Just In
Don't Miss
- News
ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಬಾಳೆಹಣ್ಣನ್ನು ತಿನ್ನಲೇಬೇಡಿ! ಇದು ಆರೋಗ್ಯಕ್ಕೆ ಒಳ್ಳೆಯದಲ್ಲ
ಅಮೇರಿಕಾದ ಆಹಾರ ತಜ್ಞರ ಪ್ರಕಾರ, ಬಾಳೆಹಣ್ಣನ್ನು ಉಪಾಹಾರದ ಅಥವಾ ಬ್ರೇಕ್‌ಫಾಸ್ಟ್ ಸಮಯದಲ್ಲಿ ಸೇವಿಸುವುದು ಹಲವರ ಪಾಲಿಗೆ ಆಘಾತಕಾರಿ ಪರಿಣಾಮವನ್ನುಂಟುಮಾಡಬಹುದು ಎಂದು ಇವರು ಎಚ್ಚರಿಸುತ್ತಿದ್ದಾರೆ. 'ದ ಅರ್ಲೀ ಶೋ' ಎಂಬ ಜನಪ್ರಿಯ ಆರೋಗ್ಯ ಕಾರ್ಯಕ್ರಮದ ನಿರೂಪಕರಾದ ಕೆರ್ರಿ ಗ್ಲಾಸ್ಮನ್ ಎಂಬ ಈ ಆಹಾರತಜ್ಞೆ ಈ ವಿಷಯದಲ್ಲಿ ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ...

ಜಾಪಾನೀಯರು ಉಪಾಹಾರದಲ್ಲಿ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರಂತೆ!
ಜಾಪಾನೀಯರು ಉಪಾಹಾರದಲ್ಲಿ ಬಾಳೆಹಣ್ಣನ್ನು ಸೇವಿಸುವುದು ಹೆಚ್ಚಾಗಿದೆ. ಆದರೆ ಇವರು ಬಾಳೆಹಣ್ಣನ್ನು ಹಾಗೇ ತಿನ್ನದೇ ಕೊಂಚ ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸುತ್ತಾರೆ. ಕೊಂಚ ಹೊತ್ತಿನ ಬಳಿಕ ಕೊಂಚ ಪಿಜ್ಜಾ ಅಥವಾ ಹುರಿದ ಆಹಾರವನ್ನು ಸೇವಿಸುತ್ತಾರೆ. ನಂತರ ನಡುಮಧ್ಯಾಹ್ನದ ಹೊತ್ತಿನಲ್ಲಿ ಲಘು ಊಟವನ್ನು ಮಾಡುತ್ತಾರೆ, ಇದರಲ್ಲಿ ಸಿಹಿಪದಾರ್ಥವೂ ಇರುತ್ತದೆ. ರಾತ್ರಿ ಎಂತರ ಬಳಿಕದ ಊಟ ಮಾತ್ರ ಗಡದ್ದಾಗಿರುತ್ತದೆ ಹಾಗೂ ವೈಯಕ್ತಿಕ ಆಯ್ಕೆಗಳನ್ನು ಆಧರಿಸಿರುತ್ತದೆ.

ಜಾಪಾನೀಯರು ಉಪಾಹಾರದಲ್ಲಿ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರಂತೆ!
ಊಟದ ಬಳಿಕ ಮತ್ತೇನನ್ನೂ ಸೇವಿಸಬಾರದು ಎಂದು ಅಲ್ಲಿ ವಿವರಿಸಲಾಗುತ್ತದೆ ಹಾಗೂ ನಡುರಾತ್ರಿಗೂ ಮುನ್ನವೇ ಮಲಗಿ ಬಿಡಬೇಕೆಂಬ ಅಪ್ಪಣೆಯಾಗುತ್ತದೆ. ಮರುದಿನ ಬೆಳಿಗ್ಗೆ ಮನಬಂದಷ್ಟು ಬಾಳೆಹಣ್ಣನ್ನು ತಿನ್ನಬಹುದು. ಇಷ್ಟೊಂದು ಬಾಳೆಹಣ್ಣನ್ನು ತಿಂದರೆ ಮತ್ತೆ ಊಟಕ್ಕೆ ಮನಸ್ಸಾಗುವುದಾದರೂ ಹೇಗೆ ಎಂದು ಮುಗ್ಧವಾಗಿ ಕೇಳುತ್ತಾರೆ ಕಾರ್ಯಕ್ರಮದ ಸಹನಿರೂಪಕಿ ಮ್ಯಾಗಿ ರೋಡ್ರಿಗಸ್.
Most Read: ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ಕೆರ್ರಿಯವರ ಪ್ರಕಾರ
ಇದಕ್ಕೆ ಕೆರ್ರಿಯವರು ಹೀಗೆ ಉತ್ತರಿಸುತ್ತಾರೆ:"ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇರುವ ಕಾರಣ ಹೆಚ್ಚು ಹೊತ್ತು ಹೊಟ್ಟೆಯನ್ನು ತುಂಬಿರುವ ಭಾವನೆ ಮೂಡಿಸುತ್ತದೆ. ಆದರೂ, ಮಧ್ಯಾಹ್ನದ ಮತ್ತು ರಾತ್ರಿಯ ಊಟದಲ್ಲಿ ಮನಸ್ಸಿಗೆ ಹಿಡಿಸಿದ್ದನ್ನು ತಿನ್ನಬಹುದೆಂಬ ಸ್ವಾತಂತ್ರ್ಯವಿರುವ ಕಾರಣ ಹೆಚ್ಚಿನವರು ಭಾರೀ ಕ್ಯಾಲೋರಿಗಳಿರುವ ಟರ್ಕಿ ಮೊದಲಾದ ಆಹಾರಗಳನ್ನು ಸೇವಿಸುತ್ತಾರೆ. ತೂಕ ಇಳಿಸುವವರು ಇಷ್ಟು ಭಾರಿ ಊಟ ಮಾಡದಿದ್ದರೂ ಜಿಹ್ವಾಚಪಲಕ್ಕೆ ಸಾಂಡ್ವಿಚ್ ಅಥವಾ ಪಿಜ್ಜಾ ತಿನ್ನುವ ಮೂಲಕ ಇಳಿದ ತೂಕವನ್ನು ಮತ್ತೆ ಹೆಚ್ಚಿಸಿಕೊಳ್ಳುತ್ತಾರೆ. ಆರೋಗ್ಯ ಕೆಡಲು ಇದೇ ಪ್ರಮುಖ ಕಾರಣವಾಗಿದೆ.
Most Read: ಮುಂಜಾನೆ ಎದ್ದು ಖಾಲಿಹೊಟ್ಟೆಗೆ ಬಾಳೆಹಣ್ಣು ತಿನ್ನಬಹುದೇ?

ಸಿಹಿ ತಿನ್ನಬೇಕೆಂಬ ಇರಾದೆಯುಳ್ಳವರು
ಸಿಹಿ ತಿನ್ನಬೇಕೆಂಬ ಇರಾದೆಯುಳ್ಳವರು ಕೊಂಚ ಕೊಂಚವಾಗಿ ಇಡಿಯ ದಿನ ಸಿಹಿ ತಿನ್ನುತ್ತಿದ್ದು ಒಮ್ಮೆಲೇ ಮದ್ಯಾಹ್ನ ಮೂರು ಘಂಟೆಗೊಂದು ತುಂಡು ಮಾತ್ರ ಸಿಹಿ ತಿನ್ನಬಹುದು ಎಂಬ ಫರ್ಮಾನು ಹೊರಡಿಸಿದರೆ? ಆಗ ಸಾಮಾನ್ಯವಾಗಿ ಈ ಆಜ್ಞೆಯನ್ನು ಧಿಕ್ಕರಿಸಿ ಸಾಮಾನ್ಯಕ್ಕಿಂತಲೂ ಹೆಚ್ಚು ತಿನ್ನುತ್ತಾರೆ. ಕೆಲವರಿಗೆ ಆಹಾರ ಸೇವನೆ ಭಾವನಾತ್ಮಕವಾಗಿದ್ದು ಅನಿವಾರ್ಯವಾಗಿ ರಾತ್ರಿ ಸಾವಿರಾರು ಕ್ಯಾಲೋರಿಗಳನ್ನು ಕಬಳಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಮುಂಜಾನೆ ಬಾಳೆಹಣ್ಣು ಸೇವಿಸುವುದು ಆರೋಗ್ಯಕ್ಕೆ ಮಾರಕವಾಗಿದೆ.

ಬಾಳೆಹಣ್ಣಿನ ಸೇವನೆಯೊಂದಿಗೆ ಉಗುರುಬೆಚ್ಚನೆಯ ನೀರನ್ನೂ ಕುಡಿಯಬೇಕು
ಮುಂಜಾನೆ ಬಾಳೆಹಣ್ಣಿನ ಸೇವನೆಯೊಂದಿಗೆ ಉಗುರುಬೆಚ್ಚನೆಯ ನೀರನ್ನೂ ಕುಡಿಯುವುದು ಆರೋಗ್ಯಕರ ಹೌದು, ಈ ಮೂಲಕ ದೇಹಕ್ಕೆ ಅಗತ್ಯವಾದ ನೀರಿನ ಲಭ್ಯತೆ ದೊರಕುತ್ತದೆ ಆದರೂ ನೀರು ಸೇವಿಸುವುದರಿಂದ ಈ ಆಪಾಯವೇನೂ ಕಡಿಮೆಯಾಗುವುದಿಲ್ಲ ಎಂದು ಅವರು ವಿವರಿಸುತ್ತಾರೆ.

ಬೆಳಗ್ಗಿನ ಉಪಾಹರದಲ್ಲಿ ಬಾಳೆಹಣ್ಣನ್ನು ತಿನ್ನಲೇಬೇಡಿ
ಆದ್ದರಿಂದ ಬೆಳಗ್ಗಿನ ಉಪಾಹರದಲ್ಲಿ ಬಾಳೆಹಣ್ಣನ್ನು ಜೀವಮಾನವಿಡೀ ತಿನ್ನುವುದು ಸರಿಯಲ್ಲ, ಅಲ್ಲದೇ ಬಾಳೆಹಣ್ಣು ಎಲ್ಲರಿಗೂ ಅಮೃತಫಲವಲ್ಲ. ಇದರಲ್ಲಿ ನಾರು ಇದೆ ಸರಿ, ಆದರೆ ಜೊತೆಗೇ ಪೊಟ್ಯಾಷಿಯಂ ಸಹಾ ಇದೆ. ಪ್ರೋಟೀನೂ ಇದೆ. ಹೆಚ್ಚಿನ ಪ್ರಮಾಣದ ಬಾಳೆಹಣ್ಣಿನ ಸೇವನೆ ಎಂದರೆ ಅತಿಯಾದ ಪೊಟ್ಯಾಶಿಯಂ ಮತ್ತು ಅನಗತ್ಯ ಪ್ರಮಾಣದ ಪ್ರೋಟೀನ್ ಸೇವನೆ ಆರೋಗ್ಯಕ್ಕೆ ಮಾರಕ. ತೂಕ ಇಳಿಸುವವರು ಕೋಸು ಅಥವಾ ಚಕ್ಕೋತದ ಆಹಾರವನ್ನು ಹೇಗೆ ಮಿತವಾಗಿ ಸೇವಿಸುತ್ತಾರೋ ಅಂತೆಯೇ ಬಾಳೆಹಣ್ಣನ್ನೂ ಮಿತಪ್ರಮಾಣದಲ್ಲಿ ತಿಂದರೆ ಮಾತ್ರ ಆರೋಗ್ಯಕರ.
Most Read: ದಿನಕ್ಕೊಂದು ಗ್ಲಾಸ್ ಬಾಳೆಹಣ್ಣಿನ ಜ್ಯೂಸ್ ಕುಡಿದರೆ-ಹತ್ತಾರು ಲಾಭ!

ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು!
ಬಾಳೆಹಣ್ಣಿನಲ್ಲಿ ಕೊಂಚ ಪ್ರಮಾಣದ ಪಿಷ್ಟ ಸಹಾ ಇದ್ದು ಇದು ಜೀರ್ಣಕ್ರಿಯೆಗೆ ಕೊಂಚ ಅಡ್ಡಿಯುಂಟುಮಾಡುತ್ತದೆ. ಇದು ಜೀರ್ಣಗೊಳ್ಳದೇ ವಿಸರ್ಜನೆಗೊಳ್ಳುವ ನಾರು ಆಗಿದ್ದು ಮಲಬದ್ದತೆಯಾಗದೇ ಇರಲಿಕ್ಕೆ ನೆರವಾಗುತ್ತದೆ. ಜೊತೆಗೇ ಕೊಂಚ ಕೊಬ್ಬನ್ನೂ ಕರಗಿಸುತ್ತದೆ. ಈ ಪಿಷ್ಟ ಆಲುಗಡ್ಡೆ, ಬೀನ್ಸ್ ಗಳಲ್ಲಿಯೂ ಇದೆ. ಹಾಗಾಗಿ ಈ ಆಹಾರಗಳನ್ನು ಮಿತಪ್ರಮಾಣದಲ್ಲಿ ಮಾತ್ರವೇ ಸೇವಿಸಬೇಕು. ಹಾಗೆಂದ ಮಾತ್ರಕ್ಕೆ ಹುರಿದ ಮಾಂಸ ಅಥವಾ ಕರಿದ ತಿಂಡಿಗಳನ್ನೂ ಮನಬಂದಂತೆ ತಿನ್ನಬಾರದು.

ಆರೋಗ್ಯ ತಜ್ಞ ಕೆರ್ರಿಯವರ ಪ್ರಕಾರ
ಆರೋಗ್ಯಕರ ಉಪಾಹಾರದಲ್ಲಿ ಉತ್ತಮ ಪ್ರಮಾಣದ ಇಡಿಯ ಧಾನ್ಯಗಳು, ಹಸಿರು ತರಕಾರಿ, ಹಾಲಿನ ಜೊತೆಗೇ ಒಂದು ಬಾಳೆಹಣ್ಣಿದ್ದರೆ ಸಾಕು. ಬದಲಿಗೆ ಭಾರೀ ಪ್ರಮಾಣದ ಬಾಳೆಹಣ್ಣನ್ನೇ ಉಪಾಹಾರ ರೂಪದಲ್ಲಿ ಸೇವಿಸುವುದು ಮಾತ್ರ ಎಂದಿಗೂ ಆರೋಗ್ಯಕರವಲ್ಲ ಎಂದು ಕೆರ್ರಿಯವರು ಸಲಹೆ ಮಾಡುತ್ತಾರೆ.