For Quick Alerts
ALLOW NOTIFICATIONS  
For Daily Alerts

ಮೊಳಕೆ ಬಂದಿರುವ ಆಲೂಗಡ್ಡೆ ತಿನ್ನಬೇಡಿ,ವಾಂತಿ-ಭೇದಿ ಸಮಸ್ಯೆ ಕಾಡಬಹುದು!

|

ಮನೆಯಲ್ಲಿ ಮಕ್ಕಳು ಪೂರಿ ಬಾಜಿ ಬೇಕೆಂದು ಹಠ ಹಿಡಿದಿದ್ದಾರೆ. ನೀವು ಅಡುಗೆ ಮನೆಗೆ ಹೋಗಿ ನೋಡಿದರೆ, ಆಲೂಗಡ್ಡೆಯಲ್ಲಿ ಮೊಳಕೆ ಬಂದಿದೆ. ಇದನ್ನು ನೋಡಿದಾಗ ನಿಮಗೆ ಖಂಡಿತವಾಗಿಯೂ ತುಂಬಾ ಚಿಂತೆ ಕಾಡುವುದು. ಯಾಕೆಂದರೆ ಮೊಳಕೆ ಬಂದ ಆಲೂಗಡ್ಡೆ ತಿನ್ನಬಾರದು ಎಂದು ಹೇಳಿರುವ ನೆನಪು ನಿಮ್ಮ ಜಾಗೃತಗೊಳಿಸುವುದು. ಹೀಗಾಗಿ ನೀವು ಮತ್ತೆ ಅಂಗಡಿಗೆ ಹೋಗಿ ಆಲೂಗಡ್ಡೆ ತಂದು ಬಳಿಕ ಮಕ್ಕಳ ಆಸೆ ಪೂರೈಸಬೇಕಾಗುತ್ತದೆ.

ಇದಕ್ಕಾಗಿ ತುಂಬಾ ಸಮಯ ಬೇಕಾಗುತ್ತದೆ. ಯಾಕೆಂದರೆ ನೀವು ಅಂಗಡಿಗೆ ಹೋಗಿ ಆಲೂಗಡ್ಡೆ ತಂದು ಪೂರಿ ಬಾಜಿ ಮಾಡುವಷ್ಟರಲ್ಲಿ ಮಕ್ಕಳ ಆಸೆಯು ತಣಿಯುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೆ ಬದಲಾಗಿ ನೀವು ಬೇರೆ ಏನಾದರೂ ಮಾಡಿಕೊಡುವ ಬಗ್ಗೆ ಆಲೋಚನೆ ಮಾಡಬಹುದು. ಹಾಗಾದರೆ ಮೊಳಕೆ ಬಂದಿರುವ ಆಲೂಗಡ್ಡೆ ಸೇವಿಸಲೇಬಾರದೇ? ಈ ಲೇಖನ ಮುಂದೆ ಓದುತ್ತಾ ಸಾಗಿದರೆ ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುವುದು.

ಮೊಳಕೆ ಬಂದಿರುವಂತಹ ಆಲೂಗಡ್ಡೆ ತಿನ್ನಬಹುದೇ?

ಮೊಳಕೆ ಬಂದಿರುವಂತಹ ಆಲೂಗಡ್ಡೆ ತಿನ್ನಬಹುದೇ?

ಮೊಳಕೆ ಬಂದಿರುವ ಆಲೂಗಡ್ಡೆ ತಿನ್ನಬಹುದು ಎನ್ನುವುದು ಒಳ್ಳೆಯ ಸುದ್ದಿ. ಆದರೆ ಇದು ಗಟ್ಟಿಯಾಗಿರುಬೇಕು, ನೆರಿಗೆ ಬಂದಿರಬಾರದು ಮತ್ತು ಕೊಳೆತಿರಬಾರದು. ಗಟ್ಟಿಯಾಗಿ, ಮೊಳಕೆ ಬಂದಿರುವಂತಹ ಆಲೂಗಡ್ಡೆಯಲ್ಲಿ ಕೆಲವೊಂದು ಪೋಷಕಾಂಶಗಳು ಇರುವುದು. ಆಲೂಗಡ್ಡೆಗೆ ಬಂದಿರುವಂತಹ ಮೊಳಕೆ ತೆಗೆದು, ಅದನ್ನು ಬಳಸಿಕೊಳ್ಳಬಹುದು. ನೀವು ಬೇರೆ ಖಾದ್ಯ ಮಾಡಬೇಕಾದ ಅಗತ್ಯವಿಲ್ಲ. ಆಲೂಗಡ್ಡೆಗೆ ಮೊಳಕೆ ಬಂದಂತೆ ಅದು ತನ್ನಲ್ಲಿರುವ ಪಿಷ್ಠವನ್ನು ಸಕ್ಕರೆಯಾಗಿ ಪರಿವರ್ತನೆ ಮಾಡಿಕೊಂಡು ಹೊಸ ಗಿಡ ಬೆಳೆಯಲು ನೆರವಾಗುವುದು. ಈ ಪ್ರಕ್ರಿಯೆ ಆರಂಭದಲ್ಲಿ ನಿಮಗೆ ಕೆಲವೊಂದು ಮೆತ್ತಗಿನ ಕಲೆಗಳು ಕಂಡುಬರಬಹುದು. ಇದೇ ಜಾಗದಲ್ಲಿ ಬಳಿಕ ಮೊಳಕೆ ಬರುವುದು. ನೀವು ಮೊಳಕೆ ತೆಗೆದು ಆಲೂಗಡ್ಡೆ ಬಳಸಬಹುದು.

ಮೊಳಕೆ ಬಂದ ಬಳಿಕ ಆಲೂಗಡ್ಡೆಯನ್ನು ಸೇವಿಸಲೇಬೇಡಿ

ಮೊಳಕೆ ಬಂದ ಬಳಿಕ ಆಲೂಗಡ್ಡೆಯನ್ನು ಸೇವಿಸಲೇಬೇಡಿ

ಮೊಳಕೆ ಬಂದ ಬಳಿಕ ಇದರೊಳಗೆ ಉತ್ಪತ್ತಿಯಾಗುವ ರಾಸಾಯನಿಕಗಳು ವಾಂತಿ ಮತ್ತು ಬೇಧಿಯನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಆಲೂಗಡ್ಡೆಯ ಬಣ್ಣ ಹಸಿರು ಬಣ್ಣಕ್ಕೆ ತಿರುಗುತ್ತದೆ. ವಾಸ್ತವವಾಗಿ ಇದು ಆಲೂಗಡ್ಡೆಗೆ ನಿಸರ್ಗ ನೀಡಿರುವ ರಕ್ಷಣಾ ವ್ಯವಸ್ಥೆಯಾಗಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಆಲುಗಡ್ಡೆಯ ಒಳಗೆ glycoalkaloid ಎಂಬ ವಿಷಕಾರಿ ರಾಸಾಯನಿಕ ಉತ್ಪತ್ತಿಯಾಗುತ್ತವೆ. ಇದನ್ನು ತಿಂದ ಪ್ರಾಣಿಗೆ ಇದು ಕಹಿಯಾಗಿರುತ್ತದೆ ಅಥವಾ ಕೀಟಗಳು ಹೀರದಿರಲು ನೆರವಾಗುತ್ತದೆ. ಆದರೆ ಈ ಆಲೂಗಡ್ಡೆಯನ್ನು ತಿಂದರೆ ನಮಗೂ ಹೊಟ್ಟೆ ಕೆಡುವುದು ಖಚಿತ.

Most Read:ಬರೀ ಹದಿನೈದೇ ದಿನಗಳಲ್ಲಿ ಬಿಳಿ ಕೂದಲನ್ನು ಕಪ್ಪು ಮಾಡುವ ಮನೆಮದ್ದುಗಳು

ಮೊಳಕೆ ಬಂದಿರುವ ಆಲೂಗಡ್ಡೆ ಯಾವಾಗ ತಿನ್ನಬಾರದು

ಮೊಳಕೆ ಬಂದಿರುವ ಆಲೂಗಡ್ಡೆ ಯಾವಾಗ ತಿನ್ನಬಾರದು

ಮೊಳಕೆ ಪ್ರಕ್ರಿಯೆಯು ಮುಂದುವರಿಯುತ್ತಾ ಇರುವಂತೆ ಹೆಚ್ಚಿನ ಪಿಷ್ಠವು ಸಕ್ಕರೆಯಾಗಿ ಪರಿವರ್ತನೆಯಾಗುವ ಕಾರಣದಿಂದಾಗಿ ಆಲೂಗಡ್ಡೆಯು ನಿಧಾನವಾಗಿ ಸುಕ್ಕುಕಟ್ಟುವುದು. ನೆರಿಗೆ, ಸುಕ್ಕು, ಮೊಳಕೆ ಬಂದಿರುವಂತಹ ಆಲೂಗಡ್ಡೆಯು ತನ್ನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಕಳಕೊಂಡಿರುವುದು ಮತ್ತು ಇದನ್ನು ಸೇವಿಸಬಾರದು. ಇದನ್ನು ಬಳಸಿದರೆ ನಿಮ್ಮ ಖಾದ್ಯ ಕೂಡ ಅದೇ ರುಚಿ ನೀಡಲಾರದು.

ಆಲೂಗಡ್ಡೆ ಮೊಳಕೆಯಲ್ಲಿರುವ ವಿಷದ ಬಗ್ಗೆ?

ಆಲೂಗಡ್ಡೆ ಮೊಳಕೆಯಲ್ಲಿರುವ ವಿಷದ ಬಗ್ಗೆ?

ಸೋಲಾನಿನ್ ಮತ್ತು ಇತರ ಕೆಲವೊಂದು ರೀತಿಯ ಗ್ಲೈಕೊಲ್ಕಾಲೈಡ್ಸ್ ಗಳು ಬಟಾಟೆಯ ಸಸ್ಯ, ಕಣ್ಣುಗಳು ಮತ್ತು ಮೊಳಕೆ ಬೆಳೆಯುವ ಬಟಾಟೆಯ ಟ್ಯೂಬರ್ ಗಳಲ್ಲಿ ಇರುವುದು. ಇದೆರಡು ಮಾನವನಿಗೆ ವಿಷಕಾರಿ. ಇದರಿಂದಾಗಿ ತಲೆನೋವು, ವಾಂತಿ ಮತ್ತು ಇತರ ಕೆಲವು ಜೀರ್ಣಕ್ರಿಯೆ ಸಮಸ್ಯೆ ಕಾಣಿಸಬಹುದು. ಇದರಿಂದಾಗಿ ನೀವು ಮೊಳಕೆ ಮತ್ತು ಅದರ ಕಣ್ಣುಗಳನ್ನು ತೆಗೆದು ಬಳಿಕ ಬಳಸಬೇಕು. ಸೊಲಾನಿನ್ ಆಲೂಗಡ್ಡೆಯ ಕಣ್ಣುಗಳಲ್ಲಿ, ಮೊಳಕೆ ಮತ್ತು ಸಿಪ್ಪೆಯಲ್ಲಿ ಇರುವುದು. ಇತರ ಭಾಗದಲ್ಲಿ ಇರುವುದಿಲ್ಲ. ಇದನ್ನು ತೆಗೆದರೆ ನಿಮಗೆ ಬಾಧಿಸುವ ಸಾಧ್ಯತೆಯು ಕಡಿಮೆ. ಸಿಪ್ಪೆಯು ಹಸಿರಾಗಿದ್ದರೆ, ಆಗ ತಿನ್ನುವ ಮೊದಲು ಸಿಪ್ಪೆ ತೆಗೆಯಲು ಮರೆಯಬೇಡಿ. ಆದರೆ ಇದರಿಂದ ನೀವು ಹೆದರಬೇಕಿಲ್ಲ. ಯಾಕೆಂದರೆ ಇಂತಹ ಸಮಸ್ಯೆ ಕಾಡಬೇಕಾದರೆ ನೀವು ತುಂಬಾ ಆಲೂಗಡ್ಡೆ ಮೊಳಕೆ ಮತ್ತು ಸಿಪ್ಪೆ ತಿನ್ನಬೇಕಾಗಬಹುದು.

ಆಲೂಗಡ್ಡೆ ಮೊಳಕೆ ಬರದಂತೆ ತಡೆಯುವುದು ಹೇಗೆ?

ಆಲೂಗಡ್ಡೆ ಮೊಳಕೆ ಬರದಂತೆ ತಡೆಯುವುದು ಹೇಗೆ?

ಆಲೂಗಡ್ಡೆ ತಂದ ಕೆಲವೇ ದಿನಗಳಲ್ಲಿ ಮೊಳಕೆ ಬರುತ್ತಿದೆಯಾ? ಹಾಗಾದರೆ ನೀವು ಆಲೂಗಡ್ಡೆಯನ್ನು ತಂಪು, ಒಣ ಮತ್ತು ಕತ್ತಲಿನ ಜಾಗದಲ್ಲಿಟ್ಟುಬಿಡಿ. ಇದನ್ನು ದೀರ್ಘಕಾಲ ಇಡಬೇಕಾದರೆ ಆಗ ನೀವು ಈರುಳ್ಳಿಯಿಂದ ಇದನ್ನು ದೂರವಿಡಿ. ಇದರೊಟ್ಟಿಗೆ ಇದ್ದರೆ ಬೇಗನೆ ಮೊಳಕೆ ಬರುವುದು. ಆಲೂಗಡ್ಡೆ ಬೆಳೆಗಾರರು ಮೊಳಕೆ ಬರದಂತೆ ತಡೆಯಲು ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವರು. ಆದರೆ ನೀವು ಸಾವಯವ ಆಲೂಗಡ್ಡೆ ಖರೀದಿಸಿದರೆ ಅಥವಾ ನಿಮ್ಮದೇ ಮನೆಯಲ್ಲಿ ಆಲೂಗಡ್ಡೆ ಬೆಳೆಸಿದರೆ ಆಗ ದೀರ್ಘಕಾಲ ಇದನ್ನು ಇಡಲು ಕೆಲವು ತಂತ್ರಗಳನ್ನು ಅನುಸರಿಸಬೇಕು. ವಾರಗಳು ಅಥವಾ ತಿಂಗಳುಗಳ ಕಾಲ ಆಲೂಗಡ್ಡೆಗೆ ಮೊಳಕೆ ಬರದಂತೆ ಇಡಲು ನೀವು ಕೆಲವೊಂದು ಸರಳ ವಿಧಾನಗಳನ್ನು ಪಾಲಿಸಿಕೊಂಡು ಹೋಗಿ.

ಮೊಳಕೆ ಬರದಂತೆ ಆಲೂಗಡ್ಡೆ ಸಂರಕ್ಷಿಸುವುದು ಹೇಗೆ?

ಮೊಳಕೆ ಬರದಂತೆ ಆಲೂಗಡ್ಡೆ ಸಂರಕ್ಷಿಸುವುದು ಹೇಗೆ?

ನೀವು ಒಂದೇ ಸಲ ಆಲೂಗಡ್ಡೆ ಖರೀದಿಸುತ್ತಿದ್ದರೆ ಅಥವಾ ನಿಮ್ಮದೇ ಗದ್ದೆಯಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದರೆ ಆಗ ನೀವು ಯಾವುದನ್ನು ಖರೀದಿಸುತ್ತೀರಿ ಅಥವಾ ಬೆಳೆಯುತ್ತೀರಿ ಎನ್ನುವ ಕಡೆ ಗಮನಹರಿಸಬೇಕು. ದೀರ್ಘಕಾಲದ ತನಕ ಆಲೂಗಡ್ಡೆ ಮೊಳಕೆ ಬರದಂತೆ ತಡೆಯಲು ನೀವು ಕ್ರಮ ಕೈಗೊಳ್ಳಬೇಕು. ಸಾಮಾನ್ಯವಾಗಿ ಒಣ ಮತ್ತು ವಿಳಂಬವಾಗಿ ಬಿತ್ತನೆ ಮಾಡಿದ ಆಲೂಗಡ್ಡೆಯು ತ್ತಮವಾಗಿರುವುದು. ಕೆಲವೊಂದು ಬಟಾಟೆಯ ಜಾತಿಗಳಿಂದಲೂ ನೀವು ಪ್ರಯೋಗ ಮಾಡಬಹುದು. ಕೆಲವು ವಿಧದ ಬಟಾಟೆಗಳು ದೀರ್ಘಕಾಲ ತನಕ ಮೊಳಕೆ ಬರುವುದಿಲ್ಲ.

Most Read:ಜ್ಞಾಪಕಶಕ್ತಿ ಹೆಚ್ಚಲು, ತಪ್ಪದೇ ಇಂತಹ ಆಹಾರಗಳನ್ನು ದಿನನಿತ್ಯ ಸೇವಿಸಿ

ಸಂಗ್ರಹಿಸಿಡಲು ಒಳ್ಳೆಯ ಆಲೂಗಡ್ಡೆಗಳು

ಸಂಗ್ರಹಿಸಿಡಲು ಒಳ್ಳೆಯ ಆಲೂಗಡ್ಡೆಗಳು

ಮನೆಯಲ್ಲಿ ಬೆಳೆದಿರುವ ಆಲೂಗಡ್ಡೆಗಳನ್ನು ಒಣಗಿಸಬೇಕು ಅಥವಾ ಬಿಸಿಲಿಗೆ ಹಾಕಬೇಕು. ಇದರ ಬಳಿಕ ಸಂಗ್ರಹಿಸಿಡಬೇಕು. ಇದನ್ನು ನೀವು ಕಡೆಗಣಿಸಿದರೆ ಆಗ ಬಟಾಟೆಗಳಿಗೆ ಬೇಗನೆ ಮೊಳಕೆ ಬರುವುದು. ಆಲೂಗಡ್ಡೆಯನ್ನು ಹೇಗೆ ಆರೈಕೆ ಮಾಡುವುದು ಎಂದು ನೀವಿಲ್ಲಿ ತಿಳಿಯಬೇಕು.

ಮನೆಯಲ್ಲೇ ಬೆಳೆದ ಆಲೂಗಡ್ಡೆ ಆರೈಕೆ ಹೇಗೆ?

ಮನೆಯಲ್ಲೇ ಬೆಳೆದ ಆಲೂಗಡ್ಡೆ ಆರೈಕೆ ಹೇಗೆ?

ಹಾನಿಗೊಂಡಿರುವ ಆಲೂಗಡ್ಡೆಯು ಹೆಚ್ಚಿನ ಕಾಲ ಬಾಳಿಕೆ ಬರುವುದಿಲ್ಲ. ಒಳ್ಳೆಯ ಗುಣಮಟ್ಟದ ಆಲೂಗಡ್ಡೆಗಳನ್ನು ಸರಿಯಾದ ಕ್ರಮದಲ್ಲಿ ಸಂಗ್ರಹಿಸಿಡಿ. ಇದು ಕೆಡದು ಅಥವಾ ಮೊಳಕೆ ಬರುವುದಿಲ್ಲ. ಇನ್ನು ನೀವು ನಿಶ್ಚಿಂತೆಯಿಂದ ನಿಮ್ಮ ಆಹಾರ ಕ್ರಮದಲ್ಲಿ ಆಲೂಗಡ್ಡೆಯನ್ನು ಬಳಸಿಕೊಳ್ಳಬಹುದು.

 ಆಲೂಗಡ್ಡೆಯ ಬಳಸುವ ಮುನ್ನ....

ಆಲೂಗಡ್ಡೆಯ ಬಳಸುವ ಮುನ್ನ....

ಆಲೂಗಡ್ಡೆಯನ್ನು ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ತರುವುದು ನಮಗೆ ಅಭ್ಯಾಸ ಮತ್ತು ದೀರ್ಘ ಕಾಲದ ತನಕ ಅದನ್ನು ಬಳಸುತ್ತೇವೆ. ಅಲ್ಲದೆ ಇದನ್ನು ದೀರ್ಘ ಕಾಲದ ತನಕ ಇಟ್ಟರೆ ಅದರಿಂದ ದೇಹಕ್ಕೆ ವಿಷವಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ತುಂಬಾ ಸಮಯ ಅಡುಗೆಗೆ ಬಳಸದೆ ಇದನ್ನು ಇಟ್ಟಾಗ ಅದರಲ್ಲಿ ಸುಕ್ಕು ಹಾಗೂ ಮೆತ್ತಗಿನ ಪದರ ನಿರ್ಮಾಣವಾಗುತ್ತದೆ. ಅಷ್ಟೇ ಅಲ್ಲದೆ ಇದನ್ನು ಬಿಸಿಲಿಗೆ ಇಟ್ಟರೆ ಸೋಲಾನಿನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ಮತ್ತಷ್ಟು ಕೆಟ್ಟ ಪರಿಣಾಮ ಉಂಟಾಗುವುದು.

Most Read:ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ಗಟ್ಟಿಯಾಗಿರುವ ಆಲೂಗಡ್ಡೆ ಬಳಸಬಹುದು

ಗಟ್ಟಿಯಾಗಿರುವ ಆಲೂಗಡ್ಡೆ ಬಳಸಬಹುದು

ಆಲೂಗಡ್ಡೆ ಗಟ್ಟಿಯಾಗಿದ್ದಾಗ ಆಥವಾ ಸುಕ್ಕು ಹಾಗೂ ಮೆತ್ತಗೆ ಇರುವಾಗ ಮೊಳಕೆ ಬರುವುದು. ಗಟ್ಟಿಯಾಗಿರುವ ಆಲೂಗಡ್ಡೆಯಲ್ಲಿ ಮೊಳಕೆ ಬಂದರೆ ಆಗ ಮೊಳಕೆಯನ್ನು ಕತ್ತರಿಸಿ ತೆಗೆದು ಬಳಸಬಹುದು. ಯಾಕೆಂದರೆ ಅದರಲ್ಲಿರುವ ಪೋಷಕಾಂಶಗಳು ಹಾಗೆ ಉಳಿದುಕೊಂಡಿರುತ್ತದೆ. ಒಂದು ವೇಳೆ ಆಲೂಗಡ್ಡೆ ಸುಕ್ಕು ಕಟ್ಟಿದ್ದರೆ ಆಗ ಇದನ್ನು ಬಿಸಾಕಿ.

English summary

Are Sprouted Potatoes Poisonous?

Potato sprouts are considered toxic due to their potentially high concentration of glycoalkaloids, which can exert their toxic effects on the nervous system.
X
Desktop Bottom Promotion