Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ದುಃಸ್ವಪ್ನವಾಗಿ ಕಾಡುವ ಸ್ತನ ಕ್ಯಾನ್ಸರ್‌ನ ಲಕ್ಷಣಗಳು
ಕ್ಯಾನ್ಸರ್ ಎನ್ನುವ ರೋಗಕ್ಕೆ ಮದ್ದಿಲ್ಲ ಎನ್ನುವ ಕಾಲವೊಂದಿತ್ತು. ಆದರೆ ಬೆಳೆಯುತ್ತಿರುವ ವೈದ್ಯಕೀಯ ಲೋಕದಲ್ಲಿ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಅದನ್ನು ಗುಣಪಡಿಸಬಹುದಾಗಿದೆ. ಹಲವಾರು ರೀತಿಯ ಕ್ಯಾನ್ಸರ್ ಗಳು ಇತ್ತೀಚೆಗೆ ಪತ್ತೆಯಾಗುತ್ತಿದೆ. ಅದರಲ್ಲೂ ಶ್ವಾಸಕೋಶ, ಸ್ತನ, ಕರುಳು ಮತ್ತು ಗುದನಾಳದ ಕ್ಯಾನ್ಸರ್‌ಗಳು ಇತ್ತೀಚೆಗೆ ವೈದ್ಯಕೀಯ ಲೋಕಕ್ಕೆ ತಿಳಿದುಬಂದಂತಹ ಕ್ಯಾನ್ಸರ್ ಆಗಿದೆ.

ಸ್ತನದಲ್ಲಿ ಗಡ್ಡೆ ಕಂಡುಬರುವುದು, ಸ್ತನದ ತೊಟ್ಟಿನಿಂದ ರಕ್ತ ಬರುವುದು, ತೊಟ್ಟು ಕುಗ್ಗುವುದು, ತೊಟ್ಟುಗಳು ಒಳಕ್ಕೆಳೆದುಕೊಳ್ಳುವುದು, ತೊಟ್ಟುಗಳ ಮೇಲೆ ದದ್ದುಗಳು ಬೀಳುವುದು ಇತ್ಯಾದಿ ಸ್ತನದ ಕ್ಯಾನ್ಸರ್ ಲಕ್ಷಣಗಳಾಗಿವೆ. ಸ್ತನದಲ್ಲಿ ಗಡ್ಡೆ ಕಂಡುಬರುವುದು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ.
ಪ್ರತಿಯೊಂದು ಗಡ್ಡೆ ಕೂಡ ಅಪಾಯಕಾರಿಯಲ್ಲ. ಸ್ತನದಲ್ಲಿ ಕಂಡುಬರುವಂತಹ ಶೇ.10ರಷ್ಟು ಗಡ್ಡೆಗಳು ಮಾತ್ರ ಕ್ಯಾನ್ಸರ್ ಗಡ್ಡೆಗಳಾಗಿರುತ್ತದೆ. ಸ್ತನದಲ್ಲಿ ಕೋಶಗಳು ಕಂಡುಬರುತ್ತಿದ್ದರೆ ಆಗ ಅದು ಕ್ಯಾನ್ಸರ್ ಎಂದೇ ಹೇಳಬಹುದಾಗಿದೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...
ಸ್ತನದಲ್ಲಿ ಮೂರು ರೀತಿಯ ಗಡ್ಡೆಗಳು ಕಂಡುಬರುತ್ತದೆ. ನಿಮ್ಮ ಶಸ್ತ್ರಚಿಕಿತ್ಸಕರು ಮೂರು ರೀತಿಯ ಗಡ್ಡೆಗಳನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಯಾವ ಗಡ್ಡೆ ಇದೆ ಎಂದು ತಿಳಿದುಕೊಳ್ಳಲು ಸ್ತನ ಬಯೋಸ್ಪಿ ಮಾಡಬೇಕಾಗಿದೆ.
ತೊಟ್ಟಿನಿಂದ ರಕ್ತ ಸುರಿಯುವುದು ಸ್ತನದ ತೊಟ್ಟಿನ ಅಹಿತಕರ ಪ್ರಾಣಾಂತಕ ಜೀವಕೋಶಗಳಿಂದ ಆಗಿರಬಹುದು. ಸ್ತನದ ತೊಟ್ಟಿನಿಂದ ರಕ್ತ ಸುರಿಯುವ ಲಕ್ಷಣ ಕಂಡುಬರುವುದು ತುಂಬಾ ಅಪರೂಪವಾಗಿದೆ. ಶೇಕಡಾ ಎಂಟರಷ್ಟು ಅಥವಾ ಅದಕ್ಕಿಂತ ಕಡಿಮೆ ಮಹಿಳೆಯರು ಸ್ತನದ ತೊಟ್ಟಿನಿಂದ ರಕ್ತ ಸೋರುವಾಗ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಸ್ತನ ಕ್ಯಾನ್ಸರ್ ಗೆ ಸ್ವಯಂ ತಪಾಸಣೆ ಹೇಗೆ?
ಸ್ತನ ಕ್ಯಾನ್ಸರ್‌ನ ಮುಂದಿನ ಲಕ್ಷಣವೆಂದರೆ ಗಡ್ಡೆಗಳು ಕಂಡುಬರುವುದು. ಇದು ಹೆಚ್ಚಾಗಿ ಕಂಡುಬರುವಂತಹ ಸ್ತನದ ಕ್ಯಾನ್ಸರ್‌ನ ಲಕ್ಷಣವಾಗಿದೆ. ನಿಮಗೆ 50ಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ಸ್ತನದ ಗಡ್ಡೆಗಳು ಕಂಡುಬರುತ್ತಿದ್ದರೆ ಚರ್ಮದ ಆ ಭಾಗದಲ್ಲಿ ಕೈಯಾಡಿಸಿ ಅದು ವೇಗವಾಗಿ ಚಲಿಸದೆ ಇದ್ದರೆ ಆಗ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಗರ್ಭಿಣಿಯರಿಗೆ ಒಂದಿಷ್ಟು ಕಿವಿಮಾತು
ಯಾವುದೇ ವಿಕಿರಣವು ಸ್ತನದ ಕ್ಯಾನ್ಸರ್‌ನ್ನು ಗುಣಪಡಿಲಾರದು. ಸ್ತನವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವುದೇ ಅದಕ್ಕೆ ಚಿಕಿತ್ಸೆಯಾಗಿದೆ. ಇದಕ್ಕಾಗಿ ಯಾವಾಗಲೂ ಸ್ತನವನ್ನು ಪರೀಕ್ಷಿಸುತ್ತಾ ಇರಬೇಕು ಮತ್ತು ಈ ಮೇಲಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













