ಅಧ್ಯಯನ ವರದಿ: ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಪ್ಲಾಸ್ಟಿಕ್‌ ಕಾರಣ...

By: manu
Subscribe to Boldsky

ಪ್ಲಾಸ್ಟಿಕ್ ನಿಷೇಧಿಸಬೇಕು, ಅದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದೆ. ಪ್ಲಾಸ್ಟಿಕ್ ನಿಷೇಧವನ್ನು ಕೆಲವೊಂದು ಸರ್ಕಾರಗಳು ತೆಗೆದುಕೊಂಡಿದ್ದರೂ ಪ್ಲಾಸ್ಟಿಕ್ ಮಾತ್ರ ಹಾಗೆ ಚಾಲನೆಯಲ್ಲಿದೆ. ಸರ್ಕಾರ ಈ ಬಗ್ಗೆ ದಿಟ್ಟ ಕ್ರಮ ತೆಗೆದುಕೊಳ್ಳದೇ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಪ್ಲಾಸ್ಟಿಕ್ ಗೆ ಬಳಸಲಾಗುವಂತಹ ಜೈವಿಕ ರಾಸಾಯನಿಕವೊಂದು ಸ್ತನದ ಕ್ಯಾನ್ಸರ್ ಅನ್ನು ಹೆಚ್ಚು ಮಾಡುತ್ತದೆ ಎನ್ನುವ ಅಂಶ ಅಧ್ಯಯನಗಳಿಂದ ತಿಳಿದುಬಂದಿದೆ. ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್, ಥರ್ಮಲ್ ಪೇಪರ್‌ನಲ್ಲಿ ಕಂಡುಬರುವ ರಾಸಾಯನಿಕವು ಸ್ತನದ ಕ್ಯಾನ್ಸರ್‌ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿದೆ.  ಬಿಸ್ಪೆನಾಲ್ ಎಯ ಅಂಗವಾಗಿರುವ ಬಿಸ್ಪೆನಾಲ್ ಎಸ್(ಬಿಪಿಎಸ್) ಎನ್ನುವ ರಾಸಾಯನಿಕವು ಇಸ್ಟ್ರೋಜನ್ ನಂತೆ ಕಾರ್ಯನಿರ್ವಹಿಸಿ ಸ್ತನದ ಕ್ಯಾನ್ಸರ್‌ನ ಕೋಶಗಳನ್ನು ದ್ವಿಗುಣಗೊಳಿಸುತ್ತದೆ ಎಂದು ತಿಳಿದುಬಂದಿದೆ.  ದುಃಸ್ವಪ್ನವಾಗಿ ಕಾಡುವ ಸ್ತನ ಕ್ಯಾನ್ಸರ್‌ನ ಲಕ್ಷಣಗಳು

ಹೆಚ್ಚಿನ ಸ್ತನದ ಕ್ಯಾನ್ಸರ್‌ನ ಈಸ್ಟ್ರೋಜನ್ ಗ್ರಾಹಿ ಸಕಾರಾತ್ಮಕವಾಗಿರುತ್ತದೆ. ಅನುವಂಶಿಯವಾಗಿ ಹಾನಿಕಾರಕ BRCA1 ಜಿನ್ ಪರಿವರ್ತನೆಯಾಗಿರುವಂತಹ ಶೇ.55ರಿಂದ 65 ರಷ್ಟು ಮಹಿಳೆಯರು ಸ್ತನದ ಕ್ಯಾನ್ಸರ್‌ಗೆ ಗುರಿಯಾಗುತ್ತಾರೆ.

BRCA1 ಜಿನ್ ಪರಿವರ್ತನೆಗೊಂಡಿರುವ ಮಹಿಳೆಯು ಬಿಪಿಎಸ್ ಇರುವಂತಹ ಉತ್ಪನ್ನಗಳನ್ನು ಬಳಸಿದರೆ ಆಗ ಸ್ತನದ ಕ್ಯಾನ್ಸರ್ ಬರುವಂತಹ ಸಾಧ್ಯತೆಗಳು ಅತೀ ಹೆಚ್ಚಿರುತ್ತದೆ ಎಂದು ಮಿಚಿಗನ್ ನಲ್ಲಿರುವ ಒಕ್ಲಾಂಡ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಸುಮಿ ಡಿಂಡಾ ತಿಳಿಸಿದ್ದಾರೆ.

ಬಿಪಿಎಗೆ ಪರ್ಯಾಯವೆಂದು ಪರಿಗಣಿಸಲಾಗಿದ್ದ ಬಿಪಿಎಸ್ ಕೂಡ ಬಿಪಿಎನಂತೆ ಈಸ್ಟ್ರೋಜ್ ಆಗಿ ವರ್ತಿಸುತ್ತದೆ. ಒರ್ಲಾಂಡದಲ್ಲಿ ನಡೆದ 99ನೇ ವಾರ್ಷಿಕ ಎಂಡೀಸಿರ್ನೆ ಸೊಸೈಟಿಯ ಎಂಡೋ 2017ನಲ್ಲಿ ಈ ಫಲಿತಾಂಶವನ್ನು ಪ್ರದರ್ಶಿಸಲಾಯಿತು.

ಅಧ್ಯಯನಕ್ಕಾಗಿ ವಾಣಿಜ್ಯವಾಗಿ ಸಿಗುವಂತಹ ಎರಡು ರೀತಿಯ ಸ್ತನದ ಕ್ಯಾನ್ಸರ್ ಕೋಶಗಳನ್ನು ಬಳಸಲಾಯಿತು. ಇದು ಅನುವಂಶಿಯವಾಗಿ ಪರಿವರ್ತನೆಗೊಂಡಿರುವ ಜಿನ್‌ಗಳಾಗಿದ್ದವು. ಈ ಕೋಶಗಳನ್ನು ಬಿಪಿಎಸ್‌ಗೆ ಬಳಸಿ ಫಲಿತಾಂಶವನ್ನು ಕಂಡುಹಿಡಿಯಲಾಯಿತು. ಸಾಮಾಜಿಕ ಜಾಲತಾಣಗಳು ಮತ್ತು ಸ್ತನ ಕ್ಯಾನ್ಸರ್!

24 ಗಂಟೆಗಳ ಬಳಿಕ ಈಸ್ಟ್ರೋಜನ್ ಮಾಡುವಂತೆ ಬಿಪಿಎಸ್ ಈಸ್ಟೋಜಕ ಗ್ರಾಹಿ ಎನ್ನುವುದನ್ನು ಸಾಬೀತು ಮಾಡಿತು. ಆರು ದಿನಗಳ ಬಳಿಕ ಎರಡು ಕೋಶಗಳಲ್ಲಿ ಸ್ತನದ ಕ್ಯಾನ್ಸರ್‌ನ ಕೋಶಗಳು ಶೇ.12ರಷ್ಟು ಬೆಳೆಯಲು ಆರಂಭಿಸಿದವು.

English summary

This Common Plastic Chemical Increase Breast Cancer Risk

An endocrine-disrupting chemical commonly found in polycarbonate hard plastics, currency bills and thermal paper receipts may potentially interfere with the body's hormones to increase the aggressiveness of breast cancer, a new study has showed. Bisphenol S (BPS), a substitute for the chemical bisphenol A (BPA) in the plastic industry, acts like estrogen in multiplying breast cancer cells.
Story first published: Tuesday, April 4, 2017, 23:31 [IST]
Please Wait while comments are loading...
Subscribe Newsletter