ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತೆ ಈ ಏಳು ಆಹಾರಗಳು...

Posted By: Arshad
Subscribe to Boldsky

ಇತ್ತೀಚೆಗೆ ಸಂಬಂಧಗಳ ನಡುವೆ ಅನ್ಯೋನ್ಯತೆ ಕುಸಿಯುತ್ತಿರುವುರುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಸಮಯವಿಲ್ಲದಿರುವ ವ್ಯಸ್ತ ಜೀವನ! ಜೀವನದಲ್ಲಿ ಸವಲತ್ತುಗಳು ಹೆಚ್ಚುತ್ತಿದ್ದಂತೆಯೇ ಜನರಲ್ಲಿ ಸಮಯವೂ, ವ್ಯವಧಾನವೂ, ಇನ್ನೊಬ್ಬರ ಪ್ರತಿ ಕಾಳಜಿಯೂ ಇಲ್ಲವಾಗುತ್ತಿದೆ. ಅದರಲ್ಲೂ ದಂಪತಿಗಳ ನಡುವೆ ಮಿಲನಕ್ಕೂ ಸಮಯ ಸಾಲದೇ ಹೋಗುತ್ತಾ ಇಬ್ಬರೂ ಪರಸ್ಪರರಿಂದ

ದೈಹಿಕವಾಗಿಯೂ ಮಾನಸಿಕವಾಗಿಯೂ ದೂರಾಗುತ್ತಿದ್ದಾರೆ. ಪರಸ್ಪರ ಪ್ರೇಮ ಹಾಗೂ ಅನ್ಯೂನ್ಯತೆಯೂ ಮರೀಚಿಕೆಯಾಗುತ್ತಿದೆ.. ಯಾವಾಗ ಸಂಗಾತಿಗಳಲ್ಲೊಬ್ಬರು ಲೈಂಗಿಕ ಇಚ್ಚೇಗೆ ನಕಾರದ ಉತ್ತರ ನೀಡುತ್ತಾರೋ, ಆಗ ಇನ್ನೊಬ್ಬರು ಬೇಸರಿಸಿಕೊಳ್ಳಬಹುದು ಹಾಗೂ ಸಂಬಂಧದ ನಡುವೆ ಹುಳಿಹಿಂಡಲು ಕಾರಣವಾಗಬಹುದು. ಲೈಂಗಿಕ ಜೀವನದಲ್ಲಿ ಸಂಗಾತಿಗಳಿಬ್ಬರೂ ಸಮಾನವಾದ ಸಮಸ್ಯೆಗಳನ್ನು ಎದುರಿಸಬಹುದು.

ಮುಖ್ಯವಾಗಿ ಪರಸ್ಪರರಲ್ಲಿ ಕಾಮಾಸಕ್ತಿಯನ್ನು ಕಳೆದುಕೊಂಡು ಲೈಂಗಿಕ ಜೀವನವೂ ಕುಂಠಿತವಾಗುತ್ತಾ ಹೋಗಬಹುದು. ಇದು ಹೆಚ್ಚುತ್ತಾ ಹೋದಂತೆ ಇಬ್ಬರೂ ಜೊತೆಯಾಗಿದ್ದರೂ ಕೇವಲ ಸಮಾಜದ ಕಣ್ಣಿಗೆ ಕಾಣುವಷ್ಟೇ ಅಗತ್ಯದ ತೋರಿಕೆಯ ಆತ್ಮೀಯತೆಯನ್ನು ಪ್ರಕಟಿಸುತ್ತಾ ವೈಯಕ್ತಿಕವಾಗಿ ತಮ್ಮ ಜಗತ್ತಿನಲ್ಲಿಯೇ ವಿಹರಿಸುತ್ತಿದ್ದಿರಬಹುದು.

ಕೆಲವು ಸಂದರ್ಭಗಳಲ್ಲಿ ಪೋಷಕಾಂಶದ ಕೊರತೆ ಹಾಗೂ ವಿಶೇಷವಾಗಿ ಕಬ್ಬಿಣದ ಅಂಶದ ಕೊರತೆ ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಬಹಳವಾಗಿ ಕುಂಠಿತಗೊಳಿಸಬಹುದು. ಅಲ್ಲದೇ ಉದ್ವೇಗ ಹಾಗೂ ಮಾನಸಿಕ ಒತ್ತಡವೂ ಇದಕ್ಕೆ ಇನ್ನೊಂದು ಕಾರಣವಾಗಬಹುದು. ಈ ಕೊರತೆ ಇದ್ದಾಗ ಹೆಚ್ಚಿನ ದಂಪತಿಗಳು ಇದಕ್ಕೆ ತಮ್ಮ ವಯಸ್ಸನ್ನೇ ಕಾರಣವಾಗಿಸಿ ಕಾಮಾಸಕ್ತಿಯನ್ನು ಹೆಚ್ಚಿಸುವ ವಯಾಗ್ರಾದಂತಹ ಔಷಧಿಗಳ ಮೊರೆ ಹೋಗುತ್ತಾರೆ. ಈ ಔಷಧಿ ಬಲವಂತವಾಗಿ ಕಾಮಾಸಕ್ತಿಯನ್ನು ಹೆಚ್ಚಿಸಿದರೂ ಇದು ಅಪ್ಪಟ ಯಾಂತ್ರಿಕವಾಗಿದ್ದು ಇದರಲ್ಲಿ

ಕೆಲವು ಅಡ್ಡಪರಿಣಾಮಗಳೂ ಇವೆ. ಆದ್ದರಿಂದ ವೈದ್ಯರ ಸಲಹೆ ಇಲ್ಲದೇ ಅಥವಾ ಹೆಚ್ಚಿನ ಕಾಲ ಇವುಗಳ ಬಳಕೆ ಸಲ್ಲದು. ಅಷ್ಟೇ ಅಲ್ಲ, ಬಲವಂತವಾಗಿ ಮೂಡಿಸಿಕೊಂಡ ಕಾಮಾಸಕ್ತಿಯಿಂದ ದಾಂಪತ್ಯದ ಅನ್ಯೋನ್ಯತೆ ಹೆಚ್ಚುವುದಿಲ್ಲ, ಬದಲಿಗೆ ಕಾಮಾಸಕ್ತಿಯನ್ನು ಕೃತಕವಾಗಿ ಪೂರೈಸಿಕೊಂಡಂತಾಗುತ್ತದೆ.

ಆದರೆ ಕಾಮಾಸಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಕೆಲವು ಆಹಾರಗಳು ವಯಾಗ್ರಾದಂತೆಯೇ ಕಾರ್ಯನಿರ್ವಹಿಸುತ್ತವೆ ಹಾಗೂ ಇವು ತಕ್ಷಣವೇ ಕುಸಿದಿದ್ದ ಕಾಮವಾಂಛೆಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಂದರವಾಗಿಸುತ್ತವೆ. ಈ ಆಹಾರಗಳ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ ಇವುಗಳನ್ನು ಸುರಕ್ಷಿತವಾಗಿ, ಯಾವುದೇ ಅಳುಕಿಲ್ಲದೇ ಸೇವಿಸಬಹುದು. ಬನ್ನಿ, ದಾಂಪತ್ಯದ ಸವಿಯನ್ನು ಹೆಚ್ಚಿಸಲು ನೆರವಾಗುವ ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ....

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಮತ್ತು ಬಸಲೆ ಸೊಪ್ಪುಗಳಲ್ಲಿ ಕಬ್ಬಿಣ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದು ರಕ್ತದ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಅಂತೆಯೇ ಮಹಿಳೆಯರಲ್ಲಿ ಇದು ಜನನಾಂಗಗಳಿಗೆ ಹರಿಯುವ ರಕ್ತಪರಿಚಲನೆಯನ್ನು ಹೆಚ್ಚಿಸಿ ಹೆಚ್ಚಿನ ದ್ರವ್ಯತೆ ಹಾಗೂ ಲೈಂಗಿಕ ಕ್ರಿಯೆಯನ್ನು ಹೆಚ್ಚು ಆಹ್ಲಾಕಕರವಾಗಿಸಲು ನೆರವಾಗುತ್ತದೆ ಹಾಗೂ ಕಾಮೋತ್ಕಟತೆ ಸುಲಭವಾಗಿ ಪಡೆಯಲು ನೆರವಾಗುತ್ತದೆ. ಒಂದು ವೇಳೆ ಕಾಮಾಸಕ್ತಿ ತೀರಾ ಕಡಿಮೆ ಇದ್ದರೆ ಪಾಲಕ್ ಸೊಪ್ಪನ್ನು ನಿತ್ಯವೂ ಸೇವಿಸಿ.

ಕೆಂಪು ವೈನ್

ಕೆಂಪು ವೈನ್

ಕಾಮಾಸಕ್ತಿಯನ್ನು ತಕ್ಷಣವೇ ಹೆಚ್ಚಿಸಲು ಒಂದು ಲೋಟ ಕೆಂಪು ವೈನ್ ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ಆದರೆ ಈ ಪ್ರಮಾಣ ಒಂದು ಲೋಟಕ್ಕಿಂತ ಹೆಚ್ಚಾಗಬಾರದು. ಹೆಚ್ಚಾದರೆ ಇದರ ಪರಿಣಾಮ ವ್ಯತಿರಿಕ್ತವಾಗಬಹುದು. ಅಂದರೆ ಕಾಮಾಸಕ್ತಿ ಹೆಚ್ಚಿಸುವ ಬದಲು ಇದ್ದ ಕೊಂಚ ಕಾಮಾಸಕ್ತಿಯನ್ನೂ ಕುಗ್ಗಿಸಬಹುದು. ಕೆಂಪು ವೈನ್ ನಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತವೆ. ಇವು ರಕ್ತನಾಳಗಳನ್ನು ಸಡಿಲಿಸಿ ಜನನಾಂಗಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.

ಕೆಂಪು ಮಾಂಸ ಹಾಗೂ ಯಕೃತ್

ಕೆಂಪು ಮಾಂಸ ಹಾಗೂ ಯಕೃತ್

ಮಹಿಳೆಯರಲ್ಲಿ ಕೆಲವೊಮ್ಮೆ ಕಾಮಾಸಕ್ತಿ ಕಡಿಮೆಯಾಗಲು ಕಬ್ಬಿಣದ ಕೊರತೆ ಪ್ರಮುಖ ಕಾರಣವಾಗಿರುತ್ತದೆ. ಆದ್ದರಿಂದ ಕಬ್ಬಿಣದ ಅಂಶವನ್ನು ಹೆಚ್ಚಿಸುವ ಆಹಾರಗಳಾದ ಯಕೃತ್, ಕೆಂಪು ಮಾಂಸ, ಹಸಿರು ತರಕಾರಿ ಮೊದಲಾದವುಗಳನ್ನು ಸೇವಿಸಬೇಕು. ಇವುಗಳ ಸೇವನೆಯಿಂದ ಕಬ್ಬಿಣದ ಅಂಶದ ಕೊರತೆ ನೀಗುತ್ತದೆ. ಆದರೆ ಈ ಅಹಾರಗಳಲ್ಲಿರುವ ಕಬ್ಬಿಣವನ್ನು ದೇಹ ಹೀರಿಕೊಳ್ಳುವಂತಾಗಲು ಸಾಕಷ್ಟು ಮೊಸರನ್ನೂ ಪ್ರತಿಬಾರಿ ಸೇವಿಸಬೇಕು.

ಕೊಬ್ಬುಯುಕ್ತ ಮೀನು

ಕೊಬ್ಬುಯುಕ್ತ ಮೀನು

ಸಾಲ್ಮನ್, ಬೂತಾಯಿ, ಬಂಗಡೆ, ಟ್ಯೂನಾ ಮೊದಲಾದ ಮೀನುಗಳಲ್ಲಿ ಒಮೆಗಾ ೩ ಕೊಬ್ಬಿನ ಆಮ್ಲಗಳು ಹಾಗೂ ಮೀನಿನೆಣ್ಣೆ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವೆಲ್ಲವೂ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಮಟ್ಟವನ್ನು ಹೆಚ್ಚಿಸುತ್ತವೆ. ಈ ರಾಸಾಯನಿಕ ನರಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ತನ್ಮೂಲಕ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ.

ಪೈನ್ ಒಣಫಲಗಳು

ಪೈನ್ ಒಣಫಲಗಳು

ಚಿಲ್ಗುಝಾ ಎಂದು ಹಿಂದಿಯಲ್ಲಿ ಕರೆಯಲ್ಪಡುವ ಈ ಒಣಫಲ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಕಾಮಾಸಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಇದರಲ್ಲಿರುವ ಸತು ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಒಂದು ವೇಳೆ ಕಾಮಾಸಕ್ತಿಯ ಕೊರತೆ ಇದ್ದರೆ ಸತು ಹೆಚ್ಚಿನ ಪ್ರಮಾಣದಲ್ಲಿರುವ ಆಹಾರಗಳನ್ನು ಸೇವಿಸಬೇಕು. ಈ ಅಂಶವನ್ನು ಸಿಂಪಿಗಳೂ ಹೆಚ್ಚಾಗಿ ಹೊಂದಿರುತ್ತವೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕಪ್ಪು ಚಾಕಲೇಟಿನಲ್ಲಿರುವ ಫ್ಲೇವನಾಯ್ಡುಗಳು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ರಕ್ತನಾಳಗಳನ್ನು ಸಡಿಲಗೊಳಿಸುತ್ತವೆ. ಪರಿಣಾಮವಾಗಿ ಜನನಾಂಗಗಳಿಗೆ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಲೈಂಗಿಕ ಕ್ರಿಯೆಯನ್ನು ಆಹ್ಲಾದಕರವಾಗಿಸುತ್ತದೆ. ಅಷ್ಟೇ ಅಲ್ಲ, ಮಹಿಳೆಯರ ಸೊಂಟದ ಸುತ್ತ ತುಂಬಿರುವ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ ಹಾಗೂ ಇನಿಯನಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳಲೂ ನೆರವಾಗುತ್ತದೆ.

ಹಸಿರು ಟೀ

ಹಸಿರು ಟೀ

ಹಸಿರು ಟೀ ಸೇವನೆಯಿಂದ ಲೈಂಗಿಕ ಜೀವನ ಉಲ್ಲಾಸಮಯವಾಗುವ ಜೊತೆಗೇ ಆರೋಗ್ಯವೂ ವೃದ್ದಿಸುತ್ತದೆ. ಇದರಲ್ಲಿರುವ ಕ್ಯಾಟೆಚಿನ್ ಎಂಬ ಪೋಷಕಾಂಶ ಜನನಾಂಗಗಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ರಕ್ತನಾಳಗಳ ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಆದರೆ ಹಸಿರು ಟೀ ಪ್ರಮಾಣ ದಿನಕ್ಕೆರಡು ಕಪ್ ಮೀರಬಾರದು, ಮೀರಿದರೆ ಇದರ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು.

English summary

7 Foods That Increase Female Sex Drive

There are some best foods that have natural sex-boosting powers like that of Viagra. These foods will instantaneously raise your libido, thereby making you enjoy the act. The best part is these foods do not cause any side effects either. Here is a list of foods that increase sex drive in women and act like the female Viagra.