For Quick Alerts
ALLOW NOTIFICATIONS  
For Daily Alerts

ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

By Arshad
|

ನಮ್ಮ ಆಹಾರದಲ್ಲಿ ಹಸಿ ತರಕಾರಿಗಳನ್ನು ಅಳವಡಿಸಿಕೊಳ್ಳಲು ಹಲವು ಕಾರಣಗಳಿವೆ. ಬೇಯಿಸಿದ ತರಕಾರಿಗಳ ಮೂಲಕ ನಮಗೆ ಹಲವು ಪೋಷಕಾಂಶಗಳು ಲಭ್ಯವಾದರೂ ಕೆಲವು ಅಮೂಲ್ಯ ಪೋಷಕಾಂಶಗಳು ಬೇಯುವಾಗ ನಷ್ಟವಾಗುತ್ತವೆ. ವಿಶೇಷವಾಗಿ ನೀರಿನಲ್ಲಿ ಕರಗುವ, ಆದರೆ ಬಿಸಿಯಾದರೆ ಆವಿಯಾಗುವ ಪೋಷಕಾಂಶಗಳು. ಅಂತೆಯೇ ಹಣ್ಣುಗಳು, ಸೌತೆಕಾಯಿ, ಲಿಂಬೆರಸ ಮೊದಲಾದವುಗಳನ್ನು ಬಿಸಿಮಾಡದೇ ಸೇವಿಸಿದರೆ ಉತ್ತಮ.

ಸೌತೆಕಾಯಿಯಲ್ಲಿ ವಿಟಮಿನ್ ಸಿ, ಕೆ, ಬಿ, ತಾಮ್ರ, ಪೊಟ್ಯಾಶಿಯಂ, ಮ್ಯಾಂಗನೀಸ್ ನಂತಹ ಖನಿಜಗಳ ಜೊತೆಗೆ ವಿವಿಧ ಆಂಟಿ ಆಕ್ಸಿಡೆಂಟುಗಳಿವೆ. ಇವು ಹಲವು ಕಾಯಿಲೆಗಳಿಗೆ ಔಷಧಿಯಂತೆ ಕಾರ್ಯನಿರ್ವಹಿಸುವುದರೊಂದಿಗೇ ದೇಹಕ್ಕೆ ಪೋಷಣೆಯನ್ನೂ ನೀಡುತ್ತವೆ.

ಆದರೆ ಇವುಗಳನ್ನು ಹಸಿಯಾಗಿ ಸೇವಿಸುವುದಕ್ಕಿಂತಲೂ ನೀರಿನಲ್ಲಿ ಕರಗಿಸಿ ಆ ನೀರನ್ನು ಕುಡಿಯುವುದರಿಂದ ದೇಹ ಈ ಪೋಷಕಾಂಶವನ್ನು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತದೆ. ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್‌ನ ಕರಾಮತ್ತೇನು?

ಇದಕ್ಕೆ ಒಂದು ಸುಲಭವಾದ ವಿಧಾನವಿದೆ. ಇದಕ್ಕಾಗಿ ಒಂದು ದೊಡ್ಡ ಜಗ್ ನೀರಿನಲ್ಲಿ ಸಿಪ್ಪೆ ಸುಲಿಯದ ಕೆಲವು ಸೌತೆಕಾಯಿಗಳನ್ನು ಚಿಕ್ಕದಾಗಿ ಹೋಳಾಗಿಸಿ ಹನ್ನೆರಡು ಗಂಟೆಗಳ ಕಾಲ (ಸಂಜೆ ಆರರಿಂದ ಬೆಳಿಗ್ಗೆ ಆರರವರೆಗೆ ಅತಿ ಸೂಕ್ತವಾದ ಸಮಯ) ನೆನೆಸಿ ಬಳಿಕ ಈ ನೀರನ್ನು ಸೋಸಿ ದಿನವಿಡೀ ಈ ನೀರನ್ನು ಕುಡಿಯಿರಿ. ಬನ್ನಿ ಸೌತೆಕಾಯಿಯ ಇನ್ನಷ್ಟು ಲಾಭಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ ಮುಂದೆ ಓದಿ... ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಮೂಳೆಗಳಿಗೆ ಅತ್ಯುತ್ತಮವಾಗಿದೆ

ಮೂಳೆಗಳಿಗೆ ಅತ್ಯುತ್ತಮವಾಗಿದೆ

ಈ ನೀರಿನಲ್ಲಿರುವ ಸಿಲಿಕಾ ಎಂಬ ಧಾತು ಮೂಳೆಗಳಿಗೆ ಅಂಟಿಕೊಂಡಿರುವ ಸ್ನಾಯುಗಳ ನಡುವಣ ಬಂಧನವನ್ನು (connective tissue) ಇನ್ನಷ್ಟು ಬಲಪಡಿಸುವ ಕಾರಣ ಮೂಳೆಗಳು ಅತ್ಯಂತ ಬಲಯುತವಾಗುತ್ತವೆ.

ಕಾಲು ಊದಿಕೊಂಡಿದ್ದರೆ

ಕಾಲು ಊದಿಕೊಂಡಿದ್ದರೆ

ಕಲವೊಮ್ಮೆ ದೇಹದಲ್ಲಿ ನೀರು ತುಂಬಿಕೊಂಡು ಕೈಕಾಲುಗಳು ಊದಿಕೊಂಡಿರುತ್ತವೆ. ಹೆಚ್ಚಿನವರಿಗೆ ಪ್ರಯಾಣದ ಬಳಿಕ ಇದು ಬೇಗನೇ ಕಂಡುಬರುತ್ತದೆ. ಕೈ ಮತ್ತು ಕಾಲುಗಳಲ್ಲಿ (ಪಾದಗಳ ಬಳಿ ಮತ್ತು ಮಣಿಕಟ್ಟಿನ ಬಳಿ) ಹೆಚ್ಚು ಬಾವು ಕಂಡುಬರುತ್ತದೆ. ಸೌತೆ ನೆನೆಸಿದ ನೀರನ್ನು ಕುಡಿಯುತ್ತಿರುವುದರಿಂದ ಮೂತ್ರದ ಹೊರಹರಿವು ಹೆಚ್ಚಾಗಿ ದೇಹದಲ್ಲಿ ಸಂಗ್ರಹವಾಗಿದ್ದ ನೀರು ಹೊರಹೋಗಲು ನೆರವಾಗುತ್ತದೆ. ಅಲ್ಲದೇ ಮೂತ್ರಪಿಂಡಗಳಿಗೂ ಈ ಸೌತೆಕಾಯಿ ನೀರು ಉತ್ತಮವಾಗಿದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ಸೌತೆಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ವಿವಿಧ ಕಾಯಿಲೆಗಳಿಂದ ದೇಹ ಶೀಘ್ರವೇ ಚೇತರಿಸಿಕೊಳ್ಳಲು ನೆರವಾಗುವ ಕಾರಣ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ.

ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ದೇಹದೊಳಗೆ ಆಹಾರ ಮತ್ತು ಶ್ವಾಸದ ಮೂಲಕ ಆಗಮಿಸಿದ್ದ ವಿವಿಧ ವಿಷಕಾರಿ ವಸ್ತುಗಳನ್ನು ಶೋಧಿಸಿ ವಿಸರ್ಜಿಸಲು ಸೌತೆ ನೆನೆಸಿದ ನೀರು ಉತ್ತಮವಾಗಿದೆ. ವಿಶೇಷವಾಗಿ ಯಕೃತ್ ನಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗಿದ್ದು ಇವನ್ನು ವಿಸರ್ಜಿಸಲು ನೆರವಾಗುವುದರೊಂದಿಗೆ ಆರೋಗ್ಯವನ್ನು ವೃದ್ಧಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ

ಸೌತೆ ನೀರಿನಲ್ಲಿರುವ ಸ್ಟೆರಾಲ್ ಎಂಬ ಪೋಷಕಾಂಶಕ್ಕೆ ಕೆಟ್ಟ ಕೊಲೆಸ್ಟ್ರಾಲ್ (LDL-Low density Lipoprotein) ಗಳನ್ನು ನಿವಾರಿಸುವ ಶಕ್ತಿಯಿದೆ. ರಕ್ತನಾಳಗಳ ಒಳಗೆ ಅಲ್ಲಲ್ಲಿ ಅಂಟಿಕೊಂಡಿದ್ದ ಈ ಅಪಾಯಕಾರಿ ಕೊಲೆಸ್ಟಾಲ್ ಅನ್ನು ಸೌತೆನೆನೆಸಿದ ನೀರು ಸಡಿಲಗೊಳಿಸಿ ವಿಸರ್ಜಿಸುವ ಮೂಲಕ ಹೃದಯದ ಕಾಯಿಲೆಗಳು ಮತ್ತು ಅಧಿಕ ರಕ್ತದೊತ್ತಡಗಳಿಂದ ರಕ್ಷಿಸುತ್ತದೆ.

ವಿವಿಧ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ವಿವಿಧ ಕ್ಯಾನ್ಸರ್ ಬರದಂತೆ ತಡೆಯುತ್ತದೆ

ಸೌತೆ ನೆನೆಸಿದ ನೀರಿನಲ್ಲಿ pinoresinol ಸಹಿತ ಹಲವು ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ಧವಾಗಿರುವ ಕಾರಣ ವಿವಿಧ ಕ್ಯಾನ್ಸರ್ ಗೆ ದೇಹ ತುತ್ತಾಗುವ ಸಂಭವತೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಜೀವಕೋಶಗಳಿಗೆ ಧಕ್ಕ್ತೆಎಸಗುವುದರಿಂದ ಮತ್ತು ತನ್ಮೂಲಕ ಕ್ಯಾನ್ಸರ್ ಆಗುವ ಸಾಧ್ಯತೆಯಿಂದ ಮುಕ್ತಿಗೊಳಿಸುತ್ತದೆ.

ಮೂತ್ರಪಿಂಡಗಳಿಗೆ ಉತ್ತಮವಾಗಿದೆ

ಮೂತ್ರಪಿಂಡಗಳಿಗೆ ಉತ್ತಮವಾಗಿದೆ

ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದರೆ ಸಂಧಿವಾತ ಅಥವಾ ಕೀಲುಗಳು ಊದಿ ಕೆರಳುವ ರೋಗವಾಗುವ (gout) ಸಂಭವವೂ ಹೆಚ್ಚಾಗುತ್ತದೆ. ಸೌತೆನೆನೆಸಿದ ನೀರನ್ನು ಕುಡಿಯುವ ಮೂಲಕ ಮೂತ್ರಪಿಂಡಗಳಲ್ಲಿರುವ ಕ್ರಿಯಾಟಿನಿನ್ (creatinine) ಎಂಬ ರಾಸಾಯನಿಕದ ಪ್ರಮಾಣವನ್ನು ಕಡಿಮೆಗೊಳಿಸಿ ಯೂರಿಕ್ ಆಮ್ಲ ಮತ್ತಿತರ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಇದರಿಂದ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಹಾಗೂ ಆರೋಗ್ಯ ಉತ್ತಮಗೊಳ್ಳುತ್ತದೆ.

ಬಾಯಿಯ ದುರ್ವಾಸನೆಯಿಂದ ರಕ್ಷಿಸುತ್ತದೆ

ಬಾಯಿಯ ದುರ್ವಾಸನೆಯಿಂದ ರಕ್ಷಿಸುತ್ತದೆ

ಬಾಯಿಯಲ್ಲಿ ಉಳಿದುಕೊಂಡಿದ್ದ ಆಹಾರದ ತುಣುಕುಗಳಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗುವ ಮೂಲಕ ಬಾಯಿಯಲ್ಲಿ ದುರ್ವಾಸನೆ ಹೆಚ್ಚಾಗುತ್ತದೆ. ಸೌತೆ ನೆನೆಸಿದ ನೀರಿನಲ್ಲಿ Phytochemcials ಎಂಬ ಪೋಷಕಾಂಶಗಳು ಈ ಬ್ಯಾಕ್ಟೀರಿಯಾಗಳನ್ನು ಕೊಂದು ಬಾಯಿಯಲ್ಲಿ ದುರ್ವಾಸನೆಯಾಗದಂತೆ ರಕ್ಷಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಸೌತೆ ನೆನೆಸಿದ ನೀರಿನಲ್ಲಿರುವ fisetin ಎಂಬ ಧಾತು ಒಂದು ಉತ್ತಮ ಉರಿಯೂತ ನಿವಾರಕ (anti-inflammatory) ವಾಗಿದೆ. ಇದು ದೇಹಕ್ಕೆ ಎದುರಾಗುವ ವಿವಿಧ ಉರಿಗಳನ್ನು ಶಮನಗೊಳಿಸಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ರಕ್ತಸಂಚಾರದಿಂದಾಗಿ ಮೆದುಳಿಗೂ ಉತ್ತಮ ಪ್ರಮಾಣದ ರಕ್ತ ಲಭ್ಯವಾಗಿ ಮೆದುಳು ಆಧರಿಸಿದ ಚಟುವಟಿಕೆಗಳು ಚುರುಕುಗೊಳ್ಳುತ್ತವೆ.

ಚರ್ಮದ ಮತ್ತು ಕೂದಲ ಕಾಂತಿ ಹೆಚ್ಚುತ್ತದೆ

ಚರ್ಮದ ಮತ್ತು ಕೂದಲ ಕಾಂತಿ ಹೆಚ್ಚುತ್ತದೆ

ಸೌತೆ ನೆನೆಸಿದ ನೀರಿನಲ್ಲಿ ಸಿಲಿಕಾನ್ ಮತ್ತು ಗಂಧಕಗಳು ನಷ್ಟವಾಗದೇ ಉಳಿದಿರುವ ಕಾರಣ ಚರ್ಮ ಮತ್ತು ಕೂದಲಿಗೆ ಉತ್ತಮ ಪೋಷಣೆ ನೀಡಲು ನೆರವಾಗುತ್ತವೆ. ಕೂದಲು ಉದುರುವುದನ್ನು ತಡೆದು ಆರೋಗ್ಯಕರ ಕೂದಲು ಬೆಳೆಯಲು ಸಹಾ ಈ ನೀರು ಬೆಂಬಲ ನೀಡುತ್ತದೆ.

English summary

10 Reasons To Add Cucumber To Water Daily

A simple trick with cucumber can make you in a good state of health and will treat most of your ailments is to soak cucumber slices in water for 12 hours and then drink the cucumber water. You can put some cucumber slices in a bottle of water and then drink the water. The active compounds along with the vitamins, minerals and antioxidants from the cucumber gets leached in the water.
X
Desktop Bottom Promotion