ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ?ಹಾಗಾದರೆ ಈ ಸ್ಟೋರಿ ಓದಿ...

By: manu
Subscribe to Boldsky

ಸಾಮಾನ್ಯವಾಗಿ ಮನೆಯಿಂದ ಆಚೆ ಹೋಗುವಾಗ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗುವುದು ರೂಢಿ. ಪೆಪ್ಸಿ, ಕೋಕ್‍ಗಳಂತಹ ಖಾಲಿ ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗುವುದು ಬಹಳ ಸುಲಭ ಹಾಗೂ ಯಾವುದೇ ಖರ್ಚಿಲ್ಲದೆ ಹೋಗಬಹುದು ಎನ್ನುವ ಭಾವ ಅಷ್ಟೇ. ಆದರೆ ಇಂತಹ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ? 

ನಿಜ, ಈ ವಿಚಾರ ಆಶ್ಚರ್ಯ ಎನಿಸಿದರೂ ಇದು ಸತ್ಯ. ಪ್ಲಾಸ್ಟಿಕ್ ಬಾಟಲಿಗಳ ಬಳಕೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಯಾವುದೇ ಕಾರಣಕ್ಕಾದರೂ ಬಾಟಲಿಯಲ್ಲಿ ನೀರನ್ನು ಸಂಗ್ರಹಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಈ ಅಭ್ಯಾಸದಿಂದ ಯಾವೆಲ್ಲಾ ತೊಂದರೆಗಳು ತಲೆ ದೂರುತ್ತವೆ ಎನ್ನುವುದುನ್ನು ತಿಳಿಯೋಣ ಬನ್ನಿ... 

ಸತ್ಯ-1

ಸತ್ಯ-1

ತಂಪು ಪಾನೀಯ ಅಥವಾ ಖನಿಜಯುಕ್ತ ನೀರನ್ನು ಶೇಖರಿಸಲು ತಯಾರಿಸುವ ಬಾಟಲಿಗಳನ್ನು ಪಾಲಿಥೈಲಿನ್ ಟೆರೆಫ್ತಾಲೇಟ್(ಪಿಇಟಿ)ನಿಂದ ತಯಾರಿಸಲಾಗುತ್ತದೆ. ಈ ಬಾಟಲಿಗಳ ಮೇಲೆ ಸೂರ್ಯನ ಕಿರಣ ಬಿದ್ದಾಗ ಅಥವಾ ಪ್ರಯಾಣಿಸುವಾಗ ಕಾರ್‌ನಲ್ಲಿ ಇವುಗಳನ್ನು ಇಟ್ಟುಕೊಂಡು ಬಿಸಿಲಿನಲ್ಲಿ ಪ್ರಯಾಣ ಮಾಡಿದರೆ ರಾಸಾಯನಿಕಗಳು ಬಾಟಲಿಯಿಂದ ಹೊರಬರುತ್ತವೆ. ಜೊತೆಗೆ ನೀರನ್ನು ಕಲುಷಿತಗೊಳಿಸುತ್ತವೆ.

ಸತ್ಯ-2:

ಸತ್ಯ-2:

ಈ ಬಾಟಲಿಗಳನ್ನು ಕೇವಲ ಒಮ್ಮೆ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತವೆ. ಅವುಗಳಲ್ಲಿ ಪದೇ ಪದೇ ನೀರು ಅಥವಾ ನಮಗೆ ಬೇಕಾದ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದು. ಇದರಿಂದಾಗಿ ಕ್ಯಾನ್ಸರ್, ಮಧುಮೇಹ, ಬೊಜ್ಜು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇವೆ ಎಂದು ಅಧ್ಯಯನಗಳು ದೃಢ ಪಡಿಸಿವೆ.

 ಸತ್ಯ-3

ಸತ್ಯ-3

ತಜ್ಞರ ಹೇಳುವ ಪ್ರಕಾರ ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ರಾಸಾಯನಿಕ ಪದಾರ್ಥಗಳಿಂದ ಅಂಡೋತ್ಪತ್ತಿ ಸಮಸ್ಯೆ, ಪಿಸಿಓಎಸ್, ಎಂಡೊಮೆಟ್ರಿಯೋಸ್ ಮತ್ತು ಸ್ತನ ಕ್ಯಾನ್ಸರ್‌ಗಳಂತಹ ಗಂಭೀರ ಸಮಸ್ಯೆಗಳು ಹುಟ್ಟುತ್ತವೆ.

ಸತ್ಯ-4

ಸತ್ಯ-4

ಕೆಲವು ಪ್ಲಾಸ್ಟಿಕ್ ಬಾಟಲಿಗಳ ಬಣ್ಣ ಬೇರೆ ಬೇರೆ ಇರುತ್ತವೆ. ಇಂತಹ ಬಾಟಲಿಗಳಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಹೆಚ್ಚಿಸುತ್ತದೆ. ಇವು ಸಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ.

ಸತ್ಯ-5

ಸತ್ಯ-5

ಟ್ರೆಡ್ಮಿಲ್ ಎನ್ನುವ ಸಂಶೋಧನೆ ಮತ್ತು ಪ್ರಯೋಗಾಲಯದ ಪರೀಕ್ಷೆಯ ಪ್ರಕಾರ ಅವಧಿ ಮುಗಿದ ಪ್ಲಾಸ್ಟಿಕ್ ಬಾಟಲಿಗಳ ಉಪಯೋಗ ಮಾಡುವುದರಿಂದ ಅಪಾಯಕಾರಿ ಸೂಕ್ಷ್ಮಜೀವಿಗಳ ಉದಯವಾಗುತ್ತದೆ. ಇವು ಆರೋಗ್ಯವನ್ನು ಹಾಳುಮಾಡುತ್ತವೆ.

ಸತ್ಯ-6

ಸತ್ಯ-6

ಸ್ಟೇನ್ಲೆಸ್ ಸ್ಟೀಲ್ ಅಥವಾ ಅಲ್ಯೂಮಿನಿಯಂ ಬಾಟಲಿಗಳ ಬಳಕೆ ಮಾಡಿದರೆ ಹೆಚ್ಚು ಸುರಕ್ಷಿತ ಎನ್ನಲಾಗುತ್ತದೆ. ಆದರೆ ಇವು ಸಹ ಒಂದು ನಿಗಧಿತ ಅವಧಿಯ ನಂತರ ಉಪಯೋಗಕ್ಕೆ ಯೋಗ್ಯವಲ್ಲ.

ಸತ್ಯ-7

ಸತ್ಯ-7

ಗಾಜಿನ ಬಾಟಲಿಗಳು ಕುಡಿಯುವ ನೀರನ್ನು ಶೇಖರಿಸಲು ಸುರಕ್ಷಿತವಾದದ್ದು. ಆದರೆ ಇವುಗಳ ಕಾಳಜಿ ಹೆಚ್ಚಿರಬೇಕು. ಆರೋಗ್ಯದ ಮೇಲೆ ಯಾವುದೇ ಕೆಟ್ಟಪರಿಣಾಮ ಬೀರದು.

ನೀವು ತಿಳಿದಿರದ ಪ್ಲಾಸ್ಟಿಕ್ ಬಾಟಲಿನಲ್ಲಿರುವ ಸೀಕ್ರೆಟ್ ಸಂಗತಿ!

English summary

Why plastic bottles could be bad for your health

With the temperatures soaring high, you must be reaching out for that plastic bottle in your refrigerator, drinking water from it, taking it with you, keeping it in your bag or car, and then refrigerating it again when water becomes warm. Let's get this clear. Drinking water from plastic bottles is harmful. But in India it is a common habit to use Pepsi, Coke or other such plastic bottles for carrying or storing drinking water, rather than disposing them off.
Subscribe Newsletter