For Quick Alerts
ALLOW NOTIFICATIONS  
For Daily Alerts

ಕೈ ತೋಳಿನಲ್ಲಿ ನೋವೇ? ಈ ಹನ್ನೊಂದು ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಿ

By Arshad
|

ನಿಮಗೆ ಆಗಾಗ ಕೈನೋವು ಕಾಡುತ್ತಿರುತ್ತದೆಯೇ? ಇದು ಹಲವು ಜನರಿಗೆ ಎದುರಾಗುವ ಸಾಮಾನ್ಯ ತೊಂದರೆಯಾಗಿದೆ. ತೋಳಿನ ಯಾವುದೇ ಭಾಗದಲ್ಲಿ ನೋವು ಎದುರಾದರೂ ನಿತ್ಯದ ಕೆಲಸಗಳೆಲ್ಲಾ ಬಾಧೆಗೊಳಗಾಗುತ್ತವೆ ಹಾಗೂ ಈ ನೋವನ್ನು ಸಹಿಸಲು ಸಾಧ್ಯವಿಲ್ಲವೇ ನರಳಬೇಕಾಗುತ್ತದೆ.

ಕೈಗಳಿಂದ ಮಾಡಬಹುದಾದ ಕೆಲಸಗಳ ಪಟ್ಟಿ ಬಹಳ ದೊಡ್ಡದು. ವಸ್ತುಗಳನ್ನು ಎತ್ತುವುದರಿಂದ ತೊಡಗಿ ಹಿಡಿಯುವುದು, ಎಸೆಯುವುದು, ಆಧಾರ ಪಡೆಯುವುದು ಮೊದಲಾದ ಹತ್ತು ಹಲವು ಕೆಲಸಗಳಿಗೆ ಕೈಗಳು ಬೇಕೇ ಬೇಕು. ಕೈಗಳ ನೋವಿಗೆ ಕೆಲವಾರು ಕಾರಣಗಳಿವೆ. ತಪ್ಪು ಭಂಗಿಯಲ್ಲಿ ಮಲಗುವುದು, ರಕ್ತಪರಿಚಲನೆಗೆ ಅಡ್ಡಿಯಾಗುವುದು, ಒಂದೇ ಚಲನೆಯನ್ನು ಸತತವಾಗಿ ಪುನರಾವರ್ತಿಸುವುದು, ಅತಿಯಾದ ವ್ಯಾಯಾಮ ಇತ್ಯಾದಿಗಳು ಕೈ ತೋಳಿನ ನೋವಿಗೆ ಸಾಮಾನ್ಯ ಕಾರಣಗಳಾಗಿವೆ.

ಕೈನೋವಿಗೆ ಕೆಲವು ಆಂತರಿಕ ಕಾರಣಗಳೂ ಇದ್ದು ಈ ನೋವು ಕಡಿಮೆಯಾಗುವ ಲಕ್ಷಣವನ್ನೇ ತೋರುವುದಿಲ್ಲ. ಈ ಕಾರಣಗಳಲ್ಲಿ ಪ್ರಮುಖವಾಗಿ ಕೈಯಲ್ಲಿನ ನರವೊಂದು ಒಳಗಿನಿಂದ ತಿರುಚಿಕೊಂಡಿರುವುದು, ಮೂಳೆಯಲ್ಲಿ ಸೂಕ್ಷ್ಮ ಬಿರುಕು, ಕೈ ಮತ್ತು ಭುಜದ ಸಂಧುಗಳಲ್ಲಿನ ಸ್ನಾಯುಗಳ ಸೆಡೆತ, ಉಳುಕು ಹಾಗೂ ಸಂಧಿವಾತ ಆಗಿವೆ. ಕೈನೋವಿನ ಪರಿಣಾಮವಾಗಿ ಕೈಗಳು ಊದಿಕೊಳ್ಳುವುದು, ಸೆಳೆತ, ಕೈಗಳ ಬಿಗಿತ, ಕಂಕುಳ ಭಾಗದಲ್ಲಿ ಊದಿಕೊಂಡಿರುವ ದುಗ್ಧಗ್ರಂಥಿಗಳು, ನೋವಿರುವ ಭಾಗ ಕೆಂಪಗಾಗಿರುವುದು ಮೊದಲಾದ ಲಕ್ಷಣಗಳನ್ನು ಪ್ರಕಟಿಸುತ್ತವೆ. ಕೈಗಳ ನೋವನ್ನು ಸಮರ್ಥವಾಗಿ ಕಡಿಮೆ ಮಾಡಲು ಕೆಲವು ನೈಸರ್ಗಿಕ ಮನೆಮದ್ದುಗಳಿವೆ. ಬನ್ನಿ, ಈ ವಿಧಾನಗಳ ಬಗ್ಗೆ ಅರಿಯೋಣ....

ತಣ್ಣನೆಯ ಪಟ್ಟಿಯ ಲೇಪನ

ತಣ್ಣನೆಯ ಪಟ್ಟಿಯ ಲೇಪನ

ನೋವಿರುವ ಭಾಗಕ್ಕೆ ತಂಪು ನೀಡುವುದು ಒಂದು ಉತ್ತಮ ನೈಸರ್ಗಿಕ ವಿಧಾನವಾಗಿದೆ. ನೋವಿರುವ ಭಾಗವನ್ನು ತಂಪುಗೊಳಿಸುವ ಮೂಲಕ ನೋವಿರುವ ಭಾಗದಲ್ಲಿನ ಸ್ನಾಯುಗಳನ್ನು ಮರಗಟ್ಟಿಸಿ ಉರಿಯೂತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದಕ್ಕಾಗಿ ಸ್ವಚ್ಛ ಬಟ್ಟೆಯ ಟವೆಲ್ಲೊಂದರಲ್ಲಿ ಕೆಲವು ಮಂಜುಗಡ್ಡೆಯ ತುಂಡುಗಳನ್ನಿರಿಸಿ ನೋವಿರುವ ಭಾಗದಲ್ಲಿ ಕಟ್ಟಿಕೊಳ್ಳಬೇಕು. ಈ ಟವೆಲ್ಲನ್ನು ಸುಮಾರು ಹದಿನೈದು ನಿಮಿಷಗಳವರೆಗೆ ಹಾಗೇ ಬಿಡಿ, ಬಳಿಕ ನಿಧಾನವಾಗಿ ನಿವಾರಿಸಿ. ಈ ವಿಧಾನವನ್ನು ಕೆಲವು ದಿನಗಳವರೆಗೆ ಪುನರಾವರ್ತಿಸಿ.

ಕೈಗಳನ್ನು ಕೆಳಮುಖವಾಗಿ ಇರಿಸಿ

ಕೈಗಳನ್ನು ಕೆಳಮುಖವಾಗಿ ಇರಿಸಿ

ನೋವನ್ನು ಕಡಿಮೆ ಮಾಡಲು ದೇಹದ ಮಟ್ಟಕ್ಕಿಂತ ಕೈಗಳು ಕೆಳಗಿರುವಂತೆ ನೋಡಿಕೊಳ್ಳಿ. ಹೀಗೆ ಕೈಯನ್ನು ಇರಿಸುವ ಮೂಲಕ ಕೈಗಳಲ್ಲಿ ಉತ್ತಮ ರಕ್ತಪರಿಚಲನೆಯುಂಟಾಗುತ್ತದೆ ಹಾಗೂ ನೈಸರ್ಗಿಕವಾಗಿ ಗುಣಪಡಿಸುವ ಗತಿಯನ್ನು ವೃದ್ಧಿಸುತ್ತದೆ. ಇದನ್ನು ಸಾಧ್ಯವಾಗಿಸಲು ಮಲಗಿರುವ ಭಂಗಿಯಲ್ಲಿ ಕೈಗಳನ್ನು ಕೆಳಗೆ ಚಾಚಿ, ಭುಜದ ಕೆಳಭಾಗದಲ್ಲಿ ಒಂದು ಅಥವಾ ಎರಡು ತಲೆದಿಂಬುಗಳನ್ನಿರಿಸಿ. ಇದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಶೀಘ್ರವಾಗಿ ನೋವು ನಿವಾರಣೆಯಾಗುತ್ತದೆ.

ಶಾಖದ ಕಾವು

ಶಾಖದ ಕಾವು

ನೋವಿರುವ ಭಾಗದಲ್ಲಿ ಕಾವು ನೀಡುವ ಮೂಲಕವೂ ಶೀಘ್ರವಾಗಿ ನೋವು ಕಡಿಮೆಯಾಗುತ್ತದೆ. ಆದರೆ ನೋವು ಪ್ರಾರಂಭವಾದ ಎರಡು ದಿನಗಳ ಬಳಿಕವೇ ಈ ವಿಧಾನ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಒಂದು ದೊಡ್ಡ ಬಕೆಟ್ ಅಥವಾ ಬೋಗುಣಿಯ ಭರ್ತಿ ಬಿಸಿನೀರು ತುಂಬಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕೈಯನ್ನು ಮುಳುಗಿಸಿಡಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಪುನರಾವರ್ತಿಸಿ.

ವಿಶ್ರಾಂತಿ

ವಿಶ್ರಾಂತಿ

ಕೈಗಳಿಗೆ ವಿಶ್ರಾಂತಿ ನೀಡುವ ಮೂಲಕವೂ ನೋವು ಶಮನವಾಗುತ್ತದೆ. ಘಾಸಿಯಾಗಿದ್ದ ಅಂಗಾಂಶಗಳಿಗೆ ಸಾಕಷ್ಟು ವಿಶ್ರಾಂತಿ ನೀಡುವ ಮೂಲಕ ನೋವು ಕಡಿಮೆಯಾಗುತ್ತದೆ. ಇದಕ್ಕಾಗಿ ಕೈಗಳನ್ನು ಯಾವುದೇ ಒತ್ತಡಕ್ಕೆ ಒಳಗಾಗಿಸದೇ ತಲೆದಿಂಬಿನ ಮೇಲಿರಿಸಿ ವಿಶ್ರಾಂತಿ ಪಡೆಯಿರಿ. ಕೈನೋವು ಪೂರ್ಣವಾಗಿ ಮೂರು ದಿನಗಳವರೆಗಾದರೂ ಯಾವುದೇ ಕೆಲಸ ನೀಡದೇ ವಿಶ್ರಾಂತಿ ನೀಡಬೇಕು.

ಮಸಾಜ್

ಮಸಾಜ್

ನೋವಿರುವ ಭಾಗದಲ್ಲಿ ನಯವಗಿ ಮಸಾಜ್ ಮಾಡುವ ಮೂಲಕವೂ ಕೈ ನೋವು ಕಡಿಮೆಯಾಗುತ್ತದೆ. ಇದರಿಂದ ನೋವಿಗೆ ಕಾರಣವಾಗಿದ್ದ ಸೆಡೆತವೂ ಕಡಿಮೆಯಾಗುತ್ತದೆ. ಮಸಾಜ್ ಗಾಗಿ ಸುಮಾರು ಒಂದು ದೊಡ್ಡ ಚಮಚ ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಉಗುರುಬೆಚ್ಚಗಾಗಿಸಿ. ಈ ಎಣ್ಣೆಯಿಂದ ನೋವಿರುವ ಭಾಗದ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿಕೊಳ್ಳಿ. ಇದರಿಂದ ಈ ಭಾಗದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ನೋವು ಕಡಿಮೆಯಾಗುವವರೆಗೂ ದಿನದಲ್ಲಿ ಹಲವಾರು ಬಾರಿ ಮಸಾಜ್ ಮಾಡಿಕೊಳ್ಳಿ.

ಅರಿಶಿನ

ಅರಿಶಿನ

ಅರಿಶಿನವೂ ನೋವು ಕಡಿಮೆ ಮಾಡಲು ಉತ್ತಮವಾದ ಆಯ್ಕೆಯಾಗಿದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶದಲ್ಲಿ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಅರಿಶಿನದಲ್ಲಿರುವ ಆಂಟಿ ಆಕ್ಸಿಡೆಂಟುಗಲು ಉರಿಯೂತ ಹಾಗೂ ನೋವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಶುಂಠಿ

ಶುಂಠಿ

ಶುಂಠಿಯೂ ನೋವಿನ ಶಮನಕ್ಕೆ ಉತ್ತಮ ಆಯ್ಕೆಯಾಗಿದೆ. ಇದರ ಆಂಟಿ ಆಕ್ಸಿಡೆಂಟುಗಳು ಹಾಗೂ ಉರಿಯೂತ ನಿವಾರಕ ಗುಣ ಯಾವುದೇ ಬಗೆಯ ಉರಿಯೂತವನ್ನು ನಿವಾರಿಸಬಲ್ಲುದು. ಇದರ ಬಳಕೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ನೋವಿಗೆ ಕಾರಣವಾಗಿದ್ದ ಘಾಸಿಯಾಗಿರುವ ಅಂಗಾಂಶಗಳು ಶೀಘ್ರವಾಗಿ ಗುಣಹೊಂದುತ್ತವೆ. ಇದಕ್ಕಾಗಿ ಶುಂಠಿಯ ಟೀ ತಯಾರಿಸಿ ದಿನಕ್ಕೆ ಮೂರು ಕಪ್ ನಷ್ಟು ನೋವು ಕಡಿಮೆಯಾಗುವವರೆಗೂ ಕುಡಿಯಿರಿ.

ಕೇಯ್ನ್ ಮೆಣಸು

ಕೇಯ್ನ್ ಮೆಣಸು

ಈ ಮೆಣಸಿನಲ್ಲಿ ಕ್ಯಾಪ್ಸೈಸಿನ್ ಎಂಬ ಪೋಷಕಾಂಶವಿದೆ. ಇದೊಂದು ನೋವುನಿವಾರಕ ಹಾಗೂ ಉರಿಯೂತ ನಿವಾರಕ ಗುಣವಿರುವ ಪೋಷಕಾಂಶವಾಗಿದೆ ಹಾಗೂ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅರ್ಧ ಚಿಕ್ಕ ಚಮಚ ಕೇಯ್ನ್ ಮೆಣಸಿನ ಪುಡಿಯನ್ನು ಒಂದು ದೊಡ್ಡಚಮಚ ಉಗುರುಬೆಚ್ಚಗಿನ ಆಲಿವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನೋವಿರುವ ಭಾಗಕ್ಕೆ ಸುಮಾರು ಅರ್ಧ ನಿಮಿಷದ ಮಸಾಜ್ ನೊಂದಿಗೆ ಹಚ್ಚಿಕೊಳ್ಳಿ.

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಈ ಶಿರ್ಕಾ ಸಹಾ ಕೈನೋವನ್ನು ಕಡಿಮೆ ಮಾಡಲು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಕ್ಷಾರೀಯಗೊಳಿಸುವ ಹಾಗೂ ಉರಿಯೂತ ನಿವಾರಕ ಗುಣಗಳಿವೆ ಹಾಗೂ ಕೈನೋವಿನಿಂದ ಊದಿಕೊಂಡಿದ್ದರೆ ಉತ್ತಮ ಪರಿಹಾರ ಒದಗಿಸುತ್ತದೆ. ಎರಡು ಕಪ್ ನಷ್ಟು ನೀರು ಬೆರೆಸ ಸೇಬಿನ ಶಿರ್ಕಾವನ್ನು ಸ್ನಾನದ ತೊಟ್ಟಿಯ ನೀರಿಗೆ ಬೆರೆಸಿ. ಈ ನೀರಿನಲ್ಲಿ ಸುಮಾರು ಅರ್ಧಘಂಟೆಯಾದರೂ ಇಡಿಯ ದೇಹವನ್ನು ಮುಳುಗಿಸಿಡಿ. ನೋವು ಕಡಿಮೆಯಾಗುವವರೆಗೂ ದಿನಕ್ಕೊಂದು ಬಾರಿ ಈ ವಿಧಾನವನ್ನು ಅನುಸರಿಸಿ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಇದೊಂದು ಅವಶ್ಯಕ ತೈಲವಾಗಿದ್ದು ಸುಸ್ತಾಗಿರುವ ಸ್ನಾಯುಗಳನ್ನು ಸಡಿಲಗೊಳಿಸುವ ಗುಣ ಹೊಂದಿದೆ. ನೋವಿಗೆ ಕಾರಣವಾಗಿದ್ದ ಉರಿಯೂತವನ್ನು ನಿವಾರಿಸುವ ಮೂಲಕ ಶೀಘ್ರ ಗುಣಪಡಿಸಲು ನೆರವಾಗುತ್ತದೆ. ನಿಮ್ಮ ಸ್ನಾನದ ತೊಟ್ಟಿಯ ನೀರಿನಲ್ಲಿ ಸುಮಾರು ಐದು ತೊಟ್ಟು ಅವಶ್ಯಕ ಎಣ್ಣೆಯನ್ನು ಬೆರೆಸಿ. ಈ ನೀರಿನಲ್ಲಿ ಸುಮಾರು ಅರ್ಧಘಂಟೆಯಾದರೂ ಇಡಿಯ ದೇಹವನ್ನು ಮುಳುಗಿಸಿಡಿ.

ನೋವು ಕಡಿಮೆಯಾಗುವವರೆಗೂ ದಿನಕ್ಕೊಂದು ಬಾರಿ ಈ ವಿಧಾನವನ್ನು ಅನುಸರಿಸಿ.

ಮೆಗ್ನೇಶಿಯಂ ಹೆಚ್ಚಿರುವ ಆಹಾರಗಳು

ಮೆಗ್ನೇಶಿಯಂ ಹೆಚ್ಚಿರುವ ಆಹಾರಗಳು

ಸ್ನಾಯುಗಳ ಸೆಳೆತ ಹೆಚ್ಚಲು ಹಾಗೂ ನರಗಳ ಕಾರ್ಯಕ್ಷಮತೆ ಹೆಚ್ಚಲು ಮೆಗ್ನೀಶಿಯಂ ಅಗತ್ಯವಾಗಿದೆ. ಆಹಾರದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಈ ನೋವನ್ನು ಕಡಿಮೆ ಮಾಡಬಹುದು. ಬೀನ್ಸ್, ಒಣಫಲಗಳು, ಹಸಿರು ಮತ್ತು ದಪ್ಪನೆಯ ಎಲೆಗಳು, ತರಕಾರಿಗಳು, ಇಡಿಯ ಧಾನ್ಯಗಳು ಇತ್ಯಾದಿಗಳನ್ನು ಸೇವಿಸುವ ಮೂಲಕ ಕೈನೋವು ಕಡಿಮೆಯಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

11 Natural Home Remedies For Arm Pain

Do you often suffer from an arm pain? Arm pain is common among many people and it can occur in any part of your arm. The pain is sometimes unbearable and painful, preventing you from carrying out your day-to-day activities. The arm is used for lifting things, holding, grabbing and throwing. So, if your arm is in pain, it becomes quite difficult to do certain things. A mild pain in the arm can be due to a poor sleeping position, poor blood circulation, repetitive motions or excessive exercising.
X
Desktop Bottom Promotion