ರಕ್ತದೊತ್ತಡ ನಿವಾರಣೆಗೆ ಬೆಳ್ಳುಳ್ಳಿಯ ಹಲವು ಅವತಾರಗಳು

Posted By: Divya
Subscribe to Boldsky

ಆರೋಗ್ಯ ಸಮಸ್ಯೆಯಿಂದ ಪ್ರತಿದಿನ ಮಾತ್ರೆಗಳನ್ನು ಸೇವಿಸುವುದು ಎಂದರೆ ಒಂದು ರೀತಿಯ ಬೇಸರ. ನಿತ್ಯವೂ ಮಾತ್ರೆ ಸೇವಿಸುವುದರಿಂದ ನಮಗೆ ಅರಿಯದ ರೀತಿಯಲ್ಲಿ ಅಡ್ಡಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅದರಲ್ಲೂ ರಕ್ತದೊತ್ತಡದ ಸಮಸ್ಯೆ ಇರುವವರು ದಿನಂಪ್ರತಿ ಔಷಧವನ್ನು ಸೇವಿಸಲೇ ಬೇಕು. ಈ ರೀತಿಯ ಮಾತ್ರೆ ಸೇವನೆಯನ್ನು ನಿಲ್ಲಿಸಿ, ಮನೆ ಔಷಧಿಯಿಂದ ಪರಿಹಾರ ಕಂಡು ಕೊಳ್ಳಲು ಬಯಸಿದರೆ, ಅದಕ್ಕೆ ಅತ್ಯುತ್ತಮ ಆಯ್ಕೆ ಬೆಳ್ಳುಳ್ಳಿ.

ಬೆಳ್ಳುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಾದ ಅಲಿಕ್ಸಿನ್, ಡೈಲಿಲ್ ಡಿಸುಲ್ಫೈಡ್, ಡೈಲಿಲ್ ಟ್ರಿಸುಲ್ಫೈಡ್‍ಅನ್ನು ಹೊಂದಿದೆ. ಇಷ್ಟೇ ಅಲ್ಲದೆ ಸೆಲೆನಿಯಮ್. ಜೆರ್ಮನಿಯಮ್, ವಿಟಮಿನ್ಸ್ ಮತ್ತು ಖನಿಜಗಳಂತಹ ಉತ್ಕರ್ಷಣ ನಿರೋಧಕಗಳ ಸಮೃದ್ಧ ಆಗರ. ಇದರಲ್ಲಿರುವ ಅಲಿಸಿನ್ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿದಾಗ ಅಥವಾ ಕತ್ತರಿಸಿದಾಗ ಆಲಿನೇಸ್ ಎಂಬ ಕಿಣ್ವ ಬಿಡುಗಡೆಯಾಗುತ್ತದೆ. ಈ ಕಿಣ್ವ ಕೇವಲ ಹಸಿ ಬೆಳ್ಳುಳ್ಳಿಯಲ್ಲಷ್ಟೇ ಅಲ್ಲದೆ ಒಣಗಿರುವ ಬೆಳ್ಳುಳ್ಳಿಯಲ್ಲೂ ಇರುತ್ತದೆ.

ಗಂಟಲು ನೋವಿನ ಶಮನಕ್ಕೆ-ಅಡುಗೆಮನೆಯ 'ಬೆಳ್ಳುಳ್ಳಿ' ಸಾಕು!

ದಿನನಿತ್ಯವೂ 1-2 ಸಣ್ಣ ಬೆಳ್ಳುಳ್ಳಿಯ ಎಸಳನ್ನು ತಿನ್ನುತ್ತಾ ಬಂದರೆ ಅಧಿಕ ರಕ್ತದೊತ್ತಡವನ್ನು ಸಹ ಸುಲಭವಾಗಿ ನಿಯಂತ್ರಣದಲ್ಲಿಡಬಹುದು. ನಾವು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ ಅದನ್ನು ಬಳಸುವ ರೀತಿ ಮತ್ತು ಪ್ರಮಾಣದ ಬಗ್ಗೆ ಸೂಕ್ತ ಅರಿವಿರಬೇಕು. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಬೇಕೆನಿಸಿದರೆ ಮುಂದೆ ಓದಿ...

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಗರಿಷ್ಟ ಮಟ್ಟದ ಅಲಿಕ್ಸಿನ್ ಪಡೆಯಬಹುದು. ಇದನ್ನು ಜಗೆಯುವುದರಿಂದ ಆಲಿನೇಸ್ ಸಕ್ರಿಯಗೊಳ್ಳುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಒಂದು ದಿನಕ್ಕೆ 1-1.5 ಗ್ರಾಂ ಹಸಿ ಅಥವಾ ಒಣಗಿರುವ ಬೆಳ್ಳುಳ್ಳಿಯನ್ನು ಸೇವಿಸಬಹುದು.

ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಬೆಳ್ಳುಳ್ಳಿಯ ಪುಡಿ

ಬೆಳ್ಳುಳ್ಳಿಯ ಪುಡಿ

ನಿತ್ಯವೂ 600-900 ಮಿ.ಗ್ರಾಂ ಬೆಳ್ಳುಳ್ಳಿ ಪುಡಿಯನ್ನು ಸೇವಿಸಿದರೆ 9-12ರಷ್ಟು ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಬೆಳ್ಳುಳ್ಳಿಯ 600 ಮಿ.ಗ್ರಾಂ ಪುಡಿಯಲ್ಲಿ 3.6ಮಿ.ಗ್ರಾಂ ಅಲಿಸಿನ್ ಮತ್ತು 900 ಮಿ.ಗ್ರಾಂ ಪುಡಿಯಲ್ಲಿ 5.4 ಮಿ.ಗ್ರಾಂ ಅಲಿಸಿನ್ ಪ್ರಮಾಣವಿರುತ್ತದೆ. ಹಾಗಾಗಿ ಇದು ರಕ್ತದೊತ್ತಡದ ನಿವಾರಣಗೆ ಉತ್ತಮವಾದ ನೈಸರ್ಗಿಕ ಚಿಕಿತ್ಸೆ ಎನ್ನಬಹುದು.

ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ

ಬೇಯಿಸಿದ ಬೆಳ್ಳುಳ್ಳಿ

ಬೇಯಿಸಿದ ಬೆಳ್ಳುಳ್ಳಿ

ಬೇಯಿಸಿದ ಬೆಳ್ಳುಳ್ಳಿಯಲ್ಲಿ ಕಡಿಮೆ ಪ್ರಮಾಣದ ಅಲಿಸಿನ್ ಇರುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ಪುಡಿಮಾಡುವುದು ಅಥವಾ ಕತ್ತರಿಸಿದ ನಂತರ 10 ನಿಮಿಷ ಬಿಟ್ಟು ಅಡುಗೆ ಮಾಡಬೇಕು. ಇಲ್ಲವಾದರೆ ಇದರಲ್ಲಿರುವ ಅಲಿನೆಸ್ ಮತ್ತು ಇತರ ಗಂಧಕದಂಶಗಳು ಅಡುಗೆಯನ್ನು ನಿಷ್ಕ್ರಿಯಗೊಳಿಸುವವು.

ತುರಿದ ಬೆಳ್ಳುಳ್ಳಿ

ತುರಿದ ಬೆಳ್ಳುಳ್ಳಿ

ತುರಿದ ಬೆಳ್ಳುಳ್ಳಿಯನ್ನು ನಮಗಿಷ್ಟವಾಗುವ ಸಲಾಡ್‍ಗಳಲ್ಲಿ ಸೇರಿಸಿ ಸವಿಯಬಹುದು. ಗಣನೀಯವಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡವನ್ನು ಸರಳವಾದ ವಿಧಾನದಿಂದ ತಡೆಗಟ್ಟಬಹುದು.

ಬೆಳ್ಳುಳ್ಳಿ ಮಿಶ್ರಿತ ಆಲಿವ್ ಎಣ್ಣೆ

ಬೆಳ್ಳುಳ್ಳಿ ಮಿಶ್ರಿತ ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಬೆಳ್ಳುಳ್ಳಿ ಎಸಳನ್ನು ಹಾಕಿ 2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇಡಬೇಕು. ಈ ಮಿಶ್ರಣವು ಬೇಯಿಸುತ್ತಿರುವಾಗ ನೊರೆಯಂತೆ ಮೇಲೆ ಬರುವುದು ಆಗಲೂ ಹಾಗೇಯೇ ಬಿಡಬೇಕು. ಸಂಪೂರ್ಣವಾಗಿ ನೊರೆಗಳು ಕಡಿಮೆಯಾದಮೇಲೆ ಕೆಳಗಿಳಿಸಿ, ಆರಲು ಬಿಡಿ. ರುಚಿಕರವಾದ ಈ ಮಿಶ್ರಿತ ಎಣ್ಣೆಯನ್ನು ಬ್ರೆಡ್ ಅಥವಾ ಇನ್ನಿತರ ತಿಂಡಿಗೆ ಬಳಸಿಕೊಂಡು ಸವಿಯಬಹುದು.

ಬೆಳ್ಳುಳ್ಳಿಯ ಚಹಾ

ಬೆಳ್ಳುಳ್ಳಿಯ ಚಹಾ

ಒಂದು ಕಪ್ ಕುದಿಯುತ್ತಿರುವ ನೀರಿಗೆ 1-3 ಕತ್ತರಿಸಿದ ಬೆಳ್ಳುಳ್ಳಿ ಎಸಳನ್ನು ಹಾಕಿರಿ. 5 ನಿಮಿಷ ಹೀಗೆ ಕುದಿಯಲು ಬಿಡಬೇಕು. ಇದರ ರುಚಿ ಹೆಚ್ಚಿಸಲು ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ. ನಂತರ ಸವಿಯಿರಿ. ಹೀಗೆ ದಿನಂಪ್ರತಿ ಸೇವಿಸುತ್ತಾ ಬಂದರೆ ಅಧಿಕ ರಕ್ತದೊತ್ತಡವು ಗುಣಮುಖವಾಗುವುದು.

ದಿನನಿತ್ಯ ಖಾಲಿ ಹೊಟ್ಟೆಗೆ ಸೇವಿಸಿ ಗರಂ ಗರಂ 'ಬೆಳ್ಳುಳ್ಳಿ ಚಹಾ'

ಕೆಲವೊಮ್ಮೆ ಬೆಳ್ಳುಳ್ಳಿಯು ಅಸ್ವಸ್ಥತೆಯನ್ನುಂಟುಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆಮ್ಲೀಯತೆಯಂತಹ ಅಜೀರ್ಣದ ಸಮಸ್ಯೆ ಉಂಟಾಗಬಹುದು. ಬೆಳ್ಳುಳ್ಳಿಯ ಅಲರ್ಜಿ ಇರುವವರಿಗೆ ವಾಕರಿಕೆ, ವಾಂತಿ, ತಲೆನೋವು, ಎಸ್ಜಿಮಾ ಮತ್ತು ಉಬ್ಬಸ ಬರುವುದು.

ಅಧಿಕ ರಕ್ತದೊತ್ತಡವೇ? ನಿಯಂತ್ರಿಸಲು ಏಲಕ್ಕಿಯೇ ಸಾಕು!

 

For Quick Alerts
ALLOW NOTIFICATIONS
For Daily Alerts

    English summary

    Ways To Consume Garlic And Reduce Blood Pressure

    There are various recipes of natural treatments for high blood pressure. Among these, chewing 1-2 cloves of garlic daily is known to be the easiest and simplest way to reduce blood pressure. Also, there are options available to include garlic in your daily diet, as a blood pressure remedy. Let us see some of them.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more