For Quick Alerts
ALLOW NOTIFICATIONS  
For Daily Alerts

ಬೆಳಗಿನ ಬ್ರೇಕ್​ಫಾಸ್ಟ್ ಅಪ್ಪಿತಪ್ಪಿಯೂ ಬ್ರೇಕ್ ಮಾಡಬೇಡಿ

By Manu
|

ನಮ್ಮ ದಿನದ ಆಹಾರಗಳಲ್ಲಿ ಬೆಳಗಿನ ಉಪಾಹಾರವೇ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ರಾತ್ರಿಯ ನಿದ್ದೆಯ ಅವಧಿಯಲ್ಲಿ ಶರೀರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಲವು ಕಾರ್ಯಗಳು ನಡೆದು ದೇಹದ ಶಕ್ತಿ ಕಳೆದುಕೊಂಡಿರುತ್ತದೆ. ಒಂದು ರೀತಿಯಲ್ಲಿ ಅಷ್ಟು ಹೊತ್ತಿಗಾಗಿ ಉಪವಾಸವಿದ್ದಂತೆ. ಆದ್ದರಿಂದಲೇ ಈ ಉಪವಾಸದ ಅವಧಿಯ ಬಳಿಕ ಸೇವಿಸುವ ಆಹಾರಕ್ಕೆ break-fast, ಅಂದರೆ ಉಪವಾಸವನ್ನು ಮುರಿಯುವುದು ಎಂಬ ಅನ್ವರ್ಥನಾಮವಿದೆ.

ಇಂದಿನ ಧಾವಂತದ ದಿನಗಳಲ್ಲಿ ಬೆಳಿಗೆ ಬೇಗನೇ ಆಫೀಸ್ ಸೇರುವ ಅವಸರ ಎಲ್ಲರಿಗೂ ಇದೆ. ಆದರೆ ಸಮಯವಾಕಾಶ ಕಡಿಮೆ ಇರುವಾಗ ಚೆನ್ನಾಗಿ ಕಾಣುವ ಡ್ರೆಸ್ ಹಾಕಿಕೊಂಡು ಮೇಕಪ್ ಮಾಡಿಕೊಳ್ಳುವುದೋ ಅಥವಾ ಉಪಾಹಾರ ರೆಡಿ ಮಾಡಿಕೊಳ್ಳುವುದೋ ಎನ್ನುವ, ಗೊಂದಲವುಂಟಾಗಿ, ಕೊನೆಗೆ ಯಾವುದಾದರೊಂದನ್ನು ಬಿಡಲೇಬೇಕೆಂದಾಗ ಹೆಚ್ಚಿನವರು ಉಪಾಹಾರವನ್ನೇ ಬಿಡುವುದನ್ನು ಗಮನಿಸಬಹುದು. ಇನ್ನೂ ಅಪಾಯಕಾರಿಯಾದುದೆಂದರೆ ಹೆಚ್ಚಿನವರಿಗೆ ಬೆಳಿಗ್ಗೆ ಉಪಾಹಾರ ತಯಾರಿಸಿಕೊಳ್ಳಲು ಸಮಯವೇ ಇರುವುದಿಲ್ಲ!

How Skipping Breakfast Leads To Weight Gain & Diabetes

ಆದರೆ ಆರೋಗ್ಯ ತಜ್ಞರ ಪ್ರಕಾರ, ಅನಾರೋಗ್ಯಕರ ಜೀವನ ಶೈಲಿಯ ಲಕ್ಷಣವಾಗಿರುವ ಬೆಳಗ್ಗಿನ ಉಪಹಾರದ ತ್ಯಜಿಸುವಿಕೆ ನಿಮ್ಮನ್ನು ಅಪಾಯಕಾರಿಯಾದ ರೋಗಗಳೆಡೆಗೆ ಕರೆದೊಯ್ಯಲಿದೆಯಂತೆ, ಅಂತೆಯೇ ಸಾವಿಗೂ ಇದು ನಿಮ್ಮನ್ನು ದೂಡಲಿದೆ. ಅಧ್ಯಯನ ಹೇಳುವಂತೆ ಬೆಳಗ್ಗಿನ ಉಪಹಾರ ತ್ಯಜಿಸುವವರು ಧೂಮಪಾನ, ಮದ್ಯಪಾನಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಅಂತೆಯೇ ವ್ಯಾಯಾಮದ ಕೊರತೆಯನ್ನು ಎದುರಿಸುತ್ತಾರೆ.

ಬೆಳಗಿನ ಉಪಹಾರವನ್ನು ತ್ಯಜಿಸುವವರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದು ಕಡಿಮೆ ಚಟುವಟಿಕೆಯುಳ್ಳವರಾಗಿರುತ್ತಾರೆ ಅಂತೆಯೇ ಅವರದೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳುವಲ್ಲೂ ತೊಂದರೆಗಳನ್ನು ಅವರು ಅನುಭವಿಸುತ್ತಿರುತ್ತಾರೆ. ಸಂಶೋಧಕರು ಹೇಳುವಂತೆ ಧೂಮಪಾನ, ವ್ಯಾಯಾಮದ ಕೊರತೆ, ಕಡಿಮೆ ಪ್ರಮಾಣದಲ್ಲಿ ನ್ಯೂಟ್ರಿಶಿಯಸ್ ಆಹಾರಗಳನ್ನು ಸೇವಿಸುವುದು, ನಿತ್ಯವೂ ಮದ್ಯಪಾನದ ಸೇವನೆಯು ಉಪಹಾರದ ತ್ಯಜಿಸುವಿಕೆಯಿಂದ ಉಂಟಾಗುತ್ತಿರುವ ಅಪಾಯಗಳಾಗಿವೆ.

ಬೆಳಗಿನ ಉಪಹರವನ್ನು ದಿನದ ಅತಿಮುಖ್ಯ ಊಟವೆಂದೇ ಪರಿಗಣಿಸಲಾಗಿದ್ದು ತೂಕ ಇಳಿಸುವವರಿಗೆ ಉಪಹಾರ ವರವಾಗಿದೆ. ಸಂಶೋಧಕರು ಇದಕ್ಕಾಗಿ ಒಂದು ಅಧ್ಯಯನವನ್ನು ನಡೆಸಿದ್ದು ಇದರಲ್ಲಿ ಹುಡುಗರು ಮತ್ತು ಹುಡುಗಿಯರು ಹಾಗೂ ಅವರ ಪಾಲಕರು ಸೇರಿದಂತೆ 5,500 ಜನರನ್ನು ಅವರು ಅನ್ವೇಷಣೆ ನಡೆಸಿ ಅವರು ಉಪಹಾರವನ್ನು ಸೇವಿಸುತ್ತಿದ್ದಾರೆಯೇ ಮತ್ತು ಎಷ್ಟು ಬಾರಿ ಸೇವಿಸುತ್ತಾರೆ ಎಂಬುದನ್ನು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ತೂಕ, ಆಹಾರ ಅಭ್ಯಾಸಗಳನ್ನು ಇದು ಒಳಗೊಂಡಿದೆ.

ಅಂತೆಯೇ ಉಪಹಾರ ತ್ಯಜಿಸುವ ಹೆತ್ತವರ ಮಕ್ಕಳು ತಮ್ಮಷ್ಟಕ್ಕೇ ಆಹಾರ ತ್ಯಜಿಸುವ ಹವ್ಯಾಸಕ್ಕೆ ರೂಢಿಸಿಕೊಳ್ಳುತ್ತಿದ್ದಾರೆ. ಪೂರ್ವ ಮತ್ತು ಮಧ್ಯ ವಯಸ್ಕ ಅವಧಿಯಲ್ಲಿ ಅಸ್ತವ್ಯಸ್ಯವಾದ ಅಹಾರ ಸೇವನೆ ಪದ್ಧತಿಯು ಆರೋಗ್ಯಕ್ಕೆ ಮಾರಕವಾಗಿರುವ ಮದ್ಯಪಾನ ಸೇವನೆ, ತಂಬಾಕು ಕ್ಯಾನಬೀಸ್ ಸೇವೆನೆಗೆ ಮೂಲವಾಗಿದೆ ಎಂಬುದಾಗಿ ಈ ಅಧ್ಯಯನವು ತಿಳಿಸಿದೆ.

ಬೆಳಗಿನ ಹೊತ್ತು ಹೊಟ್ಟೆ ತುಂಬಾ ತಿನ್ನುವುದರಿಂದ ಹಸಿವೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಅಂತೆಯೇ ತೂಕ ಇಳಿಕೆಯಲ್ಲೂ ಗಮನಾರ್ಹ ಪರಿಣಾಮವನ್ನು ಬೀರಲಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಿಸಲಿದ್ದು, ಹಸಿವೆಯನ್ನು ನಿಯಂತ್ರಿಸುವುದರ ಜೊತೆಗೆ ಶಕ್ತಿಯ ಪೂರೈಕೆಯನ್ನು ದೇಹಕ್ಕೆ ಮಾಡಲಿದೆ.

3,000 ಅಮೇರಿಕನ್ನರನ್ನು ಒಳಗೊಂಡ ಅಧ್ಯಯನವು ಹೇಳುವಂತೆ ನಿತ್ಯವೂ ಉಪಹಾರ ಸೇವಿಸುವವರು ಅಧಿಕ ತೂಕವನ್ನು ಪಡೆದುಕೊಳ್ಳುವುದಿಲ್ಲ ಅಂತೆಯೇ ಸಕ್ಕರ ಕಾಯಿಲೆ ಅವರನ್ನು ಕಾಡುವುದಿಲ್ಲ ಎಂಬುದಾಗಿ ಕಂಡುಕೊಂಡಿದೆ. ಹಾಗಿದ್ದರೆ ನಿಮ್ಮ ಬೆಳಗ್ಗಿನ ಉಪಹಾರವನ್ನು ತ್ಯಜಿಸದೇ ಹೊಟ್ಟೆ ತುಂಬಾ ತಿನ್ನಿ. ಅಂತೆಯೇ ಮಕ್ಕಳು ಉತ್ತಮ ನ್ಯೂಟ್ರೀನ್ ಆಹಾರಗಳನ್ನು ಸೇವಿಸುತ್ತಿದ್ದಾರೆಯೇ ಎಂಬುದರ ಮೇಲೆ ಪೋಷಕರು ಕಣ್ಣಿಡಬೇಕು.

X
Desktop Bottom Promotion