For Quick Alerts
ALLOW NOTIFICATIONS  
For Daily Alerts

ಸೌತೆಕಾಯಿ+ಕುಂಬಳಕಾಯಿ ಜ್ಯೂಸ್‌ನಲ್ಲಿದೆ 'ಜಬರ್ದಸ್ತ್ ಪವರ್'!

By Arshad
|

ಒಂದು ವೇಳೆ ನಿಮಗೆ ಯಾವುದಾದರೂ ಪ್ರಮುಖ ಕೆಲಸ ಅಥವಾ ವಿನೋದ ಕೂಟಕ್ಕೆ ಹಾಜರಾಗಬೇಕಾಗಿದ್ದು ಅದೇ ಸಮಯದಲ್ಲಿ ಅನಾರೋಗ್ಯ ಕಾಣಿಸಿಕೊಂಡರೆ, ಅದರಲ್ಲೂ ಇನ್ನೊಬ್ಬರಿಗೆ ದಾಟಬಹುದಾದ ಶೀತ ಮೊದಲಾದವು ಆವರಿಸಿಕೊಂಡರೆ ಕಾಯಿಲೆಯ ತೊಂದರೆಗಿಂತಲೂ ಆ ಕಾರ್ಯಕ್ರಮ ತಪ್ಪಿಸಿಕೊಂಡ ದುಃಖವೇ ಹೆಚ್ಚಾಗಿ ಕಾಡುತ್ತದೆ.

ವಾಸ್ತವವಾಗಿ ನಿಸರ್ಗ ಈ ತೊಂದರೆಗಳನ್ನು ಎದುರಿಸಲು ಕೆಲವು ನೈಸರ್ಗಿಕ ಸಾಮಾಗ್ರಿಗಳನ್ನು ನೀಡಿದ್ದು ಇದರ ಸದ್ಬಳಕೆ, ಸರಿಯಾದ ಸಮಯದಲ್ಲಿ ಆದರೆ ಈ ತೊಂದರೆ ಬರುವುದರಿಂದಲೇ ತಪ್ಪಿಸಬಹುದು. ಹಿಂದಿನ ದಿನಗಳಲ್ಲಿ, ವೈದ್ಯವಿಜ್ಞಾನ ಮತ್ತು ಔಷಧಿಗಳು ಇಂದಿನಷ್ಟು ಹೆಚ್ಚಾಗಿ ಕಂಡುಹಿಡಿದಿದ್ದಿಲ್ಲವಾದ ಕಾರಣ ಹಿರಿಯರು ನೈಸರ್ಗಿಕ ಸಾಮಾಗ್ರಿಗಳನ್ನೇ ನೆಚ್ಚಿಕೊಳ್ಳುತ್ತಿದ್ದರು. ಅನುಭವದ ಮೇಲೆ ಯಾವ ಕಾಯಿಲೆಗೆ ಯಾವ ಮದ್ದು ಎಂಬುದನ್ನು ಕಂಡುಕೊಂಡು ತಾವು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಾ ಬಂದರು. ಈ ಮದ್ದುಗಳು ನಿಜಕ್ಕೂ ಹಲವು ವ್ಯಾಧಿಗಳಿಗೆ ಪರಿಣಾಮಕಾರಿಯಾಗಿದ್ದು ಇಂದಿಗೂ ಉಳಿದು ಬಂದಿವೆ. ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್‌ನ ಕರಾಮತ್ತೇನು?

ಇಂದಿನ ಆಲೋಪಥಿ ಔಷಧಿಗಳು ತಕ್ಷಣಕ್ಕೆ ರೋಗಕ್ಕೆ ಉಪಶಮನ ನೀಡುತ್ತವಾದರೂ ಇವುಗಳ ಅಡ್ಡ ಪರಿಣಾಮ ಬೇರೆ ಸಮಯದಲ್ಲಿ ಬೇರೊಂದು ರೂಪದಲ್ಲಿ ಬಾಧಿಸಬಹುದು. ಯಾವುದೇ ರೋಗ ಬಂದ ಮೇಲೆ ಮದ್ದು ತೆಗೆದುಕೊಳ್ಳುವುದಕ್ಕಿಂತ ಬರದೇ ಇರದಂತೆ ನೋಡಿಕೊಳ್ಳುವುದು ಅತ್ಯುತ್ತಮ. ನೈಸರ್ಗಿಕ ಔಷಧಿಗಳಲ್ಲಿ ಅಡ್ಡಪರಿಣಾಮಗಳು ಇರದ ಕಾರಣ ಇದರ ಪರಿಣಾಮ ಆಲೋಪಥಿ ಔಷಧಿಗಳಿಗಿಂತ ಕೊಂಚ ನಿಧಾನವಾಗಿ ಆದರೂ ಸುರಕ್ಷಿತವಾಗಿದೆ. ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಇಂತಹ ಒಂದು ಮದ್ದನ್ನು ಅರ್ಧ ಲೋಟ ಸೌತೆಕಾಯಿಯ ರಸ ಮತ್ತು ಅರ್ಧ ಲೋಟ ಚೀನಿಕಾಯಿ (ಅಥವಾ ಕುಂಬಳಕಾಯಿ) ರಸದೊಂದಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರದ ರೂಪದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಸೇವಿಸುತ್ತಾ ಬಂದರೆ ಹಲವಾರು ಆರೋಗ್ಯಕರ ಉಪಯೋಗಗಳಿಗೆ. ಬನ್ನಿ, ಈ ಉಪಯೋಗಗಳು ಯಾವುವು ಎಂಬುದನ್ನು ನೋಡೋಣ...

ತೂಕ ಕೆಳೆದುಕೊಳ್ಳಲು ನೆರವಾಗುತ್ತದೆ

ತೂಕ ಕೆಳೆದುಕೊಳ್ಳಲು ನೆರವಾಗುತ್ತದೆ

ಈ ಎರಡೂ ರಸಗಳಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು ಹಾಗೂ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಜೀವರಾಸಾಯನಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಪರಿಣಾಮವಾಗಿ ನಿಮ್ಮ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಪ್ರತಿಫಲ ದೊರೆತು ತೂಕ ಶೀಘ್ರವಾಗಿ ಇಳಿಯಲು ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಈ ರಸದಲ್ಲಿ ಪ್ಯಾಂಟೋಥೆನಿಕ್ ಆಮ್ಲ (pantothenic acid) ಎಂಬ ಪೋಷಕಾಂಶವಿದ್ದು ಇದು ಹೊಟ್ಟೆಯಲ್ಲಿ ಸ್ರವಿಸಿದ ಹೆಚ್ಚಿನ ಪ್ರಮಾಣದ ಆಮ್ಲವನ್ನು ನಿಷ್ಕ್ರಿಯಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ

ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ

ಈ ಅದ್ಭುತ ರಸದಲ್ಲಿ ಆಂಟಿ ಆಕ್ಸಿಡೆಂಟುಗಳ ಜೊತೆಗೆ ಫ್ಲೇವನಾಯ್ಡುಗಳೂ ಇವೆ. ಇವು ದೇಹದಲ್ಲಿ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಜೀವಕೋಶಗಳ ಬೆಳವಣಿಗೆಯನ್ನು ತಡೆದು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ನೋವನ್ನು ಕಡಿಮೆಗೊಳಿಸುತ್ತದೆ

ನೋವನ್ನು ಕಡಿಮೆಗೊಳಿಸುತ್ತದೆ

ಸೌತೆ ಮತ್ತು ಸಿಹಿಗುಂಬಳ ಎರಡರಲ್ಲಿಯೂ ಉರಿಯೂತ ನಿವಾರಕ ಕಿಣ್ವಗಳಿದ್ದು ದೇಹದ ಹಲವು ಭಾಗಗಳ ಉರಿಯೂತ, ಬಾವುಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ತನ್ಮೂಲಕ ಇದರಿಂದ ಉಂಟಾದ ನೋವನ್ನು ಇಲ್ಲವಾಗಿಸಲು ನೆರವಾಗುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಈ ಅದ್ಭುತ ರಸದಲ್ಲಿ ಕ್ಯಾರೋಟೀನ್ ಎಂಬ ಪೋಷಕಾಂಶವೂ ಇದ್ದು ವಿಶೇಷವಾಗಿ ದೃಷ್ಟಿನರವನ್ನು ಇನ್ನಷ್ಟು ಸಕ್ಷಮಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತಾ ಹೋಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ಪೇಯವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಇದರಲ್ಲಿರುವ ವಿಟಮಿನ ಸಿ ಮತ್ತು ಇತರ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ವಿಧದ ರೋಗಣುಗಳನ್ನು ಸಮರ್ಥವಾಗಿ ಎದುರಿಸಲು ನೆರವಾಗುತ್ತವೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಈ ಪೇಯದಲ್ಲಿ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರು ಇದ್ದು ತ್ಯಾಜ್ಯಗಳು ಸುಲಭವಾಗಿ ವಿಸರ್ಜನೆಗೊಳ್ಳಲು ನೆರವಾಗುತ್ತದೆ. ಇದರಿಂದ ಮಲಬದ್ಧತೆಗೆ ತೆಗೆದುಕೊಳ್ಳುತ್ತಿದ್ದ ಔಷಧಿಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು.

English summary

What Happens When You Drink Cucumber & Pumpkin Juice?

Taking modern medicines for a long term can cause a lot of side effects that can be harmful to your health. Just add half a cup of cucumber juice to half a cup of pumpkin juice, stir well and consume this drink, every morning before breakfast, for at least a month. Have a look at some of the health benefits of cucumber and pumpkin juice, here.
Story first published: Sunday, January 22, 2017, 8:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more