For Quick Alerts
ALLOW NOTIFICATIONS  
For Daily Alerts

ಮದ್ಯಪಾನ ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ....

By Manu
|

ಜೀವನದ ಎಷ್ಟೋ ಕಷ್ಟಗಳು ಪ್ರಾರಂಭವಾಗಲೂ ಕೊನೆಗೊಳ್ಳಲೂ ಮದ್ಯವೇ ಕಾರಣ ಎಂಬ ಸುಭಾಷಿತವೊಂದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಭಾರತದ ಮಟ್ಟಿಗೆ ಹೇಳಿಕೊಳ್ಳುವುದಾದರೆ ಮದ್ಯದ ರುಚಿ ತೋರಿಸಿ ತಮ್ಮ ಸ್ವಾರ್ಥಸಾಧನೆ ಮಾಡಿಕೊಳ್ಳುವ ಪ್ರವೃತ್ತಿಯೇ ಹೆಚ್ಚು. ಮತ ಪಡೆಯಲು ಮದ್ಯದ ಲಂಚ ನೀಡುವ ಸರ್ಕಾರದಿಂದ ಹಿಡಿದು ಅಸಾಧ್ಯ ಮತ್ತು ಪ್ರಾಣಾಪಾಯ ಇರುವ ಕೆಲಸಗಳನ್ನೂ ಮದ್ಯಕುಡಿಸಿ ಅಗ್ಗದಲ್ಲಿ ಮಾಡಿಸಿಕೊಳ್ಳುವ ಕಟ್ಟಡ ನಿರ್ಮಾಣದಾರರೂ, ಗುತ್ತಿಗೆದಾರರೂ ಭಾರತದಲ್ಲಿ ಪ್ರತಿ ಊರಿನಲ್ಲಿಯೂ ಇದ್ದಾರೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

ಮದ್ಯ ಕುಡಿದು ಚಿಂತೆ ಮರೆಯಿರಿ ಎಂದೆಲ್ಲಾ ಸುಳ್ಳು ಹೇಳಿ ಜನರನ್ನು ವ್ಯಸನಕ್ಕೆ ದೂಡಿ ಲಾಭ ಮಾಡಿಕೊಳ್ಳುವ ಜನರು ಕೋಟಿಗಟ್ಟಲೇ ನಮ್ಮಲ್ಲಿದ್ದಾರೆ. ಜನರೂ ಸಹಾ ತಾತ್ಕಾಲಿಕವಾದ ಈ ಅಮಲನ್ನೇ ಜೀವನದಲ್ಲಿ ತಮಗೆ ದೊರೆತ ಮಹಾಭಾಗ್ಯವೆಂಬಂತೆ ವರ್ತಿಸುತ್ತಾ ತಮ್ಮ ಆರೋಗ್ಯವನ್ನೂ, ಮಾನಸಿಕ ಸ್ವಾಸ್ಥ್ಯವನ್ನೂ ಹಾಳುಮಾಡಿಕೊಳ್ಳುತ್ತಾ ತಾನೊಬ್ಬ ನಾಯಕನಂತಿರುವ ಭ್ರಮೆಯಲ್ಲಿರುತ್ತಾರೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಮದ್ಯಪಾನ ಯಾವತ್ತಿಗೂ ಆರೋಗ್ಯ ಮತ್ತು ಸಾಂಸಾರಿಕ ಜೀವನಕ್ಕೆ ಮಾರಕವೇ ಎಂಬುದು ವಾಸ್ತವ ಸತ್ಯ. ಇದರಿಂದ ಎಷ್ಟು ಬೇಗ ಹೊರಬರುತ್ತೇವೆಯೋ ಅಷ್ಟೂ ಉತ್ತಮ. ಆದರೆ ವ್ಯಸನಕ್ಕೆ ಅಭ್ಯಾಸಗೊಂಡ ದೇಹವನ್ನು ಒಮ್ಮೆಲೇ ಹೊರತರುವುದು ಸಹಾ ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ವೈದ್ಯರು ವ್ಯಸನದಿಂದ ಹೊರಬರಲು ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಅಂದರೆ ಈ ವ್ಯಸನವನ್ನು ಹಂತಹಂತವಾಗಿ, ನಿಧಾನವಾಗಿ ಪ್ರಮಾಣವನ್ನು ಕಡಿಮೆಗೊಳಿಸುತ್ತಾ ದೇಹವನ್ನು ಕಡಿಮೆ ಪ್ರಮಾಣಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತಾ ಕಡೆಗೊಂದು ದಿನ ಸುರಕ್ಷಿತವಾಗಿ ಹೊರಬರುವಂತೆ ಮಾಡುತ್ತಾರೆ. ಬನ್ನಿ ಈ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ...

ಇವರ ಆರೋಗ್ಯ ಉತ್ತಮಗೊಳ್ಳುತ್ತದೆ

ಇವರ ಆರೋಗ್ಯ ಉತ್ತಮಗೊಳ್ಳುತ್ತದೆ

ಮದ್ಯದಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಪಿಷ್ಟ ಮತ್ತು ಶಕ್ತಿಯಿಲ್ಲದ ಕ್ಯಾಲೋರಿಗಳಿವೆ. ಅಂದರೆ ಮದ್ಯ ಕುಡಿದವರಲ್ಲಿ ಹೆಚ್ಚಿನ ಶಕ್ತಿ ಇರುವುದಿಲ್ಲ, ಬದಲಿಗೆ ತೂಕವನ್ನು ಹೆಚ್ಚಿಸುತ್ತಾ ಜೀವರಾಸಾಯನಿಕ ಕ್ರಿಯೆಯನ್ನು ಕುಂಠಿತಗೊಳಿಸಿರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇವರ ಆರೋಗ್ಯ ಉತ್ತಮಗೊಳ್ಳುತ್ತದೆ

ಇವರ ಆರೋಗ್ಯ ಉತ್ತಮಗೊಳ್ಳುತ್ತದೆ

ಅಮಲಿನಲ್ಲಿ ವ್ಯಕ್ತಿ ತಾನೇ ಶಕ್ತಿವಂತ ಎಂಬ ಭ್ರಮೆಯಲ್ಲಿರುತ್ತಾನೆ. ಮದ್ಯಪಾನ ವರ್ಜಿಸಿದ ಬಳಿಕ ಇತರ ಆಹಾರಗಳಿಂದ ಪಡೆಯುವ ಶಕ್ತಿ ನಿಜವಾದ ಆರೋಗ್ಯವನ್ನು ನೀಡುತ್ತದೆ. ಇದು ದಿನವಿಡೀ ಚಟುವಟಿಕೆಯಿಂದ ಮತ್ತು ಸಂತೋಷವಾಗಿರಲು ನೆರವಾಗುತ್ತದೆ.

ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ

ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ

ಮದ್ಯಪಾನದಿಂದ ವ್ಯಕ್ತಿಯ ಲೈಂಗಿಕ ಸಾಮರ್ಥ್ಯ ಅಪಾರವಾಗಿ ಕಡಿಮೆಯಾಗಿರುತ್ತದೆ. ಮಹಿಳೆಯರಲ್ಲಂತೂ ಮದ್ಯಪಾನದ ಮೂಲಕ ಸೂಕ್ಷ್ಮಸಂವೇದನೆಯೇ ಇಲ್ಲವಾಗಿರುತ್ತದೆ. ಮದ್ಯಪಾನ ವರ್ಜಿಸಿದ ಬಳಿಕ ಈ ತೊಂದರೆಗಳೂ ಇಲ್ಲವಾಗಿ ಶಯನಗೃಹ ಶೃಂಗಾರಮಯವಾಗುತ್ತದೆ.

ಆರೋಗ್ಯಕರ ಯಕೃತ್

ಆರೋಗ್ಯಕರ ಯಕೃತ್

ಮದ್ಯಪಾನದ ಪ್ರಭಾವ ಅತಿಯಾಗಿ ಬಾಧಿಸುವುದು ಯಕೃತ್ ಅನ್ನು ಮದ್ಯಪಾನದ ಪ್ರಭಾವದಿಂದ ಘಾಸಿಗೊಂಡಿದ್ದ ಯಕೃತ್ ನ ಜೀವಕೋಶಗಳಿಗೆ ಈಗ ಮರುಹುಟ್ಟು ಪಡೆಯಲು ಸಮಯಾವಕಾಶ ಲಭಿಸಿರುವ ಕಾರಣ ಕೆಟ್ಟು ಹೋಗಿದ್ದ ಭಾಗ ಮತ್ತೆ ಪುನರ್ಜೀವ ಪಡೆದುಕೊಳ್ಳುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ನಮ್ಮ ದೇಹವನ್ನು ಹಲವು ರೋಗಗಳಿಂದ ರಕ್ಷಿಸುವ ರೋಗ ನಿರೋಧಕ ವ್ಯವಸ್ಥೆಯನ್ನು ಮದ್ಯದ ಪ್ರಭಾವ ಕಡಿಮೆಗೊಳಿಸಿರುತ್ತದೆ. ಅಪರೂಪಕ್ಕೆ ಕುಡಿಯುವವರಲ್ಲಿಯೂ ಈ ಶಕ್ತಿ ಉಡುಗಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಈಗ ಮದ್ಯ ಇಲ್ಲದೇ ಇರುವ ಕಾರಣ ರೋಗ ನಿರೋಧಕ ಶಕ್ತಿ ಮತ್ತೊಮ್ಮೆ ಉತ್ತಮಗೊಳ್ಳುತ್ತಾ ವಿವಿಧ ರೋಗಗಳಿಂದ ರಕ್ಷಿಸುತ್ತದೆ.

ವಿವಿಧ ಕ್ಯಾನ್ಸರುಗಳಿಂದ ರಕ್ಷಿಸುತ್ತದೆ

ವಿವಿಧ ಕ್ಯಾನ್ಸರುಗಳಿಂದ ರಕ್ಷಿಸುತ್ತದೆ

ಮದ್ಯಪಾನದಿಂದ ಎದುರಾಗುವ ಒಂದು ಘೋರ ಅಪಾಯವೆಂದರೆ ಕ್ಯಾನ್ಸರ್. ವಿಶೇಷವಾಗಿ ಯಕೃತ್, ಕರುಳು, ಪ್ರಾಸ್ಟೇಟ್ ಗ್ರಂಥಿ, ಸ್ತನ ಮೊದಲಾದ ಅಂಗಗಳಿಗೆ ತಗಲುವ ಕ್ಯಾನ್ಸರ್ ಗೆ ಮದ್ಯಪಾನವೇ ಮೂಲ ಕಾರಣವಾಗಿದೆ. ಮದ್ಯಪಾನ ಇಲ್ಲದ ಮೂಲಕ ಈ ಕ್ಯಾನ್ಸರುಗಳೆಲ್ಲಾ ಎದುರಾಗುವ ಸಂಭವ ಕಡಿಮೆಯಾಗುತ್ತವೆ.

ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ

ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ

ಮದ್ಯದ ಅಮಲಿನಲ್ಲಿ ಕೈಗೊಳ್ಳುವ ನಿರ್ಧಾರಗಳೆಲ್ಲಾ ಅವಿವೇಕತನದಿಂದ ಕೂಡಿರುತ್ತದೆ. ಇದನ್ನೇ ಲಾಭವಾಗಿಸಿಕೊಳ್ಳಲು ಇಂದಿಗೂ ಕನಿಷ್ಟ ಕೂಲಿ ಮತ್ತು ಕೊಂಚ ಮದ್ಯದ ಮೂಲಕ ಅಪಾಯಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ ಅತಿ ತೂಕದ ವಸ್ತುಗಳನ್ನು ಬರಿಗೈಯಿಂದ ಮೇಲೆ ಎತ್ತುವುದು, ಎತ್ತರದ ಸ್ಥಳಕ್ಕೆ ಯಾವುದೇ ಸುರಕ್ಷತೆಯಿಲ್ಲದೇ ವಸ್ತುಗಳನ್ನು ಕೊಂಡೊಯ್ಯುವುದು ಇತ್ಯಾದಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ

ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ

ಮದ್ಯದ ಅಮಲಿನಲ್ಲಿ ಕಳೆದುಕೊಳ್ಳುವ ವಿವೇಕ ಈ ಕೆಲಸಗಳನ್ನು ಮಾಡಿಸುವ ಜೊತೆಗೇ ಖಿನ್ನತೆ, ಅಸಂಬದ್ಧ ಯೋಚನೆಗಳು ಮೊದಲಾದವುಗಳನ್ನು ಹುಟ್ಟುಹಾಕುತ್ತದೆ. ಮದ್ಯವೇ ಇಲ್ಲದಿದ್ದಾಗ ನಿಜವಾದ ವಿವೇಕ ಜಾಗೃತಿಗೊಳ್ಳುತ್ತದೆ. ಇದು ಮಾನಸಿಕ ಆರೋಗ್ಯ ಉತ್ತಮಗೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಜೀವನ ಸಂತೋಷಕರವಾಗುತ್ತದೆ.

ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ

ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ

ಮದ್ಯಸೇವನೆಯ ಇನ್ನೊಂದು ಅಡ್ಡಪರಿಣಾಮವೆಂದರೆ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತುಂಬಿಕೊಳ್ಳಲು ಪ್ರಚೋದನೆ ನೀಡುವುದು. ಇದರಿಂದ ಹೃದಯಕ್ಕೆ ಹೆಚ್ಚಿನ ಒತ್ತಡದಿಂದ ರಕ್ತವನ್ನು ನೂಕಬೇಕಾಗಿ ಬರುತ್ತದೆ. ಇದು ಹೃದಯಾಘಾತಕ್ಕೆ ನಾಂದಿಯಾಗಿದೆ. ಅಪರೂಪಕ್ಕೆ ಸೇವಿಸುವವರ ರಕ್ತನಾಳಗಳಲ್ಲಿಯೂ ಗಾಬರಿಪಡುವಷ್ಟು ಪ್ರಮಾಣದ ಕೊಲೆಸ್ಟ್ರಾಲ್ ಇರುತ್ತದೆ. ಮದ್ಯಪಾನ ಬಿಟ್ಟ ಬಳಿಕ ನಿಧಾನವಾಗಿ ಈ ಕೊಲೆಸ್ಟ್ರಾಲ್ ತಗ್ಗಲು ನೆರವಾಗುವ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳುವುದು ತಪ್ಪುತ್ತದೆ. ಇದರಿಂದ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯೂ ಕಡಿಮೆಯಾಗುತ್ತದೆ.

English summary

Things That Happen To Your Body When You Stop Drinking Alcohol!

A popular quote says, "Alcohol is the cause and solution to many of life's problems". Do we believe that this statement is true? Well, it is just the matter of perspective. Many a times, people feel that drinking alcohol may help them enjoy certain social events, forget about certain painful experiences, etc.
Story first published: Thursday, July 14, 2016, 7:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more