ಆರೋಗ್ಯ ಟಿಪ್ಸ್: 20-30ರ ಹರೆಯದ ವಯಸ್ಸಿನವರು ಸೇವಿಸಬೇಕಾದ ಆಹಾರಗಳು

By: Hemanth
Subscribe to Boldsky

ಹದಿಹರೆಯದಲ್ಲಿ ಮಾಡುತ್ತಿದ್ದ ಕಠಿಣ ಕೆಲಸ ಕಾರ್ಯಗಳನ್ನು ವಯಸ್ಸಾಗುತ್ತಾ ಹೋದಂತೆ ಮಾಡಲು ಸಾಧ್ಯವಾಗಲ್ಲ. ಹದಿಹರೆಯದಲ್ಲಿ ನಾವು ದೇಹ ಹಾಗೂ ಆರೋಗ್ಯವನ್ನು ಯಾವ ರೀತಿಯಲ್ಲಿ ಇಟ್ಟುಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಹದಿಹರೆಯದ ಯುವಕರು ತಿನ್ನುವ ಆಹಾರ ಮತ್ತು ವಯಸ್ಸಾದವರು ತಿನ್ನುವ ಆಹಾರದಲ್ಲಿ ವ್ಯತ್ಯಾಸವಿರುತ್ತದೆ. ಹದಿಹರೆಯದಲ್ಲಿ ದೇಹ ಬೆಳವಣಿಗೆಯಾಗಲು ಹೆಚ್ಚಿನ ಪೋಷಕಾಂಶಗಳು ಬೇಕಿರುತ್ತದೆ. ಸರಿಯಾದ ಪೋಷಕಾಂಶಗಳು ಸಿಗದೇ ಇದ್ದರೆ ದೇಹದ ಬೆಳವಣಿಗೆ ಕೂಡ ಕುಂಠಿತವಾಗುವುದು.  ವರ್ಷವಾದರೂ ಸರಿ, ಅಷ್ಟು ಸುಲಭವಾಗಿ ಕೆಡದ ಆಹಾರಗಳಿವು!

ಆದರೆ ಹದಿಹರೆಯದಲ್ಲಿ ನಾವು ತಿನ್ನುವಂತಹ ಆಹಾರ ಮತ್ತು ವಯಸ್ಸಾಗುತ್ತಾ ಇರುವಾಗ ತಿನ್ನುವಂತಹ ಆಹಾರಕ್ಕೂ ವ್ಯತ್ಯಾಸವಿರುತ್ತದೆ. ವಯಸ್ಸಾಗುತ್ತಾ ಹೋಗುತ್ತಿರುವಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಹಾರ್ಮೋನು ಬದಲಾವಣೆ ಹಾಗೂ ಅಸ್ಥಿರಂಧ್ರತೆ ಇದರಲ್ಲಿ ಪ್ರಮುಖವಾಗಿದೆ.  ಈ ಆಹಾರಗಳು ನಿಮ್ಮ ರಾತ್ರಿಯೂಟಕ್ಕೆ ಆರೋಗ್ಯದಾಯಕ!

ವಯಸ್ಸಾಗುತ್ತಾ ಹೋದಂತೆ ದೇಹಕ್ಕೆ ಯಾವೆಲ್ಲಾ ಆಹಾರಗಳು ಬೇಕಾಗುತ್ತದೆ ಎಂದು ತಿಳಿದಿದುಕೊಂಡರೆ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಲೇಖನದಲ್ಲಿ ಹದಿಹರೆಯ ಅಂದರೆ 20 ಮತ್ತು 30ರ ಹರೆಯದಲ್ಲಿ ಸೇವಿಸಬಹುದಾದ ಆಹಾರಗಳನ್ನು ಪಟ್ಟಿ ಮಾಡಿದ್ದೇವೆ. ಇದನ್ನು ತಿಳಿದು ಮುಂದಿನ ಆರೋಗ್ಯ ಕಾಪಾಡಿಕೊಳ್ಳಿ....   

20ರ ಹರೆಯದಲ್ಲಿ ಸೇವಿಸಬೇಕಾದ ಆಹಾರಗಳು

20ರ ಹರೆಯದಲ್ಲಿ ಸೇವಿಸಬೇಕಾದ ಆಹಾರಗಳು

ಪ್ರೋಟೀನ್

20ರ ಹರೆಯದಲ್ಲಿ ಪ್ರೋಟೀನ್ ತುಂಬಾ ಮುಖ್ಯವಾಗಿರುತ್ತದೆ. ಸ್ನಾಯುಗಳ ಬೆಳವಣಿಗೆಗೆ ಇದು ಅಗತ್ಯ. ದೇಹದ ಬೆಳವಣಿಗೆಗೆ ಈ ಹಂತದಲ್ಲಿ ಪ್ರೋಟೀನ್ ಅಗತ್ಯವಾಗಿ ಬೇಕಿರುತ್ತದೆ. ಪ್ರೋಟೀನ್ ಇರುವಂತಹ ಯಾವುದೇ ಆಹಾರವನ್ನು ಸೇವಿಸಬಹುದು. ಕೋಳಿಮಾಂಸ ಮತ್ತು ಪ್ರೋಟೀನ್ ಇರುವಂತಹ ಇತರ ಆಹಾರಗಳನ್ನು 20 ಹರೆಯದಲ್ಲಿ ಸೇವಿಸಬಹುದು.

ಬೀಜ ಹಾಗೂ ಧಾನ್ಯಗಳು

ಬೀಜ ಹಾಗೂ ಧಾನ್ಯಗಳು

ವಯಸ್ಸಾಗುತ್ತಾ ಹೋದಂತೆ ಚಯಾಪಚಯ ಕ್ರಿಯೆಯು ಕಡಿಮೆಯಾಗುವ ಕಾರಣದಿಂದ 20ರ ಹರೆಯದಲ್ಲಿ ಬೀಜ ಹಾಗೂ ಧಾನ್ಯಗಳನ್ನು ಸೇವಿಸಬೇಕು. ಅಸ್ಥಿರಂಧ್ರತೆ ಮತ್ತು ಸಂಧಿವಾತವನ್ನು ಇದರಿಂದ ತಡೆಯಬಹುದು. ಬೀಜ ಹಾಗೂ ಧಾನ್ಯಗಳಿಂದ ಹೆಚ್ಚಿನ ವಿಟಮಿನ್ ಹಾಗೂ ಖನಿಜಾಂಶವನ್ನು ಪಡೆಯಿರಿ.

ಕ್ಯಾಲ್ಸಿಯಂ ಅಧಿಕವಾಗಿರುವ ಅಹಾರ

ಕ್ಯಾಲ್ಸಿಯಂ ಅಧಿಕವಾಗಿರುವ ಅಹಾರ

ಹದಿಹರೆಯವು ಆರೋಗ್ಯದ ಮೇಲೆ ಹೂಡಿಕೆ ಮಾಡುವಂತಹ ಸಮಯವಾಗಿದೆ. 20ರ ಹರೆಯದಲ್ಲಿ ಏನು ತಿನ್ನುತ್ತೀರಿ ಎನ್ನುವುದು 30ರ ಹರೆಯದಲ್ಲಿ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಕ್ಯಾಲ್ಸಿಯಂ ಇರುವಂತಹ ಆಹಾರಗಳು ಮೂಳೆಗಳನ್ನು ಬಲಗೊಳಿಸಿ ಮುಂದಿನ 60 ವರ್ಷಗಳ ಕಾಲ ಆರೋಗ್ಯವನ್ನು ಕಾಪಾಡುತ್ತದೆ.

ಹಾರ್ಮೋನು ಸಮತೋಲನದ ಆಹಾರಗಳು

ಹಾರ್ಮೋನು ಸಮತೋಲನದ ಆಹಾರಗಳು

ಹದಿಹರೆಯದಲ್ಲಿ ಹೊರಗಡೆ ಬಿಸಿಲಿಗೆ ತಿರುಗಾಡುವುದು ಸಾಮಾನ್ಯ ಸಂಗತಿಯಾಗಿದೆ. ಈ ವೇಳೆ ಹಾರ್ಮೋನು ಸಮತೋಲನದಲ್ಲಿ ಇಡುವಂತಹ ಆಹಾರವನ್ನು ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದು ಮತ್ತು ದೇಹದಲ್ಲಿ ತೇವಾಂಶವನ್ನು ಕಾಪಾಡುವುದು. ಈ ಆಹಾರಗಳಿಂದ ತ್ವಚೆಯು ಕಾಂತಿಯುವಾಗುವುದು. ಮೊಸರು, ಅಕ್ರೋಟ್ ಮತ್ತು ಓಟ್ ಮೀಲ್ ಅನ್ನು ಸೇವಿಸಿ. ಇದು 20ರ ಹರೆಯದವರಿಗೆ ಒಳ್ಳೆಯ ಆಹಾರವಾಗಿದೆ.

30ರ ಹರೆಯದವರಿಗೆ

30ರ ಹರೆಯದವರಿಗೆ

ಮೂಳೆ ಸಾರು

20ರ ಹರೆಯದಲ್ಲಿ ನೀವು ಪಾಲಿಸಿಕೊಂಡು ಬಂದಿರುವ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡು ಹೋಗಿ ಮತ್ತಷ್ಟು ಬಲಗೊಳಿಸುವುದೇ 30ರ ಹರೆಯದಲ್ಲಿ ಸೇವಿಸುವ ಆಹಾರದ ಉದ್ದೇಶವಾಗಿದೆ. ಮೂಳೆ ಸಾರು ಹೊಟ್ಟೆಯ ಆರೋಗ್ಯ, ಪ್ರತಿರೋಧಕ ವ್ಯವಸ್ಥೆ, ಗಂಟಿನ ಅರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತದೆ. 30ರ ಹರೆಯದಲ್ಲಿ ಇದು ಸೇವಿಸಲೇಬೇಕಾದ ಆಹಾರವಾಗಿದೆ.

ಸೂಪರ್ ಫುಡ್ಸ್

ಸೂಪರ್ ಫುಡ್ಸ್

30ರ ಹರೆಯದಲ್ಲ ಕುಟುಂಬ, ಕೆಲಸದ ಒತ್ತಡದಲ್ಲಿ ಮೆದುಳಿನ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಈ ಆಹಾರಗಳು ಪಾಲಿಫೆನಾಲ್ಸ್ ನಿಂದ ಸಮೃದ್ಧವಾಗಿದೆ ಮತ್ತು ಮೆದುಳಿಗೆ ರಕ್ಷಣೆ ನೀಡಬಲ್ಲ ಅ್ಯಂಟಿ ಆಕ್ಸಿಡೆಂಟ್‌ಗಳು ಇದರಲ್ಲಿ ಇದೆ. ಆಲಿವ್ ತೈಲ, ತೆಂಗಿನ ಎಣ್ಣೆ, ಸಾಲ್ಮನ್, ನೇರಳೆ ಮತ್ತು ಮೊಟ್ಟೆಗಳು ಇಂತಹ ಆಹಾರಗಳಲ್ಲಿ ಇವೆ.

ಆ್ಯಂಟಿ ಆಕ್ಸಿಡೆಂಟ್

ಆ್ಯಂಟಿ ಆಕ್ಸಿಡೆಂಟ್

30ರ ಹರೆಯದಲ್ಲಿ ಬಿಳಿ ಕೂದಲು ಕಪ್ಪು ಕೂದಲಿನ ನಡುವಿನಿಂದ ಇಣುಕಿ ನೋಡಲು ಆರಂಭಿಸುತ್ತದೆ. ಇದರಿಂದ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಇರುವ ಆಹಾರವನ್ನು ಸೇವಿಸಿ. ಹಸಿರೆಲೆ ಹಾಗೂ ಬಣ್ಣಬಣ್ಣದ ತರಕಾರಿಗಳು, ಆಯಾಯ ಋತುವಿನಲ್ಲಿ ಸಿಗುವ ಹಣ್ಣುಗಳು ನಿಮ್ಮನ್ನು ಯುವಕರಂತೆ ಇಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 30ರ ಹರೆಯದಲ್ಲಿ ಇವುಗಳು ಕೆಲವೊಂದು ಅತ್ಯುತ್ತಮ ಆಹಾರವಾಗಿದೆ.

ಕೊಬ್ಬಿನಾಂಶವಿರುವ ಮೀನು ಮತ್ತು ಮೊಟ್ಟೆ

ಕೊಬ್ಬಿನಾಂಶವಿರುವ ಮೀನು ಮತ್ತು ಮೊಟ್ಟೆ

30ರ ಹರೆಯಕ್ಕೆ ಕಾಲಿಟ್ಟಂತೆ ಪುರುಷರಲ್ಲಿ ಟೆಸ್ಟೊಸ್ಟೆರಾನ್ ಮಟ್ಟವು ಪ್ರತೀ ವರ್ಷ ಶೇ. 1ರಷ್ಟು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ತಿನ್ನುವಂತಹ ಆಹಾರವು ಹಾರ್ಮೋನನ್ನು ಸಮತೋಲನದಲ್ಲಿ ಇಡಬೇಕು. ಕೊಬ್ಬಿನಾಂಶವಿರುವ ಮೀನು ಮತ್ತು ಮೊಟ್ಟೆಗಳು ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್ ಡಿಯನ್ನು ದೇಹಕ್ಕೆ ಒದಗಿಸುತ್ತದೆ.

ಕಡಿಮೆ ಕೊಬ್ಬಿರುವ ಹಾಲಿನ ಉತ್ಪನ್ನಗಳು

ಕಡಿಮೆ ಕೊಬ್ಬಿರುವ ಹಾಲಿನ ಉತ್ಪನ್ನಗಳು

35ರ ಹರೆಯದ ಬಳಿಕ ಮೂಳೆಯ ದ್ರವ್ಯರಾಶಿಯು ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕಾಗಿ ಹೆಚ್ಚಿನ ಕ್ಯಾಲ್ಸಿಯಂ ಸೇವನೆ ಮಾಡಬೇಕು. ಹಾಲು, ಗಿಣ್ಣು, ಬೆಣ್ಣೆ, ಮೊಸರನ್ನು ಸೇವಿಸಬೇಕು.

 
English summary

Top Foods To Be Eaten During Your 20s & 30s!

You know very well that food is what keeps you strong, healthy and functioning all through your life. But what you ate during your teenage may not be what your body requires during your 30s, 40s and so on. There are many changes that can occur to your body as you age. From hormonal changes, to reduction in bone density, etc., these several changes can happen in a difference of a decade.
Subscribe Newsletter