For Quick Alerts
ALLOW NOTIFICATIONS  
For Daily Alerts

  ಇಂತಹ ಸಿಂಪಲ್ ಟ್ರಿಕ್ಸ್ ಅನುಸರಿಸಿ-ಕುಡಿತದ ಚಟದಿಂದ ಹೊರಬನ್ನಿ

  By Manu
  |

  ಮದ್ಯಪಾನ ಆರೋಗ್ಯಕ್ಕೆ ಮಾರಕ ಎಂದು ತಯಾರಿಸುವವರಿಂದ ಹಿಡಿದು ಕುಡಿಯುವವರಿಗೆ ಎಲ್ಲರಿಗೂ ಸ್ಪಷ್ಟವಾಗಿ, ಇತರರಿಗಿಂತಲೂ ಕೊಂಚ ಹೆಚ್ಚಾಗಿಯೇ ಗೊತ್ತು. ಆದರೂ ಇಂದು ಮದ್ಯಪಾನ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಲ್ಪಟ್ಟು ಈ ಪ್ರತಿಷ್ಠೆ ಆರೋಗ್ಯದ ಕಾಳಜಿಯನ್ನೂ ಮೀರಿ ವಿಜೃಂಭಿಸುತ್ತಿದೆ. ಗಟ್ಟಿ ಮನಸ್ಸು ಮಾಡಿ, ಆದಷ್ಟು ಬೇಗ ಮದ್ಯಪಾನ ಬಿಟ್ಟುಬಿಡಿ!

  ಸುಮ್ಮನೇ ಕೊಂಚ ರುಚಿ ನೋಡಲು ಎಂದು ಪ್ರಾರಂಭಿಸಿದ ಈ ವ್ಯಸನ ಇದು ಇಲ್ಲದೇ ಸಾಧ್ಯವೇ ಇಲ್ಲ ಎನ್ನುವವರೆಗೆ ಆವರಿಸಲು ಈ ಪೇಯದ ಸೇವನೆಯ ಪರಿಣಾಮವಾಗಿ ಮೆದುಳಿನಲ್ಲಿ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುವುದೇ ಕಾರಣ. ಮದ್ಯಪಾನದಿಂದ ಲಿವರ್ ಹಾಳಾಗುತ್ತದೆ ಎಂದು ಮದ್ಯಪಾನಿಗಳು ತಕ್ಷಣ ನೀಡುವ ಉತ್ತರ. ಆದರೆ ಇದರ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳನ್ನು ಗಮನಿಸಿದರೆ ಇಂದು ಜಗತ್ತಿನಲ್ಲಿ ಸಂಭವಿಸುವ ಮುಕ್ಕಾಲುವಾಸಿ ಕೊಲೆ, ಅಪಘಾತ, ಸಂಚುಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಮದ್ಯ ನೇರವಾದ ಪಾತ್ರ ವಹಿಸಿರುವುದನ್ನು ಅಂಕಿ ಅಂಶಗಳು ದೃಢಪಡಿಸುತ್ತವೆ. ಈ ಟಿಪ್ಸ್ ಮದ್ಯ ಬೇಡ ಅನ್ನುವವರಿಗೆ ಮಾತ್ರ!

  ಮನೆಗಳು ಬೀದಿಗೆ ಬಂದಿವೆ. ಲಕ್ಷಾಂತರ ಜನರ ಆರೋಗ್ಯ ಕೆಟ್ಟಿದೆ. ಈ ವ್ಯಸನದಿಂದ ಹೊರಬರಲು ಪ್ರಪ್ರಥಮವಾಗಿ ದೃಢಸಂಕಲ್ಪ ಬೇಕು. ಉಳಿದಂತೆ ನಿಧಾನವಾಗಿ ಪ್ರಮಾಣವನ್ನು ಕಡಿಮೆಗೊಳಿಸುತ್ತಾ ಬರುವ ಮೂಲಕ ಈ ವ್ಯಸನದಿಂದ ಸುರಕ್ಷಿತವಾಗಿ ಹಾಗೂ ಆರೋಗ್ಯಕರವಾಗಿ ಹೊರಬರಬಹುದು. ಮದ್ಯಪಾನ ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ....

  ಮದ್ಯದಿಂದ ಯಕೃತ್, ಹೃದಯ ಸಂಬಂಧಿ ಕಾಯಿಲೆಗಳು, ಸ್ನಾಯುಗಳ ಕ್ಷಮತೆ ಉಡುಗಿಸುವುದು, ಯೋಚನಾ ಮತ್ತು ವಿವೇಚನಾ ಸಾಮರ್ಥ್ಯವನ್ನು ಕಳೆದುಕೊಳ್ಳುವುದು, ಕೆಲವರಿಗೆ ವಪೆಯ ಕ್ಷಮತೆ ಉಡುಗಿ ಉಸಿರಾಟಕ್ಕೇ ತೊಂದರೆಯಾಗಿ ಸಾವು ಸಹಾ ಸಂಭವಿಸಿದೆ. ಬನ್ನಿ ಈ ವ್ಯಸನ ಪ್ರಾಣವನ್ನು ತೆಗೆಯುವುದಕ್ಕಿಂತ ಮುನ್ನ ಇದರಿಂದ ಹೊರಬರುವುದು ಹೇಗೆ ಎಂಬುದನ್ನು ನೋಡೋಣ....  

  ಸಮರ್ಪಕ ಮತ್ತು ವ್ಯವಸ್ಥಿತ ನಿಯಂತ್ರಣ

  ಸಮರ್ಪಕ ಮತ್ತು ವ್ಯವಸ್ಥಿತ ನಿಯಂತ್ರಣ

  ಎಂದಿಗೂ ಮದ್ಯಪಾನವಾಗಲೀ ಧೂಮಪಾನವಾಗಲೀ ಒಮ್ಮೆಲೇ ಬಿಡಬಾರದು. ನಿಧಾನವಾಗಿ ಇದರ ಪ್ರಮಾಣವನ್ನು ಕಡಿಮೆಗೊಳಿಸುತ್ತಾ ಬರಬೇಕು. ನಿಮ್ಮ ವೈದ್ಯರು ಈ ಬಗ್ಗೆ ಸರಿಯಾದ ವೇಳಾಪಟ್ಟಿಯನ್ನು ಸೂಚಿಸಬಲ್ಲರು.

  ಮದ್ಯದ ಬದಲು ನೀರು ಅಥವಾ ಸೋಡಾ ಸೇವಿಸಿ

  ಮದ್ಯದ ಬದಲು ನೀರು ಅಥವಾ ಸೋಡಾ ಸೇವಿಸಿ

  ಮದ್ಯದ ಪ್ರಮಾಣವನ್ನು ನೀರು ಅಥವಾ ಸೋಡಾ ಬೆರೆಸಿ ಕಡಿಮೆಗೊಳಿಸಬಹುದು. ಅಂದರೆ ಪ್ರಾರಂಭದಲ್ಲಿ ನಿಮ್ಮ ಆಯ್ಕೆಯ ಮದ್ಯವನ್ನು ಸೇವಿಸಿದ ಬಳಿಕ ಮುಂದಿನ ಸುತ್ತುಗಳಲ್ಲಿ ನೀರು ಮತ್ತು ಸೋಡಾ ಮಾತ್ರವನ್ನು ಸೇವಿಸುವ ಮೂಲಕ ಮೆದುಳಿಗೆ ಮದ್ಯ ಸೇವಿಸಿದಂತೆಯೇ ಅನ್ನಿಸಿ ಈ ವ್ಯಸನದಿಂದ ಹೊರಬರಲು ಮಾನಸಿಕವಾಗಿ ಸಾಧ್ಯವಾಗುತ್ತದೆ.

  ಕೆಂಪು ವೈನ್ ಬಳಸಿ

  ಕೆಂಪು ವೈನ್ ಬಳಸಿ

  ಮನೆಯಲ್ಲಿ ತಯಾರಿಸಿದ ಕೆಂಪು ವೈನ್ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಹೃದಯಕ್ಕೂ ಉತ್ತಮ, ಹಲ್ಲುಗಳ ಮತ್ತು ಚರ್ಮದ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಆದರೆ ಇದಕ್ಕಾಗಿ ಇದರ ಪ್ರಮಾಣ ನಿಯಮಿತವಾಗಿರಬೇಕು. ಏಕೆಂದರೆ ಕೆಂಪು ವೈನ್ ನಲ್ಲಿಯೂ ಆಲ್ಕೋಹಾಲ್ ಇದ್ದು ಮದ್ಯದ ವ್ಯಸನ ಬಿಡಲು ಇದನ್ನು ಪ್ರಾರಂಭಿಸಿದವರು ಈ ಪಾನೀಯಕ್ಕೆ ವ್ಯಸನರಾಗುವ ಅಪಾಯವಿದೆ. ಆರೋಗ್ಯ ಟಿಪ್ಸ್: ಕೆಂಪು ವೈನ್ ಸೇವನೆಯಿಂದ ಆರೋಗ್ಯ ವೃದ್ಧಿ!

  ಖಾಲಿ ಹೊಟ್ಟೆಯಲ್ಲಿ ಎಂದಿಗೂ ಸೇವಿಸಬೇಡಿ

  ಖಾಲಿ ಹೊಟ್ಟೆಯಲ್ಲಿ ಎಂದಿಗೂ ಸೇವಿಸಬೇಡಿ

  ಮದ್ಯ ಕುಡಿಯಬೇಕು ಎಂಬ ಬಯಕೆಯಾದಾಗ ನಿಮ್ಮ ಹೊಟ್ಟೆ ಖಾಲಿಯಾಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಖಾಲಿಹೊಟ್ಟೆಯಲ್ಲಿ ಸೇವಿಸಿದ ಮದ್ಯ ನೇರವಾಗಿ ತಕ್ಷಣವೇ ರಕ್ತಕ್ಕೆ ಹರಿಯುವ ಮೂಲಕ ಯಕೃತ್‌ ಗೆ ಅತಿ ಹೆಚ್ಚಿನ ತೊಂದರೆಯುಂಟಾಗುತ್ತದೆ. ಅಲ್ಲದೇ ಇದು ದೇಹದಿಂದ ಹೊರಹೋಗಲು ಅತಿ ಹೆಚ್ಚಿನ ಸಮಯ ತೆಗೆದುಕೊಳ್ಳುವ ಮೂಲಕ ಇದರ ಮತ್ತು ಸಹಾ ಹೆಚ್ಚಿನ ಸಮಯದವರೆಗೆ ಇದ್ದು ಇದರ ಪರೋಕ್ಷ ಪರಿಣಾಮಗಳನ್ನು ಊಹಿಸಲೂ ಸಾಧ್ಯವಿಲ್ಲ.

   

  English summary

  Ways To Reduce The Bad Effects Of Alcohol

  Alcohol is very popular as a drink, no doubt, but its toxic effects on the body cannot be ignored. Hence if you are prone to drinking alcohol often, you must read this article to find out how alcohol harms our body and how you can do certain things in order to cause less damage to your body.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more