ಮಲಗುವ ಮುನ್ನ ಈ ಪೇಯ ಕುಡಿದರೆ ಕಣ್ತುಂಬ ನಿದ್ದೆ ಗ್ಯಾರಂಟಿ!

By: manu
Subscribe to Boldsky

ಉತ್ತಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಗಾಗಿ ಉತ್ತಮ ನಿದ್ದೆ ತುಂಬಾ ಅಗತ್ಯ. ನಿದ್ದೆಯ ಕೊರತೆಯಿಂದ ಜೀವರಾಸಾಯನಿಕ ಕ್ರಿಯೆ ಕುಂಠಿತಗೊಳ್ಳುವುದು, ಕೊಬ್ಬು ಕರಗುವುದು ನಿಧಾನವಾಗುವುದು, ಹೊಟ್ಟೆ ಉಬ್ಬರಿಕೆ ಹಾಗೂ ಇಡಿಯ ದಿನ ನಿತ್ರಾಣ ಆವರಿಸಿರುವುದು, ಯಾವ ಕೆಲಸ ಮಾಡಲೂ ಮನಸ್ಸಾಗದಿರುವುದು ಮೊದಲಾದವು ಎದುರಾಗುತ್ತವೆ.  ಮಲಗಿದ ತಕ್ಷಣ ನಿದ್ದೆ ಬರಬೇಕೇ? ಹಾಗಾದರೆ ಒಮ್ಮೆ ಈ ಲೇಖನ ಓದಿ...

ಒಳ್ಳೆಯ ನಿದ್ದೆ ಅಗತ್ಯವಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಒಳ್ಳೆಯ ನಿದ್ದೆ ಪಡೆಯುವುದು ಹೇಗೆ? ನಿತ್ಯಜೀವನದ ಚಿಂತೆಗಳಿಂದ ಸುಖವಾಗಿ ನಿದ್ದೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ಸುಖವಾದ ನಿದ್ದೆ ತುಂಬಾ ತಡವಾಗಿ ಆಗಮಿಸಿದರೆ ಇಂದಿನ ಲೇಖನ ನಿಮಗೆ ಅತ್ಯಂತ ಮಹತ್ವದ್ದಾಗಿದೆ. ಇಂದು ನಾವು ಒಂದು ಅದ್ಭುತ ಪೇಯವನ್ನು ಪ್ರಸ್ತುತಪಡಿಸುತ್ತಿದ್ದು ಇದರ ಸೇವನೆಯ ಕೊಂಚ ಹೊತ್ತಿಗೇ ಗಾಢ ನಿದ್ದೆ ಆವರಿಸಿ ಮರುದಿನ ಲವಲವಿಕೆ ಮೂಡಿಸುತ್ತದೆ.    ತುಂಬಾ ಹೊತ್ತು ನಿದ್ದೆ ಮಾಡುವವರಿಗಾಗಿ ಈ ಲೇಖನ

ಇದನ್ನು ತಯಾರಿಸುವುದು ತುಂಬಾ ಸುಲಭವಾಗಿದ್ದು ಕೇವಲ ಹಾಲು, ವನಿಲ್ಲಾದ ಸಾರ ಮತ್ತು ಜೇನು ಇಷ್ಟೇ ಸಾಕು. ಇದರ ಹೆಗ್ಗಳಿಕೆ ಎಂದರೆ ಇವೆಲ್ಲವೂ ಸುಲಭವಾಗಿ ಲಭ್ಯವಾಗುವ ಸಾಮಾಗ್ರಿಗಳಾಗಿದ್ದು ಇದಕ್ಕಾಗಿ ಹೆಣಗಾಡಬೇಕಾಗಿಲ್ಲ. ಬನ್ನಿ, ಈ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ...  

ಹಾಲು

ಹಾಲು

ಇದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಿದ್ದು ಇವೆರಡೂ ಮೆದುಳಿನಲ್ಲಿ ಸೆರಟೋನಿನ್ ಮತ್ತು ಮೆಲಟೋನಿನ್ ಎಂಬ ರಸದೂತಗಳ ಉತ್ಪತ್ತಿಗೆ ನೆರವಾಗುತ್ತವೆ. ಈ ರಸದೂತಗಳು ಮೆದುಳಿನಲ್ಲಿ ಸಂವೇದನೆಯುಂಟುಮಾಡಿ ನಿದ್ದೆ ಬರಿಸಲು ನೆರವಾಗುತ್ತವೆ.

ಜೇನುತುಪ್ಪ

ಜೇನುತುಪ್ಪ

ಇದೊಂದು ಅದ್ಭುತವಾದ ನೈಸರ್ಗಿಕ ಪೋಷಕಾಂಶವಾಗಿದ್ದು ಮೆದುಳಿನಲ್ಲಿ ಮೆಲಟೋನಿನ್ ರಸದೂತದ ಉತ್ಪತ್ತಿಗೆ ನೆರವಾಗುತ್ತದೆ. ಇದೂ ನುಖನಿದ್ದೆ ತಕ್ಷಣ ಆವರಿಸಲು ನೆರವಾಗುತ್ತದೆ.

ವೆನಿಲ್ಲಾ ಸಾರ (Vanilla Extracts)

ವೆನಿಲ್ಲಾ ಸಾರ (Vanilla Extracts)

ವಿಶ್ವದಾದ್ಯಂತ ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ವನಿಲ್ಲಾ ಸಾರದ ಪರಿಮಳವನ್ನು ಆಸ್ವಾದಿಸುವ ಮೂಲಕ ಮೆದುಳಿಗೆ ಹೆಚ್ಚಿನ ಆರಾಮ ದೊರಕುತ್ತದೆ ಹಾಗೂ ಸುಖನಿದ್ದೆಗೆ ಜಾರಲು ನೆರವಾಗುತ್ತದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

#1. ಒಂದು ಕಪ್ ಹಾಲು ಬಿಸಿಮಾಡಿ, ಕುದಿಯಲು ಪ್ರಾರಂಭಿಸಿದ ತಕ್ಷಣ ಉರಿ ನಂದಿಸಿ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

#2. ಬಿಸಿಹಾಲನ್ನು ಒಂದು ಲೋಟಕ್ಕೆ ಬಗ್ಗಿಸಿ ಇದಕ್ಕೆ ಒಂದು ದೊಡ್ಡಚಮಚ ಜೇನು ಮತ್ತು ಕೊಂಚವೇ ವನಿಲ್ಲಾ ಸಾರವನ್ನು ಸೇರಿಸಿ ಚೆನ್ನಾಗಿ ಕಲಕಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

#3. ಈ ಪೇಯವನ್ನು ರಾತ್ರಿ ಮಲಗುವ ಮುನ್ನ ಕುಡಿದು ಮಲಗಿ. ಒಂದೇ ನಿಮಿಷದಲ್ಲಿ ನೀವು ಗಾಢನಿದ್ದೆಗೆ ಜಾರಿರುತ್ತೀರಿ.

 
English summary

One Cup Of This Will Put You To Sleep In A Minute

A good night's sleep is highly essential for keeping oneself fit and fine. Lack of proper sleep not just drains your energy, but also slows down one's body metabolism, slackens the fat burning process and makes you feel bloated.So how do you get a good sleep? If you are one who is facing difficulty in getting sleep then you need to read this. Today in this article we will be explaining about one natural drink for good sleep that you can prepare instantly at home.
Please Wait while comments are loading...
Subscribe Newsletter