ಈ ಆಹಾರಗಳು ನಿಮ್ಮ ರಾತ್ರಿಯೂಟಕ್ಕೆ ಆರೋಗ್ಯದಾಯಕ!

Posted By:
Subscribe to Boldsky

ರಾತ್ರಿಯೂಟವನ್ನು ನಾವು ಕಾತರದಿಂದ ಕಾಯುತ್ತಿರುತ್ತೇವೆ. ಮಧ್ಯಾಹ್ನದೂಟವನ್ನು ಹೆಚ್ಚಾಗಿ ಲಗುಬಗೆಯಿಂದ ನಾವು ಮುಗಿಸುವುದರಿಂದ ರಾತ್ರಿಯೂಟವನ್ನು ಆರಾಮದಾಯಕವಾಗಿ ಸೇವಿಸುತ್ತೇವೆ. ರಾತ್ರಿ ವೇಳೆಯಲ್ಲಿ ನಾವು ಸೇವಿಸುವ ಆಹಾರ ಪ್ರಮಾಣ ಕೂಡ ಹೆಚ್ಚಾಗಿರುತ್ತದೆ. ರಾತ್ರಿ ನಿಮ್ಮ ಚಯಾಪಚಯ ಕ್ರಿಯೆಗಳು ನಿಧಾನಗತಿಯಲ್ಲಿರುತ್ತವೆ ಎಂಬುದು ನಿಮಗೆ ನೆನಪಿರಬೇಕು. ಆದ್ದರಿಂದ ರಾತ್ರಿಯೂಟವು ಕೆಲವೊಂದು ಆರೋಗ್ಯದಾಯಕ ಆಹಾರಗಳನ್ನು ಒಳಗೊಂಡಿರುವುದು ಅತೀ ಉತ್ತಮ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಲ್ಲಿ ನೀರೂರಿಸುವ ಡಿನ್ನರ್ ರೆಸಿಪಿಗಳು!

ಹೆಚ್ಚು ಆರೋಗ್ಯವಂತ ಆಹಾರಗಳನ್ನು ನಿಮ್ಮ ರಾತ್ರಿಯೂಟಕ್ಕೆ ನೀವು ಬಳಸಿದಂತೆ, ನೀವು ಕೆಲವೊಂದು ಪೌಂಡ್‌ಗಳನ್ನು ಸುಲಭವಾಗಿ ಇಳಿಸಬಹುದು. ಎಲ್ಲಾ ಪ್ರಕಾರದ ಆಹಾರಗಳನ್ನು ರಾತ್ರಿ ವೇಳೆಯಲ್ಲಿ ಸೇವಿಸಲಾಗದು ಎಂಬುದು ನೆನಪಿರಲಿ. ಉದಾಹರಣೆಗೆ, ರಾತ್ರಿಯೂಟದ ವೇಳೆಯಲ್ಲಿ ಸಿಹಿತಿಂಡಿಗಳ ಸೇವನೆ ದೇಹಕ್ಕೆ ಅಷ್ಟೊಂದು ಚೇತೋಹಾರಿಯಲ್ಲ.

ಚಯಾಪಷಯ ರಾತ್ರಿ ವೇಳೆಯಲ್ಲಿ ನಿಧಾನಗತಿಯಲ್ಲಿರುವುದರಿಂದ ಸಿಹಿತಿಂಡಿ ಸೇವನೆ ಅಧಿಕ ತೂಕಕ್ಕೆ ಕಾರಣವಾಗಬಹುದು. ನಿರಾಶರಾಗಬೇಡಿ. ನಿಮ್ಮ ರಾತ್ರಿಯೂಟವನ್ನು ಇನ್ನಷ್ಟು ರುಚಿಕರವನ್ನಾಗಿಸುವ ಆಹಾರಗಳು ನಮ್ಮ ಪಟ್ಟಿಯಲ್ಲಿವೆ.

ನಿಮ್ಮ ಊಟವನ್ನು ನಿಯಮಿತವಾಗಿ ಯೋಜಿಸುವುದು ನಿಮ್ಮ ಕೈಯಲ್ಲಿರುವುದರಿಂದ ರಾತ್ರಿಯೂಟದ ಕಡೆಗೆ ಅಸಡ್ಡೆ ಬೇಡ. ಜೀರ್ಣಿಸಲು ಕಷ್ಟವಾಗುವ ಯಾವುದೇ ಆಹಾರವನ್ನು ರಾತ್ರಿಗೆ ತೆಗೆದುಕೊಳ್ಳಬೇಡಿ. ಇದರಿಂದ ಎಸಿಡಿಟಿ ಅಜೀರ್ಣ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಪ್ರೋಟೀನ್ ಮತ್ತು ಸಸ್ಯಾಹಾರಿ ಆಹಾರ ಕ್ರಮಗಳಿಂದ ನಿಮ್ಮ ರಾತ್ರಿಯೂಟ ಭರಿತವಾಗಲಿ. ನಿಮ್ಮ ರಾತ್ರಿಯೂಟದಲ್ಲಿ ನೀವು ಸೇವಿಸಬಹುದಾದ ಕೆಲವು ಆಹಾರಗಳನ್ನು ನಾವಿಲ್ಲಿ ನೀಡಿದ್ದೇವೆ ಅವುಗಳತ್ತ ಕಣ್ಣು ಹಾಯಿಸೋಣ ಮತ್ತು ಆರೋಗ್ಯದಾಯಕ ಜೀವನ ಕ್ರಮವನ್ನು ಪಾಲಿಸೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಆಹಾರಗಳನ್ನು ರಾತ್ರಿ ತಿನ್ನದಿದ್ದರೆ ಒಳ್ಳೆಯದು

ಲೆಟ್ಯೂಸ್:

ಲೆಟ್ಯೂಸ್:

ನಿಮ್ಮ ರಾತ್ರಿಯೂಟವನ್ನು ಭರ್ತಿಗೊಳಿಸುವಂತೆ ಈ ಲೇಟ್ಯೂಸ್ ಮಾಡುತ್ತದೆ. ಹಸಿರು ಎಲೆಗಳನ್ನು ಹೊಂದಿರುವಂತಹ ಲೆಟ್ಯೂಸ್‌ನಿಂದ ತಯಾರು ಮಾಡಲಾದ ಸಲಾಡ್ ನಿಮ್ಮ ರಾತ್ರಿಯ ಆಹಾರವಾಗಿರಲಿ. ಇದರಲ್ಲಿರುವ ಕ್ಯಾಲೋರಿ ಅಂಶ ಸೊನ್ನೆಯಾಗಿದೆ.

ಸೂಪ್‌ಗಳು:

ಸೂಪ್‌ಗಳು:

ಸೂಪ್‌ಗಳು ಆರೋಗ್ಯಭರಿತ ಮತ್ತು ಅವುಗಳು ನಿಮ್ಮನ್ನು ಹೊಟ್ಟೆ ತುಂಬಿದಂತೆ ಮಾಡುತ್ತದೆ. ದಪ್ಪ ಸೂಪ್‌ಗಳಿಂದ ಕೊಂಚ ದೂರವಿರಿ. ಸಣ್ಣ ಪ್ರಮಾಣದ ಮಾಂಸ, ಮೀನು ಹಾಗೂ ತರಕಾರಿಗಳನ್ನೊಳಗೊಂಡ ತೆಳುವಾದ ಸೂಪ್ ರಾತ್ರಿಗೆ ಸಿದ್ಧಪಡಿಸಿ.

ಮಾಂಸ:

ಮಾಂಸ:

ಕೆಂಪು ಮಾಂಸಕ್ಕಿಂತ ಬಿಳಿ ಮಾಂಸವನ್ನು ರಾತ್ರಿ ಹೆಚ್ಚು ಸೇವಿಸಿ. ದಿನದ ಕೊನೆಯಲ್ಲಿ ಪ್ರೊಟೀನ್ ಭರಿತ ಮಾಂಸ ನಿಮ್ಮ ಆಹಾರವಾಗಿರಲೇಬೇಕು.

ಬೆಲ್ ಪೆಪ್ಪರ್ಸ್:

ಬೆಲ್ ಪೆಪ್ಪರ್ಸ್:

ನಿಮ್ಮ ಆಹಾರದಲ್ಲಿ ಕೆಲವೊಂದು ಉತ್ಕರ್ಷಣ ನಿರೋಧಿ ಅಂಶವನ್ನು ಸೇರಿಸುವುದು ಆರೋಗ್ಯದ ದೃಷ್ಟಿಯಲ್ಲಿ ಅತೀ ಉತ್ತಮ. ಬೆಲ್ ಪೆಪ್ಪರ್‌ಗಳು ಕ್ಯಾಲೋರಿ ಕಡಿಮೆ ಹೊಂದಿದ ಆಹಾರ ಪದಾರ್ಥಗಳು. ಮೆಣಸು ಅಥವಾ ಪೆಪ್ಪರ್‌ಗಿಂತ ಇವುಗಳು ಆರೋಗ್ಯವರ್ಧಕ.

ಹಸಿರು ಬೀನ್ಸ್‌ಗಳು:

ಹಸಿರು ಬೀನ್ಸ್‌ಗಳು:

ಟೋಸ್ಟ್‌ನಂತೆ ಸಲಾಡ್‌ಗಳಲ್ಲಿ ಇಲ್ಲವೇ ನಿಮ್ಮ ಪದಾರ್ಥದಲ್ಲಿ ಹಸಿರು ಬೀನ್ಸ್‌ ಅನ್ನು ಬಳಸಬಹುದು. ನಿಮಗೆ ಇದು ರಫ್‌ನೆಸ್ ಅನ್ನು ನೀಡಿ ಕ್ಯಾಲೋರಿ ಕಡಿಮೆಯಾಗುವಂತೆ ಮಾಡುತ್ತದೆ.

ತೋಫು:

ತೋಫು:

ಸಸ್ಯಾಹಾರಿಗಳಿಗಾಗಿ ತೋಫು ಒಂದು ಉತ್ತಮ ಆಹಾರವಾಗಿದೆ. ನಿಮ್ಮ ರಾತ್ರಿಯೂಟಕ್ಕೆ ಅಗತ್ಯವಾದ ಪ್ರೊಟೀನ್ ಅನ್ನು ಇದು ನಿಮಗೆ ನೀಡುತ್ತದೆ ಆದರೆ ಈ ಆಹಾರದಲ್ಲಿ ಕೊಬ್ಬಿನಂಶ ಇರುವುದಿಲ್ಲ.

ಬ್ರಕೋಲಿ:

ಬ್ರಕೋಲಿ:

ನಿಮ್ಮ ರಾತ್ರಿಯೂಟದಲ್ಲಿ ಸಾಕಷ್ಟು ಪ್ರಮಾಣದ ಹಸಿರು ತರಕಾರಿಗಳನ್ನು ನಿಮಗೆ ಸೇರಿಸಬಹುದು. ನಿಮ್ಮ ಚಯಾಪಚಯ ಕ್ರಿಯೆ ರಾತ್ರಿ ವೇಳೆಯಲ್ಲಿ ಕಡಿಮೆಯಾಗುವುದರಿಂದ ಕಡಿಮೆ ಕ್ಯಾಲೋರಿ ಆಹಾರವನ್ನು ರಾತ್ರಿಯೂಟಕ್ಕೆ ಸೇವಿಸುವುದು ಒಳಿತು. ಬ್ರಕೋಲಿ ಕಡಿಮೆ ಕ್ಯಾಲೋರಿ ಉಳ್ಳ ತರಕಾರಿಯಾಗಿದ್ದು ನಿಮ್ಮ ರಾತ್ರಿಯೂಟಕ್ಕೆ ಅತೀ ಉತ್ತಮವಾದುದು.

ಪಲ್ಸಸ್:

ಪಲ್ಸಸ್:

ನೀವು ಭಾರತೀಯ ಊಟವನ್ನು ಸೇವಿಸುತ್ತೀರೆಂದರೆ, ನಿಮ್ಮ ರಾತ್ರಿಯೂಟದ ಮೆನುವಿನಲ್ಲಿ ದಾಲ್‌ಗಳನ್ನು ನೀವು ಬಳಸಲೇಬೇಕು. ಡ್ರೈ ಬೀನ್ಸ್ ಮತ್ತು ಗ್ರಾಂ ಗಳಂತೆ ಪಲ್ಸಸ್‌ಗಳನ್ನು ನಿಮ್ಮ ಊಟದಲ್ಲಿ ನಿಮಗೆ ಸೇರಿಸಬಹುದು. ಅಗತ್ಯವಾದ ಪ್ರೊಟೀನ್ ಅನ್ನು ನಿಮಗಿದು ಒದಗಿಸುತ್ತದೆ.

ಕಡಿಮೆ ಕೊಬ್ಬುಳ್ಳ ಚೀಸ್:

ಕಡಿಮೆ ಕೊಬ್ಬುಳ್ಳ ಚೀಸ್:

ಯಾವುದೇ ಊಟದಲ್ಲಿ ಕೊಬ್ಬು ಅತ್ಯಗತ್ಯ. ಆದ್ದರಿಂದ ನೀವು ಕ್ಯಾಲೋರಿಗಳನ್ನು ಎಣಿಕೆ ಮಾಡುವಾಗ, ನಿಮ್ಮ ಊಟದಿಂದ ಕೆಲವು ಕೊಬ್ಬನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ. ಕಡಿಮೆ ಕೊಬ್ಬಿನ ಚೀಸ್‌ಗಳು ಕಡಿಮೆ ಕೊಬ್ಬನ್ನು ನಿಮಗೆ ನೀಡಿ ನಿಮ್ಮ ಮೂಳೆಗಳಿಗೆ ಅಗತ್ಯವಾಗಿರುವ ಬಲವನ್ನು ನೀಡುತ್ತದೆ. ನಿಮ್ಮ ಊಟವನ್ನು ರುಚಿಕರವನ್ನಾಗಿಸುತ್ತದೆ ಕೂಡ.

ಈರುಳ್ಳಿ:

ಈರುಳ್ಳಿ:

ಈರುಳ್ಳಿ ಕೇವಲ ರುಚಿಯನ್ನು ಹೆಚ್ಚಿಸುವುದಕ್ಕೆ ಮಾತ್ರವಲ್ಲ. ಈರುಳ್ಳಿಯಲ್ಲಿರುವ ಸೆಲೇನಿಯಂ ನಿಮಗೆ ರಾತ್ರಿ ಚೆನ್ನಾಗಿ ನಿದ್ದೆ ಬರಲು ಸಹಕಾರಿ. ಈರುಳ್ಳಿಯಿಲ್ಲದ ರುಚಿಯಾದ ಊಟವನ್ನು ನಿಮಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಪೂರ್ಣ ಧಾನ್ಯಗಳು:

ಪೂರ್ಣ ಧಾನ್ಯಗಳು:

ಪೂರ್ಣ ಧಾನ್ಯಗಳಾದಂತಹ ಮಿಲ್ಲೆಟ್, ಜೊವಾರ್ ಮತ್ತು ಕೋರ್ನ್ ನಿಮ್ಮ ಊಟದಲ್ಲಿ ಫೈಬರ್ ಪ್ರಮಾಣವನ್ನು ಸೇರಿಸುತ್ತವೆ. ನಿಮ್ಮ ರಾತ್ರಿಯ ಡಿನ್ನರ್‌ನಲ್ಲಿ ಕಾರ್ಬೊಹೈಡ್ರೇಟ್ಸ್ ಅನ್ನು ಈ ವಿಧಾನದಲ್ಲಿ ಸೇರಿಸಬಹುದು.

ಗ್ರಿಲ್ಲ್‌ಡ್ ಫಿಶ್:

ಗ್ರಿಲ್ಲ್‌ಡ್ ಫಿಶ್:

ಒಮೆಗಾ 3 ಫ್ಯಾಟ್ ಏಸಿಡ್ ರೂಪದಲ್ಲಿ ಮೀನುಗಳು ಕೂಡ ಉತ್ತಮ ಕೊಬ್ಬಿನಂಶವನ್ನು ಹೊಂದಿವೆ. ಪ್ರೊಟೀನ್‌ಗಳ ಅತ್ಯಧಿಕ ಸಾರವನ್ನೇ ಮೀನುಗಳು ನಿಮಗೆ ನೀಡಬಹುದು. ಬೇಯಿಸಿದ, ಬ್ರೈಸ್ ಮಾಡಿದ ಇಲ್ಲವೇ ಗ್ರಿಲ್ ಮಾಡಿದ ಮೀನನ್ನು ನಿಮ್ಮ ರಾತ್ರಿಯೂಟದಲ್ಲಿ ನೀವು ಸೇವಿಸಲೇಬೇಕು. ಹುರಿಯುವುದು ಮೀನಿನಲ್ಲಿರುವ ನ್ಯೂಟ್ರೀನ್‌ಗಳನ್ನು ನಾಶಮಾಡಬಹುದು.

ದಾಲಿಯಾ:

ದಾಲಿಯಾ:

ಗೋಧಿಯ ತುಂಡಿನಿಂದ ದಾಲಿಯಾವನ್ನು ತಯಾರಿಸಲಾಗುತ್ತದೆ. ನಿಮಗೆ ತೂಕವನ್ನು ಇಳಿಸಲು ಇದು ಸಹಾಯ ಮಾಡುವುದಲ್ಲದೆ ಡಿಶ್‌ನಿಂದ ಹೆಚ್ಚು ಫೈಬರ್ ಅನ್ನು ಪಡೆಯಲು ಸಾಧ್ಯ.

ಕಡಿಮೆ ಕೊಬ್ಬಿನ ಮೊಸರು:

ಕಡಿಮೆ ಕೊಬ್ಬಿನ ಮೊಸರು:

ನಿಮ್ಮ ರಾತ್ರಿಯೂಟದಲ್ಲಿ ಡೈರಿ ಉತ್ಪನ್ನಗಳನ್ನು ನೀವು ತ್ಯಜಿಸುವುದು ಉತ್ತಮ ಏಕೆಂದರೆ ಅವುಗಳು ನಿಮ್ಮಲ್ಲಿ ಗ್ಯಾಸ್ ಅನ್ನು ಉಂಟುಮಾಡಬಹುದು. ಆದರೆ ಮೊಸರಿನಲ್ಲಿರುವ ಪ್ರೊಬಿಯೋಟಿಕ್ ಬ್ಯಾಕ್ಟಿರಿಯಾ ನಿಮ್ಮ ಆಹಾರವನ್ನು ಜೀರ್ಣವಾಗಿಸಲು ಸಹಕಾರಿಯಾಗಿದೆ. ಮೊಸರು ನಿಮ್ಮ ರಾತ್ರಿಯೂಟದಲ್ಲಿ ಜೊತೆಯಾಗಿರಲಿ.

ಅಣಬೆ:

ಅಣಬೆ:

ರಾತ್ರಿಯೂಟಕ್ಕೆ ಅಣಬೆ ಉತ್ತಮ ಆಹಾರವಾಗಿದೆ. ಪ್ರೊಟೀನ್‌ಗಳು, ವಿಟಮಿನ್ ಡಿ, ಹಾಗೂ ಕಾಮೋತ್ತೇಜಕ ಅಂಶಗಳನ್ನು ಅಣಬೆ ಹೊಂದಿದೆ. ಅಣಬೆಯನ್ನು ಸೂಪ್, ಗ್ರಿಲ್ ಮತ್ತು ಬೇಯಿಸಿ ತೆಗೆದುಕೊಳ್ಳಬಹುದು.

ಫ್ರೋನ್ಸ್:

ಫ್ರೋನ್ಸ್:

ಫ್ರೋನ್‌ನಲ್ಲಿ ನಿದ್ರೆಯನ್ನು ಅಧಿಕಗೊಳಿಸುವ ಟ್ರೈಪ್ಟೋಫನ್ ಅಂಶಗಳಿದ್ದು ಹೆಚ್ಚು ಕ್ಯಾಲೋರಿಗಳನ್ನು ಹೊಂದಿಲ್ಲದ ಆಹಾರವಾಗಿದೆ.

ಬ್ರೌನ್ ರೈಸ್:

ಬ್ರೌನ್ ರೈಸ್:

ನಿಮ್ಮ ರಾತ್ರಿಯೂಟದಲ್ಲಿ ಪೈಬರ್ಸ್ ಕಾರ್ಬೊಹೈಡ್ರೇಟ್ಸ್ ಅನ್ನು ಪಡೆದುಕೊಳ್ಳುವ ಉತ್ತಮ ಮಾರ್ಗ ಬ್ರೌನ್ ರೈಸ್ ಸೇವನೆಯಾಗಿದೆ. ಇದು ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡುವುದರಿಂದ ಸುಲಭವಾಗಿ ನಿಮಗೆ ನಿದ್ರೆ ಬರುತ್ತದೆ. ಬ್ರೌನ್ ರೈಸ್ ಅನ್ನು ರಾತ್ರಿ ಸಮಯದಲ್ಲಿ ಸೇವಿಸುವುದು ಅತೀ ಉತ್ತಮ.

ಕಾಲೇ:

ಕಾಲೇ:

ಮೀನು ಅಥವಾ ಮಾಂಸದೊಂದಿಗೆ ಈ ಹಸಿರು ಎಲೆಯ ತರಕಾರಿಯನ್ನು ಬೇಯಿಸಲಾಗುತ್ತದೆ. ಕಾಲೆ ಹೆಚ್ಚುವರಿ ಕ್ಯಾಲ್ಶಿಯಂ ಅನ್ನು ಒಳಗೊಂಡಿರುವುದರಿಂದ ಚೆನ್ನಾಗಿ ನಿದ್ರೆ ಬರಲು ಅನುವು ಮಾಡಿಕೊಡುತ್ತದೆ.

ಬೇಯಿಸಿದ/ಗ್ರಿಲ್ಡ್ ಚಿಕನ್:

ಬೇಯಿಸಿದ/ಗ್ರಿಲ್ಡ್ ಚಿಕನ್:

ಬೇಯಿಸಿದ ಚಿಕನ್ ಅನ್ನು ನಿಮ್ಮ ಸಲಾಡ್ ಮತ್ತು ಸೂಪ್‌ಗಳಲ್ಲಿ ಬಳಸಬಹುದು. ಗ್ರಿಲ್ ಮಾಡಿದ ಚಿಕನ್ ಪ್ರೊಟೀನ್ ಭರಿತವಾಗಿದ್ದು ರುಚಿಕರವಾಗಿರುತ್ತದೆ. ಚಿಕನ್‌ನೊಂದಿಗೆ ರಾತ್ರಿ ವೇಳೆಯಲ್ಲಿ ಹೆಚ್ಚು ಸಾಸ್ ಸೇವಿಸದಿರಿ.

ಗಾಢ ಕೋಕಾ:

ಗಾಢ ಕೋಕಾ:

ಗಾಢ ಮತ್ತು ಸಿಹಿಯಿಲ್ಲದ ಕೋಕಾ ಒಂದು ಉತ್ತಮ ಉತ್ಕರ್ಷಣ ನಿರೋಧಿ ಆಹಾರವಾಗಿದೆ. ನೀರಿನೊಂದಿಗೆ ಬೆರೆತ ಮುಖ್ಯ ಕೋಕಾವನ್ನು ಅಥವಾ ಬಿಸಿಯಾದ ಚಾಕ್‌ಲೇಟ್ ಅನ್ನು ಹಾಲಿನೊಂದಿಗೆ ನಿಮಗೆ ಸೇವಿಸಬಹುದು. ನಿಮ್ಮ ಕೋಕಾಕ್ಕೆ ಸಿಹಿಯನ್ನು ಸೇರಿಸದಿರಿ ಇದರಿಂದ ಕೊಬ್ಬು ಉತ್ಪತ್ತಿಯಾಗುತ್ತದೆ.

Read more about: health, ಆರೋಗ್ಯ
English summary

20 Healthy Foods For Dinner

Dinner is the meal that we most look forward to. Lunches during the weekdays are usually rushed as we eat in between our busy work schedules. Dinner is a meal at which we are relaxed and thus, we tend to eat more.
Please Wait while comments are loading...
Subscribe Newsletter