For Quick Alerts
ALLOW NOTIFICATIONS  
For Daily Alerts

ಈ 8 ಭಯಾನಕ ಆರೋಗ್ಯದ ತಪ್ಪುಗಳನ್ನು ನೀವು ಮಾಡಲೇಬಾರದು!

By Sushma Charhra
|

ಮಹಾನುಭಾವ ಬುದ್ಧ ಒಮ್ಮೆ ಹೇಳಿದ್ದನಂತೆ" ನಮ್ಮ ದೇಹವನ್ನು ಒಳ್ಳೆಯ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ, ಇಲ್ಲದಿದ್ದರೆ ನಾವು ನಮ್ಮ ಮನಸ್ಸನ್ನು ಗಟ್ಟಿಯಾಗಿ ಮತ್ತು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ"ಎಂದು. ಮೇಲಿನ ಮಾತು ಎಷ್ಟು ನಿಜವಲ್ಲವೆ? ಉತ್ತಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯವಿಲ್ಲದೆ ಇದ್ದರೆ, ಮನುಷ್ಯನಿಗೆ ತನ್ನ ಜೀವನವನ್ನು ಸಂತೋಷದಾಯಕವಾಗಿ ಕಳೆಯಲು ಸಾಧ್ಯವೇ ಇಲ್ಲ.

ಒಂದು ವೇಳೆ ಒಬ್ಬ ಮನುಷ್ಯ ಸಣ್ಣ ಕೀಲು ನೋವು, ಇಲ್ಲವೇ ಫ್ಲೂ ಜ್ವರದಿಂದ ಬಳಲಿದರೆ, ಆಗ ಅವರ ಜೀವನ ಎಷ್ಟು ಕಠಿಣವೆನ್ನಿಸಿ ಬಿಡುತ್ತೆ ಅಲ್ಲವೇ? ಒಂದು ಸಣ್ಣ ಕಾಯಿಲೆಯ ಗುಣಲಕ್ಷಣವೂ ಕೂಡ ಅವರ ದೈನಂದಿನ ಬದುಕಿನ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಲ್ಲದು. ಹಾಗಾದ್ರೆ ನೀವು ಊಹಿಸಿಕೊಳ್ಳಬಹುದು, ಒಂದು ವೇಳೆ ಕ್ಯಾನ್ಸರ್, ಹೃದಯದ ಸಮಸ್ಯೆ,ಡಯಾಬಿಟೀಸ್ ನಂತಹ ಕಾಯಿಲೆಗಳು ಹೇಗೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಬಲ್ಲದು, ಅವರ ಸಂತೋಷವನ್ನು ಹಾಳು ಮಾಡಬಲ್ಲದು ಎಂಬುದನ್ನು. ಅದರಲ್ಲೂ ವಾಸಿ ಮಾಡಲು ಸಾಧ್ಯವಿಲ್ಲದ ಕಾಯಿಲೆಗಳು ಬಂದರೆ ಅದನ್ನು ಹೇಳೋದೇ ಬೇಡ...!

ಹಾಗಾಗಿ , ನೀವು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಮತ್ತು ಕಾಯಿಲೆಗಳು ನಿಮ್ಮ ಬಳಿ ಸೋಕದಂತೆ ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿಯನ್ನು ನೀವು ಅರ್ಥೈಸಿಕೊಳ್ಳಲೇಬೇಕು. ಕೆಲವೊಂದು ಕಾಯಿಲೆಗಳಿವೆ ಅವು ನಾವು ಆರೋಗ್ಯಕಾರಿ ಜೀವನವನ್ನು ನಡೆಸುತ್ತಿದ್ದೇವೆ ಎಂದುಕೊಂಡರೂ ಕೂಡ ಬಿಟ್ಟು ಬಿಡದೇ ಕಾಡುತ್ತವೆ. ಇನ್ನು ಕೆಲವು ಕಾಯಿಲೆಗಳು ಕೆಟ್ಟ ಜೀವನಶೈಲಿಯನ್ನು ಅಳವಡಿಸಿಕೊಂಡಿರುವುದರ ಪರಿಣಾಮವಾಗಿ ಕಾಡುತ್ತವೆ. ಹಾಗಾದ್ರೆ ಆರೋಗ್ಯದ ಬಗ್ಗೆ ನೀವು ಮಾಡುವ ತಪ್ಪುಗಳು ಅಥವಾ ಅಭ್ಯಾಸಗಳ ಪಟ್ಟಿ ಇಲ್ಲಿದೆ ನೋಡಿ., ನೀವು ಕಾಯಿಲೆಗಳಿಂದ ಮುಕ್ತರಾಗಿರಬೇಕು ಮತ್ತು ತುಂಬಾ ಸಮಯದವರೆಗೆ ಆರೋಗ್ಯವಾಗಿರಬೇಕು ಎಂದರೆ ಇವುಗಳನ್ನು ಪಾಲಿಸುವುದು ಉತ್ತಮ....

ಧೂಮಪಾನವನ್ನು ಬಿಡದಿರುವುದು

ಧೂಮಪಾನವನ್ನು ಬಿಡದಿರುವುದು

ಹೆಚ್ಚಿನವರು ತಪ್ಪು ಮಾಡುವ ಆರೋಗ್ಯದ ವಿಚಾರವೆಂದರೆ ಅದು ಧೂಮಪಾನ ಬಿಡದೇ ಇರುವುದು, ಇದು ತುಂಬಾ ಅನಾರೋಗ್ಯಕಾರಿ ಮತ್ತು ಭಯನಕವಾದದ್ದು. ಹೆಚ್ಚಿನವರು ಧೂಮಪಾನ ಮಾಡುವುದು ಮಾನಸಿಕವಾಗಿ ಸಿಗರೇಟ್ ನಲ್ಲಿರುವ ನಿಕೋಟಿನ್ ಗೆ ಒಗ್ಗಿಹೋಗಿರುವುದರಿಂದಾಗಿ..ಹೆಚ್ಚಿನ ಸಣ್ಣ ಮತ್ತು ದೊಡ್ಡ ಕಾಯಿಲೆಗಳಿಗೆ ಧೂಮಪಾನ ಕಾರಣವಾಗಲಿದೆ.ಕೊಲೆಸ್ಟ್ರಾಲ್, ರಕ್ತದೊತ್ತಡ,ಕಡಿಮೆ ರೋಗನಿರೋಧಕ ಶಕ್ತಿ, ಬಂಜೆತನ, ಲೈಂಗಿಕ ಸಮಸ್ಯೆಗಳು, ಶ್ವಾಸಕೋಶದ ಸಮಸ್ಯೆಗಳು,ಶ್ವಾಸಕೋಶ ಕ್ಯಾನ್ಸರ್ ಇತ್ಯಾದಿ.

ಒತ್ತಡದ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವುದು

ಒತ್ತಡದ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವುದು

ಹೆಚ್ಚಿನವರು ದಿನನಿತ್ಯ ಸಣ್ಣ ಪ್ರಮಾಣದ ಒತ್ತಡವಿರುವ ಜೀವನ ನಮಗೆ ಯಾವ ಸಮಸ್ಯೆಯನ್ನೂ ಮಾಡುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ ಇತ್ತೀಚೆಗೆ ನಡೆದ ಹಲವಾರು ಸಂಶೋಧನೆಗಳು ಮತ್ತು ಅಧ್ಯಯನಗಳು, ಒತ್ತಡವು ಹಲವಾರು ಕಾಯಿಲೆಯ ಹುಟ್ಟಿಗೆ ಕಾರಣವಾಗುತ್ತೆ ಎಂಬ ಅಂಶವನ್ನು ಬಹಿರಂಗಪಡಿಸಿವೆ. ಎರಡೂ ರೀತಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಇದು ಪರಿಣಾಮವನ್ನು ಬೀರಲಿದೆ. ಹಾಗಾಗಿ ಒತ್ತಡವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ತಾಕತ್ತು ಹೊಂದಿರುವುದು ಬಹಳ ಮುಖ್ಯ.

ಯಾರೋ ಧೂಮಪಾನ ಮಾಡುತ್ತಿದ್ದರೆ ನೀವು ಅದರ ವಾಸನೆ ಸವಿಯುವಂತಾಗುವುದು

ಯಾರೋ ಧೂಮಪಾನ ಮಾಡುತ್ತಿದ್ದರೆ ನೀವು ಅದರ ವಾಸನೆ ಸವಿಯುವಂತಾಗುವುದು

ನಾವು ಈಗಾಗಲೇ ಧೂಮಪಾನ ಮಾಡುವುದರಿಂದ ಯಾವ ರೀತಿ ದುಷ್ಪರಿಣಾಮಗಳಾಗುತ್ತೆ ಎಂಬುದನ್ನು ತಿಳಿಸಲಾಗಿದೆ. ಆದರೆ ನೀವು ಧೂಮಪಾನ ಮಾಡುವವರಲ್ಲ ಬದಲಾಗಿ ಧೂಮಪಾನ ಮಾಡುವವರ ಒಡನಾಟ ನಿಮಗಿದ್ದು, ಯಾವಾಗಲೂ ಅವರು ಬಿಡುವ ಹೊಗೆಯನ್ನು ನೀವು ಸೇವಿಸುತ್ತಿದ್ದರೆ, ನಿಮ್ಮ ಆರೋಗ್ಯ ತೊಂದರೆಗೆ ಒಳಗಾಗಬಹುದು. ಬೇರೆಯವರು ಬಿಡುವ ನಿಕೋಟಿನ್ ಹೊಗೆಗೆ ನೀವು ಸೆಳೆಯಲ್ಪಟ್ಟರೆ, ಕ್ಯಾನ್ಸರ್ ನಂತ ಭಯನಕ ಕಾಯಿಲೆ ಬರಬಹುದು. ಹಾಗಾಗಿ ಹೀಗೆ ಬೇರೆಯವರು ಸ್ಮೋಕ್ ಮಾಡುವಾಗ ನೀವು ಆ ಜಾಗಕ್ಕೆ ತೆರಳದೆ ಸುರಕ್ಷಿತವಾಗಿರಿ.

ಭಾವನಾತ್ಮಕವಾಗಿ ಆಹಾರ ಸೇವಿಸುವುದು

ಭಾವನಾತ್ಮಕವಾಗಿ ಆಹಾರ ಸೇವಿಸುವುದು

ಭಾವನಾತ್ಮಕವಾಗಿ ಆಹಾರ ಸೇವಿಸುವುದನ್ನು ಒಂದು ಅಭ್ಯಾಸ ಎಂದು ವಿವರಿಸಬಹುದು. ಕೆಲವರು ಇರುತ್ತಾರೆ ಅವರು ದುಃಖದಲ್ಲಿದ್ದಾಗ, ಬೇಸರದಲ್ಲಿದ್ದಾಗ,ಸಿಟ್ಟಿನಲ್ಲಿದ್ದಾಗ,ಕೆಲವರು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದು ಅವರಿಗೆ ತತ್ ಕ್ಷಣದ ಆರಾಮವನ್ನು ನೀಡುತ್ತದೆ. ಇದು ಕೂಡ ಕೆಲವು ಕಾಯಿಲೆಗಳಿಗೆ ಕಾರಣವಾಗಬಹುದು. ಯಾಕೆಂದರೆ ಅವರು ಅನಾರೋಗ್ಯಕಾರಿಯಾಗಿ ಆಹಾರ ಸೇವಿಸುತ್ತಿರುತ್ತಾರೆ. ಒಬೆಸಿಟಿ, ಕೊಲೆಸ್ಟ್ರಾಲ್,ಹೃದಯದ ಸಮಸ್ಯೆ,ಇತ್ಯಾದಿ. ಹಾಗಾಗಿ ಯಾವಾಗಲೂ ನೀವು ಎಷ್ಟು ಆಹಾರ ಸೇವನೆ ಮಾಡಬೇಕು ಎಂಬ ಬಗ್ಗೆ ಯೋಚಿಸಿ.

ಪ್ರತಿನಿತ್ಯ ವ್ಯಾಯಾಮ ಮಾಡದಿರುವುದು

ಪ್ರತಿನಿತ್ಯ ವ್ಯಾಯಾಮ ಮಾಡದಿರುವುದು

ಎಲ್ಲರಿಗೂ ತಿಳಿದಿರುವಂತೆ ಪ್ರತಿದಿನ ವ್ಯಾಯಾಮ ಮಾಡುವುದರಿಂದ ಹಲವು ಆರೋಗ್ಯ ಲಾಭಗಳಿವೆ. ಇದು ನಿಮ್ಮನ್ನು ಉತ್ತಮ ಆಹಾರದಲ್ಲಿರುವಂತೆ ನೋಡಿಕೊಳ್ಳುತ್ತೆ. ಕಾಯಿಲೆಗಳನ್ನು ತಡೆಗಟ್ಟುತ್ತೆ ಮತ್ತು ಕಾಯಿಲೆಗಳನ್ನು ನಿಯಂತ್ರಿಸುತ್ತೆ. ಇದರ ಪರಿಣಾಮವು ಲಭ್ಯವಾಗುವುದು ಪ್ರತಿದಿನ ವ್ಯಾಯಾಮ ಮಾಡಿದರೆ ಮಾತ್ರ. ಯಾವತ್ತೋ ಒಂದು ದಿನ ವ್ಯಾಯಾಮ ಮಾಡಿದರೆ ಅದರಿಂದ ಪ್ರಯೋಜನವಾಗುವುದಿಲ್ಲ. ಹಾಗಾಗಿ ಪ್ರತಿದಿನ ವ್ಯಾಯಾಮ ಮಾಡುವುದು ಬಹಳ ಮುಖ್ಯ.

 ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸದೇ ಇರುವುದು

ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸದೇ ಇರುವುದು

ಕನಿಷ್ಟ ಎರಡು ಲೀಟರ್ ನೀರು ಅಥವಾ ವ್ಯಾಯಾಮ ಮಾಡುವವರಾದರೆ ಮೂರು ಲೀಟರ್ ನೀರು ಸೇವಿಸುವುದು ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಮುಖ್ಯ., ಆದರೆ ನಾವು ನಮ್ಮ ತಲೆಯಲ್ಲಿ ಈ ಆಲೋಚನೆಯನ್ನು ಇಟ್ಟುಕೊಳ್ಳುವುದೇ ಇಲ್ಲ ಬದಲಾಗಿ ಯಾವಾಗಲೂ ಬ್ಯುಸಿಯಾಗಿಯೇ ಇರುತ್ತೇವೆ. ಡಿಹೈಡ್ರೇಷನ್, ಡ್ರೈ ಸ್ಕಿನ್, ಇತ್ಯಾದಿ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಅಷ್ಟೇ ಅಲ್ಲ ದೊಡ್ಡ ಕಾಯಿಲೆಗಳಲ್ಲಿ ಒಂದೆನಿಸುವ ಮೂತ್ರಕೋಶದ ಸಮಸ್ಯೆ ಮತ್ತು ಕಿಡ್ನಿ ಸಮಸ್ಯೆಗಳಿಗೂ ಇದು ಕಾರಣವಾಗುತ್ತೆ.

 ಮಧ್ಯಪಾನದ ಅಭ್ಯಾಸ

ಮಧ್ಯಪಾನದ ಅಭ್ಯಾಸ

ಈಗಿನ ಯುವಪೀಳಿಗೆಯ ಮಂದಿ ಪಾರ್ಟಿ ಕಲ್ಚರ್ ನಲ್ಲಿ ತೊಡಗಿಕೊಂಡಿರುತ್ತಾರೆ. ಪಬ್ಬು,ಕ್ಲಬ್ಬು ಅವರ ಜೀವನದ ಅಂಗಗಳಾಗಿರುತ್ತೆ. ವಾರಕ್ಕೊಮ್ಮೆ ಅಥವಾ ಪ್ರತಿದಿನವೋ ಹೀಗೆ ಕೆಲವರಿಗೆ ಮಧ್ಯಪಾನದ ಅಭ್ಯಾಸವಿರುತ್ತೆ. ಆಲ್ಕೋಹಾಲ್ ಸೇವಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಅತಿಯಾಗಿ ಆಲ್ಕೋಹಾಲ್ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ವಯಸ್ಸು ಮತ್ತು ಲಿಂಗಬೇಧವಿಲ್ಲದೆ ಆಲ್ಕೋಹಾಲ್ ನಿಮ್ಮ ಜೀವನಕ್ಕೆ ತೊಂದರೆಯೊಡ್ಡುತ್ತೆ. ಲಿವರ್ರಿನ ಸಮಸ್ಯೆ ಮತ್ತು ಕ್ಯಾನ್ಸರ್ ನಂತ ಭಯಾನಕ ಕಾಯಿಲೆಗಳಿಗೆ ಇದು ಕಾರಣವಾಗಬಲ್ಲದು. ಎಚ್ಚರಿಕೆ..

YO_YO ಡಯಟ್

YO_YO ಡಯಟ್

YO_YO ಡಯಟ್ ಅನ್ನುವುದು ಒಂದು ಅಭ್ಯಾಸವಾಗಿದ್ದು ಮುಖ್ಯವಾಗಿ ತೂಕ ಕಳೆದುಕೊಳ್ಳಬೇಕು ಎಂದುಕೊಳ್ಳುವವರು ಮಾಡುವ ಒಂದು ಯಡವಟ್ಟು. ಇದು ಅತಿಯಾದ ಡಯಟ್ ನ ಲಕ್ಷಣಗಳು. ಬೇಗನೆ ತೂಕ ಕಳೆದುಕೊಳ್ಳಬೇಕು ಎಂಬ ಕಾರಣಕ್ಕೆ ಹಸಿವೆ ಇದ್ದರೂ ಆಹಾರ ಸೇವಿಸದೇ ಇರುವುದು, ಸ್ವಲ್ಪವೇ ಸ್ವಲ್ಪ ಆಹಾರ ಸೇವಿಸುವುದು, ಜಂಕ್ ಫುಡ್ ಗಳನ್ನು ಸೇವಿಸುವುದು ಇತ್ಯಾದಿ. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಒಡ್ಡಬಲ್ಲದು. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನೇ ಬುಡಮೇಲು ಮಾಡಿಬಿಡಬಹುದು, ಅಷ್ಟೇ ಅಲ್ಲ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹಾಳು ಮಾಡಲಿದೆ. ನೀವು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇನ್ನು ಮುಂದೆ ಇವುಗಳನ್ನು ಸರಿಪಡಿಸಿಕೊಳ್ಳಿ ಮತ್ತು ಆರೋಗ್ಯಕಾರಿಯಾದ ಜೀವನ ನಡೆಸಿ.

English summary

8 Deadliest Health Mistakes You Must Never Make!

Even if a person is suffering from a mild joint pain or flu, it could make his/her life quite difficult, as the symptoms of even minor diseases can hinder daily activities and mental peace. So, you can imagine how major diseases such as cancer, heart problems, diabetes, etc., can affect a person's life and well-being, especially if those diseases have no cure! Therefore, it is very important to ensure that you try and do everything you can to maintain good health and prevent certain diseases.
X
Desktop Bottom Promotion