For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಉಪಹಾರ ತ್ಯಜಿಸಿದರೆ-ಅಪಾಯ ಕಟ್ಟಿಟ್ಟ ಬುತ್ತಿ!

By Jaya Subramanya
|

ನಮ್ಮ ದಿನದ ಆಹಾರಗಳಲ್ಲಿ ಬೆಳಗಿನ ಉಪಾಹಾರವೇ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ರಾತ್ರಿಯ ನಿದ್ದೆಯ ಅವಧಿಯಲ್ಲಿ ಶರೀರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಲವು ಕಾರ್ಯಗಳು ನಡೆದು ದೇಹದ ಶಕ್ತಿ ಕಳೆದುಕೊಂಡಿರುತ್ತದೆ. ಒಂದು ರೀತಿಯಲ್ಲಿ ಅಷ್ಟು ಹೊತ್ತಿಗಾಗಿ ಉಪವಾಸವಿದ್ದಂತೆ. ಆದ್ದರಿಂದಲೇ ಈ ಉಪವಾಸದ ಅವಧಿಯ ಬಳಿಕ ಸೇವಿಸುವ ಆಹಾರಕ್ಕೆ break-fast, ಅಂದರೆ ಉಪವಾಸವನ್ನು ಮುರಿಯುವುದು ಎಂಬ ಅನ್ವರ್ಥನಾಮವಿದೆ. ಈ ಉಪಾಹಾರ ಉತ್ತಮ ಪೌಷ್ಟಿಕ, ಪ್ರೋಟೀನುಯುಕ್ತವಾಗಿರುವುದು ಅಗತ್ಯ. ಬೆಳಗಿನ ಬ್ರೇಕ್​ಫಾಸ್ಟ್ ಅಪ್ಪಿತಪ್ಪಿಯೂ ಬ್ರೇಕ್ ಮಾಡಬೇಡಿ

ಇಂದಿನ ಧಾವಂತದ ದಿನಗಳಲ್ಲಿ ಬೆಳಿಗೆ ಬೇಗನೇ ಆಫೀಸ್ ಸೇರುವ ಅವಸರ ಎಲ್ಲರಿಗೂ ಇದೆ. ಆದರೆ ಸಮಯವಾಕಾಶ ಕಡಿಮೆ ಇರುವಾಗ ಅಲಂಕಾರ ಅಥವಾ ಸೌಂದರ್ಯ ಪ್ರಸಾಧನ ಹಚ್ಚುವುದು ಅಥವಾ ಉಪಾಹಾರ ಇವೆರಡರಲ್ಲಿ ಯಾವುದಾದರೊಂದನ್ನು ಬಿಡಲೇಬೇಕೆಂದಾಗ ಹೆಚ್ಚಿನವರು ಉಪಾಹಾರವನ್ನೇ ಬಿಡುವುದನ್ನು ಗಮನಿಸಬಹುದು. ಬೆಳಿಗ್ಗೆದ್ದ ಬಳಿಕ ನಿಮ್ಮ ದಿನನಿತ್ಯದ ದಿನಚರಿ ಹೀಗಿರಲಿ.....

ಇವರು ದಾರಿಯಲ್ಲಿ ಎಲ್ಲಿ, ಏನು ಸಿಕ್ಕಿತೋ ಅದನ್ನು ಗಡಿಬಿಡಿಯಲ್ಲಿ ತಿನ್ನುತ್ತಾ, ಅರ್ಧಂಬರ್ಧ ಬಿಡುತ್ತಾ, ತಂಪುಪಾನೀಯವನ್ನೋ, ದುಬಾರಿ ಬೆಲೆಯ ಕಾಫಿ ಅಥವಾ ಇನ್ನಾವುದೋ ಪೇಯವನ್ನು ಗುಟುಕರಿಸುತ್ತಾ ಸಾರ್ಥಕತೆಯನ್ನು ಅನುಭವಿಸುವುದನ್ನು ನೋಡಬಹುದು. ಆದರೆ ಇವೆಲ್ಲಾ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ.

ಥಟ್ಟನೇ ಅಲ್ಲದಿದ್ದರೂ ನಿಧಾನವಾಗಿ ಇದರ ಪ್ರಕೋಪ ದೇಹದ ಮೇಲೆ ಆಗಿರುವುದನ್ನು ಕಾಣಬಹುದು. ಕೆಳನೀಡಿರುವ ಮಾಹಿತಿಯ ಮೂಲಕ ಇದರ ಪರಿಣಾಮಗಳನ್ನು ನೋಡಿ, ಇನ್ನಾದರೂ ಬೆಳಗ್ಗಿನ ಉಪಾಹಾರವನ್ನು ಕ್ಲುಪ್ತಕಾಲದಲ್ಲಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸೇವಿಸಲು ಪಣತೊಡಿ..

ಮಧುಮೇಹ

ಮಧುಮೇಹ

ಉಪಾಹಾರವನ್ನು ತ್ಯಜಿಸುವ ಮಹಿಳೆಯರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಈ ತಿಂಗಳು ಪ್ರಕಟಿಸಿರುವ ನಿಯತಕಾಲಿಕೆಯಲ್ಲಿ ಮಹಿಳೆಯರು ಯಾರು ಉಪಾಹಾರವನ್ನು ತ್ಯಜಿಸುತ್ತಾರೋ, ಅವರಿಗೆ ಸಾಮಾನ್ಯವಾಗಿ ಉಪಾಹಾರವನ್ನು ಸೇವಿಸುವ ಮಹಿಳೆಯರಿಗೆ ಬರುವುದಕ್ಕಿಂತ ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಆರು ಪಟ್ಟು ಹೆಚ್ಚಂತೆ. ಅದರಲ್ಲಿಯೂ ಇವರಿಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಹೆಚ್ಚಂತೆ.

ಮೆದುಳಿನ ಕ್ರಿಯೆಗಳಲ್ಲಿ ವ್ಯತ್ಯಾಸ...

ಮೆದುಳಿನ ಕ್ರಿಯೆಗಳಲ್ಲಿ ವ್ಯತ್ಯಾಸ...

ಉಪಹಾರವನ್ನು ನೀವು ತ್ಯಜಿಸಿದಾಗ, ಮೆದುಳು ಕಡಿಮೆ ಪ್ರಮಾಣದಲ್ಲಿ ರಕ್ತ ಮತ್ತು ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ ಇದು ಅನೇಕ ಅರಿವಿನ ಕಾರ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.

ನೆನಪಿನ ಶಕ್ತಿ

ನೆನಪಿನ ಶಕ್ತಿ

2005 ಜರ್ನಲ್ ಆಫ್ ದಿ ಅಮೆರಿಕನ್ ಡೈಯೆಟಿಕ್ ಅಸೋಸಿಯೇಶನ್‌ರವರು ಉಪಾಹಾರಕ್ಕೆ ಸಂಬಂಧಿಸಿದಂತೆ 47 ಅಧ್ಯಯನಗಳನ್ನು ಮಾಡಿದ್ದಾರೆ. ಅದರ ಪ್ರಕಾರ ಯಾರು ಉಪಾಹಾರವನ್ನು ಸೇವಿಸುತ್ತಾರೋ, ಅವರಲ್ಲಿ ಸ್ಮರಣೆ ಶಕ್ತಿಗೆ ಸಂಬಂಧಿಸಿದ ಮನೋಜನ್ಯ ಅಂಶಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ. ಸರಳವಾಗಿ ಹೇಳಬೇಕೆಂದರೆ ಉಪಾಹಾರ ಸೇವಿಸುವವರಲ್ಲಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ!

ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಸಮಸ್ಯೆ

ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಸಮಸ್ಯೆ

ಹೆಚ್ಚು ಸಮಯಗಳಿಂದ ಖಾಲಿ ಹೊಟ್ಟೆಯಲ್ಲಿ ಇರುವುದು ಆಮ್ಲತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಇದರಿಂದ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಉಂಟಾಗುತ್ತದೆ.

ಹೃದಯ ಸಮಸ್ಯೆ

ಹೃದಯ ಸಮಸ್ಯೆ

ಬೆಳಗ್ಗಿನ ಸಮಯದಲ್ಲಿ ಉಪಹಾರವನ್ನು ತ್ಯಜಿಸುವವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಾರೆ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹದಲ್ಲಿ ಚಯಾಪಚಯ ವ್ಯವಸ್ಥೆಯಲ್ಲಿ ಬದಲಾವಣೆಯುಂಟಾಗುವುದೇ ಹೃದಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ.

English summary

what-happens-when-you-skip-breakfast

Imagine you are running late for your office, or you live very far away from your workplace, so to save time, you do not have your breakfast, and just have a brunch or a heavy lunch. Well, the above situation is true in the case of many people! However, they do not realise that they are putting their health at risk by skipping breakfast.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more