For Quick Alerts
ALLOW NOTIFICATIONS  
For Daily Alerts

ರಾತ್ರಿ ಊಟದ ನಂತರ ಬಾಳೆಹಣ್ಣು ಸೇವಿಸುವುದು ಒಳ್ಳೆಯದೇ ಅಥವಾ ಕೆಟ್ಟದೇ? ಇಲ್ಲಿದೆ ನೋಡಿ ಉತ್ತರ

|

ರಾತ್ರಿ ವೇಳೆ ಹಣ್ಣುಗಳನ್ನು ಸೇವನೆ ಮಾಡಬಾರದು ಮತ್ತು ಅದರಲ್ಲೂ ಬಾಳೆಹಣ್ಣನ್ನು ಸೇವಿಸಲೇಬಾರದು ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ ಕೆಲವರು ರಾತ್ರಿ ಊಟವಾದ ಬಳಿಕ ಒಂದು ಬಾಳೆಹಣ್ಣು ಸೇವಿಸಿದರೆ ಅದು ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಎರಡು ವಾದಗಳಿಂದಾಗಿ ನಾವು ಮಾತ್ರ ಗೊಂದಲಕ್ಕೆ ಸಿಲುಕುತ್ತೇವೆ. ಏನು ಸೇವಿಸಬೇಕು ಎನ್ನುವ ಗೊಂದಲವು ನಮ್ಮಲ್ಲಿ ಖಂಡಿತವಾಗಿಯೂ ಇದೆ.

Banana

ರಾತ್ರಿ ವೇಳೆ ಬಾಳೆಹಣ್ಣು ಸೇವಿಸಿದರೆ ಯಾಕೆ ಕೆಟ್ಟದು ಎಂದು ನಾವು ಯಾವತ್ತೂ ಯೋಚನೆ ಮಾಡಿಲ್ಲ. ಇದನ್ನು ಪ್ರಶ್ನಿಸಲು ಹೋಗಿಲ್ಲ. ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹಾಗೂ ಖನಿಜಾಂಶಗಳು ಇವೆ. ಮಾನವನ ದೇಹಕ್ಕೆ ಇದು ತುಂಬಾ ಉಪಯುಕ್ತವಾಗಿದೆ. ಆದರೆ ಜನರಿಗೆ ಇದರ ಬಗ್ಗೆ ಇಬ್ಬಗೆ ನೀತಿ ಯಾಕೆ ಎಂದು ತಿಳಿಯುವ....

ಆಯುರ್ವೇದ ಏನು ಹೇಳುತ್ತದೆ

ಆಯುರ್ವೇದ ಏನು ಹೇಳುತ್ತದೆ

ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಬಾಳೆಹಣ್ಣು ಸೇವಿಸುವುದು ಅಸುರಕ್ಷಿತ. ರಾತ್ರಿ ವೇಳೆ ಬಾಳೆಹಣ್ಣು ಸೇವನೆ ಮಾಡುವುದನ್ನು ಬಿಡಬೇಕು. ಯಾಕೆಂದರೆ ಇದರಿಂದ ಕೆಮ್ಮು ಮತ್ತು ಶೀತ ಬರಬಹುದು. ಇದು ಜೀರ್ಣವಾಗಲು ತುಂಬಾ ಸಮಯ ಬೇಕಾಗುವುದು. ಇದರಿಂದ ದೇಹಕ್ಕೆ ಉದಾಸೀನತೆ ಬರಬಹುದು.

ಪೋಷಕಾಂಶ ತಜ್ಞರು ಏನು ಹೇಳುವರು?

ಪೋಷಕಾಂಶ ತಜ್ಞರು ಏನು ಹೇಳುವರು?

ಫಿಟ್ನೆಸ್ ಮತ್ತು ಪೋಷಕಾಂಶ ತಜ್ಞ ಶಶಾಂಕ್ ರಾಜನ್ ಹೇಳುವ ಪ್ರಕಾರ, ಬಾಳೆಹಣ್ಣು ತುಂಬಾ ಆರೋಗ್ಯಕಾರಿ ಮತ್ತು ಇದು ದೇಹಕ್ಕೆ ಶಕ್ತಿ ನೀಡುವುದು. ಆದರೆ ಕೆಮ್ಮು ಮತ್ತು ಶೀತ, ಅಸ್ತಮಾ ಅಥವಾ ಸೈನಸ್ ನಿಂದ ಬಳಲುತ್ತಿರುವಂತಹ ವ್ಯಕ್ತಿಗಳು ರಾತ್ರಿ ವೇಳೆ ಬಾಳೆಹಣ್ಣು ಸೇವನೆ ಮಾಡುವುದನ್ನು ಕಡೆಗಣಿಸಬೇಕು. ಸಂಜೆ ವೇಳೆ ವ್ಯಾಯಾಮ ಮಾಡಿದ ಬಳಿಕ ಬಾಳೆಹಣ್ಣು ಸೇವಿಸುವುದು ಒಳ್ಳೆಯ ವಿಧಾನ.

Most Read: ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಬಾಳೆಹಣ್ಣನ್ನು ತಿನ್ನಲೇಬೇಡಿ! ಇದು ಆರೋಗ್ಯಕ್ಕೆ ಒಳ್ಳೆಯದಲ್ಲ

ಹೊಟ್ಟೆಯ ಆಮ್ಲವನ್ನು ನಿಯಂತ್ರಿಸುವುದು

ಹೊಟ್ಟೆಯ ಆಮ್ಲವನ್ನು ನಿಯಂತ್ರಿಸುವುದು

ಅಧ್ಯಯನಗಳ ಪ್ರಕಾರ, ಬೀದಿ ಬದಿಗಳಲ್ಲಿ ತುಂಬಾ ಖಾರವಾಗಿರುವ ಆಹಾರ ಸೇವನೆ ಮಾಡುವವರಿಗೆ ಬಾಳೆಹಣ್ಣು ಒಳ್ಳೆಯ ಆಯ್ಕೆ. ರಾತ್ರಿ ವೇಳೆ ಬಾಳೆಹಣ್ಣು ತಿನ್ನುವುದರಿಂದ ಎದೆಯುರಿ ಮತ್ತು ಹೊಟ್ಟೆಯ ಅಲ್ಸರ್ ನ್ನು ಕಡಿಮೆ ಮಾಡಬಹುದು.

ನಿದ್ರೆಗೆ ನೆರವಾಗುವುದು

ನಿದ್ರೆಗೆ ನೆರವಾಗುವುದು

ದಿನವಿಡಿ ನೀವು ಬಳಲಿದ ಬಳಿಕ ಬಾಳೆಹಣ್ಣನ್ನು ತಿಂದರೆ ಅದರಲ್ಲಿ ಇರುವಂತಹ ಪೊಟಾಶಿಯಂ ಸ್ನಾಯುಗಳಿಗೆ ಆರಾಮ ನೀಡುವುದು. ಸಂಜೆ ವೇಳೆ ನೀವು ಒಂದು ಅಥವಾ ಎರಡು ಬಾಳೆಹಣ್ಣು ತಿಂದರೆ ಅದರಿಂದ ರಾತ್ರಿ ವೇಳೆ ಒಳ್ಳೆಯ ನಿದ್ರೆ ಬರುವುದು. ಶಶಾಂಕ್ ಅವರು ಹೇಳುವ ಪ್ರಕಾರ ಒಂದು ದೊಡ್ಡ ಬಾಳೆಹಣ್ಣಿನಲ್ಲಿ 487 ಮಿ.ಗ್ರಾಂ. ಪೊಟಾಶಿಯಂ ಇದೆ. ವಯಸ್ಕ ವ್ಯಕ್ತಿಯ ದೇಹಕ್ಕೆ ಬೇಕಾಗಿರುವ ಪೊಟಾಶಿಯಂಕ್ಕಿಂತ ಶೇ. 10ರಷ್ಟು ಹೆಚ್ಚು ಪೊಟಾಶಿಯಂ ಇದೆ.

ತೂಕ ಹೆಚ್ಚಿಸಲ್ಲ

ತೂಕ ಹೆಚ್ಚಿಸಲ್ಲ

ಒಂದು ಬಾಳೆಹಣ್ಣಿನಲ್ಲಿ ಕೇವಲ 105 ಕ್ಯಾಲರಿ ಮಾತ್ರ ಇದೆ. ರಾತ್ರಿ ಊಟಕ್ಕೆ ನಿಮಗೆ 500 ಕ್ಯಾಲರಿಗಿಂತ ಕಡಿಮೆ ಬೇಕೆಂದಿದ್ದರೆ ಆಗ ನೀವು ಎರಡು ಬಾಳೆಹಣ್ಣು ಮತ್ತು ಒಂದು ಕಪ್ ಕೆನೆಭರಿತ ಹಾಲು ಸೇವಿಸಿ.

ಬಯಕೆ ನಿವಾರಿಸುವುದು

ಬಯಕೆ ನಿವಾರಿಸುವುದು

ನಿಮಗೆ ತಡರಾತ್ರಿ ವೇಳೆ ಸಿಹಿ ತಿನ್ನಬೇಕೆಂದು ಬಯಕೆಯಾದರೆ ಆಗ ನೀವು ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯ ವಿಧಾನ. ಯಾಕೆಂದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಮತ್ತು ಉನ್ನತ ಮಟ್ಟದ ಕ್ಯಾಲರಿ ಇದೆ. ಸಿಹಿ ತಿನ್ನಬೇಕೆಂಬ ಬಯಕೆಯನ್ನು ಬಾಳೆಹಣ್ಣು ತೀರಿಸುವುದು. ಅದೇ ರೀತಿ ದೇಹಕ್ಕೆ ಹೆಚ್ಚಿನ ವಿಟಮಿನ್ ಗಳು ಹಾಗೂ ನಾರಿನಾಂಶವು ಸಿಗುವುದು.

Most Read: ಸರಿಯಾಗಿ ಊಟ-ತಿಂಡಿ ಮಾಡದೇ ಇದ್ದರೆ, ಇದೆಲ್ಲಾ ಸಮಸ್ಯೆ ಕಾಡಬಹುದು!

ಅನೇಕ ರೋಗಗಳಿಗೆ ಉತ್ತಮ ಆರೈಕೆ ನೀಡುತ್ತದೆ

ಅನೇಕ ರೋಗಗಳಿಗೆ ಉತ್ತಮ ಆರೈಕೆ ನೀಡುತ್ತದೆ

ಬಾಳೆಹಣ್ಣುಗಳು ವಿವಿಧ ರೋಗಗಳಿಗೆ ಉತ್ತಮ ಆರೈಕೆ ನೀಡುತ್ತದೆ. ಕೀಟಗಳು ಕಚ್ಚಿ ದದ್ದು, ತುರಿಕೆ, ಉರಿ ಉಂಟಾದಾಗ ಬಾಳೆಹಣ್ಣನ್ನು ಸವರುವುದರಿಂದ ಕೆಲವು ನಿಮಿಷಗಳಲ್ಲಿಯೇ ಶಮನವಾಗುತ್ತದೆ. ಟೈಪ್-2 ವಿಧದ ಮಧುಮೇಹವನ್ನು ನಿಯಂತ್ರಿಸುತ್ತದೆ, ತೂಕ ಕಡಿಮೆಗೊಳಿಸುವ ಯತ್ನಗಳಿಗೆ ಸಹಕಾರ ನೀಡುತ್ತದೆ ಹಾಗೂ ನರಮಂಡಲದ ಸುವ್ಯವಸ್ಥೆ ಕಾಪಾಡಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ B-6 ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ನೆರವಾಗಿ ರೋಗನಿರೋಧಕ ಶಕ್ತಿ ಉತ್ತಮಗೊಳ್ಳಲು ಸಹಕರಿಸುತ್ತದೆ. ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪೋಷಣೆ ನೀಡುತ್ತದೆ.

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ಬಾಳೆಹಣ್ಣಿನಲ್ಲಿರುವ ಕರಗುವ ನಾರು ಹೊಟ್ಟೆಯಲ್ಲಿ ಕರಗಿ ಜೀರ್ಣಕ್ರಿಯೆಗೆ ಅವಶ್ಯವಿರುವ ಕೆಲವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. prebiotic ಎಂದು ಕರೆಯಲಾಗುವ ಈ ವಿದ್ಯಮಾನದಿಂದ ಇತರ ಆಹಾರಗಳ ಮೂಲಕ ಲಭ್ಯವಾದ, ಸುಲಭವಾಗಿ ಜೀರ್ಣವಾಗದ ಆಹಾರವನ್ನು ಈ ಬ್ಯಾಕ್ಟೀರಿಯಾಗಳು ಜೀರ್ಣಿಸಲು ನೆರವಾಗುತ್ತದೆ. ಅಲ್ಲದೇ ಜೀರ್ಣಕ್ರಿಯೆಗೆ ನೆರವಾಗುವ ಇತರ ಎಂಜೈಮು(enzymes)ಗಳನ್ನು ಉತ್ಪಾದಿಸುತ್ತದೆ. ಈ ಎಂಜೈಮುಗಳು ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ (ಉದಾಹರಣೆಗೆ ಮಾಂಸ) ಗಳನ್ನು ಜೀರ್ಣಿಸಿಕೊಳ್ಳಲು ಅಗತ್ಯವಾಗಿವೆ.

ತೀರ್ಪು

ತೀರ್ಪು

ಬಾಳೆಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳು ಇವೆ ಮತ್ತು ಇದು ನಿದ್ರೆಗೆ ನೆರವಾಗುವುದು. ಇದರಿಂದ ರಾತ್ರಿ ವೇಳೆ ಬಾಳೆಹಣ್ಣನ್ನು ಕಡೆಗಣಿಸುವುದು ಒಳ್ಳೆಯ ನಿರ್ಧಾರವಲ್ಲ. ಆದರೆ ಅಸ್ತಮಾ, ಸೈನಸ್ ಮತ್ತು ಶೀತ ಇರುವಂತಹ ಜನರು ರಾತ್ರಿ ವೇಳೆ ಬಾಳೆಹಣ್ಣನ್ನು ಕಡೆಗಣಿಸಿದರೆ ಒಳ್ಳೆಯದು.

Read more about: banana health wellness
English summary

Banana at night is good or bad? Here's the answer

We all have been asked to avoid eating fruits at night, especially banana and we have simply followed the rule, without giving it a thought. We have never questioned why eating banana at night is bad. Regarded as one of the most nutritious fruits, banana is packed with nutrients and minerals that are good for the human body. Let us know why people have this double-standard with banana and even with citrus fruits.
Story first published: Wednesday, November 14, 2018, 17:10 [IST]
X
Desktop Bottom Promotion