For Quick Alerts
ALLOW NOTIFICATIONS  
For Daily Alerts

ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

|

ಸಾಮಾನ್ಯವಾಗಿ ತರಕಾರಿ ಅಂಗಡಿಯಲ್ಲಿ ಕಡಿಮೆ ಮಾರಾಟವಾಗುವ ತರಕಾರಿ ಎಂದರೆ ಮೂಲಂಗಿ. ಏಕೆಂದರೆ ಅಗ್ಗ ಎಂಬ ಕಾರಣಕ್ಕೆ ಹೋಟೆಲಿನಲ್ಲಿ ಸಾಂಬಾರ್ ಮಾಡಲು ಹೆಚ್ಚು ಬಳಸುವುದು ಒಂದು ಕಾರಣವಾದರೆ, ಇದು ಹಸಿಯಾಗಿ ಸೇವಿಸಿದಾಗ ಕೊಂಚ ಖಾರವಿದ್ದು ಇದಕ್ಕಿಂತ ನೋಡಲು ಸುಂದರವಾಗಿರುವ ಕ್ಯಾರೆಟ್ ಮತು ಬೀಟ್ರೂಟ್‌ಗಳತ್ತ ಮನ ಬದಲಿಸುತ್ತಾರೆ. ಎಲ್ಲಾ ತರಕಾರಿಗಳಿಗೂ ಇರುವ ಒಳ್ಳೆಯ ಗುಣಗಳಂತೆಯೇ ಮೂಲಂಗಿಯಲ್ಲಿಯೂ ಉತ್ತಮ ಗುಣವಿದೆ. ಅದೆಂದರೆ ಮೂಲವ್ಯಾಧಿಯನ್ನು ಗುಣಪಡಿಸುವ ಮತ್ತು ಮರುಕಳಿಸದಂತೆ ಕಾಪಾಡುವ ಗುಣ. ಈ ವಿಧಾನದಿಂದ ಮೂಲವ್ಯಾಧಿ ಗುಣಪಡಿಸಬಹುದು

ಮೂಲವ್ಯಾಧಿ ಅಥವಾ ಇದಕ್ಕೆ ಸಂಬಂಧಿತ ತೊಂದರೆಯಿಂದ ಬಳಲುತ್ತಿರುವವರೆಗೆ ಮೂಲಂಗಿ ಆಹಾರಕ್ಕಿಂತಲೂ ಹೆಚ್ಚಾಗಿ ಔಷಧಿಯ ರೂಪದಲ್ಲಿಯೇ ಅಪ್ಯಾಯಮಾನವಾಗಿದೆ. ಒಂದು ವೇಳೆ ನಿಮಗೆ ಮೂಲವ್ಯಾಧಿ ಇದ್ದರೆ ಅಥವಾ ಈಗತಾನೇ ಪ್ರಾರಂಭವಾಗಿರುವ ಸೂಚನೆಗಳು ಸಿಕ್ಕರೆ ತಕ್ಷಣ ಇಂದಿನಿಂದಲೇ ನಿಮ್ಮ ದಿನದ ಊಟದಲ್ಲಿ ಮೂಲಂಗಿ ಸೇರಿಸಿಕೊಳ್ಳಲು ಮರೆಯಬೇಡಿ. ಮೂಲವ್ಯಾಧಿ ನಿವಾರಣೆಗೆ 20 ರೀತಿಯ ಮನೆಮದ್ದು

ಆದರೆ ನೀವು ಈಗ ತೆಗೆದುಕೊಳ್ಳುತ್ತಿರುವ ಔಷಧಿಯನ್ನು ನಿಲ್ಲಿಸಬಾರದು, ಅದನ್ನು ಎಂದಿನಂತೆ ಮುಂದುವರೆಸಿಕೊಂಡು ಹೋಗಬೇಕು, ಜೊತೆಯಲ್ಲಿ ಮೂಲಂಗಿಯನ್ನೂ ಆಹಾರದೊಡನೆ ಸೇರಿಸಿಕೊಳ್ಳಬೇಕು. ಇದರಿಂದ ಮೂಲವ್ಯಾಧಿ ಗುಣಪಡುವ ವೇಗ ವೃದ್ಧಿಗೊಂಡು ಅತಿ ಶೀಘ್ರದಲ್ಲಿ ಸಾಮಾನ್ಯಸ್ಥಿತಿಗೆ ಬರುತ್ತದೆ. ಇದು ಹೇಗೆ ಸಹಾಯಕರವಾಗಿದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋನಲ್ಲಿ ವಿವರಿಸಲಾಗಿದೆ ಮುಂದೆ ಓದಿ...

ಉತ್ತಮ ಪ್ರಮಾಣದ ನಾರಿನಾಂಶಗಳನ್ನು ಒಳಗೊಂಡಿದೆ

ಉತ್ತಮ ಪ್ರಮಾಣದ ನಾರಿನಾಂಶಗಳನ್ನು ಒಳಗೊಂಡಿದೆ

ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಇದು ಮಲವನ್ನು ಸಡಿಲಗೊಳಿಸುವುದು ಮಾತ್ರವಲ್ಲ ಜೀರ್ಣಕ್ರಿಯೆ ಸುಲಭವಾಗುವಂತೆಯೂ ನೋಡಿಕೊಳ್ಳುತ್ತದೆ. ಇದರಲ್ಲಿ ಚಯಾಪಚಯ ಕ್ರಿಯೆಗೆ ಪೂರಕವಾದ ರಾಫ್ಯಾನಿನ್ (raphanin), ಗ್ಲೂಕೋಸಿಲಿನೇಟ್, ವಿಟಮಿನ್ ಸಿ ಮೊದಲಾದವುಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಕರುಳಿನ ಒಳಭಾಗದ ಉರಿಯೂತ ಮತ್ತು ಇದರಿಂದಾಗಿ ಉದ್ಭವವಾಗಿದ್ದ ಮೂಲವ್ಯಾಧಿಯ ಗಂಟುಗಳನ್ನು ಕರಗಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉತ್ತಮ ಪ್ರಮಾಣದ ನಾರಿನಾಂಶಗಳನ್ನು ಒಳಗೊಂಡಿದೆ

ಉತ್ತಮ ಪ್ರಮಾಣದ ನಾರಿನಾಂಶಗಳನ್ನು ಒಳಗೊಂಡಿದೆ

ಇದರಲ್ಲಿ ಕೆಲವು ಆವಿಯಾಗುವ ತೈಲಗಳಿದ್ದು ಕರುಳಿನ ಊತವನ್ನು ಮತ್ತು ತುರಿಕೆಯನ್ನು ನಿವಾರಿಸುತ್ತದೆ. ಅಲ್ಲದೇ ಇದರ ಉರಿಯೂತ ನಿವಾರಕ ಗುಣ ಮೂಲವ್ಯಾಧಿಯ ಕಾರಣ ಎದುರಾಗಿದ್ದ ನೋವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಒಟ್ಟಾರೆಯಾಗಿ ನೋಡುವುದಾದರೆ ಮೂಲವ್ಯಾಧಿ ಮತ್ತು ಇದರಿಂದಾಗುವ ನೋವನ್ನು ಮೂಲಂಗಿ ನಿವಾರಿಸಲು ನೆರವಾಗುತ್ತದೆ.

ಮೂಲಂಗಿಯ ಬಳಕೆ ಹೇಗೆ?

ಮೂಲಂಗಿಯ ಬಳಕೆ ಹೇಗೆ?

ಮೂಲವ್ಯಾಧಿ ಯಾವ ಮಟ್ಟದಲ್ಲಿದೆ ಎಂಬುದನ್ನು ಅನುಸರಿಸಿ ಬಿಳಿ ಮೂಲಂಗಿಯನ್ನು ಎರಡು ವಿಧಾನಗಳಲ್ಲಿ ಉಪಯೋಗಿಸಬಹುದು.

ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ...

ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ...

ಒಂದು ವೇಳೆ, ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ: ಒಂದು ಚಿಕ್ಕಚಮಚ ಜೇನು ಮತ್ತು ನೂರು ಗ್ರಾಂ ಬಿಳಿಮೂಲಂಗಿಯ ತುರಿಗೆ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿ. ಇದರಿಂದ ನೋವು ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ...

ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ...

ಆಸನದ್ವಾರದ ತುರಿಕೆ, ಮಲಬದ್ಧತೆ ಸಹಾ ಕಡಿಮೆಯಾಗುತ್ತದೆ. ಇದರ ರುಚಿ ನಿಮಗೆ ಹಿಡಿಸದೇ ಇದ್ದರೆ ಮೂಲಂಗಿಯನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಗೊಟಾಯಿಸಿ ಇದಕ್ಕೆ ಕೊಂಚವೇ ಉಪ್ಪು ಸೇರಿಸಿ ದಿನಕ್ಕೆ ಎರಡು ಬಾರಿ ಒಂದೊಂದು ಲೋಟ ಕುಡಿಯಬಹುದು.

ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ...

ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ...

ಒಂದು ವೇಳೆ ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ, ಹೀಗೆ ಮಾಡಿ ಒಂದು ಮೂಲಂಗಿಯನ್ನು ಚೆನ್ನಾಗಿ ಅರೆದು ಲೇಪನ ತಯಾರಿಸಿ. ಅರೆಯಲು ನೀರಿನ ಬದಲು ಹಾಲನ್ನು ಬಳಸಿ. ಈ ಲೇಪನವನ್ನು ಮೂಲವ್ಯಾಧಿ ಇದ್ದೆಡೆ ಲೇಪಿಸಿ. ಇದರಿಂದ ನೋವು, ಊತ ಮತ್ತು ತುರಿಕೆ ಶೀಘ್ರವಾಗಿ ಕಡಿಮೆಯಾಗುತ್ತದೆ.

English summary

Radish or mooli – a natural remedy to deal with piles

Unlike other edible roots like carrots and beetroot, radish is not as commonly eaten. However, this white colored vegetable can act as an effective natural aid to relieve symptoms of piles and also prevent further worsening of the condition. So if you are suffering from piles or are at a high risk of this condition, including this vegetable in your diet might do the trick. But this doesn’t mean that you stop taking medications to treat piles as it shows effective results when taken along with medication.
X
Desktop Bottom Promotion