನು ಆಧರಿಸಿರುತ್ತವೆ. ಪ್ರಮುಖವಾಗಿ ಪೌಷ್ಟಿಕತೆಯಲ್ಲಿ ಅಸಮತೋಲನ, ಅನಾರೋಗ್ಯಕರ ಜೀವನಶೈಲಿ, ಧೂಮಪಾನ-ಮದ್ಯಪಾನದಂತಹ ದುರಭ್ಯಾಸಗಳು, ದೈಹಿಕ ವ್ಯಾಯಾಮದ ಕೊರತೆ, ಕೆಲವು ಅನಾರೋಗ್ಯದ ಪರಿಣಾಮ ಹಾಗೂ ಮುಖ್ಯವಾಗಿ ಮಾನಸಿಕ ಒತ್ತಡ ಇವುಗಳಲ್ಲಿ ಪ್ರಮುಖ ಅಂಶಗಳಾಗಿವೆ.

ಒಂದು ವೇಳೆ ನಪುಂಸಕತ್ವಕ್ಕೆ ಯಾವುದಾದರೊಂದು ಅನಾರೋಗ್ಯವೇ ಪ್ರಮುಖ ಕಾರಣವಾಗಿದ್ದರೆ ಆ ತೊಂದರೆ ಇಲ್ಲವಾಗುವವರೆಗೂ ಲೈಂಗಿಕ ದೌರ್ಬಲ್ಯವೂ ಕಾಡುತ್ತದೆ. ಒಂದಕ್ಕಿಂತ ಹೆಚ್ಚು ಅಂಶಗಳಿದ್ದರೆ ಇದಕ್ಕೆ ಸೂಕ್ತ ಔಷಧಿಯನ್ನು ಸೂಚಿಸುವುದೇ ವೈದ್ಯರಿಗೆ ಕಷ್ಟವಾಗಬಹುದು. ಈ ಸಂದರ್ಭದಲ್ಲಿ ಆಯುರ್ವೇದ ಒಂದು ಅದ್ಭುತ ಮೂಲಿಕೆಯನ್ನು ಸೇವಿಸಲು ಸಲಹೆ ಮಾಡುತ್ತದೆ. ಇದೇ ಅಶ್ವಗಂಧ. ಬನ್ನಿ, ಪುರುಷರಲ್ಲಿ ಲೈಂಗಿಕ ದೌರ್ಬಲ್ಯವನ್ನು ಹೋಗಲಾಡಿಸಲು ಅಶ್ವಗಂಧ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ...

ಪುರುಷರಿಗೆ ಅಶ್ವಗಂಧ ಬೇರಿನ ಔಷಧಿಯ ಪ್ರಯೋಜನಗಳು

ಪುರುಷರಿಗೆ ಅಶ್ವಗಂಧ ಬೇರಿನ ಔಷಧಿಯ ಪ್ರಯೋಜನಗಳು

ವೀರ್ಯಾಣುಗಳ ಸಾಂದ್ರತೆ, ಪ್ರಮಾಣ, ಸಂಖ್ಯೆ ಹಾಗೂ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯಲ್ಲಿ ವೃದ್ಧಿ ದೈಹಿಕವಾಗಿ ಪುರುಷ ಉತ್ತಮ ಆರೋಗ್ಯವನ್ನು ಹೊಂದಿದ್ದರೂ ಸಂತಾನಪ್ರಾಪ್ತಿಯಾಗದೇ ಇದ್ದಲ್ಲಿ ಇದಕ್ಕೆ ವೀರ್ಯಾಣುಗಳ ಒಟ್ಟು ಸಂಖ್ಯೆ, ಸಾಂದ್ರತೆ ಅಥವಾ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆಯುಂಟಾಗಿರಬಹುದು. ಈ ಎಲ್ಲಾ ತೊಂದರೆಗಳನ್ನು ಅಶ್ವಗಂಧ ಯಶಸ್ವಿಯಾಗಿ ನಿವಾರಿಸುತ್ತದೆ. ಈ ವಿಷಯದಲ್ಲಿ ಸತತವಾಗಿ ಮೂರು ತಿಂಗಳು ನಡೆಸಿದ ಅಧ್ಯಯನದ ಬಳಿಕ ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದ (oligospermia) ಪುರುಷರಿಗೆ ಅಶ್ವಗಂಧ ಬೇರಿನ ಔಷಧಿಯ ಚಿಕಿತ್ಸೆಯನ್ನು ನೀಡಿದ ಬಳಿಕ ಪ್ರತಿ ಸಿಸಿಯಲ್ಲಿ ನಲವತ್ತಾರು ಮಿಲಿಯನ್ ಗೆ ಏರಿದ್ದು ಕಂಡುಬಂದಿದೆ.

 ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ

ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ

ವೀರ್ಯವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿರಿಸಿ ನೋಡಿದರೆ ಇದರಲ್ಲಿ ವೀರ್ಯಾಣುಗಳು ದ್ರವದಲ್ಲಿ ಈಜುತ್ತಿರುವುದನ್ನು ಗಮನಿಸಬಹುದು. ಈ ದ್ರವದಲ್ಲಿ ಅಮೈನೋ ಆಮ್ಲಗಳು, ಅವಶ್ಯಕ ಲವಣ, ವಿಟಮಿನ್ನು ಮತ್ತು ಆಂಟಿ ಆಕ್ಸಿಡೆಂಟುಗಳು ಇರುತ್ತವೆ ಹಾಗೂ ಇವೆಲ್ಲವೂ ಪುರುಷರ ಲೈಂಗಿಕ ಆರೋಗ್ಯಕ್ಕೆ ಅತಿ ಅವಶ್ಯವಾಗಿವೆ. ಭಾರತದಲ್ಲಿ ನಡೆಸಿದ ಕೆಲವು ಪ್ರಯೋಗಗಳಲ್ಲಿ ನಪುಂಸಕತ್ವದ ತೊಂದರೆ ಇದ್ದ ದಂಪತಿಗಳಿಗೆ ಸತತ ಮೂರು ತಿಂಗಳವರೆಗೆ ಅಶ್ವಗಂಧವನ್ನು ಸೇವಿಸಲು ಸೂಚಿಸಲಾಯಿತು. ಈ ಅವಧಿಯ ಬಳಿಕ ಪುರುಷರ ವೀರ್ಯದಲ್ಲಿರುವ ದ್ರವ ಪ್ರದಾರ್ಥ (ಪ್ಲಾಸ್ಮಾ), ಅವಶ್ಯಕ ಲವಣ, ಅಮೈನೋ ಆಮ್ಲಗಳಾದ ಲ್ಯಾಕ್ಟೇಟ್, ಸಿಟ್ರೇಟ್, ಅಲನೈನ್, GPC,ಹಿಸ್ಟಿಡೈನ್ ಹಾಗೂ ಫೀನೈಲ್ ಅಲನೈನ್ ಮೊದಲಾದವು ಉತ್ತಮ ಪ್ರಮಾಣಕ್ಕೆ ಹೆಚ್ಚಳಗೊಂಡಿದ್ದು ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸಿದ್ದುದು ಕಂಡುಬಂದಿತ್ತು. ವೀರ್ಯಪರೀಕ್ಷೆಯಲ್ಲಿ ಈಗ ಇವುಗಳಲ್ಲಿ ಹೆಚ್ಚು ಸಮರ್ಥವಾದ ವೀರ್ಯಾಣುಗಳಿರುವುದು, ಸೂಕ್ತ ಸಂಖ್ಯೆಯಲ್ಲಿರುವುದು ಹಾಗೂ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿತ್ತು.

Most Read:ಸಡನ್ ಆಗಿ ಎದೆ ನೋವು ಕಾಣಿಸಿಕೊಂಡರೆ ಯಾವತ್ತೂ ನಿರ್ಲಕ್ಷಿಸಬೇಡಿ!

ಟೆಸ್ಟಾಸ್ಟೆರೋನ್ ಮಟ್ಟದಲ್ಲಿ ಹೆಚ್ಚಳ ಹಾಗೂ ಸಂತಾನೋತ್ಪತ್ತಿ ರಸದೂತಗಳಲ್ಲಿ ಸಮತೋಲನ

ಟೆಸ್ಟಾಸ್ಟೆರೋನ್ ಮಟ್ಟದಲ್ಲಿ ಹೆಚ್ಚಳ ಹಾಗೂ ಸಂತಾನೋತ್ಪತ್ತಿ ರಸದೂತಗಳಲ್ಲಿ ಸಮತೋಲನ

ಪುರುಷರಲ್ಲಿ ಫಲವತ್ತತೆ ಇರಬೇಕೆಂದರೆ ಇವರಲ್ಲಿ ಸಂತಾನೋತ್ಪತ್ತಿ ರಸದೂತಗಳಲ್ಲಿ ಸಮತೋಲನದಲ್ಲಿರಬೇಕು. ಇದೇ ಕಾರಣಕ್ಕೆ ವೈದ್ಯರು ವೀರ್ಯಪರೀಕ್ಷೆಗೆ ಬರೆದು ಕೊಡುವಾಗ ಇದರಲ್ಲಿ ಟೆಸ್ಟಾಸ್ಟೆರೋನ್, ಲ್ಯೂಟಿನೈಜಿಂಗ್ ಹಾರ್ಮೋನ್, ಫಾಲಿಕಲ್-ಸ್ಟಿಮುಲೇಟಿಂಗ್ ಹಾರ್ಮೊಣ್ ಹಾಗೂ ರಕ್ತದಲ್ಲಿ ಪ್ರೊಲಾಕ್ಟಿನ್ ಅಂಶ ಎಷ್ಟಿದೆ ಎಂಬ ವಿವರಗಳನ್ನು ಅಪೇಕ್ಷಿಸುತ್ತಾರೆ. ಒಂದು ಅಧ್ಯಯನದಲ್ಲಿ ಅಶ್ವಗಂಧದ ಪ್ರಯೋಗದಿಂದ ಇವೆಲ್ಲವೂ ಉತ್ತಮವಾಗಿ ವೃದ್ದಿಗೊಂಡಿರುವುದು ಕಂಡುಬಂದಿದೆ.

ವೃಷಣದ ಆರೋಗ್ಯ ಮತ್ತು ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ

ವೃಷಣದ ಆರೋಗ್ಯ ಮತ್ತು ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ

ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಕಂಡುಕೊಂಡಂತೆ ಅಶ್ವಗಂಧದ ಸೇವನೆಯಿಂದ ಪುರುಷಪ್ರಣಿಯಲ್ಲಿ ಲೈಂಗಿಕ ಮಾನದಂಡಗಳು ಉತ್ತಮಗೊಂಡಿರುವುದು ಕಂಡುಬಂದಿದೆ. ವಿಶೇಷವಾಗಿ ಈ ವ್ಯತ್ಯಾಸಗಳು ಟೆಸ್ಟಾಸ್ಟೆರೋನ್ ಅನ್ನು ಕೃತಕವಾಗಿ ನೀಡಿದಂತಹ ಪ್ರಭಾವದಿಂದಲೇ ಪಡೆದಿವೆ.

ವೀರ್ಯಾಣುಗಳಿಗೆ ಉತ್ಕರ್ಷಣಶೀಲ ಹಾನಿಯಾಗುವುದನ್ನು ತಪ್ಪಿಸುತ್ತದೆ

ವೀರ್ಯಾಣುಗಳಿಗೆ ಉತ್ಕರ್ಷಣಶೀಲ ಹಾನಿಯಾಗುವುದನ್ನು ತಪ್ಪಿಸುತ್ತದೆ

ವೀರ್ಯಾಣುಗಳಿಗೆ ಎದುರಾಗುವ reactive oxygen species(ROS)ಎಂಬ ಕ್ರಿಯೆಯ ಮೂಲಕ ಎದುರಾಗುವ ಉತ್ಕರ್ಷಣಶೀಲ ಹಾನಿ (oxidative damage)ಯಿಂದ ವೀರ್ಯಾಣುಗಳ ಗುಣಮಟ್ಟ, ಸಾಂದ್ರತೆ ಹಾಗೂ ವಿರೂಪಗೊಳ್ಳುವುದು ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದು ನಪುಂಸಕತ್ವಕ್ಕೆ ನೇರವಾದ ಕಾರಣವಾಗಿದೆ. ಅಶ್ವಗಂಧ ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟ್ ಆಗಿದ್ದು ಈ ಉತ್ಕರ್ಷಣಶೀಲ ಹಾನಿಗೆ ವಿರುದ್ದವಾದ ಪ್ರಭಾವವನ್ನು ಒದಗಿಸುವ ಮೂಲಕ ಈ ಹಾನಿಯಿಂದ ರಕ್ಷಿಸುತ್ತದೆ.

ಮಾನಸಿಕ ಒತ್ತಡ, ಉದ್ವೇಗ ಮತ್ತು ಖಿನ್ನತೆಗಳಿಂದ ಹೊರತರುತ್ತದೆ

ಮಾನಸಿಕ ಒತ್ತಡ, ಉದ್ವೇಗ ಮತ್ತು ಖಿನ್ನತೆಗಳಿಂದ ಹೊರತರುತ್ತದೆ

ಲೈಂಗಿಕ ಅಸಾಮರ್ಥ್ಯಕ್ಕೆ ದೈಹಿಕ ಕಾರಣಗಳಷ್ಟೇ ಮಾನಸಿಕ ಕಾರಣಗಳೂ ಇವೆ. ಮಾನಸಿಕ ಒತ್ತಡ, ಖಿನ್ನತೆ, ಉದ್ವೇಗ ಮೊದಲಾದವು ಮೆದುಳಿಗೆ ತಲುಪುವ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತವೆ. ಇದೊಂದು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ರಸದೂತವಾಗಿದ್ದು ತನ್ಮೂಲಕ ಉತ್ಕರ್ಷಣಶೀಲ ಹಾನಿಯನ್ನು ಎಸಗುತ್ತದೆ. ಅಶ್ವಗಂಧ ಈ ರಸದೂತದ ಉತ್ಪತ್ತಿಯನ್ನು ನಿಯಂತ್ರಿಸುವ ಮೂಲಕ ಮಾನಸಿಕ ತೊಂದರೆಗಳಿಂದ ಹೊರತರುವುದು ಮಾತ್ರವಲ್ಲ ಈ ಮೂಲಕ ಎದುರಾಗ ಬಹುದಾಗಿದ್ದ ಲೈಂಗಿಕ ಅಸಾಮರ್ಥ್ಯತೆಯಿಂದಲೂ ರಕ್ಷಿಸುತ್ತದೆ.

Most Read:ಮಲಗುವಾಗ ರಾತ್ರಿಯಿಡೀ ಕಾಲು ನೋವು ಬರುತ್ತಿದೆಯೇ? ಹಾಗಾದರೆ ಇದೇ ಕಾರಣವಿರಬಹುದು!

ಧೂಮಪಾನದಿಂದಾಗಿದ್ದ ಪ್ರಭಾವವನ್ನು ಹಿಂದೆ ತರುತ್ತದೆ

ಧೂಮಪಾನದಿಂದಾಗಿದ್ದ ಪ್ರಭಾವವನ್ನು ಹಿಂದೆ ತರುತ್ತದೆ

ಧೂಮಪಾನದಿಂದ ಶ್ವಾಸಕೋಶ ಮತ್ತು ಇತರ ಪ್ರಮುಖ ಅಂಗಗಳು ಮಾತ್ರವಲ್ಲ, ವೀರ್ಯಾಣುಗಳ ಮೇಲೂ ಪ್ರಭಾವ ಬೀರುತ್ತದೆ. ಧೂಮದಲ್ಲಿರುವ ಸೀಸ ಮತ್ತು ಕ್ಯಾಡ್ಮಿಯಂ ರಕ್ತದ ಮೂಲಕ ವೃಷಣಗಳಿಗೆ ತಲುಪಿದರೆ ಇಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ವಿರೂಪಗೊಳ್ಳುವುದು, ಸಾಯುವುದು ಹಾಗೂ ಕಡಿಮೆ ಸಂಖ್ಯೆಯಲ್ಲಿ ಉತ್ಪತ್ತಿಯಾಗುವ ಕಾರಣದಿಂದ ನಪುಂಸಕತ್ವ ಆವರಿಸುತ್ತದೆ. ಒಂದು ವೇಳೆ ಈ ತೊಂದರೆ ಈಗಾಗಲೇ ಎದುರಾಗಿದ್ದರೆ ತಕ್ಷಣವೇ ಧೂಮಪಾನ ತ್ಯಜಿಸಿ ಅಶ್ವಗಂಧದ ಚಿಕಿತ್ಸೆ ಪಡೆಯತೊಡಗಿದರೆ ಈ ಪರಿಣಾಮಗಳನ್ನು ನಿಲ್ಲಿಸಿ ಶೀಘ್ರವೇ ಉತ್ತಮ ಗುಣಮಟ್ಟದ ವೀರ್ಯಾಣುಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.

ಆದರೆ ನಿಮಿರುದೌರ್ಬಲ್ಯಕ್ಕೆ ಅಶ್ವಗಂಧದ ಬಳಿ ಉತ್ತರವಿಲ್ಲ

ಆದರೆ ನಿಮಿರುದೌರ್ಬಲ್ಯಕ್ಕೆ ಅಶ್ವಗಂಧದ ಬಳಿ ಉತ್ತರವಿಲ್ಲ

ಲೈಂಗಿಕ ದೌರ್ಬಲ್ಯದ ವಿಷಯದಲ್ಲಿ ಅಶ್ವಗಂಧ ಸೋಲುವ ಒಂದು ಕ್ಷೇತ್ರವೆಂದರೆ ನಿಮಿರು ದೌರ್ಬಲ್ಯ ಅಥವಾ ನಿಮಿರುತನವನ್ನು ಹೆಚ್ಚು ಹೊತ್ತು ಕಾಯ್ದಿರಿಸಲು ಸಾಧ್ಯವಾಗದೇ ಹೋಗುವುದು. ಇದೊಂದು ಮನಸ್ಸಿಗೆ ಸಂಬಂಧಿಸಿದ ತೊಂದರೆಯಾಗಿದ್ದು ಈ ಕಾರಣದ ತೊಂದರೆಯನ್ನು ಅಶ್ವಗಂಧ ನಿವಾರಿಸಲಾರದು.

 ಅಶ್ವಗಂಧದ ಬಳಕೆ ಹೇಗೆ?

ಅಶ್ವಗಂಧದ ಬಳಕೆ ಹೇಗೆ?

ಅಶ್ವಗಂಧದ ಸಾಂದ್ರೀಕೃತ ಅಂಶವನ್ನೊಳಗೊಂಡ ಔಷಧಿಗಳ ಬದಲಾಗಿ ಬೇರು ಮತ್ತು ಎಲೆಗಳನ್ನು ಪುಡಿಯ ರೂಪದಲ್ಲಿ ಸೇವಿಸಲು ಆಯುರ್ವೇದ ಸೂಚಿಸುತ್ತದೆ. ದೀರ್ಘಾವಧಿಯ ಬಳಕೆಗಾಗಿ ದಿನಕ್ಕೆರಡು ಬಾರಿ ಒಂದರಿಂದ ಎರಡು ಚಿಕ್ಕ ಚಮಚ ಪುಡಿಯನ್ನು ಒಂದು ಲೋಟ ನೀರು ಅಥವಾ ಜೇನುಮಿಶ್ರಿಯ ಹಾಲಿನಲ್ಲಿ ಕುದಿಸಿ ಕುಡಿಯಲು ಸೂಚಿಸುತ್ತದೆ. ಪುಡಿ ಅಲಭ್ಯವಿದ್ದರೆ ಸಾಂದ್ರೀಕೃತ ಅಂಶವನ್ನೊಳಗೊಂಡ ಔಷಧಿಗಳಲ್ಲಿ ಒಂದು ಬಾರಿ ಸುಮಾರು 300ಮಿಲಿಗ್ರಾಂ ನಷ್ಟು ಔಷಧಿಯನ್ನು ಸೇವಿಸಬೇಕು.

ಪುರಾಣಗ್ರಂಥಗಳನ್ನು ಅಧ್ಯಯನ ಮಾಡಿದ ಬಳಿಕ ಬಂದ ತೀರ್ಮಾನದ ಪ್ರಕಾರ

ಪುರಾಣಗ್ರಂಥಗಳನ್ನು ಅಧ್ಯಯನ ಮಾಡಿದ ಬಳಿಕ ಬಂದ ತೀರ್ಮಾನದ ಪ್ರಕಾರ

ಅಶ್ವಗಂಧದ ಸಾಂದ್ರೀಕೃತ ಅಂಶವನ್ನೊಳ ಗೊಂಡ ಔಷಧಿಗಳನ್ನು ಸೇವಿಸುವುದಾದರೆ ದಿನಕ್ಕೆ 600-1,200ಮಿಲಿಗ್ರಾಂ ನಷ್ಟು ಪ್ರಮಾಣವನ್ನು ಸೇವಿಸಬಹುದು. ಈ ಪ್ರಮಾಣ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಕಂಡುಬಂದಿದೆ. ಮಾತ್ರೆಗಳ ರೂಪದಲ್ಲಿ ಸೇವಿಸುವುದಾದರೆ ಪ್ರತಿ ಬಾರಿ ಒಂದರಿಂದ ಎರಡು ಮಾತ್ರೆಯಂತೆ, ದಿನಕ್ಕೆರಡು ಬಾರಿ ಸೇವಿಸಬೇಕು.

English summary

Benefits Of Ashwagandha For Male Sexual weakness

If there’s one thing men suffering from sexual dysfunction or disorders need to know, it is this: sexual health is not independent of overall health, vitality, and lifestyle. Disorders like premature ejaculation, erectile dysfunction, impotence, and problems with sperm concentration, quality, and motility are often linked with insufficient or imbalanced nutrition, lifestyle problems like smoking and lack of physical activity, and other health conditions – stress being a primary contributing factor.
X
Desktop Bottom Promotion