For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಬೆಳ್ಳುಳ್ಳಿ ಹಾಲಿನಲ್ಲಿ ಹೆಚ್ಚಿನ ಆರೋಗ್ಯ ಲಾಭಗಳು ಇವೆ ಎಂದರೆ ಪ್ರತಿಯೊಬ್ಬರು ಇದನ್ನು ಕುಡಿಯಲು ಮುಂದೆ ಬರಬಹುದು. ಕೆಲವೊಂದು ಸಂಶೋಧನೆಗಳು ಕೂಡ ಬೆಳ್ಳುಳ್ಳಿ ಹಾಲಿನಲ್ಲಿ ಆರೋಗ್ಯ ಗುಣಗಳು ಇವೆ ಎಂದು ಹೇಳಿವೆ.

By Hemanth
|

ಬೆಳ್ಳುಳ್ಳಿಯನ್ನು ದ್ವೇಷಿಸುವವರೇ ಹೆಚ್ಚು. ಯಾಕೆಂದರೆ ಅದರ ಘಾಟು ವಾಸನೆ. ಆದರೆ ಅದರಲ್ಲಿರುವ ಆರೋಗ್ಯಕಾರಿ ಅಂಶಗಳನ್ನು ಗಮನಿಸಿದರೆ ಇದನ್ನು ಪ್ರತಿಯೊಬ್ಬರು ಪ್ರೀತಿಸಬೇಕು. ಇಂತಹ ಘಾಟಿನ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿಗೆ ಹಾಕಿದರೆ ಖಂಡಿತವಾಗಿಯೂ ಹಾಲು ಕುಡಿಯಲು ನೀವು ಒಪ್ಪಲ್ಲ.

ಆದರೆ ಬೆಳ್ಳುಳ್ಳಿ ಹಾಲಿನಲ್ಲಿ ಹೆಚ್ಚಿನ ಆರೋಗ್ಯ ಲಾಭಗಳು ಇವೆ ಎಂದರೆ ಪ್ರತಿಯೊಬ್ಬರು ಇದನ್ನು ಕುಡಿಯಲು ಮುಂದೆ ಬರಬಹುದು. ಕೆಲವೊಂದು ಸಂಶೋಧನೆಗಳು ಕೂಡ ಬೆಳ್ಳುಳ್ಳಿ ಹಾಲಿನಲ್ಲಿ ಆರೋಗ್ಯ ಗುಣಗಳು ಇವೆ ಎಂದು ಹೇಳಿವೆ. ಬೆಳ್ಳುಳ್ಳಿ ಹಾಲನ್ನು ಬಳಸುವುದರಿಂದ ಯಾವ್ಯಾವ ಲಾಭಗಳು ಸಿಗಲಿದೆ ಎಂದು ಈ ಲೇಖನ ಮೂಲಕ ತಿಳಿದುಕೊಳ್ಳುವ. ಬೆಳ್ಳುಳ್ಳಿಯ ಕಮಟು ವಾಸನೆಗೆ ಮುಖ ಸಿಂಡರಿಸಬೇಡಿ!

ಸೂಚನೆ: ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ....

ಅಸ್ತಮಾ

ಅಸ್ತಮಾ

ಅಸ್ತಮಾದಿಂದ ಬಳಲುತ್ತಾ ಇರುವವರು ದಿನದಲ್ಲಿ ಒಂದು ಸಲವಾದರೂ ಬೆಳ್ಳುಳ್ಳಿ ತಿನ್ನಬೇಕು. ಅದೇ ನ್ಯುಮೋನಿಯಾದಿಂದ ಬಳುವವರು ದಿನಕ್ಕೆ ಮೂರು ಸಲ ಬೆಳ್ಳುಳ್ಳಿ ಹಾಲನ್ನು ಕುಡಿಯುವುದು ಅತ್ಯುತ್ತಮ.

ಹೃದಯ

ಹೃದಯ

ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ತುಂಬಿಕೊಂಡಾಗ ಹೃದಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಅಪಧಮನಿಗಳಿಗೆ ರಕ್ತ ಸಂಚಾರವು ತಡೆಯಲ್ಪಡುತ್ತದೆ.

ರಕ್ತಪರಿಚಲನೆ ವ್ಯವಸ್ಥೆ

ರಕ್ತಪರಿಚಲನೆ ವ್ಯವಸ್ಥೆ

ಬೆಳ್ಳುಳ್ಳಿ ಹಾಲನ್ನು ಕುಡಿದಾಗ ಸಂಪೂರ್ಣ ರಕ್ತಪರಿಚಲನೆ ವ್ಯವಸ್ಥೆ ಮೇಲೆ ಅದರ ಪರಿಣಾಮ ಬೀರುತ್ತದೆ. ರಕ್ತ ಪರಿಚಲನೆ ಸರಿಯಾಗಿ ಆಗಲು ಇದು ಅತ್ಯುತ್ತಮ ಮದ್ದಾಗಿದೆ.

ಕಾಮಾಲೆ

ಕಾಮಾಲೆ

ಯಕೃತ್‌ನಲ್ಲಿ ವಿಷ ತುಂಬಿಕೊಂಡು ಅದಕ್ಕೆ ತುಂಬಾ ಒತ್ತಡ ಬಿದ್ದಾಗ ಬೆಳ್ಳುಳ್ಳಿಯು ವಿಷವನ್ನು ಹೊರಹಾಕಲು ದೇಹಕ್ಕೆ ನೆರವಾಗುವುದು. ಇದು ಕಾಮಾಲೆಯನ್ನು ನಿವಾರಿಸಬಹುದು.

ಸಂಧಿವಾತ

ಸಂಧಿವಾತ

ಸಂಧುಗಳಲ್ಲಿ ಉಂಟಾಗುವಂತಹ ಉರಿಯೂತದಿಂದ ಸಂಧಿವಾತವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬೆಳ್ಳುಳ್ಳಿಯು ಒಳ್ಳೆಯ ಮದ್ದಾಗಿದೆ. ಬೆಳ್ಳುಳ್ಳಿ ಹಾಲು ಚೇತರಿಕೆಯನ್ನು ಸುಧಾರಿಸುತ್ತದೆ.

ನಿದ್ರಾಹೀನತೆ

ನಿದ್ರಾಹೀನತೆ

ನಿದ್ರಾಹೀನತೆಯಿಂದ ಬಳಲುತ್ತಾ ಇರುವವರು ಬೆಳ್ಳುಳ್ಳಿ ಹಾಲನ್ನು ಕುಡಿದರೆ ಒಳ್ಳೆಯ ನಿದ್ರೆ ಪಡೆಯಬಹುದು.

ಕೆಮ್ಮು

ಕೆಮ್ಮು

ಬೆಳ್ಳುಳ್ಳಿ ಹಾಲಿಗೆ ಒಂದು ಚಿಟಿಕೆ ಅರಶಿನವನ್ನು ಹಾಕಿಕೊಂಡು ಕುಡಿದರೆ ಕೆಮ್ಮು ಹಾಗೂ ಎದೆಕಟ್ಟಿರುವುದರಿಂದ ಪರಿಹಾರ ಪಡೆಯಬಹುದಾಗಿದೆ.

ಹೊಟ್ಟೆಯ ಸಮಸ್ಯೆ

ಹೊಟ್ಟೆಯ ಸಮಸ್ಯೆ

ಬೆಳ್ಳುಳ್ಳಿ ಹಾಲು ಅಜೀರ್ಣ ಸಮಸ್ಯೆಯನ್ನು ನಿವಾರಣೆ ಮಾಡಿ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು.

ಬಂಜೆತನ

ಬಂಜೆತನ

ಬಂಜೆತನವನ್ನು ಹೊಂದಿರುವ ಪುರುಷರು ಬೆಳ್ಳುಳ್ಳಿ ಹಾಲನ್ನು ಕುಡಿಯುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಯಾಕೆಂದರೆ ಇದು ರಕ್ತಸಂಚಾರವನ್ನು ಉತ್ತಮಪಡಿಸುತ್ತದೆ.

English summary

Healing Powers Of Garlic Milk

You might hate to eat garlic. And when it is mixed in milk, you might hate to drink milk too. But what if we say that it has medicinal benefits? Many health experts agree that garlic milk has some therapeutic effects. Here are some of them...
X
Desktop Bottom Promotion