Just In
Don't Miss
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- News
ಮಂಜಿನ ದಟ್ಟಣೆಯಿಂದ ಅಪಘಾತ; ಪಶ್ಚಿಮ ಬಂಗಾಳದಲ್ಲಿ 13 ಮಂದಿ ಸಾವು
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ
ಮಳೆಗಾಲದ ಸೀಸನ್ ಆರಂಭವಾಗಿದೆ. ಈ ಸಮಯದಲ್ಲಿ ನಾವು ಮಳೆಯಿಂದ ನಮ್ಮನ್ನು ರಕ್ಷಣೆ ಮಾಡಿಕೊಂಡರೂ ದೇಹಕ್ಕೆ ತಂಪುವುಂಟಾಗಿ ಜ್ವರ, ಶೀತ ಖಾಯಂ ಆಗಿ ಬಿಡುತ್ತದೆ. ದೇಹವನ್ನು ಬೆಚ್ಚಗೆ ಮಾಡಿಕೊಳ್ಳುವ ವಿಧಾನವನ್ನು ನಾವು ಅನುಸರಿಸುವುದು ಈ ಸಮಯದಲ್ಲಿ ವಾಡಿಕೆ. ಮಾತ್ರೆ, ಟಾನಿಕ್ಗಳನ್ನು ನಾವು ಎಷ್ಟೇ ಬಳಸಿಕೊಂಡರೂ ಮನೆಔಷಧಿಯನ್ನು ನಾವು ಬಳಸಿಕೊಳ್ಳಲೇಬೇಕಾಗುತ್ತದೆ.
ಅಂತಹುದೇ ಸಿದ್ಧೌಷಧವೊಂದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ನಿಮ್ಮ ಜ್ವರ, ಶೀತ ಕೆಮ್ಮಿನಂತಹ ರೋಗಗಳನ್ನು ನಿವಾರಿಸುವ ದಿವ್ಯ ಔಷಧವಾಗಿ ಇದು ಕಾರ್ಯನಿರ್ವಹಿಸಲಿದೆ. ಕರಿಮೆಣಸು (ಕಾಳುಮೆಣಸು) ಮತ್ತು ಬೆಳ್ಳುಳ್ಳಿ ರಸಂ ಇದಾಗಿದ್ದು ಜ್ವರದ ಸಮಯದಲ್ಲಿ ಈ ರಸಂ ನಿಮ್ಮನ್ನು ಚಟುವಟಿಕೆಯಿಂದ ಇರಿಸುತ್ತದೆ. ಸುಸ್ತನ್ನು ಹೋಗಲಾಡಿಸುತ್ತದೆ. ಶೀತ, ಗಂಟಲು ಕೆರತ ಹೋಗಲಾಡಿಸುತ್ತೆ ಈ ರಸಂ
ಸಸ್ಯಾಹಾರಿಗಳಿಗೆ ಈ ರಸಂ ಬಿಸಿ ಚಿಕನ್ ಸೂಪ್ನಂತೆ ಕಾರ್ಯನಿರ್ವಹಿಸಿ ಜ್ವರದ ಬೇಗೆಯನ್ನು ಕಡಿಮೆ ಮಾಡುತ್ತದೆ. ಮಧ್ಯಾಹ್ನದೂಟಕ್ಕೆ ಸೂಕ್ತ ಕಾಂಬಿನೇಶನ್ ಎಂದೆನಿಸಿರುವ ರಸಂ ತಯಾರಿ ವಿಧಾನವನ್ನೇ ಇಂದಿಲ್ಲಿ ತಿಳಿಸುತ್ತಿದ್ದು ಇದು ಹೆಚ್ಚು ಸಮಯವನ್ನೂ ತೆಗೆದುಕೊಳ್ಳುವುದಿಲ್ಲ. ಹಾಗಿದ್ದರೆ ಮಧ್ಯಾಹ್ನದೂಟಕ್ಕೆ ಈ ರಸಂ ನಿಮ್ಮ ಸಾಥ್ ನೀಡಲಿ.
*ಪ್ರಮಾಣ-3
*ಸಿದ್ಧತಾ ಸಮಯ- 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ- 10 ನಿಮಿಷಗಳು
ಸಾಮಾಗ್ರಿಗಳು
*ಬೆಳ್ಳುಳ್ಳಿ - 8 ಎಸಳು (ಕತ್ತರಿಸಿದ್ದು)
*ಕಾಳುಮೆಣಸು -1 1/2 ಚಮಚ
*ಕೆಂಪು ಮೆಣಸು - 1
*ಉಪ್ಪು ರುಚಿಗೆ ತಕ್ಕಷ್ಟು
*ಹುಳಿ - 1 ಚಮಚ
*ಸಾಸಿವೆ - 1 ಚಮಚ
*ಟೊಮೆಟೊ - 1
*ಜೀರಿಗೆ - 1 ಚಮಚ
*ಇಂಗು - ಸ್ವಲ್ಪ
*ಅರಿಶಿನ - 1/2 ಚಮಚ
*ಎಣ್ಣೆ - 2 ಚಮಚ
*ಕರಿಬೇವಿನೆಲೆ - 5-10
*ಕೊತ್ತಂಬರಿ ಎಸಳು - 2 ಚಮಚ (ಸಣ್ಣದಾಗಿ ಹೆಚ್ಚಿದ್ದು)
*ನೀರು - 2 ಕಪ್ ಚುಮುಚುಮು ಚಳಿಗೆ-ಬಿಸಿ ಬಿಸಿ ಹಲಸಿನ ಬೀಜದ ರಸಂ
ವಿಧಾನ
1. ಬೆಚ್ಚಗಿನ ನೀರು ತೆಗೆದುಕೊಂಡು ಅದರಲ್ಲಿ ಹುಳಿಯನ್ನು 5 ನಿಮಿಷಗಳ ಕಾಲ ನೆನೆಯಿಸಿ
2. ನೀರಿನಲ್ಲಿ ಹುಳಿಯನ್ನು ಚೆನ್ನಾಗಿ ಹಿಸುಕಿಕೊಂಡು ಅದರಿಂದ ದಪ್ಪನೆಯ ರಸ ಸಿದ್ಧಪಡಿಸಿ
3. ಸಾರು ಮಾಡಲು ಬೇಕಾಗುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ
4. ಸಾಸಿವೆ, ಕೆಂಪು ಮೆಣಸು, ಜೀರಿಗೆ ಮತ್ತು ಇಂಗನ್ನು ಇದಕ್ಕೆ ಹಾಕಿ
5. ಸಾಸಿವೆ ಸಿಡಿಯುತ್ತಿದ್ದಂತೆ, ಕರಿಬೇವಿನೆಸಳನ್ನು ಹಾಕಿ
6. ಈಗ, ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಕಾಲ ಹುರಿದುಕೊಳ್ಳಿ. ಗ್ಯಾಸ್ ಉರಿಯನ್ನು ತುಸು ಕಡಿಮೆ ಮಾಡಿಕೊಳ್ಳಿ. ಇದರಿಂದ ಬೆಳ್ಳುಳ್ಳಿ ಹೊತ್ತುವ ಸಾಧ್ಯತೆ ಇರುವುದಿಲ್ಲ.
7. ನಂತರ, ಕತ್ತರಿಸಿದ ಟೊಮೆಟೊವನ್ನು ಪ್ಯಾನ್ಗೆ ಹಾಕಿಕೊಳ್ಳಿ.
8. ಅರಿಶಿನವನ್ನು ಹಾಕಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಚೆನ್ನಾಗಿ ಕಲಸಿಕೊಂಡು ತಳ ಊರದಂತೆ ನೋಡಿಕೊಳ್ಳಿ
9. ಕಾಳುಮೆಣಸನ್ನು ಜಜ್ಜಿ ಪ್ಯಾನ್ಗೆ ಹಾಕಿ
10. ನೀರನ್ನು ಬೆರೆಸಿಕೊಂಡು ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ, ಚೆನ್ನಾಗಿ ಮಿಶ್ರಣವನ್ನು ಕಲಸಿ.
11. ಉಪ್ಪನ್ನು ಇದಕ್ಕೆ ಹಾಕಿಕೊಂಡು ಮಿಶ್ರಣ 2-3 ನಿಮಿಷ ಕುದಿಯಲಿ ಮಧ್ಯಮ ಪ್ರಮಾಣದಲ್ಲಿ ಉರಿಯನ್ನು ಇರಿಸಿಕೊಳ್ಳಿ
12. ಬೆಳ್ಳುಳ್ಳಿ ಮತ್ತು ಕಾಳು ಮೆಣಸಿನ ರಸಂ ಸಿದ್ಧವಾಗಿದೆ. ನಿಮ್ಮ ಮಧ್ಯಾಹ್ನದೂಟದೊಂದಿಗೆ ಈ ರಸಂ ಅತ್ಯುತ್ತಮ ಎಂದೆನಿಸಲಿದೆ. ದೋಸೆ ಮತ್ತು ಇಡ್ಲಿಗೆ ಕೂಡ ಇದು ಸೂಕ್ತವಾದುದಾಗಿದೆ. ರುಚಿ ರುಚಿಯಾದ ಮಾವಿನಕಾಯಿ ರಸಂ
ನೆನಪಿಡಿ:
*ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವಾಗ, ಕೆಲವೊಂದು ಅಂಶಗಳನ್ನು ನೀವು ಗಮನಕ್ಕೆ ತೆಗೆದುಕೊಳ್ಳಬೇಕು
ಕುದಿಯುವ ಸಮಯವನ್ನು ನೋಡಿಕೊಳ್ಳಿ. ರಸಂ ಹೆಚ್ಚು ಕುದಿದಂತೆ ರುಚಿ ವ್ಯತ್ಯಾಸವಾಗಬಹುದು.
*ನಿಮಗೆ ಜಾಸ್ತಿ ಖಾರ ಬೇಕೆಂದು ಹೆಚ್ಚು ಕಾಳುಮೆಣಸನ್ನು ಹಾಕದಿರಿ. ಬದಲಿಗೆ ಮೆಣಸಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ
*ಬೆಳ್ಳುಳ್ಳಿಯನ್ನು ರುಬ್ಬಿಕೊಳ್ಳದಿರಿ. ಇದರ ಘಾಟು ರಸಂ ಅನ್ನು ಹಾಳುಮಾಡಬಹುದು. ಬೆಳ್ಳುಳ್ಳಿಯನ್ನು ಜಜ್ಜಿ ಅಥವಾ ಕತ್ತರಿಸಿಕೊಂಡು ಬಳಸಿ.
*ಮೂಲತಃ ರಸಂ ದಕ್ಷಿಣ ಭಾರತೀಯ ಖಾದ್ಯದಲ್ಲಿ ಒಂದು ಭಾಗ ಎಂದೆನಿಸಿದೆ. ಈ ರಸಂ ಮಾತ್ರ ನಿಮಗೆ ಅನೂಹ್ಯ ರುಚಿಯನ್ನು ನೀಡುವುದಲ್ಲದೆ ಶೀತದ ಹವಾಮಾನದಲ್ಲಿ ಬೆಚ್ಚಗೆ ಇರಿಸುತ್ತದೆ. ನಿಮ್ಮ ಎಂದಿನ ರಸಂ ಶೈಲಿಗಿಂತ ವಿಭಿನ್ನವಾದುದನ್ನು ತಯಾರಿಸಿಕೊಳ್ಳಿ ನಿಮಗಿದು ಖಂಡಿತ ಇಷ್ಟವಾಗುತ್ತದೆ.