ಮೂಲಂಗಿ ಜ್ಯೂಸ್‌+ಲಿಂಬೆ ರಸದ ಜೋಡಿಯ ಜಬರ್ದಸ್ತ್ ಪವರ್...

By: Deepu
Subscribe to Boldsky

ತರಕಾರಿ ಹಾಗೂ ಹಣ್ಣುಗಳು ಎಂದರೆ ಹೆಚ್ಚಿನವರು ಮೂಗು ಮುರಿಯುವುದು ಸಹಜ. ಆದರೆ ತರಕಾರಿ ಹಾಗೂ ಹಣ್ಣುಗಳಲ್ಲಿ ಇರುವಂತಹ ಪೋಷಕಾಂಶಗಳು ಬೇರೆ ಯಾವುದರಿಂದಲೂ ನಮಗೆ ಸಿಗುವುದಿಲ್ಲ. ಇದಕ್ಕಾಗಿಯೇ ಹಿಂದಿನವರು ಆರೋಗ್ಯಕಾರಿ ಆಹಾರ ಸೇವಿಸಬೇಕೆಂದು ಹೇಳುತ್ತಾ ಬಂದಿದ್ದಾರೆ.

ಆದರೆ ನಾವು ಮಾತ್ರ ಇದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇದರಿಂದಾಗಿ ಸಣ್ಣಪುಟ್ಟ ಕಾಯಿಲೆಗಳು ಬಂದರೂ ವೈದ್ಯರ ಬಳಿಕ ಓಡಿಹೋಗಬೇಕಾಗುತ್ತದೆ. ಕೆಲವೊಂದು ಮನೆಮದ್ದುಗಳು ನಮ್ಮ ದೇಹಕ್ಕೆ ಶಕ್ತಿಯನ್ನು ನೀವು ಆರೋಗ್ಯವನ್ನು ಕಾಪಾಡುತ್ತದೆ ಎಂದು ನಮಗೆ ತಿಳಿದಿಲ್ಲ.  ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

ತರಕಾರಿಗಳಲ್ಲಿ ಇರುವಂತಹ ವಿಟಮಿನ್, ಖನಿಜಾಂಶಗಳು ಇದೆ. ಇದರಿಂದ ತರಕಾರಿ ಸೇವನೆ ಅತೀ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗುತ್ತಿರುವುದರಿಂದ ತರಕಾರಿ ಹಾಗೂ ಹಣ್ಣುಗಳತ್ತ ದೃಷ್ಟಿ ನೆಟ್ಟಿದೆ.

ಈ ಲೇಖನದಲ್ಲಿ ಮೂಲಂಗಿ ಹಾಗೂ ಲಿಂಬೆರಸದಿಂದ ದೇಹಕ್ಕೆ ಆಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಕಪ್ ಮೂಲಂಗಿ ಜ್ಯೂಸ್‌ಗೆ (ಮೂಲಂಗಿಯನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಕತ್ತರಿಸಿ ಮಿಕ್ಸಿಯಲ್ಲಿ ಹಾಕಿ ಗೊಟಾಯಿಸಿ) ಮತ್ತು ಕೆಲವು ಹನಿ ಲಿಂಬೆರಸವನ್ನು ಹಾಕಿಕೊಂಡು ಕುಡಿದರೆ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ಮುಂದಕ್ಕೆ ತಿಳಿಯುವ...  

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು ಇದು ತುಂಬಾ ಸಹಕಾರಿ. ಮೂಲಂಗಿ ಹಾಗೂ ನಿಂಬೆರಸದಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವ ಕಾರಣದಿಂದ ಚಯಾಪಚಾಯ ಕ್ರಿಯೆ ಹೆಚ್ಚಿ ತೂಕ ಕಳೆದುಕೊಳ್ಳಲು ನೆರವಾಗುವುದು.

ಅಧಿಕ ರಕ್ತದೊತ್ತಡ ನಿವಾರಣೆಗೆ

ಅಧಿಕ ರಕ್ತದೊತ್ತಡ ನಿವಾರಣೆಗೆ

ಇದರಲ್ಲಿ ಪೊಟಾಶಿಯಂ ಅಂಶವು ಹೆಚ್ಚಾಗಿರುವ ಕಾರಣದಿಂದ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು.ಇದು ರಕ್ತದ ಹರಿವನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಅದನ್ನು ನಿಧಾನಗೊಳಿಸಿ ಅಧಿಕ ರಕ್ತದೊತ್ತಡದಂತಹ ಸಮಸ್ಯೆಯನ್ನು ನಿವಾರಿಸುವುದು.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ ಜೀರ್ಣಕ್ರಿಯೆಗೆ ಸಹಕರಿಸುವುದು.

ಮೂಳೆಗಳು ಬಲಗೊಳ್ಳಲು

ಮೂಳೆಗಳು ಬಲಗೊಳ್ಳಲು

ಮೂಲಂಗಿ ರಸ ಮತ್ತು ಲಿಂಬೆರಸದ ಮಿಶ್ರಣವು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸಿ ಮೂಳೆಗಳ ಆರೋಗ್ಯವನ್ನು ಕಾಪಾಡುವುದು.ಇದು ಅಸ್ಥಿರಂಧ್ರತೆಯಂತಹ ಸಮಸ್ಯೆಯನ್ನು ಕಡಿಮೆ ಮಾಡುವುದು.

ಸೋಂಕು ತಡೆಯುವುದು

ಸೋಂಕು ತಡೆಯುವುದು

ಮೂಲಂಗಿ ಮತ್ತು ಲಿಂಬೆರಸದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೆಚ್ಚಾಗಿರುವ ಕಾರಣದಿಂದ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳ ವಿರುದ್ಧ ಹೋರಾಡುವುದು ಮತ್ತು ಸಾಮಾನ್ಯ ಶೀತ, ಜ್ವರ ಮತ್ತು ಸೋಂಕನ್ನು ತಡೆಯುವುದು.

ಶ್ವಾಸಕೋಶದ ರೋಗ ನಿವಾರಣೆ

ಶ್ವಾಸಕೋಶದ ರೋಗ ನಿವಾರಣೆ

ಶ್ವಾಸಕೋಶದಲ್ಲಿರುವಂತಹ ಕಫವನ್ನು ಮೂಲಂಗಿ ರಸ ಮತ್ತು ಲಿಂಬೆರಸದ ಮಿಶ್ರಣವು ಹೊರಹಾಕುವುದರಿಂದ ಶ್ವಾಸಕೋಶದ ಸಮಸ್ಯೆಗಳಾದ ಕಫ, ಕೆಮ್ಮು ಮತ್ತು ಮೂಗುಕಟ್ಟುವುದು ಇತ್ಯಾದಿಯನ್ನು ಇದು ನಿವಾರಿಸುತ್ತದೆ.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ಮೂಲಂಗಿ ಮತ್ತು ನಿಂಬೆರಸದ ಮಿಶ್ರಣವನ್ನು ಹಿಂದಿನಿಂದಲೂ ಮಲಬದ್ಧತೆ ನಿವಾರಣೆಗಾಗಿ ಬಳಸಲಾಗುತ್ತಿತ್ತು. ಇದರಿಂದ ವಿಟಮಿನ್ ಸಿ ಮತ್ತು ನಾರಿನಾಂಶವು ಸಮೃದ್ಧವಾಗಿದೆ.

ಪ್ರತಿರೋಧಕ ಶಕ್ತಿ ವೃದ್ಧಿ

ಪ್ರತಿರೋಧಕ ಶಕ್ತಿ ವೃದ್ಧಿ

ಈ ನೈಸರ್ಗಿಕ ಮದ್ದು ಒಳ್ಳೆಯ ಪೋಷಕಾಂಶಗಳನ್ನು ಹೊಂದಿರುವ ಕಾರಣದಿಂದ ಇದು ದೇಹದಲ್ಲಿನ ಕೋಶಗಳನ್ನು ಬಲಗೊಳಿಸುತ್ತದೆ. ಇದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯು ಬಲಗೊಳ್ಳುತ್ತದೆ.

ಹೃದಯದ ರೋಗಗಳ ತಡೆಯುವುದು

ಹೃದಯದ ರೋಗಗಳ ತಡೆಯುವುದು

ಮೂಲಂಗಿ ಮತ್ತು ಲಿಂಬೆರಸದ ಮಿಶ್ರಣವು ನಿಮ್ಮ ಹೃದಯದ ಕಾಯಿಲೆಯನ್ನು ಕಾಪಾಡಿ ಹೃದಯಕ್ಕೆ ಯಾವುದೇ ರೋಗಗಳು ಬರದಂತೆ ತಡೆಯುವುದು.

 

English summary

What Happens When You Drink Radish (Mooli) Juice With Lemon?

Did you know that the mixture of ½ a cup of radish juice with 2 tablespoons of lemon juice, when consumed every morning before breakfast, can have over 8 health benefits? have a look...
Please Wait while comments are loading...
Subscribe Newsletter