For Quick Alerts
ALLOW NOTIFICATIONS  
For Daily Alerts

ಚೆನ್ನಾಗಿ ನಿದ್ರೆ ಮಾಡಿ... ಇಲ್ಲವಾದರೆ ಈ ಸಮಸ್ಯೆಗಳು ಬರುವುದು ನೋಡಿ..

ಮನೆ ಮಂದಿಯ ಬೇಕು ಬೇಡಗಳನ್ನು ಪೂರೈಸುತ್ತ ದುಡಿಯುವ ಮಹಿಳೆಗೆ ನಿದ್ರೆ ಎನ್ನುವ ಔಷಧ ಸ್ವಲ್ಪ ಜಾಸ್ತಿಯೇ ಬೇಕು. ಪುರುಷರಿಗೆ ಹೋಲಿಸಿದರೆ ಅವರಿಗೆ ಕನಿಷ್ಠ 20 ನಿಮಿಷಗಳ ಹೆಚ್ಚುವರಿ ನಿದ್ರೆ ಆಕೆಗೆ ಬೇಕಾಗುವುದು....

By Manu
|

ಬೆಳಗ್ಗೆ ಒಮ್ಮೆ ಎದ್ದರೆ ಮನೆ, ಮಕ್ಕಳು ಹಾಗೂ ಗಂಡ ಎನ್ನುತ್ತ ಕೆಲಸ ಮಾಡಲು ಪ್ರಾರಂಭಿಸಿದರೆ ರಾತ್ರಿಯವರೆಗೂ ದುಡಿಯುತ್ತಲೇ ಇರಬೇಕು. ಮನೆ ಮಂದಿಯ ಬೇಕು ಬೇಡಗಳನ್ನು ಪೂರೈಸುತ್ತ ದುಡಿಯುವ ಮಹಿಳೆಗೆ ನಿದ್ರೆ ಎನ್ನುವ ಔಷಧ ಸ್ವಲ್ಪ ಜಾಸ್ತಿಯೇ ಬೇಕು. ನಿಜ, ಪುರುಷರಿಗೆ ಹೋಲಿಸಿದರೆ ಅವರಿಗೆ ಕನಿಷ್ಠ 20 ನಿಮಿಷಗಳ ಹೆಚ್ಚುವರಿ ನಿದ್ರೆ ಬೇಕಾಗುವುದು. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

ಬೆಳಗಿನಿಂದ ಸಂಜೆಯವರೆಗೂ ಒತ್ತಡದಿಂದಲೇ ಎಲ್ಲಾ ಕೆಲಸಗಳನ್ನು ಮಹಿಳೆಯರು ಮಾಡುತ್ತಾರೆ. ಅವರ ಈ ಒತ್ತಡದಿಂದ ಚೇತರಿಸಿಕೊಳ್ಳಲು ರಾತ್ರಿ ಗುಣಮಟ್ಟದ ನಿದ್ರೆಯ ಅಗತ್ಯವಿರುತ್ತದೆ. ಪ್ರತಿದಿನ ಕನಿಷ್ಠವೆಂದರೂ 8 ತಾಸುಗಳ ನಿದ್ರೆ ಮಾಡಬೇಕು ಅವರು. ಒಂದು ಅನುಪಾತದ ಪ್ರಕಾರ 26-64 ವಯಸ್ಸಿನ ಮಿತಿಯಲ್ಲಿರುವ ಮಹಿಳೆಯರಿಗೆ 7-9 ಗಂಟೆಗಳ ನಿದ್ರೆ ಅಗತ್ಯವಿರುತ್ತದೆ. ಮಲಗುವ ಮುನ್ನ ಈ ಪೇಯ ಕುಡಿದರೆ ಕಣ್ತುಂಬ ನಿದ್ದೆ ಗ್ಯಾರಂಟಿ!

ಹದಿ ಹರೆಯದಲ್ಲಿರುವವರು 9-10 ಗಂಟೆಗಳ ನಿದ್ರೆ ಮಾಡಬೇಕು. ಆಗಲೇ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರುತ್ತಾರೆ. ಇಲ್ಲವಾದರೆ ಅನೇಕ ಸಮಸ್ಯೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ...

ಕಾರಣ-1

ಕಾರಣ-1

ಮಹಿಳೆಯರು ದಿನವಿಡೀ ಹೆಚ್ಚು ಮಾನಸಿಕ ಶಕ್ತಿಯನ್ನು ಬಳಸಿಕೊಂಡು ಕೆಲಸ ಮಾಡುತ್ತಾರೆ. ಜೊತೆಗೆ ದೈಹಿಕವಾಗಿಯೂ ಹೆಚ್ಚು ಕ್ರಿಯಾಶೀಲತೆಯಿಂದ ಕೆಲಸ ಮಾಡಿರುತ್ತಾರೆ. ಹಾಗಾಗಿ ಅವರ ಶ್ರಮಕ್ಕೆ ಇನ್ನಷ್ಟು ಶಕ್ತಿ ನೀಡಬೇಕಾದರೆ ಹೆಚ್ಚು ಕಾಲ ನಿದ್ರೆ ಮಾಡಬೇಕಾಗುತ್ತದೆ. ಇಲ್ಲವಾದರೆ ಆಯಾಸದಿಂದ ಸಣ್ಣ-ಸಣ್ಣ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುವುದು.

ಕಾರಣ-2

ಕಾರಣ-2

ಋತುಬಂಧ ಹಾಗೂ ಬೆವರುವಿಕೆಯಿಂದ ಕೆಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಉತ್ತಮ ನಿದ್ರೆಯಿಂದ ಋತುಬಂಧದ ಸಮಸ್ಯೆಯು ಸರಿಯಾಗುವುದು.

ಕಾರಣ-3

ಕಾರಣ-3

ಹದಿಹರೆಯದ ಸಮಯದಲ್ಲಿ ಹಾರ್ಮೋನ್‍ಗಳ ಹಾಗೂ ಋತುಬಂಧದಲ್ಲಿ ವ್ಯತ್ಯಾಸವುಂಟಾಗುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ಆದಷ್ಟು ನಿದ್ರೆ ಮಾಡಬೇಕು.

ಕಾರಣ-4

ಕಾರಣ-4

ಇಂದು ಹೆಚ್ಚಿನ ಮಹಿಳೆಯರು ಮನೆಯ ಕೆಲಸದ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲಿ ದುಡಿಯುತ್ತಾರೆ. ಜೊತೆಗೆ ರಾತ್ರಿ ಪಾಳಿಯ ಕೆಲಸ ಮಾಡುವುದರಿಂದ ನಿದ್ರೆಯ ಮಟ್ಟ ಕಡಿಮೆಯಾಗಿರುತ್ತದೆ. ಗಣನೀಯವಾಗಿ ಈ ಬಗೆಯ ಕೆಲಸ ಮುಂದುವರಿಯುತ್ತಿದ್ದರೆ ಅನೇಕ ಅನಾರೋಗ್ಯ ಕಾಣಿಸಿಕೊಳ್ಳತ್ತದೆ. ಹಾಗಾಗಿ ಮಹಿಳೆಯರು ಹೆಚ್ಚು ನಿದ್ರೆ ಹೊಂದಬೇಕಾವುದು.

ಕಾರಣ-5

ಕಾರಣ-5

ಮಹಿಳೆಯರಿಗೆ ನಿದ್ರೆಯ ಅವಧಿ ಕಡಿಮೆಯಾದರೆ ಫೈಬ್ರೊಮ್ಯಾಲ್ಗಿಂiÀi ಮತ್ತು ಖಿನ್ನತೆಯ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾಲಿಸಿಸ್ಟಿಕ್, ಅಂಡಾರಿಯನ್ ಸಿಂಡ್ರೋಮ್ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಅವಕಾಶ ಇರುತ್ತದೆ.

ಕಾರಣ-6

ಕಾರಣ-6

ಕೆಲವು ಅಧ್ಯಯನದ ಪ್ರಕಾರ "ರೆಸ್ಟ್‍ಲೆಸ್ ಲೆಗ್ ಸಿಂಡ್ರೋಮ್'ವು ನಿದ್ರೆಯ ಗುಣಮಟ್ಟವನ್ನು ಹಾಳುಮಾಡುವುದು ಎಂದು ಹೇಳಲಾಗಿದೆ.

ಕಾರಣ-7

ಕಾರಣ-7

ಗರ್ಭಿಣಿಯರೂ ಸಹ ಸೂಕ್ತ ಅವಧಿಯ ನಿದ್ರೆ ಮಾಡಬೇಕು. ಗರ್ಭಿಣಿಯರಾಗಿದ್ದಾಗ ರಾತ್ರಿ ಹೊತ್ತು ಪದೇ ಪದೇ ಮೂತ್ರವಿಸರ್ಜನೆಮಾಡುವುದು ಹಾಗೂ ಧೂಮಪಾನ ವ್ಯಸನಿಗಳಾಗಿದ್ದರೆ ರಾತ್ರಿ ನಿದ್ರೆಯಲ್ಲಿ ತೊಂದರೆ ಉಂಟಾಗುತ್ತದೆ. ಇವರು ಸೂಕ್ತ ನಿದ್ರೆ ಹೊಂದಿದರೆ ಆರೋಗ್ಯದಿಂದ ಇರಲು ಸಾಧ್ಯ.

ಕಾರಣ-8

ಕಾರಣ-8

ಕೆಲವು ಅಧ್ಯಯನದ ಪ್ರಕಾರ ಕಡಿಮೆ ನಿದ್ರೆ ಹೊಂದುವ ಮಹಿಳೆಯರು ಮಧುಮೇಹ ಮತ್ತು ಹೃದಯದ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಾರೆ ಎಂದು ಹೇಳಲಾಗಿದೆ.

English summary

Why Women Need More Sleep Than Men?

How much sleep is necessary? At least, 7-9 hours for women between the ages 26-64. and teenagers need 9-10 hours of sleep. Buy why do women need to sleep more? Here are some reasons that explain the same.
X
Desktop Bottom Promotion